ಪಕ್ಷಾಂತರದ ಭರದಲ್ಲಿ ಕಾರ್ಯಕರ್ತರ ಅವಗಣನೆ ಸಲ್ಲದು

Team Udayavani, Jan 16, 2023, 6:00 AM IST

ಪಕ್ಷಾಂತರದ ಭರದಲ್ಲಿ ಕಾರ್ಯಕರ್ತರ ಅವಗಣನೆ ಸಲ್ಲದು

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಸಹಜವಾಗಿಯೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಚುನಾವಣ ತಂತ್ರಗಾರಿಕೆ ರಚನೆ, ಪೂರ್ವ ಸಿದ್ಧತೆ, ಪ್ರಚಾರ ಕಾರ್ಯತಂತ್ರ, ಪ್ರಾಥಮಿಕ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ಮತ್ತಿತರ ಚಟು ವಟಿಕೆಗಳಲ್ಲಿ ಪಕ್ಷದ ನಾಯಕರು ತಲ್ಲೀನರಾಗಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ಪ್ರಭಾವಿ ಮುಖಂಡರ ಮನೆಬಾಗಿಲಿಗೆ ತಡಕಾಡತೊಡಗಿದ್ದರೆ ಟಿಕೆಟ್‌ ಖಾತರಿಯಲ್ಲಿರುವವರು ಪ್ರಚಾರ ಕಾರ್ಯತಂತ್ರದ ರೂಪಣೆಯಲ್ಲಿ ನಿರತರಾಗಿದ್ದಾರೆ. ಈ ನಡುವೆ ಹಾಲಿ ಇರುವ ಪಕ್ಷದಲ್ಲಿ ಹಿನ್ನೆಲೆಗೆ ಸರಿದಿರುವ ಅಥವಾ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ಕೆಲವೊಂದಿಷ್ಟು ನಾಯಕರು ಇನ್ನೊಂದು ಪಕ್ಷಕ್ಕೆ ಹಾರಲು ಸಜ್ಜಾಗಿದ್ದಾರೆ. ಈ ಪಕ್ಷಾಂತರ ಪರ್ವಕ್ಕೆ ಶನಿವಾರ ಅಧಿಕೃತ ಚಾಲನೆ ಲಭಿಸಿದೆ.

ಯಾವುದೇ ಚುನಾವಣೆ ಸಮೀಪಿಸಿದಾಗಲೂ ನಾಯಕರ ಪಕ್ಷಾಂತರ ಮಾಮೂಲು. ತಮಗೆ ಅನುಕೂಲಕರ ಮತ್ತು ಒಂದಿಷ್ಟು ಸ್ಥಾನಮಾನ ಲಭಿಸೀತು ಎಂಬ ನಿರೀಕ್ಷೆಯಿಂದ ನಾಯಕರು ಇನ್ನೊಂದು ಪಕ್ಷವನ್ನು ಅಪ್ಪಿಕೊಳ್ಳುತ್ತಾರೆ. ಬಹುತೇಕ ಸಂದರ್ಭದಲ್ಲಿ ಇಂತಹ ನಾಯಕರು ಭವಿಷ್ಯದಲ್ಲಿ ಅಧಿಕಾರ ಲಭಿಸುವ ಸಾಧ್ಯತೆ ನಿಚ್ಚಳವಾಗಿರುವ ಪಕ್ಷವನ್ನು ನೆಚ್ಚಿಕೊಳ್ಳುವುದೇ ಅಧಿಕ. ಯಾವುದೇ ನಾಯಕ ಪಕ್ಷಾಂತರ ಮಾಡಿದ ಸಂದರ್ಭದಲ್ಲಿ ಆತನಿಗೆ ಯಾವುದಾದರೂ ಸ್ಥಾನಮಾನ ಅಥವಾ ಕನಿಷ್ಠ ಟಿಕೆಟ್‌ನ ಭರವಸೆಯಂತೂ ಸಿಕ್ಕೇ ಸಿಕ್ಕಿರುತ್ತದೆ. ಪ್ರಜಾತಂತ್ರದಲ್ಲಿ ಇದು ಸಾಮಾನ್ಯ ಪ್ರಕ್ರಿಯೆ ಹಾಗೂ ಇದು ಚುನಾವಣಾಪೂರ್ವದಲ್ಲಿನ ವಲಸೆಯಾಗಿದ್ದರಿಂದ ಈ ಪಕ್ಷಾಂತರಕ್ಕೆ ನೈತಿಕತೆಯ ಮೊಹರೂ ಇದೆ. ಹಾಗಾಗಿ ಈ ಬಗ್ಗೆ ಯಾರೂ ಚಕಾರ ಎತ್ತುವುದೂ ಇಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಎಂಬಂತೆ ತಕರಾರುಗಳು ಕೇಳಿ ಬಂದರೂ ಅದಕ್ಕೆ ಕಿವಿಗೊಡುವ ಸ್ಥಿತಿಯಲ್ಲಿ ಯಾರೂ ಇರುವುದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಈ ಪಕ್ಷಾಂತರ ಹಾವಳಿ ಹೆಚ್ಚುತ್ತಲೇ ಸಾಗಿದೆ. ಚುನಾವಣ ಹವಾ ಯಾವ ದಿಕ್ಕಿನತ್ತ ಬೀಸುತ್ತಿರುತ್ತದೋ ಅತ್ತ ಈ ಅತಂತ್ರ ನಾಯಕರು ಮುಖ ಮಾಡುತ್ತಾರೆ. ಪಕ್ಷಾಂತರ ಮಾಡಿದವರೆಲ್ಲರೂ ಚುನಾವಣೆ ಯಲ್ಲಿ ಜನಮತ ಗಳಿಸುವಲ್ಲಿ ಸಫ‌ಲರಾಗುತ್ತಾರೆ ಎಂದೇನಿಲ್ಲ.

ಪಕ್ಷವೊಂದರಲ್ಲಿ ಗುರುತಿಸಿಕೊಂಡ ಬಳಿಕ ಆತ ಕಾರ್ಯಕರ್ತರ ಮಟ್ಟದಲ್ಲಿ ತನ್ನ ಛಾಪನ್ನು ಉಳಿಸಿಕೊಂಡಲ್ಲಿ ಪಕ್ಷಾಂತರದ ಅನಿವಾರ್ಯತೆ ಸೃಷ್ಟಿಯಾಗುವುದೇ ಇಲ್ಲ. ಅಧಿಕಾರ ಇರಲಿ, ಬಿಡಲಿ, ರಾಜಕೀಯ ಕುತಂತ್ರಗಳೇನೇ ಇರಲಿ ನಾಯಕನಾದವ ತನ್ನ ನಿಷ್ಠೆ, ಕರ್ತವ್ಯಬದ್ಧತೆ, ಸಾಮಾಜಿಕ ಕಳಕಳಿ ಮತ್ತು ಜನರೊಂದಿಗೆ ಪರಿಪೂರ್ಣವಾಗಿ ಬೆರೆತದ್ದೇ ಆದಲ್ಲಿ ಆತ ಪಕ್ಷಾಂತರ ಮಾಡುವ ಪರಿಸ್ಥಿತಿ ಸೃಷ್ಟಿಯಾಗಲಾರದು. ಪಕ್ಷಾಂತರ ಎನ್ನುವುದು ಒಂದರ್ಥದಲ್ಲಿ ಅವಕಾಶವಾದಿ ರಾಜಕಾರಣ. ರಾಜಕೀಯದಲ್ಲಿ ತನ್ನ ಅಸ್ತಿತ್ವ ಅಲುಗಾಡತೊಡಗಿದೆ ಎಂಬ ಭಾವನೆ ಕಾಡ ತೊಡಗಿದಾಗ ನಾಯಕನಾದವ ಅದನ್ನು ಉಳಿಸಿಕೊಳ್ಳುವ ಕೊನೆಯ ಪ್ರಯ ತ್ನವಾಗಿ ಪಕ್ಷಾಂತರದ ಮೊರೆ ಹೋಗುತ್ತಾನೆ. ಪ್ರಜಾಪ್ರಭುತ್ವದಲ್ಲಿ ಇದು ಸಹ್ಯ ಎಂದೆನಿಸಿದರೂ ಸ್ವಯಂಹಿತವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಮಾಡುವ ಪಕ್ಷಾಂತರವನ್ನು ಸಮರ್ಥಿಸಿಕೊಳ್ಳುವುದು ಒಂದಿಷ್ಟು ಕಷ್ಟ ಸಾಧ್ಯವೇ. ಇದರ ಜತೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಅವ ಮಾನ ಮಾಡಿದಂತೆಯೇ. ಇದನ್ನು ನಾಯಕರಾದವರು ಮೊದಲು ಅರ್ಥೈ ಸಿಕೊಳ್ಳಬೇಕು. ಹಾಗಾದಾಗ ಇಂಥ ಪಕ್ಷಾಂತರಕ್ಕೆ ಕಡಿವಾಣ ಬೀಳುತ್ತದೆ ಮಾತ್ರವಲ್ಲದೆ ಕಾರ್ಯಕರ್ತರ ಶ್ರಮಕ್ಕೂ ಒಂದಿಷ್ಟು ಬೆಲೆ ಲಭಿಸೀತು.

ಟಾಪ್ ನ್ಯೂಸ್

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.