ರಾಜಾಸಾಬ್‌: ನೈತಿಕ ಮಾದರಿಯ ನಿರ್ಗಮನ 


Team Udayavani, Jul 23, 2017, 7:00 AM IST

A.H.Rajasab-,-Vice-Chancell.gif

ತುಮಕೂರು ವಿಶ್ವವಿದ್ಯಾನಿಲಯದ ಮೂರನೇ ಕುಲಪತಿಗಳಾಗಿ ಎ. ಎಚ್‌. ರಾಜಾಸಾಬ್‌ 2013ರ ಜುಲೈಯಲ್ಲಿ ಅಧಿಕಾರ ಸ್ವೀಕರಿಸಿದ ಆರಂಭದ ದಿನಗಳಲ್ಲಿ ಸೌಜನ್ಯಕ್ಕೂ ನಾನವರನ್ನು ಭೇಟಿಯಾಗಲು ಹೋಗಿರಲಿಲ್ಲ. ಆದರೆ ಸಹೋದ್ಯೋಗಿ ಗೆಳೆಯರು,””ನಿಮ್ಮ ಸಂಪಾದ ಕತ್ವದಲ್ಲಿ ಬರುವ “ಲೋಕಜ್ಞಾನ’ ಸಂಶೋಧನಾ ಪತ್ರಿಕೆಯ ಬಗ್ಗೆ ಇನ್ನಾರೋ ಹೇಳುವುದಕ್ಕಿಂತ ನೀವೇ ಪತ್ರಿಕೆಯನ್ನು ಕೊಟ್ಟು ಬರುವುದು ಒಳ್ಳೆಯದು” ಎಂದು ನನ್ನನ್ನು ವಿ.ಸಿ.ಯವರ ಛೇಂಬರ್ಗೆ ದೂಡಿದರು. 

ನಾನು ಪತ್ರಿಕೆಯ ಸಂಚಿಕೆಗಳನ್ನು ವಿ.ಸಿ.ಯವರಿಗೆ ಒಪ್ಪಿಸಿದೆ. ಅವನ್ನು ದಿಟ್ಟಿಸಿದ ರಾಜಾಸಾಬ್‌ ಕೇಳಿದ ಮೊದಲ ಪ್ರಶ್ನೆ 

“”ಇವುಗಳನ್ನು ಎಲ್ಲಿ ಪ್ರಿಂಟ್‌ ಮಾಡಿಸುತ್ತಿದ್ದೀರಿ?” 
ನಾನು “”ಮಂಗಳೂರಿನಲ್ಲಿ ಸರ್‌” ಎಂದೆ. 
“”ನೀವು ಎಲ್ಲಿಯವರು?” ಎರಡನೇ ಪ್ರಶ್ನೆ.
“ನಾನೂ ಮಂಗಳೂರಿನವನೇ.” 
“”ಇನ್ನು ಮುಂದೆ ಬೇರೆ ಎಲ್ಲಾದರೂ ಪ್ರಿಂಟ್‌ ಮಾಡಿಸಿ.”
ನನಗೆ ಶಾಕ್‌ ಆಯಿತು. ಇವರು ನನ್ನನ್ನು ಅನುಮಾನಿಸಿದ್ದಾರೆ ಎಂಬುದು ನನಗೆ ದೃಢವಾಯಿತು.

ನಾನು “”ಸರ್‌, ಪತ್ರಿಕೆ ಮಂಗಳೂರಿನಲ್ಲಿ ಪ್ರಿಂಟ್‌ ಆಗುವುದಕ್ಕೂ ನಾನು ಮಂಗಳೂರಿನವನಾಗಿರುವುದಕ್ಕೂ ನೀವು ಸಂಬಂಧ ಕಲ್ಪಿಸಿದ್ದೀರಿ ಎನ್ನುವುದು ನಿಮ್ಮ ಮಾತಿನಿಂದ ನನಗೆ ಖಚಿತವಾಗುತ್ತಿದೆ. ನೀವು ನನ್ನ ಪ್ರಾಮಾಣಿಕತೆಯನ್ನು ಅನುಮಾನಿಸಿದ್ದೀರಿ. ಇರಲಿ ಸಂತೋಷ. ಮುಂದಿನ ಸಂಚಿಕೆಯನ್ನು ನೀವೆಲ್ಲಿ ಹೇಳುತ್ತೀರೋ ಅಲ್ಲೇ ಪ್ರಿಂಟ್‌ ಮಾಡೋಣ” ಎಂದು ಹೇಳಿ ಸಿಟ್ಟಿನಿಂದಲೇ ಹೊರಬಂದೆ.  ಮರುದಿನ ಬೆಳಿಗ್ಗೆ ಅನಾಮಧೇಯ ನಂಬರ್‌ನಿಂದ ನನ್ನ ಫೋನ್‌ಗೆ ಒಂದು ಕಾಲ್‌ ಬಂತು.

“”ನಮಸ್ಕಾರ ನಿತ್ಯಾನಂದ್‌, ನಾನು ರಾಜಾಸಾಬ್‌.”ಲೋಕಜ್ಞಾನ’ದ ಲೇಖನಗಳು ಮತ್ತು ನಿಮ್ಮ ಸಂಪಾದಕೀಯಗಳು ನನಗೆ ಹಿಡಿಸಿದವು. ನಿಮ್ಮನ್ನು ಅನುಮಾನಿಸಿದೆ ಎಂದು ಬೇಸರ ಮಾಡ್ಕೊàಬೇಡಿ. ನೀವು ನನ್ನ ಐಡಿಯಾಲಜಿಕಲ್‌ ಫ್ರೆಂಡ್‌”. ವಿ.ಸಿ.ಯವರ ನಿನ್ನೆಯ ಮಾತಿನಿಂದ ನನಗೆ ಹೇಗೆ ಶಾಕ್‌ ಆಗಿತ್ತೋ ಇವತ್ತಿನ ಈ ದೂರವಾಣಿ ಮಾತುಕತೆಯಿಂದಲೂ ಅಷ್ಟೇ ಶಾಕ್‌ ಆಗಿತ್ತು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ರಾಜಾಸಾಬ್‌ ಮತ್ತು ನನ್ನ ಸ್ನೇಹ ಆರಂಭಗೊಂಡದ್ದು ಹೀಗೆ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಅನಂತರ ಮಾಡಿದ ಮೊದಲ ಕುಲಪತಿ ನೇಮಕದಲ್ಲೇ ಅದು ತುಮಕೂರು ವಿವಿಗೆ ಆರಿಸಿದ್ದು ಮುಸ್ಲಿಮರಲ್ಲೇ ಅತ್ಯಂತ ಹಿಂದುಳಿದ ಪಿಂಜಾರ ಸಮುದಾಯಕ್ಕೆ ಸೇರಿದ ಸಸ್ಯವಿಜ್ಞಾನ ಕ್ಷೇತ್ರದ ಪ್ರತಿಭಾನ್ವಿತ ವಿಜ್ಞಾನಿ ರಾಜಾಸಾಬ್‌ಅವರನ್ನು. ಆಗಿನ ರಾಜ್ಯಪಾಲರು ಕುಲಪತಿಗಳ ನೇಮಕದಲ್ಲಿ ಭಾರೀ ಪ್ರಮಾಣದ ಹಣ ಮಾಡಿಕೊಳ್ಳುತ್ತಿದ್ದಾರಂತೆ ಎಂಬ ಸುದ್ದಿಗಳ ನಡುವೆ ಒಂದು ರೂಪಾಯಿಯನ್ನೂ ಖರ್ಚು ಮಾಡದೆ ರಾಜಾಸಾಬ್‌ ವಿಸಿಯಾಗಿದ್ದರು. ಅವರು ಬಂದ ಮೊದಲ ತಿಂಗಳಲ್ಲೇ ಅನಂತಮೂರ್ತಿಯವರನ್ನು ಕರೆಯಿಸಿ ಒಂದು ಸಂವಾದ ಏರ್ಪಡಿಸಬೇಕಲ್ಲ ಎಂದಿದ್ದರು. ಅದು ಅನಂತಮೂರ್ತಿಯವರ ಕೊನೆಯ ಸಾರ್ವಜನಿಕ ಸಂವಾದವಾಗಿತ್ತು. 

ರಾಜಾಸಾಬ್‌ ಅವಧಿಯಲ್ಲಿ ತುಮಕೂರು ವಿವಿ ಜನಸ್ನೇಹೀ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. ಅಲೆಮಾರಿಗಳು, ಹಂದಿ ಜೋಗರಿಂದ ತೊಡಗಿ, ಅಬ್ದುಲ್‌ ಕಲಾಂ, ದಲಾಯಿ ಲಾಮಾರ ವರೆಗೆ ಅನೇಕ ಬುದ್ಧಿಜೀವಿಗಳು ಬಂದು ವಿಶ್ವವಿದ್ಯಾನಿಲಯದಲ್ಲಿ ಒಂದು ಬಗೆಯ ಬೌದ್ಧಿಕ ವಾತಾವರಣವನ್ನು ನಿರ್ಮಿಸಿದರು. ಕರ್ನಾಟಕದ ಅನೇಕ ವಿ.ಸಿ.ಗಳು ಶೈಕ್ಷಣಿಕೇತರವಾದ ಕಾರಣಕ್ಕೆ ಸುದ್ದಿಯಲ್ಲಿದ್ದಾಗ ರಾಜಾಸಾಬ್‌ ಮಾತ್ರ ರಾಜ್ಯದ ಕುಲಪತಿಗಳಿಗೆ ಮಾದರಿಯಾಗುವಂತಹ ಅನೇಕ ಕೆಲಸಗಳನ್ನು ಮಾಡಿದರು. ವಿ.ವಿ. ಎದುರಿಸುತ್ತಿದ್ದ ಹಲವಾರು ಬಿಕ್ಕಟ್ಟುಗಳನ್ನು ಬಿಡಿಸಿದರು. ಸ್ವಂತ ಕ್ಯಾಂಪಸ್‌ ಇಲ್ಲದ ವಿಶ್ವವಿದ್ಯಾನಿಲಯಕ್ಕೆ ಅರಣ್ಯ ಇಲಾಖೆಗೆ ಸೇರಿದ 230 ಎಕರೆ ಭೂಮಿಯನ್ನು ಕೊಡಿಸುವ ಸಂದರ್ಭದಲ್ಲಿ ಅವರು ಆಕಾಶ-ಭೂಮಿ ಒಂದು ಮಾಡಿದ್ದರು.  ಈ ಎಲ್ಲ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ  ಅವರಿಟ್ಟ ಪ್ರತಿ ಹೆಜ್ಜೆಯೂ   ಸಂವಿಧಾನಾತ್ಮಕವಾಗಿಯೂ; ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುವಂತೆಯೂ ಇರುತ್ತಿತ್ತು. ಅವರು ಅನೇಕ ಬಾರಿ “ಸರ್ವಾಧಿಕಾರದಲ್ಲಿ ವೇಗ ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ನಿಧಾನಗತಿ ಇರುತ್ತದೆ. 

ವೇಗದಿಂದ ಅನ್ಯರಿಗೆ ಹಿಂಸೆಯಾಗಬಹುದು. ನಿಧಾನಗತಿಯಲ್ಲಿ ಆ ಅಪಾಯಗಳಿಲ್ಲ. ಇನ್ನೊಬ್ಬರಿಗೆ ತೊಂದರೆಯನ್ನುಂಟು ಮಾಡುವ ವೇಗಕ್ಕಿಂತ ಅವರ ಮುಕ್ತ ಅಭಿವ್ಯಕ್ತಿಗೆ ವಾತಾವರಣವನ್ನು ಕಲ್ಪಿಸಿ ಕೊಡುವ ನಿಧಾನಗತಿಯೇ ನನ್ನ ಶೈಲಿ’ ಎನ್ನುತ್ತಿದ್ದರು. ಠಾಗೋರ್‌, ಬ್ರೆಕ್ಟ್, ಕುವೆಂಪು, ಅನಂತಮೂರ್ತಿ, ದೇವನೂರರ ಸಾಹಿತ್ಯವನ್ನು ಓದಿದ್ದ ರಾಜಾಸಾಬರು ಅವುಗಳ ಕುರಿತು ನನ್ನ ಜತೆಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ಒಮ್ಮೆ ಅವರು ಅಮೆರಿಕಕ್ಕೆ ಹೋದಾಗ ನನ್ನಿಂದ ಕೇಳಿ ಪಡೆದು ವಿಮಾನದಲ್ಲಿ ಓದಿದ್ದು ನೇಮಿಚಂದ್ರ ಅವರ “ಯಾದ್‌ ವಶೇಮ್‌’ ಪುಸ್ತಕವನ್ನು. ಅಮೆರಿಕದಿಂದ ಬಂದ ಮೇಲೆ ಅದರ ಹತ್ತು ಪ್ರತಿಗಳನ್ನು ತಮ್ಮ ಸ್ನೇಹಿತರಿಗೆ ಹಂಚಿದ್ದರು. 

ನನ್ನ ಮತ್ತು ಅವರ ನಡುವೆ ನಡೆಯುತ್ತಿದ್ದ ಅನೇಕ ಚರ್ಚೆಗಳು ಕುಲಪತಿ ಮತ್ತು ಪ್ರಾಧ್ಯಾಪಕ ಎಂಬ ಅಸಮಾನ ಸಂಬಂಧಗಳ ನೆಲೆಯಲ್ಲಿರದೆ ಸಮಾನ ಪಾತಳಿಯಲ್ಲಿ ನಡೆಯುತ್ತಿದ್ದವು. ನಾನು ಅವರ ಕೆಲವು ಯೋಚನಾಕ್ರಮಗಳ ಕಟು ಟೀಕಾಕಾರನಾಗಿದ್ದೆ. ಉದಾಹರಣೆಗೆ, ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ
ನೇಮಕಾತಿಯ ವಿಧಾನ, ಅಲ್ಲಿಯ ಬೋಧನಾ ವಿಧಾನ ಇವೆಲ್ಲವುಗಳ ಯಥಾಪ್ರತಿಯನ್ನು ಭಾರತೀಯ ವಿಶ್ವವಿದ್ಯಾನಿಲಯ ಗಳಲ್ಲಿ ಜಾರಿಗೊಳಿಸಬೇಕು ಎಂಬುದು ಅವರ ಪ್ರಮುಖ ವಾದವಾ
ಗಿತ್ತು. ಭಾರತೀಯ ಸಂದರ್ಭದ ಐತಿಹಾಸಿಕತೆಯ ಮತ್ತು ಸಾಮಾಜಿ ಕತೆಯ ಪರಿಚಯ ಇದ್ದವರು ವಿದೇಶೀ ವಿವಿಗಳ ಮಾದರಿಯನ್ನು ಭಾರತೀಯ ಸಂದರ್ಭದಲ್ಲಿ ತದ್ವತ್‌ ಅಳವಡಿಸುವ ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ನಾನು ಪ್ರತಿವಾದ ಹೂಡುತ್ತಿದ್ದೆ.
 
ಒಮ್ಮೆ ಅವರು ಮಾತಾಡುತ್ತಾ “ಸರಕಾರ ಕುಲಪತಿಗಳ ನೇಮಕಾತಿಗೆ ಸಂಬಂಧಿಸಿ ನಿರ್ದಿಷ್ಟ ಮಾರ್ಗಸೂಚಿಗಳನ್ನು ನಿಗದಿಪಡಿಸಲು ನನ್ನ ಸಲಹೆಗಳನ್ನು ಕೇಳಿದೆ. ವಿಸಿಯಾಗುವವನು ವಿದೇಶೀ ವಿವಿಗಳಲ್ಲಿ ಕೆಲವು ವರ್ಷಗಳ ಕಾಲ ಬೋಧನೆ-ಸಂಶೋಧನೆ ಮಾಡಿರಬೇಕು. ಕನಿಷ್ಠ ಪಕ್ಷ 5-10 ಕೋಟಿಯ ಅನುದಾನದಲ್ಲಿ ಸಂಶೋಧನಾ ಯೋಜನೆಗಳನ್ನು ನಿರ್ವಹಿಸಿರಬೇಕು. ಜಾಗತಿಕ ಮನ್ನಣೆಯ ಸಂಶೋಧನಾ ಪತ್ರಿಕೆಗಳಲ್ಲಿ ಕನಿಷ್ಠ ಆರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರಬೇಕು ಎಂಬ ನಿಯಮಗಳನ್ನು ಹಾಕಬೇಕೆಂದಿದ್ದೇನೆ’ ಎಂದಿದ್ದರು. 

ಆಗ ನಾನು “ದಯವಿಟ್ಟು ಇಂತಹ ಸಲಹೆಗಳನ್ನು ಸರಕಾರಕ್ಕೆ ಕೊಡಬೇಡಿ ಸರ್‌. ಇದು ಇನ್ನೊಂದು ಬಗೆಯ ಎಪಿಐ (ಅಕಾಡೆಮಿಕ್‌ ಪರ್‌ಫಾರ್ಮೆನ್ಸ್‌ ಇಂಡೆಕ್ಸ್‌) ಸ್ಕೋರ್‌ ಶೀಟ್‌ ಇದ್ದ ಹಾಗೆ. ಇಂತಹ ಮಾನದಂಡಗಳಿಂದ ಒಬ್ಬ ಒಳ್ಳೆಯ ಕುಲಪತಿ ವಿಶ್ವವಿದ್ಯಾನಿಲಯಕ್ಕೆ ಬರುವುದು ಸಾಧ್ಯವೇ? ಇವುಗಳು ವಿಜ್ಞಾನ ವಿಭಾಗದ ಪ್ರಾಧ್ಯಾಪಕರುಗಳಿಗೆ ಸರಿ. ಮಾನವಿಕದ ಪ್ರಾಧ್ಯಾಪಕರು ಕುಲಪತಿಯಾಗುವುದಕ್ಕೆ ಯೋಗ್ಯರಿದ್ದರೂ ಈ ಮಾನದಂಡಗಳ ಕಾರಣದಿಂದ ಅನರ್ಹರಾಗುವುದಿಲ್ಲವೇ? ನಮ್ಮ ದೇಶದ ಸಾಮಾಜಿಕತೆಯ ಕಾರಣದಿಂದ ವಿಜ್ಞಾನ ನಿಕಾಯದ‌ಲ್ಲಿರುವ ಎಷ್ಟು ಮಂದಿ ಹಿಂದುಳಿದ-ದಲಿತ ಪ್ರಾಧ್ಯಾಪಕರು ಈ ಮಾನದಂಡಗಳನ್ನು ತಲುಪಲು ಸಾಧ್ಯ? ಈ ಎಲ್ಲ ಅರ್ಹತೆಗಳಿರುವ ಓರ್ವ ಪ್ರಾಧ್ಯಾಪಕ ಕೆಟ್ಟ ಮನುಷ್ಯನೂ ಊಳಿಗಮಾನ್ಯ ಧೋರಣೆಯ ಆಡಳಿತಗಾರನೂ ಆಗಿದ್ದರೆ ಆಗ ಏನು ಗತಿ? ನನ್ನಂತಹವನಿಗೆ ಎಪಿಐ ಸ್ಕೋರ್‌ನಲ್ಲಿ ಅತ್ಯಧಿಕ ಅಂಕ ಗಳಿಸಬಲ್ಲ ಡಾ| ಮನಮೋಹನ್‌ ಸಿಂಗ್‌ ಅವರ‌ಂತಹ ಓರ್ವ ಅಧಿಕಾರಿ ಪ್ರಧಾನಿಯಾಗುವುದಕ್ಕಿಂತ ದೇವೇಗೌಡ‌, ಕಾಮರಾಜರಂತಹ ಜನಸಾಮಾನ್ಯರ ಬವಣೆಗಳನ್ನು ಬಲ್ಲ ಜನನಾಯಕ ಪ್ರಧಾನಿಯಾಗುವುದು ಮುಖ್ಯ’ ಎಂದಿದ್ದೆ. ಅವರಿಗೆ ಅದು ಹೌದು ಅನ್ನಿಸಿತು. 

ಸಿರಿಧಾನ್ಯ ಕುರಿತ ಸಂಶೋಧನೆಗೆ ಹೈಲಾಂಗ್‌ ಜಿಯಾಂಗ್‌ ಕೃಷಿ ವಿವಿ ಜತೆಗೆ ಸಹಿ ಮಾಡಲು ರಾಜಾಸಾಬರು ಚೀನಕ್ಕೆ ತೆರಳಬೇಕಾಗಿತ್ತು. ಆದರೆ ಈ ಪ್ರವಾಸಕ್ಕೆ ರಾಜಭವನದ ಒಪ್ಪಿಗೆ ದೊರೆಯಲಿಲ್ಲ. ತನ್ನ ಸ್ವಂತ ದುಡ್ಡು ಹಾಕಿ ಚೀನಕ್ಕೆ ತೆರಳಿ ಸಿರಿಧಾನ್ಯ ಕುರಿತ ಮುಂದಿನ ಸಂಶೋಧನಾ ಯೋಜನೆಗಳಿಗೆ ಒಪ್ಪಂದ ಮಾಡಿಕೊಂಡು ಬಂದ ರಾಜಾಸಾಬರ ಸಾಮಾಜಿಕ ಬದ್ಧತೆ ಅಪೂರ್ವವಾದುದು. ಕರ್ನಾಟಕದ ವಿಶ್ವವಿದ್ಯಾನಿಲಯಗಳ ಕುಲಪತಿಗಳಲ್ಲೇ ಇಂತಹ ಅಪರೂಪದ ಗುಣಗಳನ್ನು ಹೊಂದಿದ್ದ ರಾಜಾಸಾಬರ ವಿನಯವಂತಿಕೆ ಮತ್ತು ತಪ್ಪನ್ನು ಪ್ರಾಂಜಲವಾಗಿ ಒಪ್ಪಿಕೊಳ್ಳುವ ಒಂದು ಘಟನೆಯನ್ನು ಇಲ್ಲಿ ಪ್ರಸ್ತಾವಿಸಲೇಬೇಕು.

ತುಮಕೂರು ವಿಶ್ವವಿದ್ಯಾನಿಲಯದ ಅಂದಿನ ಕುಲಸಚಿವರಾಗಿದ್ದ ಪ್ರೊ| ಡಿ ಶಿವಲಿಂಗಯ್ಯರು (ಈಗ ಕೆಎಸ್‌ಓಯು ಕುಲಪತಿ) ಒಂದು ದಿನ ನನ್ನ ಜತೆಗೆ ಮಾತಾಡುತ್ತ, ರಾಜಾಸಾಬ್‌ರಿಂದ ಅವರಿಗಾದ ನೋವನ್ನು ಹೇಳಿಕೊಂಡರು. ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದ ಫೈಲ್‌ ಮುಕ್ತಾಯವಾದ ಮೇಲೆ ಮತ್ತಿನ್ನಾವುದೋ ಸಂದರ್ಭದಲ್ಲಿ ಅದೇ ಫೈಲ್‌ ವಿಸಿಯವರ ಬಳಿಗೆ ಹೋದಾಗ ಅದರ ಕೆಲವು ಪುಟಗಳ ಹಿಂದೆ ಹೋಗಿ ಯಾವುದೋ ಒಂದು ಟಿಪ್ಪಣಿಯನ್ನು ವಿಸಿಯವರು ಬರೆದಿದ್ದರಂತೆ. ಇದರಿಂದ ಶಿವಲಿಂಗಯ್ಯರು ಬಹಳ ವ್ಯಾಕುಲಗೊಂಡು “ಹೀಗಾದರೆ ನಮ್ಮಂತವರು ಕೆಲಸ ಮಾಡುವುದು ಹೇಗೆ ಮಾರಾಯರೇ?’ ಎಂದು ತಮ್ಮ ದುಮ್ಮಾನವನ್ನು ತೋಡಿಕೊಂ ಡಿದ್ದರು. ನಾನು ವಿಸಿಯವರನ್ನು”ಇಂಥ ಒಂದು ಘಟನೆ ಆಗಿದೆಯಂತೆ ಇದು ನಿಜವೇ? ನಿಜವಾಗಿದ್ದಲ್ಲಿ ನೀವು ಮಾಡಿದ್ದು ತಪ್ಪಲ್ಲವೇ?’ ಎಂದು ಕೇಳಿದ್ದೆ. ಅದೇ ದಿವಸ ವಿಸಿಯವರು ಶಿವಲಿಂಗ ಯ್ಯರನ್ನು ತಮ್ಮ ಛೇಂಬರ್‌ಗೆ ಕರೆಯಿಸಿಕೊಂಡು ಆ ಫೈಲ್‌ ಅನ್ನೂ ತರಿಸಿ ಅನುದ್ದಿಶ್ಯವಾಗಿ ನಡೆದ ಆ ಘಟನೆಯ ಬಗ್ಗೆ ಕ್ಷಮೆಯನ್ನೂ ಕೇಳಿದರೆಂದು ಆನಂತರ ಶಿವಲಿಂಗಯ್ಯರು ನನಗೆ ತಿಳಿಸಿದ್ದರು. ರಾಜಾಸಾಬ್‌ರದ್ದು ಪರಿಪೂರ್ಣ ವ್ಯಕ್ತಿತ್ವ ಎಂದು ಹೇಳುವುದು ಈ ಬರೆಹದ ಉದ್ದೇಶವಲ್ಲ. 

ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದರೂ ಒಂದು ಬಗೆಯ ಅಂಜಿಕೆ-ಹಿಂಜರಿಕೆ-ಅಳುಕು ಅವರಲ್ಲಿತ್ತು. ಅಧಿಕಾರಸ್ಥರನ್ನು ಅವರು ಸ್ವಲ್ಪ ಹೆಚ್ಚಿಗೇ ಓಲೈಸುತ್ತಿದ್ದರು. ಸಂಘರ್ಷಕ್ಕಿಂತ ಹೊಂದಾಣಿಕೆ ಒಳ್ಳೆಯದು ಎಂದವರು ನಂಬಿದ್ದರು. ಜಗತ್ತಿನಲ್ಲಿ ತನ್ನಷ್ಟು ಪ್ರಾಮಾಣಿಕ ಇನ್ನು ಮುಂದಿನ ದಿನಗಳಲ್ಲಿ ಸಿಗುವುದಿಲ್ಲ ಎಂಬ ಸಣ್ಣ ಅಹಂ ಕೂಡ ಅವರಿಗಿತ್ತು. ರಾಜಾಸಾಬ್‌ ಹುಟ್ಟಿ ಬೆಳೆದ ಬಂದ ಪರಿಸರ ಅವರನ್ನು ಈ ಇತಿ-ಮಿತಿಗಳಿಂದ ರೂಪಿಸಿದ್ದಿರಬಹುದು. ಅನೇಕ ಬಾರಿ ತತ್‌ಕ್ಷಣದಲ್ಲೇ ದೃಢ ನಿರ್ಧಾರವನ್ನು ತೆಗೆದುಕೊಳ್ಳದಿರುವ ಅವರ ಭೀತಿಗೆ ಅವರು ಮುಸ್ಲಿಮ್‌ ಸಮುದಾಯದಿಂದ ಬಂದಿರುವುದೂ ಒಂದು ಕಾರಣ ಇದ್ದಿರಬಹುದು. ಭಾರತದಲ್ಲಿಂದು ದಲಿತರಿಗಿಂತಲೂ ಹೆಚ್ಚಿನ ಅಭದ್ರತೆಯನ್ನು ಎದುರಿಸುತ್ತಿರುವವರು ಮುಸ್ಲಿಮರೇ ಅಲ್ಲವೇ? ಇಷ್ಟಾಗಿ ಈ ಬರೆಹವನ್ನು ಮುಗಿಸುವ ಮುನ್ನ ಕೆಲವು ಸಂಗತಿಗಳನ್ನು ಪ್ರಸ್ತಾವಿಸುವುದು ಸೂಕ್ತ. ಲೋಕಾಪವಾದಗಳು ಯಾರನ್ನೂ ಬಿಡಲಿಲ್ಲ. ಸುಳ್ಳುಗಳ ನಡುವೆ ಸತ್ಯದ ಬದುಕು ಬದುಕುವವನಿಗೆ ಇದು ಲಾಗಾಯ್ತಿನಿಂದಲೂ ಇದ್ದದ್ದೇ. ಸ್ವತ್ಛ ಮತ್ತು ಸತ್ಯದ ಬದುಕನ್ನು ಬದುಕಿದ ರಾಜಾಸಾಬ್‌ ಅವರ‌ನ್ನು ಅನುಮಾನಿಸುವ ಕಥೆಗಳು ನಮ್ಮ ವಿಶ್ವವಿದ್ಯಾನಿಲಯದಲ್ಲೂ ಹುಟ್ಟಿದವು. 

ರಾಜಾಸಾಬ್‌ ರಿಯಲ್‌ ಎಸ್ಟೇಟ್‌ ದಂಧೆಗೆ ಹೊರಟಿದ್ದಾರೆ, ಸಚಿವ ಟಿ. ಬಿ. ಜಯಚಂದ್ರರೊಂದಿಗೆ ಪಾಲುದಾರಿಕೆಯಲ್ಲಿ ಮೆಡಿಕಲ್‌ ಕಾಲೇಜ್‌ ಕಟ್ಟುತ್ತಿದ್ದಾರೆ, ಅದಕ್ಕಾಗಿ ದುಡ್ಡು ಮಾಡುತ್ತಿದ್ದಾರೆ ಎಂಬ ಕಥೆಗಳು ನಮ್ಮ ಕ್ಯಾಂಪಸ್‌ನಲ್ಲಿ ಹುಟ್ಟಿಕೊಂಡಾಗ ಭಾರತೀಯ ವಿಶ್ವವಿದ್ಯಾನಿಲಯಗಳಿಗೆ ಗಾಸಿಪ್‌ಗ್ಳನ್ನು ಸೃಷ್ಟಿಸಿ ಕಥನಗಳನ್ನಾಗಿ ಕಟ್ಟುವುದರಲ್ಲಿ ಇರುವ ಆಸಕ್ತಿ ಕಥನಗಳ ಅಧ್ಯಯನ ನಡೆಸುವುದರಲ್ಲಿ ಇಲ್ಲವಲ್ಲ ಎಂದು ನನಗೆ ವ್ಯಥೆಯಾಯಿತು. ಇದಾವುದನ್ನೂ ಹಚ್ಚಿಕೊಳ್ಳದೆ ಕುಲಪತಿಯಾದ ತಪ್ಪಿಗೆ ಕಣ್ಣಿಗೂ, ಹೃದಯಕ್ಕೂ ಆಪರೇಷನ್‌ ಮಾಡಿಸಿಕೊಂಡು ಇದೇ ಜುಲೈ 25ರಂದು ವಿಶ್ವವಿದ್ಯಾನಿಲಯದಿಂದ ಹೊರಡುತ್ತಿರುವ ರಾಜಾಸಾಬ್‌ ಅವರ‌ ಚಿತ್ರ ನಮ್ಮ ಹಳೆಯ ತಲೆಮಾರಿನ ಸ್ವತ್ಛ ಮನಸ್ಸಿನ ನೈತಿಕ ಪ್ರಜ್ಞೆಯೊಂದು ಪುರುಷ ರೂಪವನ್ನು ಧರಿಸಿ ನಿರ್ಗಮಿಸುವಂತೆ ನನಗೆ ಕಾಣಿಸುತ್ತಿದೆ. 

ಕೊನೆಗೂ ಸ್ವತ್ಛ ಭಾರತ್‌ ಎಂದರೆ ಏನು? ನಮ್ಮ ಬೀದಿಗಳು ಸ್ವತ್ಛಗೊಳ್ಳುವುದೇ? ಅಥವಾ ನಮ್ಮ ಬದುಕಿನ ದಾರಿಗಳು ಸ್ವತ್ಛಗೊಳ್ಳುವುದೇ? ನಮ್ಮ ಬೀದಿಗಳನ್ನು ನಾವು ಕಠಿಣಕಾನೂನೊಂದನ್ನು ತಂದು ಸ್ವತ್ಛವಾಗಿರಿಸ‌ಬಹುದು. ಆದರೆ ನಮ್ಮ ಬದುಕಿನ ದಾರಿಗಳನ್ನು ಕಾನೂನಿನಿಂದ ಸ್ವತ್ಛ ಮಾಡಲು ಸಾಧ್ಯವಿಲ್ಲ. ಗಾಂಧಿ ಹೇಳಿದಂತೆ ಇದನ್ನು ನೈತಿಕ ಮಾರ್ಗಗಳಿಂದ ರೂಢಿಸಿಕೊಳ್ಳಬೇಕು. ಭಾರತೀಯ ವಿಶ್ವವಿದ್ಯಾನಿಲಯಗಳ‌ಲ್ಲಿರುವ ನಾವು ಕಳೆದುಕೊಳ್ಳುತ್ತಿರುವ ನೈತಿಕತೆಯ ಮತ್ತು ಪ್ರಜಾತಾಂತ್ರಿಕ ಸದ್ಗುಣಗಳ ಮಾದರಿಯಾಗಿ ನನಗೆ ರಾಜಾಸಾಬ್‌ಕಾಣುತ್ತಿದ್ದಾರೆ. 

ನಾಗರಿಕ ಸಮಾಜದ ಮೌಲ್ಯಗಳನ್ನು ಕಾಪಾಡುವ ಸಂಸ್ಕೃತಿಯನ್ನು ಮತ್ತು ಪ್ರಜಾತಾಂತ್ರಿಕ ಆದರ್ಶಗಳನ್ನು ವಾಸ್ತವದಲ್ಲಿ ಕ್ರಿಯಾಚರಣೆಗಿಳಿಸುವ ವಿವೇಕವನ್ನು ಸೃಜಿಸಿ ಬೆಳೆಸಿ ಜಾಗತಿಕ ಮನ್ನಣೆ ಪಡೆದ ವಿಶ್ವವಿದ್ಯಾನಿಲಯಗಳು ಇಂದು ಚರಿತ್ರೆಯ ಭಾಗವಾಗಿ ಹೋಗಿವೆ. ವಿಶ್ವವಿದ್ಯಾನಿಲಯಗಳ ಇಂತಹ ಒಂದು ಚರಿತ್ರೆಯಿಂದ ನಾವೇನಾದರೂ ಕಲಿಯುವುದಿದೆಯೇ? ಇಂಥ ಪ್ರಶ್ನೆಗಳನ್ನು ಕೇಳುವ ಶುದ್ಧ ಶೈಕ್ಷಣಿಕ ವಾತಾವರಣವನ್ನು ನಮಗೆ ಒದಗಿಸಿ ತನ್ನ ಪಾಡಿಗೆ ತಾನು ಹೊರಟು ನಿಂತಿರುವ ರಾಜಾಸಾಬ್‌ ಅವರಿಗೆ ವಿಶ್ರಾಂತಿ ಸಿಗಲಿ. ನಮ್ಮ ಶೋಧನೆ ಅವಿಶ್ರಾಂತವಾಗಿರಲಿ.

– ನಿತ್ಯಾನಂದ ಬಿ. ಶೆಟ್ಟಿ

ಟಾಪ್ ನ್ಯೂಸ್

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.