ಚಿಟ್‌ಫ‌ಂಡ್‌ನ‌ಲ್ಲಿ ಕುರಿಯಾಗದಿರಲು ಹೊಸ ಕಾನೂನು


Team Udayavani, Nov 25, 2019, 5:36 AM IST

chit-fund

ಭಾರತೀಯರ ವಿತ್ತೀಯ ಸೃಜನಶೀಲತೆಗೆ ಏನೂ ಕೊರತೆಯಿಲ್ಲ. ಪಾಶ್ಚಾತ್ಯ ಮಾದರಿಯ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ಬರುವ ಎಷ್ಟೋ ಮೊದಲಿಂದಲೇ ಭಾರತದ ಹಳ್ಳಿಗಳಲ್ಲಿ ಸಣ್ಣಪುಟ್ಟ ಗಾತ್ರದ ಲೋಕಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಯಲ್ಲಿತ್ತು. ದುಡ್ಡು ಬೇಕೆಂದಾಗ ತಮ್ಮ ಜಮೀನುದಾರರ ಕೈಯಿಂದ ಸಾಲ ಪಡೆಯುವಲ್ಲಿಂದ ಹಿಡಿದು ತಮ್ಮ ಚಿನ್ನಾಭರಣಗಳನ್ನು ಲೋಕಲ್‌ ಸೇಠುಗಳ ತಿಜೋರಿಯಲ್ಲಿ ಅಡವಿಡುವುದರವರೆಗೆ, ಅಷ್ಟೇ ಏಕೆ? ಅವೆಲ್ಲವನ್ನೂ ಬಿಟ್ಟು ತಮ್ಮ ತಮ್ಮÇÉೇ ಗುಂಪುಗಳನ್ನಾಗಿ ಮಾಡಿಕೊಂಡು ಪರಸ್ಪರ ದುಡ್ಡಿನ ಸಹಾಯಹಸ್ತವನ್ನು ಚಾಚುವವರೆಗೆ ಭಾರತೀಯರು ಹಣಕಾಸಿನ ವ್ಯವಹಾರ ಚತುರರಾಗಿದ್ದರು. ವಿತ್ತ ವ್ಯವಹಾರ ವೆಂಬುದು ನಾವು ಪಾಶ್ಚಾತ್ಯರಿಂದ ಕಲಿತಂತಹ ವಿದ್ಯೆಯೇನಲ್ಲ.

ಚಿಟ್‌ಫ‌ಂಡ್‌ ಎಂದರೇನು?
ಕುರಿ, ಚಿಟ್‌ಫ‌ಂಡು, ಚಿಟ್ಟಿ, ಚೀಟಿ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಈ ವಿಶೇಷ ಮ್ಯೂಚುವಲ್‌ ಫ‌ಂಡು ಒಂದು ಡೆಪಾಸಿಟ್‌ ಯೋಜನೆಯೂ ಹೌದು, ಸಣ್ಣ ಉಳಿತಾಯವೂ ಹೌದು, ಸಾಲಪತ್ರವೂ ಹೌದು, ಅದೃಷ್ಟ ಚೀಟಿ ಅಥವಾ ಲಾಟರಿಯೂ ಹೌದು. ಅಲ್ಲದೆ ಈ ಆಲ…-ಇನ್‌-ಒನ್‌ ಖಾತೆ ಒಂದು ಸ್ವಸಹಾಯ ಗುಂಪು ಕೂಡಾ ಹೌದು. ಜಗತ್ತಿನ ಬೇರೆ ಯಾವ ವಿತ್ತಪತ್ರಗಳಿಗೆ ಸಾಟಿಯಾಗದ ಈ ವಿತ್ತ ವಿಶೇಷ ಒಂದು ಶುದ್ಧ ಭಾರತೀಯ ಅವಿಷ್ಕಾರ ಎಂದು ಹೇಳಲು ನಮಗೆ ಹೆಮ್ಮೆ ಇರಬೇಕು!

ಚಿಟ್‌ ಹೇಗೆ ನಡೆಯುತ್ತದೆ?
ಒಂದು ಚಿಟ್‌ ಅಥವಾ ಕುರಿ ಸ್ಕೀಮಿನಲ್ಲಿ ಒಂದು ನಿರ್ದಿಷ್ಟ ಸಂಖ್ಯೆಯ ಗುಂಪು ಅಷ್ಟೇ ಸಂಖ್ಯೆಯ ಒಂದು ನಿರ್ದಿಷ್ಟ ಅವಧಿಯವರೆಗೆ ಒಂದು ನಿರ್ದಿಷ್ಟ ಮೊತ್ತದ ದುಡ್ಡನ್ನು ಕಂತು ಕಂತಾಗಿ ಕಟ್ಟುತ್ತಾ ಹೋಗುತ್ತಾರೆ. ಪ್ರತಿ ತಿಂಗಳೂ ಕಟ್ಟುವ ಈ ಕಂತುಗಳ ಮೊತ್ತದಿಂದ ಗರಿಷ್ಟ ಶೇ.5 ಅನ್ನು ಇದರ ಫೋರ್ಮನ್‌ ಅಥವ ಪ್ರಾಯೋಜಕ ತನ್ನ ಕಮಿಶನ್‌ ಆಗಿ ಕಡಿದು ಉಳಿದ ಮೊತ್ತವನ್ನು ಹರಾಜು ಹಾಕುತ್ತಾನೆ. ಆವಾಗ ದುಡ್ಡಿನ ಅವಶ್ಯಕತೆ ಇರುವ ಆ ಗುಂಪಿನ ಯಾರಾದರೊಬ್ಬ ಒಬ್ಬ ಸದಸ್ಯ ಆ ಸಂಪೂರ್ಣ ನಿಧಿಯನ್ನು ಅತ್ಯಂತ ಕಡಿಮೆ ಬಿಡ್‌ ಮೂಲಕ ಗೆದ್ದುಕೊಳ್ಳಬಹುದು. ಉಳಿದ ಮೊತ್ತ ಲಾಭಾಂಶವಾಗಿ ಎÇÉಾ ಸದಸ್ಯರಲ್ಲೂ ಹಂಚಲ್ಪಡುತ್ತದೆ.

ಉದಾಹರಣೆಗಾಗಿ, 12 ಜನ 12 ತಿಂಗಳುಗಳ ಅವಧಿಯ ಮಾಸಿಕ ಕಂತು ರೂ. 1,000ದ ಚಿಟ್‌ ಆರಂಭಿಸಿ¨ªಾರೆ ಎಂದಿಟ್ಟುಕೊಳ್ಳಿ. ಪ್ರತಿ ತಿಂಗಳೂ ಜಮೆಯಾಗುವ ಮೊತ್ತ 12,000. ಇದರಲ್ಲಿ ಶೇ.5 ಅಂದರೆ ರೂ. 600ರನ್ನು ಇದನ್ನು ನಡೆಸುವ ಫೋರ್ಮನ್‌ ತನ್ನ ಕಮಿಶನ್‌ ಆಗಿ ಕತ್ತರಿಸಿ ಉಳಿದ 11,400 ರೂಪಾಯಿಗಳನ್ನು ಹರಾಜಿಗೆ ಹಾಕುತ್ತಾನೆ. ಈ 11,400 ರೂ.ಗಳನ್ನು ದುಡ್ಡಿನ ಅವಶ್ಯಕತೆ ಇರುವ ನಾಲ್ಕೈದು ಮಂದಿ ಅದಕ್ಕಿಂತ ಕಡಿಮೆ ಮೊತ್ತಕ್ಕೆ ತೆಗೆದುಕೊಳ್ಳಲು ಮುಂದೆ ಬರುತ್ತಾರೆ. 10,000, 10,200, 10,400 ಹಾಗೂ 10,500 ಈ ಬಿಡ್ಡುಗಳಾದರೆ ಅತ್ಯಂತ ಕಡಿಮೆ ಬಿಡ್‌ ಮಾಡಿದ ವ್ಯಕ್ತಿ ರೂ. 10,000ದ ವ್ಯಕ್ತಿ ಅಷ್ಟು ಮೊತ್ತವನ್ನು ಗೆಲ್ಲುತ್ತಾನೆ. ನಿಧಿಯಲ್ಲಿ ಈಗ ಉಳಿದ ಮೊತ್ತ 11,400 ಕಳೆ 10,000 ಅಂದರೆ ರೂ. 1,400 ಅನ್ನು ಲಾಭಾಂಶ ಎಂದು ಎÇÉಾ ಸದಸ್ಯರೂ ಸಮನಾಗಿ ಹಂಚಿಕೊಳ್ಳುತ್ತಾರೆ. ಅಂದರೆ ಒಬ್ಬೊಬ್ಬರಿಗೆ 1400/12=117 ರುಪಾಯಿ. ಈ ರೀತಿ ಪ್ರತೀ ತಿಂಗಳೂ ಹರಾಜು ನಡೆಯುತ್ತದೆ. ಒಮ್ಮೆ ಮೊತ್ತ ಗೆದ್ದ ವ್ಯಕ್ತಿ ಇನ್ನೊಮ್ಮೆ ಹರಾಜಿನಲ್ಲಿ ಭಾಗವಹಿಸುವಂತಿಲ್ಲ.

ಆದರೆ ಆತ ಮುಂದಿನ ಪ್ರತಿ ತಿಂಗಳೂ ತನ್ನ ಕಂತನ್ನು ಸಾಮಾನ್ಯವಾಗಿ ಕೊನೆಯವರೆಗೆ ಕಟ್ಟುತ್ತಾ ಹೋಗಬೇಕು. ಆತ ಯಾವುದೇ ಹೆಚ್ಚುವರಿ ಬಡ್ಡಿಯನ್ನು ನೀಡಬೇಕಾಗಿಲ್ಲ. ತಾನು ನೀಡಿದ ಡಿಸ್ಕೌಂಟೆ ಬಡ್ಡಿ ಮತ್ತು ಅದರಿಂದ ಬಂದ ಪಾಲೇ ಉಳಿದವರ ಲಾಭಾಂಶ. ಪ್ರಾಯೋಜಕನಿಗೆ ಮಾತ್ರ ಪ್ರತೀ ತಿಂಗಳೂ ಶೇ.5 ಸ್ಥಿರ ಕಮಿಶನ್‌. ಈ ರೀತಿ ಪ್ರತಿಯೊಬ್ಬರಿಗೂ 12 ತಿಂಗಳು ಕಟ್ಟುತ್ತಾರೆ ಮತ್ತು ಅದರೊಳಗೆ ಒಮ್ಮೆ ಹರಾಜು ಮೂಲಕ ದುಡ್ಡು ವಾಪಾಸು ಪಡೆಯುತ್ತಾರೆ. ಬಹುತೇಕ ಹರಾಜು ಚೀಟಿಗಳ ಮೂಲಕ ನಡೆಯುವ ಕಾರಣ ಇದೊಂದು “ಚಿಟ್‌ಫ‌ಂಡು’

ಮೋಸ ಹೇಗೆ?
ಈ ಚಿಟ್‌ಫ‌ಂಡ್‌ ಒಂದು ಚೀಟ್‌ ಫ‌ಂಡು ಆಗಲು ಜಾಸ್ತಿ ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ. ಕುರಿ ಕಟ್ಟುವವರು ಕುರಿಯಾಗಲು ಜಾಸ್ತಿ ಸಮಯವೂ ಬೇಕಿಲ್ಲ. ಕಟ್ಟಿದ ದುಡ್ಡನ್ನು ನುಂಗಿ ಓಡುವ ಪ್ರಾಯೋಜಕರೂ ಇದ್ದೇ ಇರುತ್ತಾರೆ. ಒಮ್ಮೆ ಚಿಟ್‌ ಗೆದ್ದವರು ದುಡ್ಡು ಕಿಸೆಗೇರಿಸಿ ಮುಂದಿನ ಕಂತು ಕಟ್ಟದೆ ಪರಾರಿಯಾದದ್ದಿದೆ. ಅದೂ ಸಾಲದ್ದಕ್ಕೆ ಶಾರದಾ ಚಿಟ್ನಲ್ಲಿ ನಡೆದಂತೆ ಚಿಟ್‌ಫ‌ಂಡ್‌ ಹೆಸರಿಟ್ಟುಕೊಂಡು ಅಸಲಿಗೆ ಪಾಂಜಿ ಸ್ಕೀಮಿನ ಮೋಸದಾಟ ಚಲಾಯಿಸುವವರೇ ಜಾಸ್ತಿ. ಹೆಚ್ಚಾಗಿ ಸಣ್ಣ ಪುಟ್ಟ ಗುಂಪುಗಳೇ ನಡೆಸುವ ಈ ಖಾಸಗಿ ವ್ಯವಹಾರಕ್ಕೆ ಯಾವುದೇ ಭದ್ರತೆ/ರಕ್ಷಣೆಗಳು ಇರುವುದಿಲ್ಲ. ಹಾಗಾಗಿ ಚಿಟ್‌ ಅಂದಕೂಡಲೇ ಎಲ್ಲರ ಮನದಲ್ಲೂ ಚೀಟ್‌ ಅಂಬ ಶಬ್ದವೆ ಮೊದಲಾಗಿ ಬಂದು ದುಡ್ಡು ಹಾಕಲು ಹೆದರುತ್ತಾರೆ.

ಕಾನೂನು
ಚಿಟ್‌ಫ‌ಂಡುಗಳ ನಿಯಂತ್ರಣ ಮತ್ತು ಕ್ಷೇಮಾಭಿವೃದ್ಧಿಗಾಗಿ ಕೇಂದ್ರ ಸರಕಾರ 1982ರಲ್ಲಿ ದ ಚಿಟ್‌ಫ‌ಂಡ್‌ ಆ್ಯಕ್ಟ್ ಮತ್ತು ಕರ್ನಾಟಕ ಸರಕಾರ 1983ರಲ್ಲಿ ಚಿಟ್‌ಫ‌ಂಡ್‌ ರೂಲ್ಸ… ಮಾಡಿ ಅದನ್ನು ನಡೆಸಲು ಒಂದು ಕಾನೂನಿನ ಚೌಕಟ್ಟನ್ನು ಸೃಷ್ಟಿಮಾಡಿತು. ಈ ಕಾನೂನಿನಡಿಯಲ್ಲಿ ನೋಂದಾಯಿಸಲ್ಪಟ್ಟು ಮತ್ತದರ ರೂಲ್ಸಾನುಸಾರ ಜಾಮೀನು/ಸೆಕ್ಯುರಿಟಿಯೊಂದಿಗೆ ನಡೆಸಲ್ಪಡುವ ಚಿಟ್‌ಫ‌ಂಡುಗಳು ಉತ್ತಮ ಸೇವೆ ಸಲ್ಲಿಸುತ್ತಿವೆ. ಅದರ ಲಕ್ಷಾಂತರ ಫ‌ಲಾನುಭವಿಗಳು ಇ¨ªಾರೆ. ಆದರೂ ಲಕ್ಷಾಂತರ ಜನರು ಚಿಟ್‌ಫ‌ಂಡ್‌ ಹೆಸರಿನಲ್ಲಿ ಕುರಿಯಾಗುತ್ತಲೇ ಇ¨ªಾರೆ. ಮೋಸದಾಟಗಳು ಅವ್ಯಾಹತ.

ಕಳೆದ ವಾರ ಲೋಕಸಭೆಯು ಚಿಟ್‌ಫ‌ಂಡ್‌ ಬಗ್ಗೆ ಚಿಟ್‌ ಫ‌ಂಡ್ಸ್‌ ಅಮೆಂಡೆ¾ಂಟ್‌ ಬಿಲ…- 2019 ಎಂಬ ಇನ್ನೊಂದು ಮಹತ್ತರದ ಮಸೂದೆಯನ್ನು ಅನುಮೋದಿಸಿದೆ. ಇನ್ನು ರಾಜ್ಯಸಭೆಯಲ್ಲಿ ಪಾಸ್‌ ಆಗಿ ರಾಷ್ಟ್ರಪತಿಯವರ ಅಂಕಿತ ಬೀಳುವುದು ಖಚಿತ. ಆ ಬಳಿಕ ಕಾನೂನಾಗಿ ಹೊರಬೀಳುವ ಆ ಮಸೂದೆ ಚಿಟ್‌ಫ‌ಂಡ್ಸ್‌ ಆ್ಯಕ್ಟ್- 1982 ಅನ್ನು ಪರಿಷ್ಕರಿಸುತ್ತಾ ಈ ಕೆಳಗಿನ ಸುಧಾರಣ ಕ್ರಮಗಳನ್ನು ಒಳಗೊಂಡಿದೆ:

1. ಒಂಬತ್ತು ನಿಯಂತ್ರಕಗಳ ಪೈಕಿ (ಆರ್‌.ಬಿ.ಐ, ಸೆಬಿ, ಕಂಪೆನಿ ವ್ಯವಹಾರದ ಸಚಿವಾಲಯ, ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ ಇತ್ಯಾದಿ) ಯಾವುದೇ ಒಂದಾದರೂ ನಿಯಂತ್ರಕ ಸಂಸ್ಥೆಯ ಅಡಿಯಲ್ಲಿ ನೋಂದಾಯಿಸಿದರೆ ಮಾತ್ರ ಅದು ಕಾನೂನಾತ್ಮಕವಾಗಿ ಚಿಟ್‌ಫ‌ಂಡ್‌ ಆಗಿರುತ್ತದೆ. ಇಲ್ಲದಿದ್ದರೆ ಅದು ಕಾನೂನು ಬಾಹಿರ, ಶಿûಾರ್ಹ ಅಪರಾಧ.

2. ಲಾಟರಿ ಮೂಲಕ ಅದೃಷ್ಟ ಪರೀಕ್ಷೆ ಮಾಡುವ ಪ್ರೈಜ್‌ ಚಿಟ್ಸ್‌ ವ್ಯವಹಾರವನ್ನು ನಿರ್ಬಂಧಿಸಲು ಕಾನೂನು ಈಗಾಗಲೇ ಜಾರಿಯಲ್ಲಿದೆ. ಹಾಗಾಗಿ ಕಾನೂನಾತ್ಮಕ ಚಿಟ್ಸ್‌ ಮತ್ತು ಕಾನೂನು ಬಾಹಿರ ಚಿಟ್ಸ್‌ಗಳನ್ನು ಪ್ರತ್ಯೇಕಿಸುವುದು ಅತ್ಯಗತ್ಯ. ಹಾಗಾಗಿ ಇನ್ನು ಮುಂದೆ ಕಾನೂನಾತ್ಮಕ ಚಿಟ್ಸ್‌ಗಳ ವ್ಯವಹಾರವನು Rotating Savings and Credit Association ಅಥವಾ ರೋಸ್ಕಾ ಸಂಸ್ಥೆ ಎಂದು ಗುರುತಿಸಲಾಗುವುದು. (ನೈಜ ಚಿಟ್‌ಫ‌ಂಡುಗಳಿಗೆ Fraternity Funds ಎಂಬ ಹೆಸರು ಹಳೆಯ ಕಾನೂನಿನಲ್ಲಿ ಇತ್ತು)

3. ಚಿಟ್‌ ಸಂಸ್ಥೆ ಬಳಸುವ ಚಿಟ್‌ ಮೊತ್ತ, ಡಿವಿಡೆಂಡ್‌ ಹಾಗೂ ಪ್ರೈಜ್‌ ಮೊತ್ತ ಎಂಬ ಪದಗಳನ್ನು ಗ್ರಾಸ್‌ ಮೊತ್ತ, ಶೇರ್‌ ಡಿಸ್ಕೌಂಟ್‌ ಹಾಗೂ ನೆಟ್‌ ಮೊತ್ತ ಎಂದು ಬದಲಿಸಲಾಗಿದೆ. ಜನರು ಗೊಂದಲ ಪಡದೆ ಪದಗಳನ್ನು ಸರಿಯಾಗಿ ಅಥೆìçಸಬೇಕು ಎನ್ನುವುದು ಇದರ ಉದ್ದೇಶ.

4. ಚಿಟ್‌ ಡ್ರಾ ಮಾಡುವಾಗ ಕನಿಷ್ಟ 2 ಸದಸ್ಯರು ಖುದ್ದಾಗಿ ಯಾ ವೀಡಿಯೋ ಕಾನ್ಫರೆನ್ಸ್‌ ಮೂಲಕವಾದರೂ ಸರಿ – ಹಾಜರಿರಬೇಕು.

5. ಒಂದು ಚಿಟ್‌ಫ‌ಂಡಿನಲ್ಲಿ ಒಬ್ಟಾತ ಸದಸ್ಯನ ದೇಣಿಗೆಯ ಮಿತಿ ಯನ್ನು ರೂ. 1 ಲಕ್ಷದಿಂದ ರೂ. 3 ಲಕ್ಷಕ್ಕೆ ಏರಿಸಲಾಗಿದೆ. ಕಂಪೆನಿಗಳಿಗೆ ಆ ಮಿತಿಯನ್ನು ರೂ. 6 ಲಕ್ಷದಿಂದ 18 ಲಕ್ಷಕ್ಕೆ ಏರಿಸಲಾಗಿದೆ.

6. ಫೋರ್ಮನ್‌ ಕಮಿಶನ್‌ ಅನ್ನು ಶೇ.5ರಿಂದ ಶೇ.7ಕ್ಕೆ ಏರಿಸಲಾಗಿದೆ ಹಾಗೂ ಆತನಿಗೆ ಬಾಕಿ ವಸೂಲಿಸ ಸಲುವಾಗು Right to lien ಕೂಡಾ ನೀಡಲಾಗಿದೆ.

ಇವಿಷ್ಟು ಕಾನೂನಾಗಿ ಬರಲಿರುವ ಹೊಸ ಬದಲಾವಣೆಗಳು. ಚಿಟ್‌ ಉದ್ಯಮವನ್ನು ಭದ್ರಪಡಿಸುವ ಸಲುವಾಗಿ. ಅದೇನೇ ಆದರೂ ನಿಮ್ಮ ಜಾಗ್ರತೆಯಲ್ಲಿ ನೀವಿರಿ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.