ಭತ್ತದ ಕಟಾವಿಗೆ ಮುಂದಾಗಲು ಯಂತ್ರಗಳ ಸಂಪರ್ಕ ಮಾಹಿತಿ

Team Udayavani, Apr 14, 2020, 6:45 AM IST

ಭತ್ತದ ಕಟಾವಿಗೆ ಮುಂದಾಗಲು ಯಂತ್ರಗಳ ಸಂಪರ್ಕ ಮಾಹಿತಿ

ಉಡುಪಿ: ಅವಿಭಜಿತ ದ.ಕ. ಎರಡನೇ ಭತ್ತ ಬೆಳೆ ಕಟಾವಿಗೆ ಬಂದಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಮಸ್ಯೆ ಇರುವುದು ನಿಜ. ಆದರೆ ಕೃಷಿ ಚಟುವಟಿಕೆಗೆ ನಿರ್ಬಂಧವಿಲ್ಲದ ಕಾರಣ ಸಾಮಾಜಿಕ ಅಂತರ ಕಾಯ್ದುಕೊಂಡು ಕಟಾವಿಗೆ ಮುಂದಾಗಬಹುದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 3940.74 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಸಲಾಗಿದೆ. ಅಜೆಕಾರು 570.29 ಹೆಕ್ಟೇರ್‌,ಉಡುಪಿ 92.25 ಹೆ., ಕಾಪು 226.8 ಹೆ., ಕಾರ್ಕಳ 861.67 ಹೆ., ಕೋಟ 440.21 ಹೆ., ಬೈಂದೂರು 181.26ಹೆ., ಬ್ರಹ್ಮಾವರ 449.2 ಹೆ., ವಂಡ್ಸೆ 544.62 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ರೈತರು ಬೆಳೆಸಿದ್ದಾರೆ. ಹಾಲಾಡಿ, ಕೋಟೇಶ್ವರ, ಸಾಬ್ರಕಟ್ಟೆ, ಕೊಕ್ಕರ್ಣೆ, ಹೆಬ್ರಿ, ಕಾರ್ಕಳ ಭಾಗದಲ್ಲಿ ಬಹುತೇಕ ರೈತರು ಪೈರನ್ನು ಕಟಾವು ಮಾಡಿ ಗದ್ದೆಯಲ್ಲಿ ಇಡಲಾಗಿತ್ತು. ಎ. 7ರಂದು ಸುರಿದ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಭತ್ತದ ಪೈರಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2468 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.

ಯಂತ್ರಗಳ ಕೊರತೆ?
ಜಿಲ್ಲೆಯ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಹೆಕ್ಟೇರ್‌ ವಿಸ್ತೀರ್ಣ ಬೆಳೆಯ ಪ್ರಕಾರ ಹೋಬಳಿ ಒಂದಕ್ಕೆ 40ರಿಂದ 50 ಭತ್ತದ ಕಟಾವು ಯಂತ್ರಗಳು ಬೇಕಾಗುತ್ತದೆ. ಆದರೆ ಪ್ರಸ್ತುತ ಹೋಬಳಿಯೊಂದಕ್ಕೆ ಕೇವಲ 3ರಿಂದ 4 ಯಂತ್ರಗಳಿವೆ. ಪ್ರಾರಂಭದಲ್ಲಿ ಕೃಷಿ ಯಂತ್ರ ಸಮಸ್ಯೆ ಇತ್ತಾದರೂ ಇದೀಗ ಬೇರೆ ಜಿಲ್ಲೆಯಿಂದ ಸಹ ಯಂತ್ರಗಳನ್ನು ತರಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಯಂತ್ರದ ಕಟಾವಿನ ಬೆಲೆ ?
ಈ ಯಂತ್ರಕ್ಕೆ ಒಂದು ಗಂಟೆಗೆ 1,500ರೂ. ಬಾಡಿಗೆ ನಿಗದಿ ಪಡಿಸಲಾಗಿದೆ. ಒಂದು ಗಂಟೆ ಯಲ್ಲಿ ಸುಮಾರು 1 ಎಕ್ರೆ ಭತ್ತ ಬೆಳೆಯನ್ನು ಕಟಾವು ಮಾಡಬಹುದು. ಒಮ್ಮೆಲೆ ಒಂದು ಹೋಬಳಿಯಲ್ಲಿ 4ರಿಂದ 5 ಜನರಿಗೆ ಸಮಯ ನೀಡಲಾಗುತ್ತದೆ. ಯಂತ್ರಗಳು ಲಾರಿಯಲ್ಲಿ ಬರುವುದರಿಂದ ಲಾರಿಯ ವೆಚ್ಚವನ್ನು ರೈತರು ಭರಿಸಬೇಕು ಎಂದು ಯಂತ್ರಧಾರ ಕೇಂದ್ರದ ಮುಖ್ಯಸ್ಥರೊಬ್ಬರು ಮಾಹಿತಿ ನೀಡಿದರು.

ಸಾಮಾಜಿಕ ಅಂತರ ಕಾಪಾಡಿಕೊಳ್ಳಿ
ಒಂದು, ಎರಡು, ಮೂರು ಎಕರೆ ಭತ್ತವನ್ನು ಕಟಾವು ಮಾಡಲು ಸಾಮಾನ್ಯವಾಗಿ ಹತ್ತು, ಹದಿನೈದು, ಇಪ್ಪತ್ತು ಮಂದಿ ಕಾರ್ಮಿಕರ ಅಗತ್ಯ ಇರುತ್ತದೆ. ಅಂತಹ ರೈತರು ಆಯಾ ಗ್ರಾಮದ ಟಾಸ್ಕ್ ಫೋರ್ಸ್‌ನಿಂದ ಅನುಮತಿ ಪಡೆದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ನೆಲಗಡಲೆಯಿಂದ ಹಿಡಿದು ಇತರೆ ಕೃಷಿ ಕಾರ್ಯ ಸಂದರ್ಭದಲ್ಲೂ ಕಾರ್ಮಿಕರು ಗುಂಪು ಗುಂಪಾಗಿ ಕುಳಿತುಕೊಳ್ಳುವ ಅಭ್ಯಾಸವಿದೆ. ಇದಕ್ಕೆ ಕಡಿವಾಣ ಹಾಕಬೇಕು. ಕೆಲಸ ಮಾಡಿಸುವವರೂ ಈ ಬಗ್ಗೆ ಎಚ್ಚರ ವಹಿಸಬೇಕು. ತಮ್ಮ ಕಾರ್ಮಿಕರಿಗೆ ಈ ಸಂಬಂಧ ಸೂಚನೆ ನೀಡಬೇಕು.

ಪ್ರಸ ಕ್ತ ಜಿಲ್ಲಾಧಿಕಾರಿ ಅವರು ಕೃಷಿ ಯಂತ್ರ ಸಾಗಾ ಟ ವಾಹನ ಓಡಾಟಕ್ಕೆ ಅನುಮತಿ ನೀಡಿದ್ದಾರೆ. ಭತ್ತ ಕಟಾವಿಗೆ ಯಾವು ದೇ ಸಮಸ್ಯೆಯಾಗಿಲ್ಲ. ಯಂತ್ರಗಳು ಬೇರೆ ಜಿಲ್ಲೆಗೆ ಹೋಗಲು ಜಿಲ್ಲಾಧಿಕಾರಿಗಳಿಂದ ಅನುಮತಿ ಪತ್ರ ಪಡೆಯಬೇಕು. 5 ಕ್ಕಿಂತ ಹೆಚ್ಚು ಮಂದಿ ಕಾರ್ಮಿಕರಿದ್ದರೆ ಗ್ರಾ.ಪಂ. ಪಿಡಿಒ ಅವರಿಗೆ ಮಾಹಿತಿ ನೀಡಬೇಕು. ಕೆಲಸದ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
– ಡಾ| ಕೆಂಪೇಗೌಡ
ಕೃಷಿ ಇಲಾಖೆ ಜಂಟಿ ನಿರ್ದೇಶಕ, ಉಡುಪಿ

ದ.ಕ. ಜಿಲ್ಲೆಗಳಲ್ಲಿ ವಿವಿಧ ತಾಲೂಕುಗಳಲ್ಲಿ ಭತ್ತ ಬೆಳೆಯುವ ಪ್ರದೇಶ ಹೆಕ್ಟೇರ್‌ಗಳಲ್ಲಿ
ಮಂಗಳೂರು 6,700
ಬೆಳ್ತಂಗಡಿ 3,000
ಬಂಟ್ವಾಳ 5,000
ಪುತ್ತೂರು 900
ಸುಳ್ಯ 300

ಕಟಾವು ಯಂತ್ರಗಳಿಗೆ ಯಾರನ್ನು ಸಂಪರ್ಕಿಸಬೇಕು
ರೈತರು ಭತ್ತದ ಕಟಾವಿನ ಯಂತ್ರಗಳನ್ನು ಆಯಾ ಹೋಬಳಿಗಳ ಯಂತ್ರಧಾರ ಕೇಂದ್ರದಲ್ಲಿ ಬುಕ್‌ ಮಾಡಬಹುದು.

ಬ್ರಹ್ಮಾವರ ಸುತ್ತಮುತ್ತಲಿನವರು 9880 8160 23
ಅಜೆಕಾರು ಹೋಬಳಿ ವ್ಯಾಪ್ತಿ 96066 38316
ಬೈಂದೂರು ವ್ಯಾಪ್ತಿ 74062 60689
ಉಡುಪಿ, ಕಾರ್ಕಳ, ಕುಂದಾಪುರ, ವಂಡ್ಸೆ, ಕೋಟ 99018 76682
ಮೂಡುಬಿದಿರೆ, ಮೂಲ್ಕಿ, ವೇಣೂರು, ಕಡಬ ವ್ಯಾಪ್ತಿ 94802 50852
ಗುರುಪುರ 94836 04668
ಸುಳ್ಯ 97410 23018
ಬಂಟ್ವಾಳ 99016 07223
ಬೆಳ್ತಂಗಡಿ 88610 12708
ಉಪ್ಪಿನಂಗಡಿ 97405 61226

ಬೆಳೆಗಾರರು ಭತ್ತದ ಕಟಾವಿಗೆ ಕೃಷಿ ಕಾರ್ಮಿಕರ ಹಾಗೂ ಯಂತ್ರದ ಕೊರತೆ ಅನುಭವಿಸುತ್ತಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹಿಂದಿನಿಂದಲೂ ಕರಾವಳಿಯಲ್ಲಿ ಭತ್ತದ ಕಟಾವಿಗೆ ಕೃಷಿ ಕಾರ್ಮಿಕರ ಕೊರತೆ ಇತ್ತು. ಈ ಸಂದರ್ಭದಲ್ಲಿ ಬೇರೆ ಜಿಲ್ಲೆಗಳ ಕಾರ್ಮಿಕರನ್ನು ಬಳಸಲಾಗುತ್ತಿತ್ತು. ಪ್ರಸ್ತುತ ಅವರೂ ಸಿಗುತ್ತಿಲ್ಲ. ಹಲವಾರು ಮಂದಿ ಊರಿಗೆ ತೆರಳಿದ್ದು, ಉಳಿದ ಕೆಲವರಿಗೂ ಸಂಚಾರ ಸಮಸ್ಯೆಯಾಗಿದೆ.

ನಿಮ್ಮ ಬೆಳೆ ಮಾಹಿತಿ ನೀಡಿ
ರೈತರು ಬೆಳೆಗಳನ್ನು ಮಾರಲಾಗದೆ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಇದಕ್ಕಾಗಿ ಹೆಸರು, ಉತ್ಪನ್ನದ ಹೆಸರು, ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಬೆಲೆ ವಾಟ್ಸಪ್‌ ಮಾಡಿದರೆ ಪ್ರಕಟಿಸಲಾಗುವುದು.
ವಾಟ್ಸಪ್‌ 76187 74529

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.