Udayavni Special

ಪರ್ಯಾಯ ನಾಯಕರು ಕಾಣಿಸುತ್ತಿಲ್ಲ


Team Udayavani, Aug 9, 2018, 6:00 AM IST

24.jpg

1976ರಿಂದ 1996ರ ತನಕ ಸುಮಾರು ಎರಡು ದಶಕ ಅಧಿಕಾರ ವಂಚಿತರಾಗಿದ್ದರೂ ಪಕ್ಷ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಲ್ಲಿ ಕರುಣಾನಿಧಿ ಯಶಸ್ವಿಯಾಗಿದ್ದರು. ಇಂಥ ಮುತ್ಸದ್ದಿತನವನ್ನು ಮುಂದಿನ ಪೀಳಿಗೆಯ ನಾಯಕರು ತೋರಿಸಿದರೆ ಮಾತ್ರ ಅವರ ಪಕ್ಷ ಪ್ರಸ್ತುತವಾಗಿರುತ್ತದೆ.

ಮುಖಂಡರು ತೀರಿಕೊಂಡಾಗ ಶೂನ್ಯವೊಂದು ಸೃಷ್ಟಿಯಾಗಿದೆ ಮತ್ತು ಈ ಶೂನ್ಯವನ್ನು ತುಂಬುವುದು ಅಸಾಧ್ಯ ಎನ್ನುವುದು ಗೌರವ ಸಲ್ಲಿಸುವ ಒಂದು ವಾಡಿಕೆಯ ಹೇಳಿಕೆ ಎಂದಷ್ಟೆ ಪರಿಗಣಿಸಲ್ಪಡುತ್ತದೆ. ಆದರೆ ಕರುಣಾನಿಧಿ ವಿಚಾರದಲ್ಲಿ ಮಾತ್ರ ಇದು ಬರೀ ಔಪಚಾರಿಕ ಮಾತಲ್ಲ. ಅವರ ಅಗಲಿಕೆಯಿಂದ ಕನಿಷ್ಠ ತಮಿಳುನಾಡಿನ ರಾಜಕೀಯದಲ್ಲಾದರೂ ದೊಡ್ಡದೊಂದು ಶೂನ್ಯ ನಿರ್ಮಾಣವಾಗಿದ್ದು, ಅದನ್ನು ತುಂಬುವ ನಾಯಕ ಸದ್ಯ ಅಲ್ಲಿ ಕಾಣಿಸುತ್ತಿಲ್ಲ. ಜಯಲಲಿತಾ ಮತ್ತು ಕರುಣಾನಿಧಿ ತಮಿಳುನಾಡಿನ ರಾಜಕೀಯವನ್ನು ಆವರಿಸಿಕೊಂಡ ಪರಿ ಆ ರೀತಿಯಿತ್ತು. ಈಗ ಅವರಿಬ್ಬರೂ ಇಲ್ಲದಿರುವುದರಿಂದ ಅಲ್ಲಿನ ರಾಜಕೀಯ ಹೊಸ ಆಯಾಮದತ್ತ ಹೊರಳುವ ಅನಿವಾರ್ಯತೆ ಸೃಷ್ಟಿಯಾಗಿದೆ. 

ಎಂ.ಜಿ. ರಾಮಚಂದ್ರನ್‌ ನಿಧನರಾದಾಗ ಆ ಸ್ಥಾನವನ್ನು ತುಂಬಲು ಕರುಣಾನಿಧಿ ಇದ್ದರು. ಆದರೆ ಜಯಲಲಿತಾ ನಿಧನ ರಾದಾಗ ಅವರ ಪಕ್ಷದಲ್ಲಿ ಆ ಮಟ್ಟದ ಇನ್ನೋರ್ವ ನಾಯಕ ಇರಲಿಲ್ಲ. ಅದೇ ರೀತಿ ಈಗ ಕರುಣಾನಿಧಿ ನಿಧನರಾದಾಗ ಅವರ ಸರಿಸಮಾನ ನಾಯಕ ಇನ್ನೊಬ್ಬರಿಲ್ಲದಂತಾಗಿದೆ. ಮಗ ಸ್ಟಾಲಿನ್‌ ಉತ್ತರಾಧಿಕಾರಿಯ ಸ್ಥಾನದಲ್ಲಿ ಈಗಾಗಲೇ ಇದ್ದರೂ ಅವರಿಂದ ಕರುಣಾನಿಧಿಯ ರೀತಿಯಲ್ಲಿ ರಾಜಕೀಯ ದಾಳಗಳನ್ನು ಉರುಳಿಸುವ ಸಾಮರ್ಥ್ಯ ಇರುವುದು ಇನ್ನೂ ಸಾಬೀತಾಗಿಲ್ಲ. 2014ರ ಲೋಕಸಭಾ ಚುನಾವಣೆ ಮತ್ತು 2016ರ ವಿಧಾನಸಭೆ ಸ್ಟಾಲಿನ್‌ ಸಾಮರ್ಥ್ಯ ಪರೀಕ್ಷಿಸುವ ವೇದಿಕೆ ಯಾಗಿತ್ತು. ಇದರಲ್ಲಿ ಅವರು ಹೇಳಿಕೊಳ್ಳುವಂಥ ಯಶಸ್ಸು ಗಳಿಸಿಲ್ಲ. ಜತೆಗೆ ಅಧಿಕಾರಕ್ಕಾಗಿ ಸಹೋದರರೊಳಗೆ ಕಚ್ಚಾಟವೂ ಇರುವುದರಿಂದ ಕ‌ರುಣಾನಿಧಿ ಬಳಿಕ ಯಾರು ಎಂಬ ಪ್ರಶ್ನೆ ಈಗಲೇ ಡಿಎಂಕೆಯಲ್ಲಿ ಮೂಡಿದೆ. 

ಸಿನೆಮಾ ನಟರಾದ ಕಮಲಹಾಸನ್‌ ಮತ್ತು ರಜನೀಕಾಂತ್‌ ಪ್ರವೇಶದ ಬಳಿಕ ತಮಿಳುನಾಡಿನ ರಾಜಕೀಯ ಹೊಸ ಆಯಾಮದತ್ತ ಹೊರಳಿದೆ. ಜತೆಗೆ ಟಿಟಿವಿ ದಿನಕರನ್‌ ಬಲಾಡ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಎಐಎಡಿಎಂಕೆಯಲ್ಲಿರುವ ಅಸ್ಥಿರತೆಯನ್ನು ಬಳಸಿಕೊಂಡು ತಮಿಳುನಾಡಿನಲ್ಲಿ ನೆಲೆಯೂರಲು ಬಿಜೆಪಿಯೂ ಪ್ರಯತ್ನಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಡಿಎಂಕೆಯನ್ನು ಉಳಿಸಿಕೊಳ್ಳಲು ಯಾವ ತಂತ್ರಗಾರಿಕೆಯನ್ನು ಸ್ಟಾಲಿನ್‌ ಉಪಯೋಗಿಸುತ್ತಾರೆ ಎನ್ನುವುದರ ಮೇಲೆ ಅವರ ಮತ್ತು ಪಕ್ಷದ ಭವಿಷ್ಯವಿದೆ. 

ಕರುಣಾನಿಧಿ ಪ್ರಾದೇಶಿಕ ಪಕ್ಷವೊಂದರ ನಾಯಕರಾಗಿದ್ದರೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರು. ಚೆನ್ನೈಯಲ್ಲಿ ದ್ದುಕೊಂಡೇ ದಿಲ್ಲಿಯ ರಾಜಕೀಯವನ್ನು ನಿರ್ದೇಶಿಸುವ ಕಲೆಯನ್ನು ಅವರು ಸಿದ್ಧಿಸಿಕೊಂಡಿದ್ದರು. ಹಾಗೆ ನೋಡಿದರೆ 1969ರಲ್ಲಿ ಅಣ್ಣಾದೊರೆ ನಿಧನರಾಗಿ ಅಧಿಕಾರದ ಚುಕ್ಕಾಣಿ ಕೈಗೆ ಬಂದಾಗಲೇ ರಾಷ್ಟ್ರ ರಾಜಕಾರಣಕ್ಕೆ ಕರುಣಾನಿಧಿಯವರ ಪ್ರವೇಶವಾಗಿತ್ತು. ಆ ಸಂದರ್ಭದಲ್ಲಿ ವಿ. ವಿ.ಗಿರಿಯನ್ನು ರಾಷ್ಟ್ರಪತಿ ಮಾಡಲು ಇಂದಿರಾ ಗಾಂಧಿಗೆ ಕರುಣಾನಿಧಿ ಬೆಂಬಲ ನೀಡಿದ್ದರು. 

1940ರಿಂದ 1960ರ ತನಕ ಹಿಂದಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಹೊರತಾಗಿಯೂ 1996ರಲ್ಲಿ ಸಂಯುಕ್ತ ರಂಗ, 1999ರಲ್ಲಿ ಎನ್‌ಡಿಎ ಮತ್ತು 2004ರಲ್ಲಿ ಯುಪಿಎ ಮೈತ್ರಿಕೂಟದಲ್ಲಿ ಕರುಣಾನಿಧಿ ಸೇರಿಕೊಂಡಿದ್ದರು. ಹಿಂದಿ ವಿರೋಧಿ ನಿಲುವು ರಾಷ್ಟ್ರ ರಾಜಕಾರಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಚಾಕಚಕ್ಯತೆ ಅವರಲ್ಲಿತ್ತು. ಮೈತ್ರಿಕೂಟದಲ್ಲಿ ಸೇರಿಕೊಳ್ಳುವುದು ಮತ್ತು ಅದರಿಂದ ತನ್ನ ರಾಜ್ಯಕ್ಕೆ ಗರಿಷ್ಠ ಪ್ರಯೋಜನವಾಗುವಂತೆ ನೋಡಿಕೊಳ್ಳುವುದರಲ್ಲಿ ಕರುಣಾನಿಧಿ ಯಾವುದೇ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. 1976ರಿಂದ 1996ರ ತನಕ ಸುಮಾರು ಎರಡು ದಶಕ ಅಧಿಕಾರ ವಂಚಿತರಾಗಿದ್ದರೂ ಪಕ್ಷ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಲ್ಲಿ ಕರುಣಾನಿಧಿ ಯಶಸ್ವಿಯಾಗಿದ್ದರು. ಇಂಥ ಮುತ್ಸದ್ದಿತನವನ್ನು ಮುಂದಿನ ಪೀಳಿಗೆಯ ನಾಯಕರು ತೋರಿಸಿದರೆ ಮಾತ್ರ ಅವರ ಪಕ್ಷ ಪ್ರಸ್ತುತವಾಗಿರುತ್ತದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

ಕೋವಿಡ್ 19ಗೆ 200 ದಿನ: ಶತಕದ ದ್ವಿತಿಯಾರ್ಧದಲ್ಲೇ ಶೇ.99 ಪ್ರಕರಣಗಳು ಪತ್ತೆ!

Covid19ಗೆ 200 ದಿನ: ದ್ವಿಶತಕದ ಹಾದಿಯಲ್ಲೇ ಶೇ.99ರಷ್ಟು ಪ್ರಕರಣಗಳು ಪತ್ತೆ!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

KL-Rahul-1

ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

suresh-anagadi

ಹುಟ್ಟೂರ ಮಣ್ಣು ಮತ್ತು ನೀರಿನೊಂದಿಗೆ ದೆಹಲಿಯಲ್ಲೇ ಸುರೇಶ್ ಅಂಗಡಿ ಅಂತ್ಯಕ್ರಿಯೆ

HUNDI

ಗಂಗಾವತಿ: ಅಂಜನಾದ್ರಿ ಹುಂಡಿ ಹಣ ಎಣಿಕೆ; 10.24 ಲಕ್ಷ ಸಂಗ್ರಹ

manday

ಮಂಡ್ಯದಲ್ಲಿಂದು 195 ಜನರಿಗೆ ಕೋವಿಡ್ ದೃಢ; 314 ಮಂದಿ ಗುಣಮುಖ, 1 ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವಸಂಸ್ಥೆಯ ವಾಸ್ತವ ತೆರೆದಿಟ್ಟ ಪ್ರಧಾನಿ ಬದಲಾವಣೆ ಅತ್ಯಗತ್ಯ

ವಿಶ್ವಸಂಸ್ಥೆಯ ವಾಸ್ತವ ತೆರೆದಿಟ್ಟ ಪ್ರಧಾನಿ ಬದಲಾವಣೆ ಅತ್ಯಗತ್ಯ

ಹೆಚ್ಚಾದ ಇರಾನ್‌-ಅಮೆರಿಕ ಬಿಕ್ಕಟ್ಟು; ಎಚ್ಚರಿಕೆಯ ಹೆಜ್ಜೆ ಮುಖ್ಯ

ಹೆಚ್ಚಾದ ಇರಾನ್‌-ಅಮೆರಿಕ ಬಿಕ್ಕಟ್ಟು; ಎಚ್ಚರಿಕೆಯ ಹೆಜ್ಜೆ ಮುಖ್ಯ

ದೇಶದಲ್ಲಿ ಅಲ್‌ಕಾಯಿದಾ ಉಗ್ರ ಜಾಲ ಅಸಡ್ಡೆ ಸಲ್ಲ

ದೇಶದಲ್ಲಿ ಅಲ್‌ಕಾಯಿದಾ ಉಗ್ರ ಜಾಲ ಅಸಡ್ಡೆ ಸಲ್ಲ

ಒತ್ತಡಗಳ ನಡುವೆ… ಮಾನಸಿಕ ಆರೋಗ್ಯ ಬಹಳ ಮುಖ್ಯ

ಒತ್ತಡಗಳ ನಡುವೆ… ಮಾನಸಿಕ ಆರೋಗ್ಯ ಬಹಳ ಮುಖ್ಯ

ಬಯಲಾಯ್ತು ಪಾಕ್‌ ಕುತಂತ್ರ ತಕ್ಕ ಪ್ರತ್ಯುತ್ತರ ಅಗತ್ಯ

ಬಯಲಾಯ್ತು ಪಾಕ್‌ ಕುತಂತ್ರ ತಕ್ಕ ಪ್ರತ್ಯುತ್ತರ ಅಗತ್ಯ

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

ಕೋವಿಡ್ 19ಗೆ 200 ದಿನ: ಶತಕದ ದ್ವಿತಿಯಾರ್ಧದಲ್ಲೇ ಶೇ.99 ಪ್ರಕರಣಗಳು ಪತ್ತೆ!

Covid19ಗೆ 200 ದಿನ: ದ್ವಿಶತಕದ ಹಾದಿಯಲ್ಲೇ ಶೇ.99ರಷ್ಟು ಪ್ರಕರಣಗಳು ಪತ್ತೆ!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

KL-Rahul-1

ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾವು ಪ್ರಮಾಣ ಹೆಚ್ಚಳ

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾವು ಪ್ರಮಾಣ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.