Udayavni Special

ದೇಗುಲಗಳಲ್ಲಿ ವಸ್ತ್ರ ಸಂಹಿತೆ ಇರಲಿ ಪೂರಕ ವ್ಯವಸ್ಥೆ

Team Udayavani, Feb 16, 2020, 5:17 AM IST

rav-29

ಸೀರೆ ಉಟ್ಟಿಲ್ಲ, ಧೋತಿ ಉಟ್ಟಿಲ್ಲ ಎಂಬ ಕಾರಣಕ್ಕೆ ದೇವಸ್ಥಾನದಿಂದ ಹೊರಗೆ ನಿಲ್ಲಿಸುವುದು ಅವಮಾನವೇ ಸರಿ. ಹೀಗಾಗಿ, ಅತಿಥಿಗಳಿಗೆ ದೇವಸ್ಥಾನದ ವತಿಯಿಂದ ಸಾಂಕೇತಿಕ ಮೌಲ್ಯ ಪಡೆದು ಸೀರೆ/ಪಂಚೆ ವ್ಯವಸ್ಥೆ ಮಾಡಿಕೊಡುವುದು ಒಳ್ಳೆಯದು.

ಸರಕಾರವು ಮುಜರಾಯಿ ಇಲಾಖೆಯ ಅಡಿ ಯಲ್ಲಿ ಬರುವ ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೆ ತರುವ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಕ‌ಳೆದ ತಿಂಗಳು ಹೊರ ಬಂದಿದೆ. ದೇವ ಸ್ಥಾನಗಳಿಗೆ ಭಕ್ತರು ಬರುತ್ತಾರೆ. ಆದರೆ ಭಕ್ತರಷ್ಟೇ ಬರುತ್ತಾರೆ ಎಂದು ತಿಳಿಯ ಬಾರದು. ಈಗ ಸರಕಾರವೂ ತನ್ನ ಸಿಬ್ಬಂದಿಗೆ ಶನಿವಾರ ಅದಿತ್ಯ ವಾರಗಳ, ಜೋಡಿ ಜೋಡಿ ವಾರದ ರಜೆಗಳನ್ನು ಕೊಡುತ್ತಿದೆ. ಇದು ಪ್ರವಾ ಸೋದ್ಯಮವನ್ನು ಪರ್ಯಾಯವಾಗಿ ಬೆಳಸುವ ವ್ಯವಸ್ಥೆಯೂ ಹೌದು. ಸಾಮಾನ್ಯವಾಗಿ ಪ್ರವಾಸಿಗರ ಆಯ್ಕೆ- ರೆಸಾರ್ಟ್‌, ಫಾಲ್ಸ್‌, ಬೀಚ್‌ ಇತ್ಯಾದಿಗಳೇ ಆಗಿರುತ್ತವೆ. ಆದರೆ ಅವರು ಇದರ ಜೊತೆಗೆ ದಾರಿಯಲ್ಲಿ ಸಿಗಬಹುದಾದ ಪುಣ್ಯ ಕ್ಷೇತ್ರಗಳಿಗೂ ಭೇಟಿಕೊಡುತ್ತಾರೆ. ಆ ಗಳಿಗೆಯಲ್ಲಿ ಪೂಜೆ ಮಾಡಿಸದಿದ್ದರೂ, ಹುಂಡಿಗಳಲ್ಲಿ ನೋಟ ಗಳನ್ನು ಹಾಕುವುದನ್ನು ಮರೆಯುವುದಿಲ್ಲ. ಹೀಗಾಗಿ ದೇವಸ್ಥಾನಕ್ಕೂ ಆದಾಯವಾಗುತ್ತದೆ. ದೇವಸ್ಥಾನ ಎಂದ ಮೇಲೆ ಅದಕ್ಕೊಂದು ಘನತೆ ಗಾಂಭೀರ್ಯ, ಸಂಹಿತೆ ಇರಬೇಕಾದದ್ದು ಸಹಜ ಎಂದು ಭಾವಿಸಿ, ಈ ನಿಟ್ಟಿನಲ್ಲಿ ನಡೆಯುವುದಾದರೆ, ದುಬೈ, ಅಬುಧಾಬಿ ಮಾದರಿಯನ್ನು ಅನುಸರಿಸುವುದು ಉತ್ತಮ ಮಾರ್ಗ.

ದುಬೈನಲ್ಲಿ “ಸಭ್ಯತೆಯಿಂದ ಇರಿ’ ಎಂಬ ಫ‌ಲಕಗಳು ಅಲ್ಲಲ್ಲಿ ಕಾಣುತ್ತಿರುತ್ತವೆ. ಅದು ಧಾಬಿಯಲ್ಲಿ ಒಂದು ಸುಂದರ ಹಾಗೂ ವಿಶಾಲ ಮಸೀದಿ ಇದೆ. ದಿನಕ್ಕೆ ಸಾವಿರಾರು ಜನ ಮುಸ್ಲಿ ಮರು, ಮುಸ್ಲಿಮೇತರರು ಅದನ್ನು ನೋಡಲು ಅಲ್ಲಿಗೆ ಬರುತ್ತಾರೆ. ಅಲ್ಲಿ ವಸ್ತ್ರ ಸಂಹಿತೆ ಇದೆ. ಮಹಿಳೆಯರು ದೇಹದ ಭಾಗಗಳು ಕಾಣದಂತಹ ಬಟ್ಟೆಗಳನ್ನು ಧರಿಸಿರಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಪೂರ್ಣವಾಗಿ ದೇಹವನ್ನು ಮುಚ್ಚುವುದರಿಂದಾಗಿ ಚೂಡಿದಾರಕ್ಕೆ ಅನುಮತಿ ಇದೆ. ಸೀರೆ ಇತ್ಯಾದಿಗಳಿಗೆ ನಿಷೇಧವಿದೆ. ಅದಕ್ಕಾಗಿ ಅಲ್ಲಿ ಮಸೀದಿಯ ವತಿಯಿಂದಲೇ ಬುರ್ಖಾಗಳನ್ನು ಒದಗಿಸುವ ವ್ಯವಸ್ಥೆಯಿದೆ. ಪ್ರವಾಸಿಗರು ತಮ್ಮಲ್ಲಿರುವ ಡ್ರೈವಿಂಗ್‌ ಲೈಸೆನ್ಸ್, ಕ್ರೆಡಿಟ್‌ ಕಾರ್ಡ್‌, ಪಾಸ್‌ಪೋರ್ಟ್‌ ಇತ್ಯಾದಿಗಳಲ್ಲಿ ಒಂದನ್ನು ಅಡವಿಟ್ಟು ಬುರ್ಖಾ ಧರಿಸಿ ಮಸೀದಿ ಪ್ರವೇಶಿಸಬಹುದು. ಮಸೀದಿ ಪ್ರವೇಶಿಸಲು ನನ್ನ ಮಡದಿಯೂ ಬುರ್ಖಾ ಧಾರಿಯಾಗಿದ್ದಳು.

ಸೀರೆ ಉಟ್ಟಿಲ್ಲ, ಧೋತಿ ಉಟ್ಟಿಲ್ಲ ಎಂಬ ಕಾರ ಣಕ್ಕೆ ದೇವಸ್ಥಾನದಿಂದ ಒಬ್ಬನನ್ನು/ಳನ್ನು ಹೊರಗೆ ನಿಲ್ಲಿಸುವುದು ಅತಿಥಿಗೆ ಮಾಡುವ ಅವಮಾನವೇ ಸರಿ. ಇದೂ ಪಂಕ್ತಿಬೇಧಕ್ಕೆ ಸಮನಾದದ್ದು. ಹೀಗಾಗಿ, ಅತಿಥಿಗಳಿಗೆ, ದೇವಸ್ಥಾನದ ವತಿಯಿಂದ ಸಾಂಕೇತಿಕ ಮೌಲ್ಯ ಪಡೆದು ಸೀರೆ/ಪಂಚೆಗಳಿಗೆ ಒಂದು ವ್ಯವಸ್ಥೆ ಮಾಡಿಕೊಡುವುದು ಒಳ್ಳೆಯದು. ಜೊತೆಗೆ, ಪ್ಯಾಂಟ್‌ ಬರ್ಮುಡಾವನ್ನು ಕಳಚದೇ ಅವುಗಳ ಮೇಲೆಯೇ ಪಂಚೆ/ಸೀರೆಗಳನ್ನು ಸುತ್ತಿಕೊಳ್ಳಲು ಅನುವು ಮಾಡಿಕೊಟ್ಟರೆ ಇನ್ನೂ ಒಳ್ಳೆಯದಲ್ಲವೇ?

– ಡಾ| ಈಶ್ವರ ಶಾಸ್ತ್ರಿ ಮೋಟಿನಸರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ

ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ

ಕೋವಿಡ್ 19, ಸರ್ಕಾರದ ವಿರುದ್ಧ ಗಂಭೀರ ಆರೋಪ; ಅಸ್ಸಾಂ ಶಾಸಕ ಅಮಿನುಲ್ ಅರೆಸ್ಟ್

ಕೋವಿಡ್ 19, ಸರ್ಕಾರದ ವಿರುದ್ಧ ಗಂಭೀರ ಆರೋಪ; ಅಸ್ಸಾಂ ಶಾಸಕ ಅಮಿನುಲ್ ಅರೆಸ್ಟ್

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಗದಗ ನಗರದ 80ರ ವೃದ್ಧೆಗೆ ಸೋಂಕು: 44 ಜನರ ವೈದ್ಯಕೀಯ ತಪಾಸಣೆ

ಗದಗ ನಗರದ 80ರ ವೃದ್ಧೆಗೆ ಸೋಂಕು: 44 ಜನರ ವೈದ್ಯಕೀಯ ತಪಾಸಣೆ

ಸಿದ್ದರಾಮಯ್ಯ ರಿಯಾಲಿಟಿ ಚೆಕ್: ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯ ರಿಯಾಲಿಟಿ ಚೆಕ್: ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನೊಬ್ಬನೇ ಏಕಾಂಗಿಯಾಗಿ ತೀರ್ಪುಗಳನ್ನು ಬರೆದಿದ್ದೀನಾ?

ನಾನೊಬ್ಬನೇ ಏಕಾಂಗಿಯಾಗಿ ತೀರ್ಪುಗಳನ್ನು ಬರೆದಿದ್ದೀನಾ?

Italian-Covid

“ನಾವು ಮಾಡಿದ ತಪ್ಪನ್ನು ಮಾಡದಿರಿ’ ಎನ್ನುತ್ತಾರೆ ಇಟಾಲಿಯನ್ನರು

Corona-fake-newa

ಕೊರೊನಾ: ಸುಳ್ಳು ಸುದ್ದಿ ಹರಡೋದೇ ಕೆಲವರಿಗೆ ಜೀವನೋಪಾಯ!

Bank

ಮರುಕಳಿಸುತ್ತಿರುವ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು

Covid

ಕಷ್ಟ ಕೊರೊನಾಗೆ, ಮನುಷ್ಯರಿಗಲ್ಲ !

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

07-April-25

ಹಾಲು ವಿತರಣೆಗಾಗಿ ಅಧಿಕಾರಿಗಳು-ಸದಸ್ಯರ ತಿಕ್ಕಾಟ

07-April-24

ಗ್ರಾಮಲೆಕ್ಕಾಧಿಕಾರಿಗಳ ಲೊಕೇಶನ್‌ ಪಡೆಯಿರಿ

ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ

07-April-23

ಕಲ್ಲಂಗಡಿ-ಪಪ್ಪಾಯಿ ಬೆಳೆಗಾರರ ಪರದಾಟ

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ