ಕುಲಪತಿ ಆಯ್ಕೆಯಲ್ಲಿ ಸುಧಾರಣೆ ಅಗತ್ಯ


Team Udayavani, Feb 5, 2018, 8:45 AM IST

vc.jpg

ನಾನೂ ಎರಡು ಅವಧಿಗೆ ಕುಲಪತಿಯಾಗಿದ್ದು, ಆ ದಿನಗಳಲ್ಲಿ ಕುಲಪತಿ ಸ್ಥಾನ ಒಂದು ದಿನವೂ ಸಹ ಖಾಲಿಯಾಗಿರದಂತೆ ಸಮಯಕ್ಕೆ ಸರಿಯಾಗಿ ಭರ್ತಿ ಮಾಡಲ್ಪಡುತ್ತಿತ್ತು. ಹಾಲಿ ಇರುವ ಕುಲಪತಿಯವರ ಅವಧಿ ಮುಗಿಯುವುದರೊಳಗೆ “ಭಾವಿ ಕುಲಪತಿ’ (Vice Chancellor designate)ಜವಾಬ್ದಾರಿ ವಹಿಸಿಕೊಳ್ಳಲು ಆಯ್ಕೆಯಾಗಿ ಕಾಯುತ್ತಿದ್ದ ದಿನಗಳು ಕಣ್ಣಿಗೆ ಕಟ್ಟಿದಂತಿವೆ.

ಕರ್ನಾಟಕ ಎಂಬ ಹೆಸರು ಕೇಳಿದಾಗ ಇದು ಶಿಕ್ಷಣಕ್ಕೆ ಹೆಸರಾದ ರಾಜ್ಯ ಎಂಬ ಹೆಗ್ಗಳಿಕೆ ಭಾರತದಲ್ಲಿ ಮಾತ್ರವಲ್ಲ ಇತರೇ ದೇಶಗಳಲ್ಲೂ ಕೇಳಿಬರುತ್ತಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ. ಆದರೆ ಇತ್ತೀಚೆಗೆ, ಅಂದರೆ ಕಳೆದ ಒಂದೆರಡು ದಶಕಗಳಲ್ಲಾಗಿರುವ ಬದಲಾವಣೆ ಹಾಗೂ ದಿನೇ ದಿನೇ ಬದಲಾವಣೆಯಾಗುತ್ತಿರುವ ದಿಕ್ಕನ್ನು ಗಮನಿಸಿದರೆ ಈ ವರೆಗೆ ಕರ್ನಾಟಕದ ಶಿಕ್ಷಣ ವ್ಯವಸ್ಥೆಗಿರುವ ಹೆಸರು ಮಾಸಲು ಹೆಚ್ಚು ದಿನ ಬೇಕಿಲ್ಲ. ಆದ್ದರಿಂದ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ವಿಳಂಬವಿಲ್ಲದೆ ರಾಜ್ಯದ ವಿಶ್ವವಿದ್ಯಾಲಯಗಳ ಗುಣಮಟ್ಟ ಸುಧಾರಿಸಲು ಕಾರ್ಯೋನ್ಮುಖರಾಗಲೇಬೇಕಿದೆ.

ಪ್ರಾಚೀನ ಭಾರತದ ನಳಂದ, ತಕ್ಷಶಿಲಾ ಇತ್ಯಾದಿ ವಿಶ್ವವಿದ್ಯಾಲಯ/ಗುರುಕುಲಗಳು ಉನ್ನತ ಮಟ್ಟದ ಶಿಕ್ಷಣ ನೀಡಿ ವಿಶ್ವದ ಇತಿಹಾಸದಲ್ಲಿ ದಾಖಲಾಗಿರುವುದು ಭಾರತೀಯರಿಗೆಲ್ಲಾ ಹೆಮ್ಮೆಯ ವಿಷಯ. ಈಗಿನ ಪರಿಸ್ಥಿತಿ ಗುಣಮಟ್ಟದ ವಿಷಯದಲ್ಲಿ ಅದಕ್ಕೆ ಹೊಂದಾಣಿಕೆಯಾಗಿಲ್ಲದೆ ತದ್ವಿರುದ್ಧವಾಗಿರುವುದು ಖೇದದ ಸಂಗತಿ. ಇತ್ತೀಚೆಗೆ ಅನೇಕ ಸಂಘ-ಸಂಸ್ಥೆಗಳು ವಿಶ್ವದಾದ್ಯಂತ ಆಗಾಗ ವಿಶ್ವವಿದ್ಯಾಲಯಗಳ ಸಮೀಕ್ಷೆ ನಡೆಸಿ ಕೆಲವು ನಿಗದಿತ ಅಳತೆಗೋಲಿನ ಆಧಾರದ ಮೇಲೆ ಅವುಗಳನ್ನು ವರ್ಗೀಕರಿಸಿ “ರ್‍ಯಾಂಕ್‌’ ಪ್ರಕಟಿಸುತ್ತಿರುವುದು ಮತ್ತು ಯಾವ ವಿಶ್ವವಿದ್ಯಾಲಯ ಯಾವ ಸ್ಥಾನದಲ್ಲಿದೆ ಎಂಬುದು ವಿವಿಧ ಮೂಲಗಳಿಂದ ಹಾಗೂ ಮಾಧ್ಯಮಗಳ ಮೂಲಕ ಸರ್ವರಿಗೂ ಲಭ್ಯವಾಗುತ್ತಿದೆ. ಭಾರತದ ವಿಶ್ವವಿದ್ಯಾಲಯಗಳ ಪೈಕಿ ಯಾವುದೇ ಒಂದು ವಿಶ್ವವಿದ್ಯಾಲಯವೂ ಸಹ ವಿಶ್ವದ ಮೊದಲ ನೂರರ ಸ್ಥಾನದಲ್ಲಿಲ್ಲದಿರುವುದು ಹಾಗೂ ಕರ್ನಾಟಕದಲ್ಲಿ 28 ಸರಕಾರಿ ವಿಶ್ವವಿದ್ಯಾಲಯಗಳು 8 ಖಾಸಗಿ ವಿಶ್ವವಿದ್ಯಾಲಯಗಳು ಮತ್ತು 15 “ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ’ಗಳಿದ್ದು, ಇವೆಲ್ಲವೂ ಗುಣ ಮಟ್ಟದಲ್ಲಿ ಬಹಳ ಕೆಳಗಿರುವುದು ಸಂಬಂಧಪಟ್ಟವರೆಲ್ಲರೂ ಗಂಭೀರವಾಗಿ ಪರಿಗಣಿಸಿ ಆಳವಾಗಿ ಅವಲೋಕಿಸಬೇಕಾಗಿದೆಯಲ್ಲದೆ, ಬೇಕಾದ ಕ್ರಮ ಕೈಗೊಂಡು ಅವುಗಳ ಗುಣಮಟ್ಟವನ್ನು ಸುಧಾರಿಸಲು ಈಗ ಸೂಕ್ತ ಸಮಯ. 

ಕುಲಪತಿ ಹುದ್ದೆ ಭರ್ತಿ
ಇತ್ತೀಚಿನ ದಿನಗಳಲ್ಲಿ ಖಾಲಿಯಾಗುವ ಕುಲಪತಿ ಸ್ಥಾನವನ್ನು ಸಕಾಲದಲ್ಲಿ ಭರ್ತಿ ಮಾಡದೆ ತಿಂಗಳಾನುಗಟ್ಟಲೆ “ಇನ್‌-ಚಾರ್ಜ್‌’ ವ್ಯವಸ್ಥೆಯಲ್ಲೇ ಮುಂದುವರಿಸುತ್ತಿರುವುದು ಒಂದು ಪರಿಪಾಠವೇ ಆಗಿದೆ. ನಾನೂ ಎರಡು ಅವಧಿಗೆ ಕುಲಪತಿಯಾಗಿದ್ದು, ಆ ದಿನಗಳಲ್ಲಿ ಕುಲಪತಿ ಸ್ಥಾನ ಒಂದು ದಿನವೂ ಸಹ ಖಾಲಿಯಾಗಿರದಂತೆ ಸಮಯಕ್ಕೆ ಸರಿಯಾಗಿ ಭರ್ತಿ ಮಾಡಲ್ಪಡುತ್ತಿತ್ತು. ಹಾಲಿ ಇರುವ ಕುಲಪತಿಯವರ ಅವಧಿ ಮುಗಿಯುವುದರೊಳಗೆ “ಭಾವಿ ಕುಲಪತಿ’ (Vice Chancellor designate)ಜವಾಬ್ದಾರಿ ವಹಿಸಿಕೊಳ್ಳಲು ಆಯ್ಕೆಯಾಗಿ ಕಾಯುತ್ತಿದ್ದ ದಿನಗಳು ಕಣ್ಣಿಗೆ ಕಟ್ಟಿದಂತಿವೆ. “ಆಯ್ಕೆ ವಿಳಂಬ ತಪ್ಪಿಸಲಾಗದು’ ಎನ್ನುವಂತಹ ಕಾರಣಗಳು ಕಾಣಿಸಿಲ್ಲ.

ಆಯ್ಕೆ ಸಮಿತಿಯ ಸಭೆ ನಡೆಸಲು ಕೋರಂ ಇಲ್ಲ ಎಂಬುದು ಆಗಾಗ ಕೇಳಿಬರುವ ಒಂದು ಕಾರಣ. ಓರ್ವ ಸದಸ್ಯ ಬಾರದಿದ್ದರೂ ಸಭೆ ನಡೆದು ಆಯ್ಕೆ ನಡೆದಿರುವ ಅನೇಕ ನಿದರ್ಶನಗಳನ್ನು ನಾನು ಈಗಲೂ ಹೆಸರಿಸಬಲ್ಲೆ. ವಿವಿಧ ಸಂಸ್ಥೆಗಳಿಂದ ಸೂಚಿಸಲಾಗುವ ಸದಸ್ಯರು ಸಮಯಕ್ಕೆ ಸರಿಯಾಗಿ ಲಭ್ಯವಿಲ್ಲದಿದ್ದರೆ, ಆಯಾ ಸಂಸ್ಥೆಗಳನ್ನು ಮರು ಸಂಪರ್ಕಿಸಿ ಬದಲಿ ಸದಸ್ಯರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಒಂದೇ ದಿವಸದಲ್ಲಿ ಮುಗಿಸಬಹು ದಾದಂತಹ ಮಾಹಿತಿ ತಂತ್ರಜ್ಞಾನ ಈ ಯುಗದಲ್ಲಿ ಲಭ್ಯವಿದೆ. ಇದನ್ನು ಬಳಸಿಕೊಳ್ಳದಿದ್ದರೆ ಅದು ನಮ್ಮ ಅಸಾಮರ್ಥ್ಯ ಅಷ್ಟೆ. ಯಾವುದೇ ವಿಶ್ವವಿದ್ಯಾಲಯದ ಕುಲಪತಿ ಸ್ಥಾನವು ಖಾಲಿಯಾ ಗುವುದಕ್ಕಿಂತ ಮೊದಲೇ ಮುಂದಿನ ಕುಲಪತಿ ಆಯ್ಕೆ ಪ್ರಕ್ರಿಯೆ ಯನ್ನು ಮುಗಿಸುವುದು ಕಷ್ಟವಾದ ಕೆಲಸವೇನೂ ಅಲ್ಲ.

ರಾಜ್ಯದಲ್ಲಿರುವ 26 ಸರಕಾರಿ ವಿಶ್ವವಿದ್ಯಾಲಯಗಳ ಪೈಕಿ (ಹೊಸ ಎರಡು ವಿಶ್ವವಿದ್ಯಾಲಯಗಳನ್ನು ಹೊರತು ಪಡಿಸಿ) 10 ವಿಶ್ವವಿದ್ಯಾಲಯಗಳಲ್ಲಿ ಬಹಳ ದಿನಗಳಿಂದ (ಕೆಲವು 2 ವರ್ಷಗಳಿಗಿಂತಲೂ ಹೆಚ್ಚು) ಕುಲಪತಿಗಳಿಲ್ಲದೆ ಪ್ರಗತಿ ಕುಂಠಿತಗೊಂಡಿರುವುದು ಸರ್ವ ವೇದ್ಯ. ಇನ್ನೆರಡು ತಿಂಗಳಲ್ಲಿ ಇನ್ನೂ ಎರಡು ಮೂರು ಕುಲಪತಿಗಳ ಸ್ಥಾನಗಳು ಖಾಲಿಯಾಗುತ್ತಿವೆ. ಬೊಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳು ಅನೇಕ ವಿಭಾಗಗಳಲ್ಲಿ ಸ್ಥಗಿತಗೊಂಡಿರುವುದು “ವಿಶ್ವವಿದ್ಯಾಲಯ ಪುನರ್‌ ಪರಿಶೀಲನಾ ಸಮಿತಿ’ಯಲ್ಲಿ ಸದಸ್ಯನಾಗಿ ಕೆಲಸ ಮಾಡಿರುವ ನನಗೆ ಖೇದವನ್ನುಂಟು ಮಾಡಿದೆ.

ಶೋಧನಾ ಸಮಿತಿಗಳ ರಚನೆ
ಭಾರತದಲ್ಲಿ ಹತ್ತೂಂಬತ್ತನೇ ಶತಮಾನದಿಂದ ಆರಂಭವಾದ ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆಯ ಕೊಡುಗೆ ಅಪಾರ ಮತ್ತು ಅದರ ಫ‌ಲ ಸಮಾಜದಲ್ಲಿ ವಿವಿಧ ರೀತಿಯಲ್ಲಿ ಪ್ರತಿಬಿಂಬಿತವಾಗಿದೆ. ಕುಲಪತಿ ಸ್ಥಾನದಲ್ಲಿದ್ದವರು ಇಂದಿಗೂ ಸ್ಮರಿಸಬಹುದಾದಂತ ಸಾಧನೆಗಳ ಮೈಲುಗಲ್ಲನ್ನು ಬಿಟ್ಟುಹೋಗಿದ್ದಾರೆ. “ಕುಲಪತಿ ಶೋಧನಾ ಸಮಿತಿ’ಯಲ್ಲಿ ಹಿರಿಯ ಸ್ಥಾನಗಳಲ್ಲಿದ್ದ ಶ್ರೇಷ್ಠರು, ಹೆಸರು ಮಾಡಿದ ಶಿಕ್ಷಣ ತಜ್ಞರು, ಸಂಶೋಧನೆಯಲ್ಲಿ ಪ್ರಗತಿ ಸಾಧಿಸಿದ ವಿಜ್ಞಾನಿಗಳು, ವಿವಿಧ ಕ್ಷೇತ್ರಗಳಲ್ಲಿನ ಸಾಧಕರು, ಹೀಗೆ ಹಿರಿಮೆ ಪಡೆದಂತಹ ವ್ಯಕ್ತಿಗಳು ಮಾತ್ರ ಕೂರುತ್ತಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು. ನುರಿತ, ದೂರದೃಷ್ಟಿ ಮತ್ತು ಸ್ಪಷ್ಟತೆ ಇರುವ, ದೃಢವಾದ ಹಾಗೂ ಶಾಂತ ಮನಸ್ಸುಳ್ಳ, ವಿಶ್ವಾಸಾರ್ಹ ಸದಸ್ಯರನ್ನೊಳಗೊಂಡ ಶೋಧನಾ ಸಮಿತಿಗಳ ಕೊಡುಗೆ ಪ್ರಶಂಸನೀಯ. ಈಗಲೂ ಇದನ್ನು ಪಾಲಿಸಬಾರದೇಕೆ ಎನ್ನುವ ಪ್ರಶ್ನೆ ಉದ್ಭವಿಸದಿರದು. ರಾಷ್ಟ್ರದ ಬಹುತೇಕ ವಿಶ್ವ ವಿದ್ಯಾಲಯಗಳಲ್ಲಿ ಕುಲಪತಿ ಆಯ್ಕೆಯಲ್ಲಿ ಈ ಅಂಶಗಳನ್ನು ಗಮನದಲ್ಲಿಡದಿರುವುದು ವಿಪರ್ಯಾಸ. ಈಗಿನ ಕುಲಪತಿ ಶೋಧನಾ ಸಮಿತಿಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕೆಲವೇ ಸಮಯದ ಹಿಂದೆ ಕುಲಪತಿಗಳಾದವರು, ಇನ್ನೂ ನಿರ್ದೇಶಕರಾಗಿರುವವರು, ಇನ್ನೂ ಹಲವಾರು ವರ್ಷ ಸೇವೆಯಲ್ಲಿ ಮುಂದುವರಿ ಯುವವರಾಗಿದ್ದು ಸರಕಾರದ ನಾಯಕರುಗಳಿಂದ, ಅಧಿಕಾರಗಳಿಂದ ಮುಂದೆ “ಫೇವರ್‌’ ನಿರೀಕ್ಷೆ ಮಾಡುವವರರೂ ಆಗಿರುತ್ತಾರೆ. ಅವರು ಮನಸ್ಸಿಲ್ಲದೇ ಇದ್ದರೂ “ಮೇಲಿನವರ’ ಮಾತಿಗೆ ಮನ್ನಣೆ ನೀಡಬೇಕಾಗುತ್ತದೆ.

ಆದ್ದರಿಂದ ಯೋಗ್ಯತೆ ಇಲ್ಲದವರನ್ನೂ “ಪ್ಯಾನಲ್‌’ನಲ್ಲಿ ಸೇರಿಸಬೇಕಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಪಾರಾಗಲು ಶೋಧನಾ ಸಮಿತಿಗಳನ್ನು “ಶೋಧನಾ ಮತ್ತು ಆಯ್ಕೆ ಸಮಿತಿ’ಯಾಗಿ ಪರಿವರ್ತಿಸುವುದು ಸರಿಯಾಗದ ಮಾರ್ಗ. ಇದು ಹೊಸದೇನೂ ಅಲ್ಲ. ಈಗಾಗಲೇ ಬಹಳ ಕಡೆ (ರಾಜಾಸ್ಥಾನ, ಮಹಾರಾಷ್ಟ್ರ ಸಹಿತ ಕೆಲವು ರಾಜ್ಯಗಳಲ್ಲಿ) ಇದು ಚಾಲ್ತಿಯಲ್ಲಿದೆ.

ಕುಲಪತಿಯ ಸ್ಥಾನವೇನು?
ಕುಲಪತಿ ಎಂಬ ಸ್ಥಾನಕ್ಕೆ ಅಪಾರ ಗೌರವವಿದ್ದ ದಿನಗಳನ್ನು ಸುಮಾರು ಇಪ್ಪತ್ತನೇ ಶತಮಾನದ ಕೊನೆಯ ದಿನಗಳವರೆಗೂ ನಾನು ನೋಡಿದ್ದೇನೆ. ಇತ್ತೀಚಿನ ವ್ಯವಸ್ಥೆ ಅದನ್ನು ಕಳಚಿ ಹಾಕಿರು ವುದು ಮತ್ತು ಈಗ ಆಯ್ಕೆಯಾಗಿರುವ ಕೆಲವು ಕುಲಪತಿಗಳು ಅದನ್ನು ಅರಿಯದವರಾಗಿದ್ದು ದುರಂತ. ಯಾವ ರೀತಿ ಮೊದಲಿದ್ದ ಗೌರವವನ್ನು ಉಳಿಸಿಕೊಳ್ಳಬೇಕು ಎಂಬ ಪರಿಜ್ಞಾನವನ್ನು ಹೊಂದಿಲ್ಲದ ಕಾರಣ ಆ ಸ್ಥಾನ ಗೌರವಾರ್ಹವಾಗಿಲ್ಲವೇನೋ ಎಂಬ ಅಭಿಪ್ರಾಯವೂ ಸಾರ್ವಜನಿಕರಲ್ಲಿ ಮೂಡಿ ಬರುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಆಡಳಿತ ವ್ಯವಸ್ಥೆ ಚುರುಕು ಮಾಡಲು ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ಕುಲಪತಿಗಳಿಗೆ ಮೊದಲಿದ್ದ ಸ್ಥಾನ ದೊರಕಬೇಕು. ಇದು ಖಂಡಿತವಾಗಿಯೂ ಪರಿಣಾಮ ಬೀರುವ ಮಹತ್ವದ ಅಂಶ ಎಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ. ಇದನ್ನು ಗಮನಿಸಿ ಸೂಕ್ತ ಬದಲಾವಣೆ ತಂದು ಮೊದಲಿದ್ದ ಸ್ಥಾನ ಸಿಗುವಂತಾಗಬೇಕು. ಅದರಿಂದ ಸಮಾಜಕ್ಕೆ ಸಿಗುವ ಲಾಭವನ್ನು ಅಳೆಯಲಾಗದು.

ಅರ್ಜಿ ಆಹ್ವಾನಿಸುವುದು ಸರಿಯಲ್ಲ
ಇತ್ತೀಚೆಗೆ ಕುಲಪತಿ ಸ್ಥಾನ ಭರ್ತಿ ಮಾಡಲು ಅರ್ಜಿ ಕರೆಯುವ ಪರಿಪಾಠ ಶುರುವಾಗಿದೆ. ಕರ್ನಾಟಕವಲ್ಲದೆ ಉಳಿದ ರಾಜ್ಯಗಳಲ್ಲಿಯೂ ಈ ರೀತಿಯ ವ್ಯವಸ್ಥೆ ಜಾರಿಗೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಪದ್ಧತಿ ಕುಲಪತಿ ಸ್ಥಾನಕ್ಕೆ ತಕ್ಕುದಲ್ಲ. ಆದರೂ ಸರಕಾರ ಈ ಪದ್ಧತಿಯನ್ನು ಜಾರಿಗೆ ತಂದಿರುವುದರಲ್ಲಿ ಬಲವಾದ ಕಾರಣವಿದ್ದರೂ ಇರಬಹುದು. ಆದ್ದರಿಂದ ಅರ್ಜಿ ಆಹ್ವಾನಿಸಿದ್ದಾಗ್ಯೂ “ಶೋಧನಾ ಸಮಿತಿ’ಗೆ ಅದರ ಸದಸ್ಯರುಗಳಿಂದಲೇ ಅಥವಾ ಇತರ ಉನ್ನತ ಸ್ಥಾನ ಮತ್ತು ಅನುಭವಿಗಳಿಂದ “ನಾಮಿ ನೇಶನ್‌’ಗೆ (ನಾಮನಿರ್ದೇಶನಕ್ಕೆ) ಅವಕಾಶ ಇರಲೇಬೇಕು. “ನಾಮಿನೇಶನ್‌’ನಲ್ಲಿ ಯಾವ ಮಾನದಂಡಗಳನ್ನು ಪರಿಗಣಿಸುತ್ತೇ ವೆಯೋ ಅದರ ಬಗ್ಗೆ ವಿವರವಿರಬೇಕು; ಇದು ಒಂದು ಮಹತ್ವದ ವಿಷಯ.

ಏಕೆಂದರೆ ಅರ್ಜಿ ಹಾಕಿ ಎಲ್ಲ ತರಹದ ಮನಸ್ಸಿಗೆ ಒಗ್ಗದ ಪ್ರಯತ್ನಗಳನ್ನು ಉಪಯೋಗಿಸಿ ಕುಲಪತಿಯಾಗಲಿಚ್ಛಿಸದ ಆದರೆ ಬಹು ಯೋಗ್ಯರಾದವರು ಇರುವುದನ್ನು ಇಲ್ಲಿ ಗಮನಿಸಬಹುದು. “ನನಗೆ ಶಿಫಾರಸ್ಸು ಮಾಡುವವರಿಲ್ಲ ಅರ್ಜಿ ಹಾಕಿ ಪ್ರಯೋಜನವಿಲ್ಲ’ ಎಂದು ಭಾವಿಸಿ ಹೆಚ್ಚು ಅರ್ಹತೆಯುಳ್ಳವರನೇಕರು ಹೀಗೆ ಅಳಲನ್ನು ತೋಡಿಕೊಂಡಿರುವ ಅನೇಕ ಉದಾಹರಣೆಗಳಿವೆ. ಇಂತಹ ಹುದ್ದೆಗೆ “ನಾಮಿನೇಷನ್‌’ಗೆ ಅವಕಾಶ ವಿಲ್ಲದಿದ್ದರೆ ಅದೊಂದು ದೊಡ್ಡ ಅಪರಾಧವೇ ಸರಿ. ಮೊದಲ ಹಂತದಲ್ಲಿ ಅರ್ಜಿಗಳನ್ನು ಪರಿಶೀಲಿಸಿ ವರದಿಯನ್ನು ತರಿಸಿಕೊಂಡು, ಯಾವ ಹಾದಿಯಲ್ಲಿ ವಿಶ್ವವಿದ್ಯಾಲಯವನ್ನು 
ಬೆಳೆಸುವರು ಎಂಬುದನ್ನು ಸಮಿತಿಯ ಮುಂದೆ ವಿವರಿಸಲು ಅವಕಾಶ ಕೊಟ್ಟು, ನಂತರ ಯಾವುದೇ ಇತರ ಮಾನದಂಡವನ್ನು ಬಳಸದೆ (ಜಾತಿ, ಮತ, ಭಾಷೆ, ಲಿಂಗ ಇತ್ಯಾದಿ)ಗೌಪ್ಯತೆ ಕಾಪಾಡಿಕೊಂಡು ಆಯ್ಕೆ ಪ್ರಕ್ರಿಯೆಯನ್ನು, ಹಿಂದೆ ಇದ್ದಂತೆ ಒಂದೇ ದಿನದಲ್ಲಿ ಮುಗಿಸಬೇಕು. ಈಗಲೂ ಮಹಾರಾಷ್ಟ್ರದಲ್ಲಿ ಈ ಪ್ರಕ್ರಿಯೆ ಚಾಲನೆಯಲ್ಲಿದೆ.

ಕುಲಪತಿಗಳ ಆಯ್ಕೆಯ ವ್ಯಾಪ್ತಿ
ಕುಲಪತಿ ಹುದ್ದೆಗೆ ಆಯ್ಕೆ ಮಾಡುವಾಗ ಯಾವುದೇ ದುರ್ಬೀನು ಬಳಸಿ ಹುಡುಕಬೇಕಿಲ್ಲ. ಅದೇ ರಾಜ್ಯದವರೇ ಆಗಿರ ಬೇಕು ಅಥವಾ ಅದೇ ಪ್ರದೇಶದವರಾಗಬೇಕು, ಅದೇ ಜಿಲ್ಲೆಯವ ರಾಗಬೇಕು ಮತ್ತು ಇಂತಹ ವರ್ಗದವರೇ ಆಗಬೇಕೆಂಬ ನಿರ್ಬಂಧವಿರಬಾರದು. ಮಹಾರಾಷ್ಟ್ರದಲ್ಲಿ ಇಂತಹ ನಿರ್ಬಂಧ ವಿಲ್ಲದೇ ಕುಲಪತಿಗಳ ಆಯ್ಕೆಯಾದ ಸಂದರ್ಭದಲ್ಲಿ ವಿಶ್ವವಿದ್ಯಾಲ ಯಗಳು ಸಾಧನೆಗೆ ಹೆಸರಾಗಿವೆ. ನಮ್ಮ ರಾಜ್ಯದಿಂದಲೇ ಮೂವರು ಕುಲಪತಿಗಳು ಮಹಾರಾಷ್ಟ್ರದಲ್ಲಿ ಕುಲಪತಿಗಳಾಗಿ ಸೇವೆ ಸಲ್ಲಿಸಿ ಹೆಸರು ಮಾಡಿಬಂದಿರುವುದನ್ನು ಇಲ್ಲಿ ಸ್ಮರಿಸಬಹುದು. ಈಗಲೂ ಒಬ್ಬರು ಚೆನ್ನಾಗಿ ಹೆಸರು ಮಾಡುತ್ತಿದ್ದಾರೆ.

ಶೋಧನಾ ಸಮಿತಿ ರಚನೆ
ವಿಶ್ವವಿದ್ಯಾಲಯಗಳಿಗೆ ಕುಲಪತಿ ಆಯ್ಕೆಮಾಡುವ ಶೋಧನಾ ಸಮಿತಿಯಲ್ಲಿ ಹಾಲಿ ನೆಲೆ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ
ಗಳಾಗಿ “ಡೀನ್‌’ ಆಗಿ ಅಥವಾ ಇನ್ನಾವುದೇ ಸೇವೆ ಸಲ್ಲಿಸುತ್ತಿರು ವವರನ್ನು ಸದಸ್ಯರನ್ನಾಗಿ ನೇಮಿಸಬಾರದು. ಏಕೆಂದರೆ ಅವರು ಇನ್ನೂ ಸೇವೆಯಲ್ಲಿರುವುದರಿಂದ ಆಯಾ ಇಲಾಖೆಗಳ ಮಂತ್ರಿಗಳ ಹಾಗೂ ಪ್ರಿನ್ಸಿಪಾಲ್‌ ಕಾರ್ಯದರ್ಶಿಗಳ ಒತ್ತಡದ ಮೇಲೆ ಅಥವಾ ಅವರ ಇಚ್ಛೆಯಂತೆ ಕುಲಪತಿಗಳ “ಪ್ಯಾನಲ್‌’ನಲ್ಲಿ ಅನರ್ಹರ ಹೆಸರುಗಳನ್ನು ಸೇರಿಸಬೇಕಾಗುವ ಸಂದರ್ಭಗಳು ಉದ್ಭವವಾಗುವ ಸಾಧ್ಯತೆ ಇರುತ್ತದೆ. ಈಗ ಕಂಡುಬರುತ್ತಿರುವಂತೆ ಇತ್ತೀಚೆಗಷ್ಟೇ ಆಯ್ಕೆಯಾದ ಕುಲಪತಿಗಳ ಹೆಸರುಗಳೇ ಶೋಧನಾ ಸಮಿತಿಗಳಲ್ಲಿ ಕಂಡುಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದು ಬದಲಾವಣೆಯಾಗಬೇಕು. ರಾಜ್ಯದಲ್ಲಿ ಸುಮಾರು 80ಕ್ಕೂ ಮೀರಿ ವಿಶ್ರಾಂತ ಕುಲಪತಿಗಳಿದ್ದಾರೆ. ಅವರಲ್ಲಿ ಅನೇಕರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಸೇವೆಯನ್ನು ಪಡೆಯುವುದರಿಂದ ಯೋಗ್ಯತೆಯ ಆಧಾರದ ಮೇಲೆ “ಪ್ಯಾನಲ್‌’ ಮಾಡುವ ಪ್ರಕ್ರಿಯೆ ಸುಲಭವಾದೀತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಅರ್ಜಿ ಇಲ್ಲದೆ, “ನಾಮಿನೇಷನ್‌’ಗಳ ಮೂಲಕ “ಶೋಧನಾ ಹಾಗೂ ಆಯ್ಕೆ’ ಶಿಕ್ಷಣ ಶ್ರೇಷ್ಠತೆ, ಮುಂತಾದ ಮೇಲ್ಕಂಡ ಮಾನದಂಡಗಳ ಆಧಾರದ ಮೇಲೆ ಸಮಿತಿಯ ವರದಿ ಬಂದ ಕೂಡಲೇ ಕುಲಪತಿ ಆಯ್ಕೆ ಗೌಪ್ಯತೆ ಕಾಪಾಡಿಕೊಂಡು, ಔಪಚಾರಿಕವಾಗಿ ಸರಕಾರ ಮತ್ತು ಕುಲಾಧಿ ಪತಿಗಳ ಒಪ್ಪಿಗೆ ಪಡೆದು, ಕುಲಪತಿಗಳ ಆಯ್ಕೆ ಪ್ರಕ್ರಿಯೆಯ ಸಮ ¿ ುವನ್ನು ಕನಿಷ್ಠ ಮಟ್ಟಕ್ಕಿಳಿಸಿ (ಇಷ್ಟಕ್ಕೂ ಈ ಪ್ರಕ್ರಿಯೆ ಇಸವಿ 2000ರ ವರೆಗೂ ನಡೆಯುತ್ತಿತ್ತು).

ರಾಜ್ಯ/ರಾಷ್ಟ್ರದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಒತ್ತುಕೊಡಬೇಕಾದ ಸಮಯವಿದು. “ಯಾವುದೇ ಒಂದು ರಾಷ್ಟ್ರವನ್ನು ತುಳಿಯಬೇಕಾದರೆ ಬಾಂಬು ಗಳು, ಅಸ್ತ್ರಗಳು ಬೇಕಿಲ್ಲ. ಶಿಕ್ಷಣ ವ್ಯವಸ್ಥೆಯನ್ನು ಕೆಡಿಸಿದರೆ ಸಾಕು’ ಎಂದು ಅನೇಕ ಮಹಾನುಭಾವರು ಅಭಿಪ್ರಾಯಪಟ್ಟಿ ರುವುದನ್ನು ಇಲ್ಲಿ ಉಲ್ಲೇಖೀಸಬಹುದಾಗಿದೆ.

– ಡಾ| ಎಂ.ಮಹಾದೇವಪ್ಪ(ವಿಶ್ರಾಂತ ಕುಲಪತಿಗಳು)

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.