ಹಬ್ಬಗಳ ಸಂಭ್ರಮದಲ್ಲಿ ಕೋವಿಡ್ ನಿಯಮ ಪಾಲನೆಯಾಗಲಿ

Team Udayavani, Aug 13, 2022, 6:00 AM IST

ಹಬ್ಬಗಳ ಸಂಭ್ರಮದಲ್ಲಿ ಕೋವಿಡ್ ನಿಯಮ ಪಾಲನೆಯಾಗಲಿ

ಸ್ವಾತಂತ್ರ್ಯೋತ್ಸವದಿಂದ ಹಿಡಿದು, ಆಗಸ್ಟ್‌ ತಿಂಗಳಿನಾದ್ಯಂತ ಸರಣಿ ಹಬ್ಬಗಳು ಬರುತ್ತಿವೆ. ಆ. 13ರಿಂದಲೇ ಮೂರು ದಿನಗಳ ಕಾಲ ಎಲ್ಲೆಡೆ ಸ್ವಾತಂತ್ರ್ಯೋತ್ಸವ ಸಮಾರಂಭ ನಡೆಯಲಿದೆ. ಈ ಸಂಭ್ರಮದ ನಡುವೆಯೇ ದೇಶಾದ್ಯಂತ ಕೊರೊನಾ ಸೋಂಕುಗಳು ಹೆಚ್ಚಳವಾಗು ತ್ತಿರುವುದು ಮಾತ್ರ ಆತಂಕಕ್ಕೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಪ್ರತಿದಿನವೂ ಒಂದು ಸಾವಿರದಿಂದ ಎರಡು ಸಾವಿರದ ಆಸುಪಾಸಿಗೆ ಸೋಂಕುಗಳು ಕಂಡುಬರುತ್ತಿವೆ. ಅಂದರೆ ಪಾಸಿಟಿವಿಟಿ ದರ ಶೇ.7ರ ಸುಮಾರಿನಲ್ಲಿದೆ. ಶುಕ್ರವಾರವೇ ಶೇ.6.63ರಷ್ಟು ಪಾಸಿಟಿವಿಟಿ ದರ ಕಂಡು ಬಂದಿದೆ. ಜತೆಗೆ, 2,032 ಮಂದಿಗೆ ಸೋಂಕು ತಗಲಿದ್ದು, ಬೆಂಗಳೂರಿನಲ್ಲೇ 1,202 ಮಂದಿಗೆ ಸೋಂಕು ದೃಢಪಟ್ಟಿದೆ. 5 ಮಂದಿ ಸಾವನ್ನಪ್ಪಿದ್ದಾರೆ ಕೂಡ. ಹೀಗಾಗಿ ಎಚ್ಚರಿಕೆಯಿಂದ ಇರಬೇಕಾದದ್ದು ಅನಿವಾರ್ಯವಾಗಿದೆ.

ಇದು ಕೇವಲ ರಾಜ್ಯದ ಕಥೆಯಲ್ಲ. ದೇಶದಲ್ಲಿಯೂ ಪ್ರತಿದಿನ 20 ಸಾವಿರದ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಶುಕ್ರವಾರ 16,561 ಪ್ರಕರಣ ಪತ್ತೆಯಾಗಿವೆ. 49 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಕಳೆದ ವರ್ಷದ ಇದೇ ಸುಮಾರಿಗೆ ನೋಡುವುದಾದರೆ ಸಾವಿನ ಸಂಖ್ಯೆ ತೀರಾ ಕಡಿಮೆ ಇದೆ ಎಂದೇ ಹೇಳಬಹುದು.
ಕೊರೊನಾ ಎರಡನೇ ಅಲೆಗೆ ಹೋಲಿಕೆ ಮಾಡಿದರೆ ಈ ಪ್ರಕರಣಗಳು ತೀರಾ ಕಡಿಮೆ ಎಂದೇ ಹೇಳಬಹುದು. ಆದರೆ ಎಚ್ಚರ ತಪ್ಪಿದರೆ ಮಾತ್ರ ಕೇಸು ಹೆಚ್ಚಳವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದೇ ತಜ್ಞರು ಹೇಳುತ್ತಾರೆ.

ಈಗಾಗಲೇ ಜನ ಕೊರೊನಾ ದೂರ ವಾಗಿದೆ ಎಂಬ ಲೆಕ್ಕಾಚಾರಕ್ಕೆ ಬಂದಾಗಿದೆ. ಹೀಗಾಗಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಶುಚಿತ್ವ ಕಾಪಾಡಿಕೊಳ್ಳುವುದು ಜನರಿಂದ ಮರೆಯಾಗಿದೆ. ಇದರ ನಡುವೆಯೇ, ಇತ್ತೀಚಿನ ದಿನಗಳಲ್ಲಿ ಒಂದಷ್ಟು ವಾತಾವರಣಕ್ಕೆ ಹೊಂದಿಕೊಂಡಂಥ ರೋಗಗಳಾದ ಜ್ವರ, ತಲೆನೋವು, ಶೀತ, ಕೆಮ್ಮು ಕೂಡ ಕಾಣಿಸಿಕೊಳ್ಳುತ್ತಿದೆ. ಈ ಲಕ್ಷಣಗಳು ಕೊರೊನಾವೇ ಅಥವಾ ಬೇರಾವ ಜ್ವರವೇ ಎಂಬ ದ್ವಂದ್ವದಲ್ಲಿಯೂ ಆಸ್ಪತ್ರೆಗಳು ಮತ್ತು ಜನರಿದ್ದಾರೆ.

ಏನೇ ಆದರೂ ಈ ರೋಗ ಲಕ್ಷಣಗಳ ಸಂಬಂಧ ಯಾರೂ ನಿರ್ಲಕ್ಷ್ಯ ತೋರಬಾರದು. ಇಂಥ ರೋಗ ಲಕ್ಷಣಗಳು ಕಂಡ ಬಳಿಕ ವೈದ್ಯರ ಸಲಹೆ ಮೇರೆಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇನ್ನು ಸ್ವಾತಂತ್ರ್ಯೋತ್ಸವದ ಮುನ್ನೆಚ್ಚರಿಕೆಯಾಗಿ ಕೇಂದ್ರ ಸರಕಾರ ಶುಕ್ರವಾರ ಕೆಲವೊಂದು ಸೂಚನೆಗಳನ್ನೂ ನೀಡಿದೆ.

ಅಂದರೆ, ಕಡ್ಡಾಯ ವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಹೆಚ್ಚು ಜನರನ್ನು ಸೇರಿಸದೇ ಸ್ವಾತಂತ್ರ್ಯೋತ್ಸವ ನಡೆಸುವುದು ಇದರಲ್ಲಿ ಸೇರಿದೆ. ಈ ನಿಯಮಗಳನ್ನು ಪಾಲನೆ ಮಾಡಿಕೊಂಡು ಸ್ವಾತಂತ್ರ್ಯೋತ್ಸವ ಆಚರಿಸಿದರೆ, ಕೊರೊನಾವನ್ನು ನಿಯಂತ್ರಿಸಬಹುದು. ಇಲ್ಲದಿದ್ದರೆ ಕಷ್ಟಕರ ಸನ್ನಿವೇಶ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.

ಈಗಾಗಲೇ ದಿಲ್ಲಿ ಸರಕಾರ ಮಾಸ್ಕ್ ಧಾರಣೆ ಸಂಬಂಧ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದೆ. ಕರ್ನಾಟಕದಲ್ಲೂ ಮಾರುಕಟ್ಟೆ, ಮಾಲ್‌ಗ‌ಳು ಸೇರಿದಂತೆ ಜನರು ಸೇರುವಂಥ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.

ಸದ್ಯ ದಂಡವಿಲ್ಲ ಎಂದಾದರೂ, ಇದೇ ಕಾರಣಕ್ಕಾಗಿ ಮಾಸ್ಕ್ ಇಲ್ಲದೇ ಓಡಾಟ ನಡೆಸುವುದು ತರವಲ್ಲ. ಈ ವಿಚಾರವನ್ನು ಮನದಲ್ಲಿ ಇರಿಸಿಕೊಂಡು ಎಲ್ಲರೂ ನಿಯಮ ಪಾಲನೆ ಮಾಡಬೇಕು. ಇದೆಲ್ಲವೂ ಜನರ ಕೈಯಲ್ಲಿಯೇ ಇದೆ ಎಂಬುದನ್ನು ಮರೆಯಬಾರದು.

ಟಾಪ್ ನ್ಯೂಸ್

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪರಿಚಯ; ಯುವಕನಿಂದ ಲೈಂಗಿಕ ದೌರ್ಜನ್ಯ

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪರಿಚಯ; ಯುವಕನಿಂದ ಲೈಂಗಿಕ ದೌರ್ಜನ್ಯ

ಉಚ್ಚಿಲ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ

ಉಚ್ಚಿಲ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ಲಕ್ಷ್ಯ ಸೇನ್‌

ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ಲಕ್ಷ್ಯ ಸೇನ್‌

ಭಾರತ-ಪಾಕ್‌ ಟೆಸ್ಟ್‌ ಸರಣಿ: ತಟಸ್ಥ ತಾಣ: ಇಂಗ್ಲೆಂಡ್‌ ಕೊಡುಗೆ

ಭಾರತ-ಪಾಕ್‌ ಟೆಸ್ಟ್‌ ಸರಣಿ: ತಟಸ್ಥ ತಾಣ: ಇಂಗ್ಲೆಂಡ್‌ ಕೊಡುಗೆ

ಪುರುಷರ ಹಾಕಿ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ; ಸ್ಪೇನ್​ ವಿರುದ್ಧ ಭಾರತದ ಮೊದಲ ಪಂದ್ಯ

ಪುರುಷರ ಹಾಕಿ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ; ಸ್ಪೇನ್​ ವಿರುದ್ಧ ಭಾರತದ ಮೊದಲ ಪಂದ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ರೈತರ ಆಸ್ತಿ ಜಪ್ತಿಗೆ ತಡೆ: ದುರುಪಯೋಗವಾಗದಂತೆ ಎಚ್ಚರ ವಹಿಸಲಿ

ರೈತರ ಆಸ್ತಿ ಜಪ್ತಿಗೆ ತಡೆ: ದುರುಪಯೋಗವಾಗದಂತೆ ಎಚ್ಚರ ವಹಿಸಲಿ

ಕನ್ನಡ ಅನುಷ್ಠಾನ ಸಮರ್ಪಕವಾಗಿ ಜಾರಿಯಾಗಲಿ

ಕನ್ನಡ ಅನುಷ್ಠಾನ ಸಮರ್ಪಕವಾಗಿ ಜಾರಿಯಾಗಲಿ

ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ: ದೂರದೃಷ್ಟಿ ಅಗತ್ಯ

ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ: ದೂರದೃಷ್ಟಿ ಅಗತ್ಯ

ರಾಜಕೀಯ ಆರೋಪಗಳು ಎಲ್ಲೆ ಮೀರದಿರಲಿ

ರಾಜಕೀಯ ಆರೋಪಗಳು ಎಲ್ಲೆ ಮೀರದಿರಲಿ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪರಿಚಯ; ಯುವಕನಿಂದ ಲೈಂಗಿಕ ದೌರ್ಜನ್ಯ

ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪರಿಚಯ; ಯುವಕನಿಂದ ಲೈಂಗಿಕ ದೌರ್ಜನ್ಯ

ಉಚ್ಚಿಲ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ

ಉಚ್ಚಿಲ: ವರದಕ್ಷಿಣೆ ಕಿರುಕುಳ, ಕೊಲೆ ಯತ್ನ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

ರ್‍ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ ಕೌರ್‌

ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ಲಕ್ಷ್ಯ ಸೇನ್‌

ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ಲಕ್ಷ್ಯ ಸೇನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.