ಕಡಿಮೆ ಬೆಲೆಗೆ ಬಂಗಾರದಾಸೆ ತೋರಿಸಿ 5.50 ಲಕ್ಷ ರೂ. ದೋಚಿದ್ದ ಖದೀಮರು

Team Udayavani, Oct 3, 2020, 12:57 PM IST

ಕಡಿಮೆ ಬೆಲೆಗೆ ಬಂಗಾರದಾಸೆ ತೋರಿಸಿ 5.50 ಲಕ್ಷ ರೂ. ದೋಚಿದ್ದ ಖದೀಮರು

ಹುಬ್ಬಳ್ಳಿ: ಕಡಿಮೆ ಬೆಲೆಗೆ ಬಂಗಾರ ಕೊಡುತ್ತೇವೆಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ 5.50 ಲಕ್ಷ ರೂ. ಇದ್ದ ಬ್ಯಾಗ್‌ ದೋಚಿ ತಲೆಮರೆಸಿಕೊಂಡಿದ್ದ ಆರು ಜನ ದರೋಡೆಕೋರರ ತಂಡವನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದ್ದಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ದಾಸನಕೊಪ್ಪ ಗ್ರಾಮದ ಪ್ರಶಾಂತ ಎನ್‌. ಕೊರಚರ, ಪ್ರವೀಣ ಎನ್‌. ಕೊರಚರ, ಅನಿಲ ಎಸ್‌. ಕೊರಚರ, ಪರಮೇಶ ಕೆ. ಕೊರಚರ, ಅರುಣ ಬಿ. ಕೊರಚರ ಹಾಗೂ ಹರಪನಹಳ್ಳಿ ತಾಲೂಕು ಯಲ್ಲಾಪುರ ಗ್ರಾಮದ ಮಾರುತಿ ಕೆ.ಎಸ್‌. ಬಂಧಿತರಾಗಿದ್ದಾರೆ.

ವರೂರಿನ ಖಾಸಗಿ ಸಂಸ್ಥೆಯ ವರ್ಕ್ ಶಾಪ್‌ ಬಳಿ ಸಂಶಯಾಸ್ಪದವಾಗಿ ಕಾರು ಮತ್ತು ಬೈಕ್‌ನಲ್ಲಿ ತಿರುಗಾಡುತ್ತಿದ್ದ ಆರು ಜನರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಫೆಬ್ರವರಿಯಲ್ಲಿ 5.50ಲಕ್ಷ ರೂ. ದರೋಡೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ. ಬಂಧಿತರಿಂದ ಒಂದು ಕಾರು, ಬೈಕ್‌, ಬಂಗಾರ, ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆ: ಬಂಧಿತರು ತಾಲೂಕಿನ ತಾರಿಹಾಳದಲ್ಲಿ ಚನ್ನಪಟ್ಟಣ ತಾಲೂಕು ಹೊಂಗನೂರು ಗ್ರಾಮದ ಸುರೇಶ ಟಿ. ವೆಂಕಟಪ್ಪ ಅವರನ್ನು ಪರಿಚಯಿಸಿಕೊಂಡು, ಅಜ್ಜನೊಬ್ಬನಿಗೆ ಬಂಗಾರ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಒಂದು ತುಂಡನ್ನು ಕೊಟ್ಟು ನಂಬಿಸಿದ್ದಾರೆ. ನಂತರ 5.50 ಲಕ್ಷ ರೂ.ಗೆ ಅರ್ಧ ಕೆಜಿ ಚಿನ್ನ ಕೊಡುತ್ತೇವೆ. ಹಣ ತೆಗೆದುಕೊಂಡು ಬರುವಂತೆ ತಿಳಿಸಿದ್ದಾರೆ. ಆಗ ಸುರೇಶ ಮತ್ತು ಆತನ ಗೆಳೆಯ ವಿಜಯಭಾಸ್ಕರ ಫೆ. 27ರಂದು ಬೆಳಗ್ಗೆ ಹಣ ತೆಗೆದುಕೊಂಡು ಬಂದಾಗ, ಅವರನ್ನು ತಾರಿಹಾಳದ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಇಬ್ಬರನ್ನು ಕಟ್ಟಿಗೆಯಿಂದ ಹೊಡೆದು 5.50 ಲಕ್ಷ ರೂ. ಇದ್ದ ಬ್ಯಾಗ್‌ ಕಸಿದುಕೊಂಡಿದ್ದಾರೆ. ಅಲ್ಲದೆ ವಿಜಯಭಾಸ್ಕರನ ಕಿಸೆಯಲ್ಲಿದ್ದ 4 ಸಾವಿರ ನಗದು, ಮೊಬೈಲ್‌ ಕಿತ್ತುಕೊಂಡು ಅದನ್ನು ಹಾನಿಪಡಿಸಿ ಸಿಮ್‌ ತೆಗೆದುಕೊಂಡು ಪರಾರಿಯಾಗಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್‌ಪಿ ವರ್ತಿಕಾ ಕಟಿಯಾರ ಅವರು ದರೋಡೆಕೋರರ ಪತ್ತೆಗೆ ಜಾಲ ಬೀಸಿದ್ದರು. ಡಿಎಸ್‌ಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ ರಮೇಶ ಗೋಕಾಕ, ಪಿಎಸ್‌ ಐಗಳಾದ ಮಂಜುಳಾ ಸದಾರಿ, ಡಿ. ಚಾಮುಂಡೇಶ್ವರಿ, ಪ್ರೊ| ನರಸಿಂಹರಾಜು, ಎಎಸ್‌ಐ ಬಿ.ಎಸ್‌. ಹುಬ್ಬಳ್ಳಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಪ್ ನ್ಯೂಸ್

Hasan Pen Drive Case; ಡಿಕೆಶಿ ಹೆಸರು ಇರುವುದರಿಂದ ಸಿಬಿಐಗೆ ಒಪ್ಪಿಸಿ: ವಿಜಯೇಂದ್ರ

Hasan Pen Drive Case; ಡಿಕೆಶಿ ಹೆಸರು ಇರುವುದರಿಂದ ಸಿಬಿಐಗೆ ಒಪ್ಪಿಸಿ: ವಿಜಯೇಂದ್ರ

Minister Parameshwara ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ

Minister Parameshwara ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ

ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

Karnataka ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

ಕಾನೂನು ಸುವ್ಯವಸ್ಥೆ ಕಾಪಾಡಿ: ಡಿಜಿಪಿಗೆ ಬಿಜೆಪಿ ಆಗ್ರಹ

Karnataka ಕಾನೂನು ಸುವ್ಯವಸ್ಥೆ ಕಾಪಾಡಿ: ಡಿಜಿಪಿಗೆ ಬಿಜೆಪಿ ಆಗ್ರಹ

Madhu Bangarappa ಸಂತ್ರಸ್ತರನ್ನು ಹೇಗೆ ಕಾಪಾಡಬೇಕು ಎನ್ನುವ ಬಗ್ಗೆಯೂ ಯೋಚಿಸಿ

Madhu Bangarappa ಸಂತ್ರಸ್ತರನ್ನು ಹೇಗೆ ಕಾಪಾಡಬೇಕು ಎನ್ನುವ ಬಗ್ಗೆಯೂ ಯೋಚಿಸಿ

Karnataka MLC Election; ಆಗ್ನೇಯ ಶಿಕ್ಷಕರ ಕ್ಷೇತ್ರ: 15 ಮಂದಿ ಅಂತಿಮ

Karnataka MLC Election; ಆಗ್ನೇಯ ಶಿಕ್ಷಕರ ಕ್ಷೇತ್ರ: 15 ಮಂದಿ ಅಂತಿಮ

SSLC Exam 2 ಪರಿಷ್ಕೃತ ವೇಳಾಪಟ್ಟಿ: ಜೂ.14ರಿಂದ ಪರೀಕ್ಷೆ

SSLC Exam 2 ಪರಿಷ್ಕೃತ ವೇಳಾಪಟ್ಟಿ: ಜೂ.14ರಿಂದ ಪರೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hasan Pen Drive Case; ಡಿಕೆಶಿ ಹೆಸರು ಇರುವುದರಿಂದ ಸಿಬಿಐಗೆ ಒಪ್ಪಿಸಿ: ವಿಜಯೇಂದ್ರ

Hasan Pen Drive Case; ಡಿಕೆಶಿ ಹೆಸರು ಇರುವುದರಿಂದ ಸಿಬಿಐಗೆ ಒಪ್ಪಿಸಿ: ವಿಜಯೇಂದ್ರ

ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

Karnataka ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

ಕಾನೂನು ಸುವ್ಯವಸ್ಥೆ ಕಾಪಾಡಿ: ಡಿಜಿಪಿಗೆ ಬಿಜೆಪಿ ಆಗ್ರಹ

Karnataka ಕಾನೂನು ಸುವ್ಯವಸ್ಥೆ ಕಾಪಾಡಿ: ಡಿಜಿಪಿಗೆ ಬಿಜೆಪಿ ಆಗ್ರಹ

Karnataka MLC Election; ಆಗ್ನೇಯ ಶಿಕ್ಷಕರ ಕ್ಷೇತ್ರ: 15 ಮಂದಿ ಅಂತಿಮ

Karnataka MLC Election; ಆಗ್ನೇಯ ಶಿಕ್ಷಕರ ಕ್ಷೇತ್ರ: 15 ಮಂದಿ ಅಂತಿಮ

SSLC Exam 2 ಪರಿಷ್ಕೃತ ವೇಳಾಪಟ್ಟಿ: ಜೂ.14ರಿಂದ ಪರೀಕ್ಷೆ

SSLC Exam 2 ಪರಿಷ್ಕೃತ ವೇಳಾಪಟ್ಟಿ: ಜೂ.14ರಿಂದ ಪರೀಕ್ಷೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Hasan Pen Drive Case; ಡಿಕೆಶಿ ಹೆಸರು ಇರುವುದರಿಂದ ಸಿಬಿಐಗೆ ಒಪ್ಪಿಸಿ: ವಿಜಯೇಂದ್ರ

Hasan Pen Drive Case; ಡಿಕೆಶಿ ಹೆಸರು ಇರುವುದರಿಂದ ಸಿಬಿಐಗೆ ಒಪ್ಪಿಸಿ: ವಿಜಯೇಂದ್ರ

Minister Parameshwara ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ

Minister Parameshwara ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ

badminton

ಥಾಯ್ಲೆಂಡ್‌ ಓಪನ್‌ : ಪ್ರಶಸ್ತಿ ಸುತ್ತಿಗೆ ಚಿರಾಗ್‌-ಸಾತ್ವಿಕ್‌

ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

Karnataka ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

ಕಾನೂನು ಸುವ್ಯವಸ್ಥೆ ಕಾಪಾಡಿ: ಡಿಜಿಪಿಗೆ ಬಿಜೆಪಿ ಆಗ್ರಹ

Karnataka ಕಾನೂನು ಸುವ್ಯವಸ್ಥೆ ಕಾಪಾಡಿ: ಡಿಜಿಪಿಗೆ ಬಿಜೆಪಿ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.