ರಾಯರ ಕನಸಿನಲ್ಲಿ ಬಣ್ಣ ಬಣ್ಣದ ಕರ ನೋಟೀಸುಗಳು


Team Udayavani, Aug 14, 2017, 1:02 PM IST

14-ANA-1.jpg

ಯಾರಿಗೆ ಬೇಕು ಸ್ವಾಮೀ, ಈ ಇನ್‌ಕಂ ಟ್ಯಾಕ್ಸ್‌ ನೋಟಿಸು ಹಾವಳಿ? ಯಾವದಾದ್ರು  ಆಗಬಹುದು ಆದ್ರೆ ಈ ಟ್ಯಾಕ್ಸ್‌ ಡಿಪಾರ್ಟ್ಮೆಂಟಿನ ಸಹವಾಸ ಮಾತ್ರ ಬೇಡ ಎಂದು ಬೆವರು ಬಿಚ್ಚವವರಿಗೆ ಲೆಕ್ಕವಿಲ್ಲ. ಅಂತಹ ಅಸಂಖ್ಯಾಕರ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಬಹುದೇನೋ? ಹಾಗಿದ್ದಲ್ಲಿ, ಈ ಕೆಳಗಿನ ನೋಟಿಸುಗಳ ಸೆಕ್ಷನ್‌ ಪಟ್ಟಿಯನ್ನು ಒಮ್ಮೆ ಅವಲೋಕಿಸುವುದು ಒಳಿತು…

ಗಡದ್ದಾಗಿ ಊಟ ಮಾಡಿ ಮಧ್ಯಾನ್ನದ ತಂಪು ಹೊತ್ತಿನಲ್ಲಿ ಈಸೀಚೇರಿನಲ್ಲೇ ಕಾಲು ನೀಡಿ ನಿದ್ದೆ ಹೊಡೆಯುತ್ತಿದ್ದ ಗುರುಗುಂಟಿರಾಯರಿಗೆ ಎರಡೂ ಕಣ್ಣುಗಳಲ್ಲಿ ಕನಸು. ರಾಯರದ್ದು ಇದೊಂದು ರೀತಿಯ ಮಲ್ಟಿಪ್ಲೆಕ್ಸ್…! ಎರಡೆರಡು ಸ್ಕ್ರೀನುಗಳಲ್ಲಿ ಎರಡೆರಡು ಬೇರೆ ಬೇರೆ ಕನಸುಗಳು! ಒಂದು ಕಣ್ಣಿನಲ್ಲಿ ತಾವು ಆನ್‌-ಲೈನ್‌ ಆದಾಯ ತೆರಿಗೆ ಫೈಲಿಂಗ್‌ ಮಾಡಿ ಸಂತೃಪ್ತರಾಗಿ ಕಂಪ್ಯೂಟರ್‌ ಶಟ್‌-ಡೌನ್‌ ಮಾಡುತ್ತಿರುವ ಸುಂದರ ಕನಸು ನಡೆಯುತ್ತಿದ್ದರೆ ಇನ್ನೊಂದು ಕಣ್ಣಿನಲ್ಲಿ ಕರ ಅಧಿಕಾರಿಗಳು ಅದನ್ನು ಪರಿಶೀಲಿಸಿ ನಾಲ್ಕಾರು ತಪ್ಪು ಕಂಡು ಹಿಡಿದು ಬಣ್ಣ ಬಣ್ಣದ ನೋಟಿಸುಗಳನ್ನು ಜಾರಿ ಮಾಡುವ ಭಯಾನಕ ದೃಶ್ಯ ಕಾಣಿಸತೊಡಗಿತು. ಎರಡನೆಯ ಕಣ್ಣಿನಲ್ಲಿ ಆ ಹಾರರ್‌ ಶೋ ಆರಂಭವಾದಂತೆ ರಾಯರ ನಿದ್ದೆ ಹಾರಿ ಹೋಯಿತು. ಈಸೀಚೇರಿನಿಂದ ಜಗ್ಗನೆ ಎದ್ದು ಮಳೆಗಾಲದ ತಂಪಿನಲ್ಲೂ ಬೆವರತೊಡಗಿದ ಮೈಯನ್ನು ಉಜ್ಜಿಕೊಂಡು ಹಾಲ್‌ನಲ್ಲಿ ಶತಪಥ ಸುತ್ತತೊಡಗಿದರು.

ರಾಯರ ನಿದ್ದೆ ಯವತ್ತೂ ಫ‌ುಲ್‌ ಕೋರ್ಸ್‌ ! ಗಡದ್ದಾಗಿ ಸಂಜೆ ನಾಲ್ಕು ಗಂಟೆಯವರೆಗೆ ಗೊರಕೆ ಹೊಡೆಯೋದೇ. ಇವತ್ತು ಮಾತ್ರ ಹೀಗೆ ಇಂಟರ್ವಲ್‌ ನಲ್ಲಿಯೇ ಎದ್ದು ಹೊರ ಬಂದದ್ದನ್ನು ಕಂಡ ರಾಯರ ಮಗ ಗಾಬರಿಗೊಂಡ. ಈ ರೀತಿ ನಡು ಮಧ್ಯಾನ್ನವೇ ಮೂಡಾಫ್ ಆದ ಅಪ್ಪನ ದರ್ಬಾರಿನಲ್ಲಿ ಎದುರು ಸಿಕ್ಕಿದರೆ ನನಗೆ ಇನ್ನೆಂತ ಸಂಚಕಾರ ಕಾದಿದೆಯೋ ಎಂದು ಗಾಬರಿಗೊಂಡ. ಈ ಸಂದರ್ಭದಲ್ಲಿ ಕೂಡಲೇ ಒಂದು ಲೋಟ ಚಾ ಕೈಯಲ್ಲಿಟ್ಟರೆ ಯಾವುದೇ ಆಪತ್ತಿಗೂ ತಾತ್ಕಾಲಿಕ ಸ್ಟೇ ಸಿಗಬಹುದೇನೊ ಎಂಬ ಆಸೆಯಿಂದ ಪತ್ನಿಗೆ ಚಾ ಮಾಡುವಂತೆ ತಿಳಿಸಲು ಒಳಗಡೆ ಹೋದ.

ಹೌದು. ಯಾರಿಗೆ ಬೇಕು ಸ್ವಾಮೀ, ಈ ಇನ್‌ಕಂ ಟ್ಯಾಕ್ಸ್‌ ನೋಟಿಸು ಹಾವಳಿ? ಯವಾªದ್ರೂ ಆಗಬಹುದು ಆದ್ರೆ ಈ ಟ್ಯಾಕ್ಸ್‌ ಡಿಪಾರ್ಟ್ಮೆಂಟಿನ ಸಹವಾಸ ಮಾತ್ರ ಬೇಡ ಎಂದು ಬೆವರು ಬಿಚ್ಚವವರಿಗೆ ಲೆಕ್ಕವಿಲ್ಲ. ಅಂತಹ ಅಸಂಖ್ಯಾಕರ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಬಹುದೇನೋ? ಹಾಗಿದ್ದಲ್ಲಿ, ಈ ಕೆಳಗಿನ ಟ್ಯಾಕ್ಸ್‌ ನೋಟಿಸುಗಳ ಸೆಕ್ಷನ್‌ ಪಟ್ಟಿಯನ್ನು ಒಮ್ಮೆ ಅವಲೋಕಿಸುವುದು ಒಳಿತು: ರಿಟರ್ನ್ ಫೈಲಿಂಗ್‌ ಮಾಡಿ ಸ್ವಲ್ಪವೇ ದಿನಗಳಲ್ಲಿ ನಿಮಗೆ ಅಸೆಸೆ¾ಂಟ್‌ ಹೆಸರಿನಲ್ಲಿ ಈ ಕೆಳಗಿನ ನೋಟಿಸುಗಳಲ್ಲೊಂದು ಬರಬಹುದು: ನೋಟೀಸು ಬಂದೊಡನೆ ಹೆದರದಿರಿ.

ಸೆಕ್ಷನ್‌ 139(9): (ಡಿಫೆಕ್ಟಿವ್‌ ರಿಟರ್ನ್)
ನೀವು ಫೈಲಿಂಗ್‌ ಮಾಡಿದ ಹೇಳಿಕೆಯನ್ನು ಪರಿಶೀಲನೆ ಮಾಡುವಾಗ ಒಂದಕ್ಕೊಂದು ತಾಳೆಯಾಗದ ಅಂಶಗಳು ಬೆಳಕಿಗೆ ಬಂದರೆ ಅಂತಹ ತಪ್ಪುಗಳನ್ನು ಸರಿಪಡಿಸಿ ಇನ್ನೊಮ್ಮೆ ಸರಿಯಾಗಿ ನಿಖರವಾದ ಮಾಹಿತಿಯೊಂದಿಗೆ ಫೈಲಿಂಗ್‌ ಮಾಡಿರಿ ಎನ್ನುವ ನೋಟಿಸು ಇದು. ನೀವು ತಪ್ಪಾದ ಫಾರ್ಮ್ ನಮೂನೆಯನ್ನು ಬಳಸಿರಬಹುದು ಉದಾ: ಐಟಿಆರ್‌-2 ಬದಲು ಐಟಿಆರ್‌-1. ನಿಮ್ಮ ಹೆಸರು ಪಾನ್‌ ಕಾರ್ಡ್‌ ಮತ್ತು ರಿಟರ್ನ್ ಫೈಲಿಂಗಿನಲ್ಲಿ ತಾಳೆಯಾಗದೆ ಇರಬಹುದು, ಅಥವಾ ಇನ್ಯಾವುದೇ ಅಂಕಿ ಅಂಶಗಳನ್ನು ತಪ್ಪಾಗಿ ಘೋಷಣೆಯಾಗಿರಬಹುದು. ಇಂತಹ ತಪ್ಪುಗಳನ್ನು ಇಲಾಖೆಯ ಕಂಪ್ಯೂಟರ್‌ ಕಂಡುಹಿಡಿದಾಗ ಅದು ನಿಮಗೆ ಸೆಕ್ಷನ್‌ 139(9) ನಿಮ್ಮ ತಪ್ಪನ್ನು ಸರಿಪಡಿಸಲು ಆದೇಶಿಸಿ ನೋಟಿಸು ಜಾರಿ ಮಾಡಬಹುದು.

ಈ ನೋಟಿಸನ್ನು ಕರ ಇಲಾಖೆಯು ಯಾವತ್ತಾದರೂ ಜಾರಿ ಮಾಡಬಹುದು ಆದರೆ ನೀವು ಇಂತಹ ನೋಟಿಸು ಜಾರಿಯಾದ 15 ದಿನಗಳ ಒಳಗಾಗಿ ಅದಕ್ಕೆ ಸೂಕ್ತ ರೂಪದಲ್ಲಿ ಉತ್ತರಿಸಲೇಬೇಕು. ಕರ ಇಲಾಖೆ ನೀಡಿದ ಯಾವುದೇ ನೋಟಿಸನ್ನು ನರ್ಜ ಅಂದಾಜ್‌ ಮಾಡುವಂತಿಲ್ಲ. ತಡಮಾಡದೆ ಕೂಡಲೇ ಆನ್‌-ಲೈನ್‌ ಆಗಿ ಉತ್ತರಿಸುವುದೇ ಒಳ್ಳೆಯದು.

ಈಗ ನೀವು ಮಾಡಬೇಕಾದದ್ದ ಇಷ್ಟೇ. ಮೊದಲನೆಯ ಬಾರಿ ರಿಟರ್ನ್ ಫೈಲಿಂಗ್‌ ಮಾಡಿದ ರೀತಿಯಲ್ಲಿಯೇ ಇನ್ನೊಮ್ಮೆ ರಿಟರ್ನ್ ಫೈಲಿಂಗ್‌ ಮಾಡಬೇಕು. ಹಾಗೆ ಮಾಡುವಾಗ ಪ್ರಥಮ ಪುಟದಲ್ಲಿ Original Return ಬದಲಾಗಿ evised return u  139(9) ಎಂಬ ಆಯ್ಕೆಯನ್ನು ಟಿಕ್‌ ಮಾಡಬೇಕು. ಅಲ್ಲದೆ ಒರಿಜಿನಲ್‌ ರಿಟರ್ನಿನ ಅಕ್ನಾಲೆಮೆಂಟ್ಟ್‌ ನಂಬರನ್ನು ಕೂಡಾ ನಮೂದಿಸಬೇಕು. ಹೀಗೆ ಮಾಡುವ ರಿವೈಸ್ಡ್ ರಿಟರ್ನಿನಲ್ಲಿ ನಿಮ್ಮ ಎಲ್ಲ ಹಳೆಯ ತಪ್ಪುಗಳನ್ನು ಸರಿಪಡಿಸಿರಬೇಕು. ಹೀಗೆ ಪರಿಷ್ಕೃತ ಹೇಳಿಕೆಯನ್ನು ಫೈಲ್‌ ಮಾಡಿದ ಬಳಿಕ ಇಲಾಖೆಯ ಕಂಪ್ಯೂಟರ್‌ ಅದನ್ನು ಇನ್ನೊಮ್ಮೆ ಪ್ರತ್ಯೇಕವಾಗಿ ಪರಿಶೀಲಿಸಿ ಅಸೆನ್ಮೆಂಟ್ಟ್‌ ಮಾಡಲಿರುವುದು.

ಸೆಕ್ಷನ್‌ 143(1): (ಮಾಹಿತಿ)
ಇದು ರಿಟರ್ನ್ ಫೈಲಿಂಗ್‌ ಮಾಡಿದವರಿಗೆಲ್ಲಾ ಸಮಾನ್ಯ ವಾಗಿ ಬರುವಂತಹ ಮಾಹಿತಿ. ಇದು ನೀವು ಕಟ್ಟಿದ ಕರ ಸರಿಯಾ ಗಿದೆಯೇ, ಕಡಿಮೆಯಾಗಿದೆಯೇ ಅಥವಾ ಹೆಚ್ಚಾಗಿದೆಯೇ ಎನ್ನುವ ಮಾಹಿತಿಯನ್ನು ನೀಡುತ್ತದೆ. ನಿಮ್ಮರಿಟನ್ಹೆಳಿಕೆಯನ್ನು ಪರಿಶೀಲಿಸಿದ ಬಳಿಕ ಕರ ಇಲಾಖೆಯ ಕಂಪ್ಯೂಟರು ಸೆಕ್ಷನ್‌ 143(1) ಅಡಿಯಲ್ಲಿ ಈ ಮೂರರಲ್ಲಿ ಒಂದು ಮಾಹಿತಿಯನ್ನು ನಿಮಗೆ ನೀಡುತ್ತದೆ.

1    ನೀವು ಕಟ್ಟಿದ ಕರ ಸರಿಯಾಗಿದೆ; ನಮ್ಮ ಲೆಕ್ಕಾಚಾರದೊಂದಿಗೆ ತಾಳೆಯಾಗುತ್ತದೆ.
2    ನೀವು ಕಟ್ಟಿದ ಕರ ಕಡಿಮೆಯಾಗಿದೆ; ನಮ್ಮ ಲೆಕ್ಕಾಚಾರ ಪ್ರಕಾರ ನೀವು ಇಂತಿಷ್ಟು ಮೊತ್ತ ಕರ ಕಟ್ಟಲು ಬಾಕಿ ಇದೆ. 30 ದಿನಗಳೊಳಗಾಗಿ ಅದನ್ನು ಪಾವತಿ ಮಾಡಿರಿ.
3     ನೀವು ಕಟ್ಟಿದ ಕರ ಜಾಸ್ತಿಯಾಗಿದೆ. ನಿಮಗೆ ಈ ಮೂಲಕ ನಿಮ್ಮ ಬ್ಯಾಂಕ್‌ ಖಾತೆಗೆ ಜಮೆಯಾಗುವಂತೆ ಅದನ್ನು ಮರುಪಾವತಿ ಮಾಡಲಾಗಿದೆ.
ಇಲ್ಲಿ ನಿಮ್ಮಿಂದ ಕರ ಬಾಕಿ ಇದ್ದಲ್ಲಿ ಅದನ್ನು 30 ದಿನಗಳ ಒಳಗಾಗಿ ಪಾವತಿ ಮಾಡತಕ್ಕದ್ದು.

ಸೆಕ್ಷನ್‌ 142(1): (ಎನ್‌ಕ್ವೆ „ರಿ)
ಒಬ್ಬನ ಕರ ಹೇಳಿಕೆಯ ಅಸೆನ್ಮೆಂಟು ಪೂರ್ತಿಗೊಳಿಸುವ ಮೊದಲು ಅದರ ಬಗ್ಗೆ ತನಿಖೆ ನಡೆಸಲು ಹೆಚ್ಚುವರಿ ಮಾಹಿತಿ ಮತ್ತು ದಾಖಲೆಗಳನ್ನು ತರಿಸಲು ಈ ಸೆಕÏನ್‌ ಅಡಿಯಲ್ಲಿ 
ಎನ್‌ಕ್ವೆ„ರಿ ನೋಟಿಸು ನೀಡಲಾಗುತ್ತದೆ. ಇದಕ್ಕೆ ಸಮರ್ಪಕವಾದ ರೀತಿಯಲ್ಲಿ ಉತ್ತರ ಕೊಡುವುದು ಒಳ್ಳೆಯದು. ಸಮರ್ಪಕ ಉತ್ತರ ನೀಡಲು ವಿಫ‌ಲನಾದರೆ ಇದು ಸೆಕ್ಷನ್‌ 143(2) ಮಟ್ಟಕ್ಕೆ ಏರುವ ಸಂಭವವಿದೆ. ಎಚ್ಚರ!

ಸೆಕ್ಷನ್‌ 143(1ಅ): (ಸೂಚನೆ)
ರಿಟರ್ನ್ ಫೈಲಿಂಗಿನಲ್ಲಿ ನೀವು ನೀಡಿದ ನಿಮ್ಮ ಆದಾಯದ ಮಾಹಿತಿ ಹಾಗೂ ಫಾರ್ಮ್ 16ರಲ್ಲಿ ಇಲಾಖೆಗೆ ಕಂಡು ಬರುವ ಆದಾಯದ ಮಾಹಿತಿ ಅಥವಾ ನಿಮ್ಮ ಕರ ವಿನಾಯಿತಿ ಹೂಡಿಕೆಯ ಮಾಹಿತಿ (ಸೆಕ್ಷನ್‌ 80ಸಿ ಇತ್ಯಾದಿ) ತಾಳೆಯಾಗದಿದ್ದಲ್ಲಿ ಅಥವಾ ನೀವು ಸಲ್ಲಿಸಿದ ಮಾಹಿತಿ ಹಾಗೂ ಫಾರ್ಮ್ 26ಎಎಸ್‌ ನಲ್ಲಿ ಕಾಣಿಸುವ ಮಾಹಿತಿ ತಾಳೆಯಾಗದಿದ್ದಲಿ ಕರ ಇಲಾಖೆಯು ಈ ಸೆಕ್ಷನ್‌ ಅಡಿಯಲ್ಲಿ ನಿಮಗೆ ಈ ಸೂಚನೆಯನ್ನು ಜಾರಿ ಮಾಡೀತು. ಇತ್ತೀಚೆಗಿನ ದಿನಗಳಲ್ಲಿ ಇಲಾಖೆಯ ಕಂಪ್ಯೂಟರ್‌ ಈ ಸೆಕ್ಷನ್‌ ಅಡಿಯಲ್ಲಿ ಹಲವಾರು ನೋಟಿಸುಗಳನ್ನು ಇಶ್ಯೂ ಮಾಡುತ್ತಿದೆ.
ಹಾಗಿದ್ದಲ್ಲಿ ನಿಮ್ಮ ಆನ್‌-ಲೈನ್‌ ಖಾತೆಯೊಳಗೆ ಹೊಕ್ಕು ಅಲ್ಲಿ ‘ಇ-ಪೊ›ಸೀಡಿಂಗ್‌’ ವಿಭಾಗಕ್ಕೆ ಹೋಗಿ ಅಲ್ಲಿ ನಿಮ್ಮ ಉತ್ತರವನ್ನು ತತ್ಸಂಬಂದಿ ದಾಖಲೆಯ ಸ್ಕ್ಯಾನ್‌ ಪ್ರತಿಯನ್ನು ಅಪ್‌ಲೋಡ್‌ ಮಾಡುವುದರ ಜೊತೆಗೆ ನೀಡತಕ್ಕದ್ದು.

ಸೆಕ್ಷನ್‌ 143(2): (ಸ್ಕ್ರುಟಿನಿ)
ಇದುಸೆಕ್ಷನ್‌ 142(1) ಅಡಿಯಲ್ಲಿ ನೀಡಿದ ನೋಟೀಸಿಗೆ ನೀವು ಕೊಟ್ಟ ಉತ್ತರ ಸಮಾಧಾನಕರವಾಗದೇ ಇದ್ದಲ್ಲಿ ಮುಂದಿನ ವಿಚಾರಣೆಗಾಗಿ ನೀಡುವ ನೋಟೀಸು. ಈ ನೋಟಿಸು ಪ್ರಕಾರ ನೀವು ಸಂಬಂಧ ಪಟ್ಟ ಎಲ್ಲ ದಾಖಲೆಗಳನ್ನು ಹಿಡಿದುಕೊಂಡು ವೈಯಕ್ತಿಕವಾಗಿ ಅಥವಾ ಪ್ರತಿನಿಧಿಯ ಮೂಲಕ ಪರ್ಸನಲ್‌ ಹಿಯರಿಂಗಿಗಾಗಿ ಕರ ಅಧಿಕಾರಿಯ ಸಮಕ್ಷಮ ಹೋಗಬೇಕಾ ಗುತ್ತದೆ. ಇಲ್ಲಿ ನಿಮ್ಮ ಕೇಸು ಎಳೆ ಎಳೆಯಾಗಿ ಸುðಟಿನಿಗೆ ಒಳಪಡುತ್ತದೆ. ವಸ್ತುವನ್ನು ಈ ಘಟ್ಟಕ್ಕೆ ಎಳೆದೊಯ್ಯದಿರುವುದೇ ಲೇಸು.

ಸೆಕ್ಷನ್‌ 148: (ರಿ-ಅಸೆನ್ಮೆಂಟ…)
ಐಟಿ ಅಧಿಕಾರಿಗೆ ನಿಮ್ಮ ಹಳೆಯ ರಿಟರ್ನ್ ಫೈಲಿಂಗಿನಲ್ಲಿ ಯಾವುದಾದರು ಆದಾಯ ಬಿಟ್ಟು ಹೋಗಿದೆ ಎನ್ನುವ ಅನುಮಾನ ಬಂದರೆ ನಿಮ್ಮ ಆ ವರ್ಷದ ರಿಟರ್ನ್ ಫೈಲಿಂಗನ್ನು ಮತ್ತೂಮ್ಮೆ ಮಾಡಲು ಈ ಸೆಕ್ಷನ್‌ ಅಡಿಯಲ್ಲಿ ಸೂಚಿಸಬಹುದು. ಇಲ್ಲಿ ಮುಖ್ಯವಾದ ವಿಷಯವೇನೆಂದರೆ ಇಲಾಖೆಯು ನಿಮ್ಮ ಹಳೆಯ ವರ್ಷಗಳ ಬಗ್ಗೆ ಈ ರೀತಿ ರಿ-ಫೈಲಿಂಗ್‌ ಮಾಡಲು ಸೂಚಿಸಬಹುದು. ಬಿಟ್ಟು ಹೋದ ಆದಾಯ ರೂ 1 ಲಕ್ಷದ ಒಳಗೆ ಇದ್ದರೆ ಅಸೆಸೆ¾ಂಟ್‌ ವರ್ಷ ಕಳೆದು 4 ವರ್ಷಗಳವರೆಗೂ ಅಥವಾ ರೂ. 1 ಲಕ್ಷ ಮೀರಿದರೆ 6 ವರ್ಷಗಳ ವರೆಗೂ ಈ ರೀತಿ ಮರುಪರಿಶೀಲನೆಗೆ ಕೇಳಬಹುದು. ಅಂತಹ ರಿ-ಫೈಲಿಂಗನ್ನು ಬಹುತೇಕ 30 ದಿನಗಳ ಒಳಗಡೆ ಮಾಡುವಂತೆ ಇಲಾಖೆಯು ಸೂಚಿಸಬಹುದು.

ಸೆಕ್ಷನ್‌ 156: (ಡಿಮಾಂಡ್‌ ನೋಟಿಸು)
ಡಿಮಾಂಡ್‌ ನೋಟಿಸ್‌ ಅಂದರೆ ಇದೇನೇ. ನಿಮ್ಮ ವತಿಯಿಂದ ತೆರಿಗೆ, ಬಡ್ಡಿ, ಪೆನಾಲ್ಟಿà ಇತ್ಯಾದಿಗಳು ಕಟ್ಟದೇ ಬಾಕಿ ಇದೆ ಎಂದು ಕಂಡು ಬಂದರೆ ಕರ ಇಲಾಖೆ ಈ ಸೆಕ್ಷನ್‌ ಅಡಿಯಲ್ಲಿ ಡಿಮಾಂಡ್‌ ನೋಟಿಸ್‌ ಜಾರಿ ಮಾಡುತ್ತದೆ. ಅದನ್ನು 30 ದಿನಗಳ ಒಳಗಾಗಿ ಕಟ್ಟತಕ್ಕದ್ದು. ಇದು ತುಂಬಾ ಸೀರಿಯಸ್‌ ಸೆಕ್ಷನ್‌. ಇದನ್ನಂತೂ ಖಂಡಿತಾ ಅವಗಣನೆ ಮಾಡುವಂತಿಲ್ಲ.

ಸೆಕ್ಷನ್‌ 245: (ಹೊಂದಾಣಿಕೆ)
ನೀವು ರಿಟರ್ನ್ ಫೈಲಿಂಗ್‌ ನಲ್ಲಿ ರಿಫ‌ಂಡ್‌ ಕ್ಲೈಮ್‌ ಮಾಡಿದ್ದಲ್ಲಿ ಹಾಗೂ ಸರಕಾರದ ಲೆಕ್ಕದ ಪ್ರಕಾರ ಇನ್ನೊಂದೆಡೆ ನೀವು ಕರ ಪಾವತಿ ಮಾಡಬೇಕಿದ್ದಲ್ಲಿ ಅದನ್ನು ನಿಮ್ಮ ರಿಫ‌ಂಡಿನೊಂದಿಗೆ ಹೊಂದಾಣಿಕೆ ಮಾಡುವಂತಹ ನೋಟೀಸನ್ನು ಈ ಸೆಕ್ಷನ್‌ ಅಡಿಯಲ್ಲಿ ನೀಡಲಾಗುತ್ತದೆ. ಈ ಕೊಡು-ಕೊಳ್ಳುವಿಕೆಯ ಹೊಂದಾಣಿಕೆಯ ಬಳಿಕ ನಿಮಗೆ ರಿಫ‌ಂಡ್‌ ಬರಬಹುದು ಅಥವಾ ನೀವೇ ಅತ್ಲಾಗಿ ಒಂದಷ್ಟೂ ಕರ ಪಾವತಿ ಮಾಡಬೇಕಾಗಿ ಬರಬಹುದು. ನೀವೇ ಕೊಡಬೇಕಾಗಿ ಬಂದರೆ ಅಂತಹ ಕರಬೇಡಿಕೆಯನ್ನು ನೀವು ಮೊತ್ತ ಮೊದಲು ದೃಡೀಕರಿಸಬೇಕು.

ಆನ್‌-ಲೈನ್‌ ನಿಮ್ಮ ಖಾತೆಯೊಳಕ್ಕೆ ಹೋಗಿ ಅಲ್ಲಿ esponse to outstanding tax demand ಎಂಬಲ್ಲಿ ನಿಮ್ಮ ಸಮ್ಮತಿ ಅಥವಾ ಅಸಮ್ಮತಿಯನ್ನು ಸೂಚಿಸಬೇಕು. ಅಸಮ್ಮತಿ ಇದ್ದಲ್ಲಿ ಅದಕ್ಕೆ ಸೂಕ್ತ ವಿವರಣೆಯನ್ನು ತುಂಬಬೇಕು. ಸಮ್ಮತಿ ಇದ್ದಲ್ಲಿ ಅದನ್ನು ಸೂಚಿಸಿ ಪ್ರತ್ಯೇಕವಾಗಿ ಬಾಕಿ ಪಾವತಿಯನ್ನು ಮಾಡತಕ್ಕದ್ದು. ಇವೇ ಕೆಲವು ಪ್ರಾಮುಖ್ಯ ಕರ ಸೆಕ್ಷನ್ನುಗಳು. ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ನೋಟಿಸು ಬಂದ ಮರುದಿನ ಪೊಲೀಸು ಬಂದು ಅಸ್ಟ್‌ ಮಾಡಿ ವಿಚಾರಣೆಯಿಲ್ಲದೆ ಜೈಲಿಗೆ ದೂಡುವುದಿಲ್ಲ. ಕಾನೂನಿನಡಿಯಲ್ಲಿ ಯಾವುದೇ ನೋಟಿಸಿಗೆ ಉತ್ತರ ನೀಡಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಕಾನೂನು ಪರಿಧಿಯ ಒಳಗೆಯೇ ಅಸೆನ್ಮೆಂಟ್‌ ನಡೆಯುತ್ತದೆ. ಅದನ್ನು ಒಪ್ಪುವ ಬಿಡುವ ಅಥವಾ ಕಾನೂನೀಯ ಹೋರಾಟ ನಡೆಸುವ ಸಂಪೂರ್ಣ ಹಕ್ಕು ನಿಮಗಿದೆ. ಸಣ್ಣ ಪುಟ್ಟ ಕರಬಾಕಿ ಇರುವ ಜನಸಾಮಾನ್ಯರ ಕೈಯಿಂದ ಬಾಕಿ ಕರ ಮತ್ತು ಅದರ ಮೇಲಿನ ಬಡ್ಡಿ ವಸೂಲಿ ಮಾಡಲಾಗುತ್ತದೆ. ಇದರಿಂದ ಅಮಾಯಕರಿಗೆ ಯಾವುದೇ ಅಪಾಯವಿಲ್ಲ. ನಿಶ್ಚಿಂತೆಯಿಂದ ನೋಟಿಸುಗಳನ್ನು ಎದುರಿಸಿ ಅಗತ್ಯಕ್ಕೆ ತಕ್ಕಂತೆ ವಿವರಣೆ ನೀಡಿರಿ ಇಲ್ಲವೇ ಕರಪಾವತಿ ಮಾಡಿರಿ. ಉತ್ತಮ ಚಾರ್ಟರ್ಡ್‌ ಅಕೌಂಟಂಟ್‌ಗಳ ಸಹಾಯ ಪಡೆಯಿರಿ.

(ಕರ ವಿಚಾರವಾಗಿ ಇಲ್ಲಿ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಸರಳವಾಗಿಸಿ ಸಂಕ್ಷಿಪ್ತವಾಗಿ ಮಾಹಿತಿಗಾಗಿ ಮಾತ್ರವೇ ಇಲ್ಲಿ ಚರ್ಚಿಸಲಾಗಿದೆ. ಕ್ಲಿಷ್ಟವಾದ ಕರಕಾನೂನಿನ ಎಷ್ಟೋ ಸೂಕ್ಷ್ಮ ವಿವರಗಳನ್ನು ಇಲ್ಲಿ ಕೊಡಲು ಸಾಧ್ಯವಾಗುವುದಿಲ್ಲ. ಇದು ಆದಾಯ ತೆರಿಗೆ ಕಾನೂನಿನ ಯಥಾ ಪ್ರತಿ ಅಥವಾ ಸಿಎ ಪರೀಕ್ಷೆಯ ಪಠ್ಯಪುಸ್ತಕವಲ್ಲ. ಹಾಗಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವೈಯಕ್ತಿಕ ಪರಿಸ್ಥಿತಿಯನ್ನು ನುರಿತ ಚಾರ್ಟರ್ಡ್‌ ಅಕೌಂಟಂಟ್‌ ಜತೆ ಚರ್ಚಿಸಿಯೇ ತೆಗೆದುಕೊಳ್ಳಿ. ಕೇವಲ ಒಂದು ಲೇಖನವನ್ನು ಓದಿ ಯಾವುದೇ ನಿರ್ಧಾರವನ್ನೂ ಯಾವತ್ತೂ ತೆಗೆದುಕೊಳ್ಳಬಾರದು- ಜನಹಿತದಲ್ಲಿ ಜಾರಿ)

ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.