ಜನಸಂಖ್ಯೆ ನಿಯಂತ್ರಣದಲ್ಲಿ ಭಾರತದ ಯಶಸ್ಸು 


Team Udayavani, Nov 26, 2021, 6:00 AM IST

ಜನಸಂಖ್ಯೆ ನಿಯಂತ್ರಣದಲ್ಲಿ ಭಾರತದ ಯಶಸ್ಸು 

ಭಾರತದಲ್ಲಿ ಜನಸಂಖ್ಯೆಯ ಪ್ರಮಾಣದಲ್ಲಿ ಇಳಿಕೆ ಶುರುವಾಗಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-5ರ ಪ್ರಕಾರ ಭಾರತದ ಜನನ ಪ್ರಮಾಣ, ಪ್ರತೀ ಮಹಿಳೆಗೆ 2019-21ರ ವರೆಗೆ 2 ಇದೆ. ಕಳೆದ 5 ವರ್ಷಕ್ಕೆ ಹೋಲಿಕೆ ಮಾಡಿದರೆ ಅಥವಾ ಹಿಂದಿನ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-4ರ ಪ್ರಕಾರ ಇದು 2.2 ಇತ್ತು. ಅಂದರೆ ಪ್ರತೀ ಮಹಿಳೆಗೆ 2.2 ಮಕ್ಕಳು ಜನಿಸುತ್ತಿದ್ದರು.

ಭಾರತದ ಎಲ್ಲ ದೃಷ್ಟಿಯಿಂದಲೂ ಹೇಳುವುದಾದರೆ ಜನಸಂಖ್ಯೆ ಪ್ರಮಾಣದಲ್ಲಿ ಕುಸಿತ ಶುರುವಾಗಿರುವುದು ಉತ್ತಮ ಸಂಗತಿ. ಈಗಾಗಲೇ ಚೀನ ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದಿದೆ. ಆದರೆ ಭಾರತ ಮಾತ್ರ ಅಂಥ ಯಾವುದೇ ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳದೇ ಕೇವಲ ಸರಕಾರಿ ಯೋಜನೆಗಳ ಮೂಲಕವೇ ನಿಯಂತ್ರಣ ಸಾಧಿಸಿದೆ.

ಹುಟ್ಟು ಮತ್ತು ಸಾವಿನ ನಡುವಿನ ಅಂತರದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಜನಸಂಖ್ಯೆ ಸಮತೋಲಿತವಾಗಿರಬೇಕು ಎಂದರೆ ದೇಶದಲ್ಲಿ ಪ್ರತೀ ಮಹಿಳೆ 2.1 ಮಗುವಿಗೆ ಜನ್ಮ ನೀಡಬೇಕು. ಈಗ ಭಾರತದಲ್ಲಿ ಪ್ರತೀ ಮಹಿಳೆ 2 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ ಎಂಬುದು ಉತ್ತಮ ಸಂಗತಿಯಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಅದಲ್ಲದೇ ಈ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-5 ಹೇಳುವ ಪ್ರಕಾರ ಭಾರತದಲ್ಲಿ ಈಗ ಜನಸಂಖ್ಯೆಯ ಇಳಿಕೆ ಕಾಣಿಸುತ್ತಿದೆ.

1998-99ರಲ್ಲಿ ಭಾರತದಲ್ಲಿ ಪ್ರತಿ ಮಹಿಳೆಗೆ 3.2 ಮಕ್ಕಳು ಜನಿಸುತ್ತಿದ್ದರು. ಹಾಗೆಯೇ ಐದು ವರ್ಷದ ಹಿಂದಿನ ಸಮೀಕ್ಷೆಗೆ ಹೋಲಿಕೆ ಮಾಡಿದರೆ ಆಗ 2.2 ಇತ್ತು. ಜತೆಗೆ ಕೇಂದ್ರಾಡಳಿತ ಪ್ರದೇಶಗಳನ್ನೂ ಸೇರಿಸಿ ಒಟ್ಟು 37 ರಾಜ್ಯಗಳಲ್ಲಿ ಒಟ್ಟಾರೆ ಜನನ ದರ ಕಡಿಮೆಯೇ

ಇದೆ. ಆದರೆ ಉತ್ತರ ಪ್ರದೇಶ, ಬಿಹಾರ ಮತ್ತು ಝಾರ್ಖಂಡ್‌ನಲ್ಲಿ ಮಾತ್ರ ರಾಷ್ಟ್ರೀಯ ಸರಾಸರಿಗಿಂತ ಒಂದಷ್ಟು ಹೆಚ್ಚಾಗಿದೆ ಎಂದು ಇದೇ ಸಮೀಕ್ಷೆ ತಿಳಿಸಿದೆ.

ಇದೇ ಸಮೀಕ್ಷೆ ಮತ್ತೂಂದು ಗಮನಾರ್ಹ ಅಂಶವೊಂದನ್ನು ಬಹಿರಂಗ ಮಾಡಿದೆ. ಭಾರತದಲ್ಲೀಗ ಪ್ರತೀ 1,000 ಪುರುಷರಿಗೆ 1,020 ಮಹಿಳೆಯರಿದ್ದಾರೆ. ಅದೇ 2015-16ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪ್ರತೀ 1,000 ಪುರುಷರಿಗೆ 991 ಮಹಿಳೆಯರು ಇದ್ದರು. ಅಂದರೆ ಭಾರತದಲ್ಲಿ ಲಿಂಗಾನುಪಾತದಲ್ಲಿ ಬಹಳಷ್ಟು ಸುಧಾರಣೆಯಾಗಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಕರ್ನಾಟಕದಲ್ಲಿ ಕಳೆದ ಸಮೀಕ್ಷೆಯಲ್ಲಿ ಒಟ್ಟಾರೆ ಜನನ ದರ 1.8 ಇತ್ತು. ಈ ಸಮೀಕ್ಷೆಯಲ್ಲಿ ಇದು 1.7ಕ್ಕೆ ಕುಸಿತ ಕಂಡಿದೆ. ಆದರೆ ಲಿಂಗಾನುಪಾತದಲ್ಲಿ ಕರ್ನಾಟಕ ಕೊಂಚ ಹಿಂದೆ ಉಳಿದಿರುವುದನ್ನು ಕಾಣಬಹುದು. ಇಲ್ಲಿ ಪ್ರತೀ 1000 ಪುರುಷರಿಗೆ 979 ಮಹಿಳೆಯರು ಇದ್ದಾರೆ.

ಇಷ್ಟೆಲ್ಲ ಆದರೂ ಭಾರತ 2031ರ ವೇಳೆಗೆ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ದೇಶವೆಂಬ ಖ್ಯಾತಿಗೆ ಪಾತ್ರವಾಗಲಿದೆ. ಈ ಮೂಲಕ ಚೀನವನ್ನು ಹಿಂದೆ ಹಾಕಲಿದೆ. ಇಲ್ಲೂ ಒಂದು ಸಮಾಧಾನಕರ ಸಂಗತಿ ಇದೆ. ವಿಶ್ವಸಂಸ್ಥೆಯು ಅಂದಾಜು ಹಾಕಿದ್ದ ಪ್ರಕಾರ, ಭಾರತ 2022ರಲ್ಲೇ ಚೀನವನ್ನು ಹಿಂದೆ ಹಾಕಬೇಕಿತ್ತು. ಆದರೆ ಒಂದು ದಶಕದ ಅನಂತರ ಭಾರತದ ಜನಸಂಖ್ಯೆ ಚೀನ ಮೀರಿಸಲಿದೆ. ಅಲ್ಲದೆ 2040ರಿಂದ 2050ರ ವೇಳೆಗೆ ಭಾರತದ ಜನಸಂಖ್ಯೆ 1.6ರಿಂದ 1.8 ಬಿಲಿಯನ್‌ ಆಗಲಿದೆ ಎಂದೇ ಅಂದಾಜಿಸಲಾಗಿದೆ.

ಟಾಪ್ ನ್ಯೂಸ್

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಇರಾಕ್‌: 11 ಯೋಧರನ್ನು ಕೊಂದ ಐಎಸ್‌ ನ ಉಗ್ರರು

ಇರಾಕ್‌: 11 ಯೋಧರನ್ನು ಕೊಂದ ಐಎಸ್‌ ನ ಉಗ್ರರು

ದ್ವಿತೀಯ ಪಿಯು ಪರೀಕ್ಷೆ ನೋಂದಣಿಗೆ 31 ಕೊನೇ ದಿನ

ದ್ವಿತೀಯ ಪಿಯು ಪರೀಕ್ಷೆ ನೋಂದಣಿಗೆ 31 ಕೊನೇ ದಿನ

ಮತ್ತೆ ಯಥಾಸ್ಥಿತಿಗೆ “ನಮ್ಮ ಮೆಟ್ರೋ’-ಬಸ್‌ ಸೇವೆ

ವಾರಾಂತ್ಯದ ಕರ್ಫ್ಯೂ ತೆರವು ಹಿನ್ನೆಲೆ: ಮತ್ತೆ ಯಥಾಸ್ಥಿತಿಗೆ “ನಮ್ಮ ಮೆಟ್ರೋ’- ಬಸ್‌ ಸೇವೆ

ಬಿಜೆಪಿ-ಜೆಡಿಎಸ್‌ಗೆ ಸಿದ್ಧಾಂತವಿಲ್ಲ; ಸಿದ್ದರಾಮಯ್ಯ ಆಕ್ರೋಶ

ಬಿಜೆಪಿ-ಜೆಡಿಎಸ್‌ಗೆ ಸಿದ್ಧಾಂತವಿಲ್ಲ; ಸಿದ್ದರಾಮಯ್ಯ ಆಕ್ರೋಶ

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯ

ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಮೇಲೆ ನಿಗಾ ಅಗತ್ಯ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

ನವೋದ್ಯಮಗಳಿಗೆ ಮೂಲನಿಧಿ ತೀರ್ಮಾನ ಸ್ವಾಗತಾರ್ಹ

ನವೋದ್ಯಮಗಳಿಗೆ ಮೂಲನಿಧಿ ತೀರ್ಮಾನ ಸ್ವಾಗತಾರ್ಹ

ಲಸಿಕಾ ಅಭಿಯಾನ: ವರ್ಷದಲ್ಲಿ ಚರಿತ್ರಾರ್ಹ ಸಾಧನೆ

ಲಸಿಕಾ ಅಭಿಯಾನ: ವರ್ಷದಲ್ಲಿ ಚರಿತ್ರಾರ್ಹ ಸಾಧನೆ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ

ಸ್ಗಹಜಕುಜಯಹಗ

ಮಂಜುಳಾ ಚಳ್ಳಕೆರೆ ನಗರಸಭೆ ಉಪಾಧ್ಯಕ್ಷೆ

ದ್ದಡಗ್ಹರಜಹಗ್ದಸ

ನಿಸ್ವಾರ್ಥ ಸೇವೆಯಿಂದ ಸಂಘಟನೆ ವೃದಿ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಸೆತರಿಯಕಜಹಗ್ದಸಅ

ಭದ್ರಾವತಿಯಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.