Karpoori Thakur; ಒಬಿಸಿಗೆ ಮೀಸಲಾತಿ ನೀಡಿದ ಬಿಹಾರದ ಸಮಾಜ ಸುಧಾರಕ

ರಾಜ್ಯದಲ್ಲಿ ಮದ್ಯ ನಿಷೇಧಿಸಿದ್ದ ಕರ್ಪೂರಿ ; ಜನ್ಮಶತಮಾನೋತ್ಸವದ ಹೊತ್ತಿನಲ್ಲೇ ಭಾರತ ರತ್ನ ಗೌರವ

Team Udayavani, Jan 24, 2024, 6:15 AM IST

kaKarpoori Thakur; ಒಬಿಸಿಗೆ ಮೀಸಲಾತಿ ನೀಡಿದ ಬಿಹಾರದ ಸಮಾಜ ಸುಧಾರಕKarpoori Thakur; ಒಬಿಸಿಗೆ ಮೀಸಲಾತಿ ನೀಡಿದ ಬಿಹಾರದ ಸಮಾಜ ಸುಧಾರಕ

ಬಿಹಾರದ ಮಾಜಿ ಮುಖ್ಯಮಂತ್ರಿ, ಸಮಾಜ ವಾದಿ ನಾಯಕ ಕರ್ಪೂರಿ ಠಾಕೂರ್‌ಗೆ ಮರ ಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ಕೇಂದ್ರ ಸರಕಾರ ಘೋಷಿಸಿದೆ. 1924, ಜ.24ರಂದು ಜನಿಸಿದ ಅವರು, 1988, ಫೆ.17ರಂದು ತಮ್ಮ 64ನೇ ವರ್ಷದಲ್ಲಿ ಮೃತಪಟ್ಟರು. ಬುಧವಾರ ಅವರು ಹುಟ್ಟಿ ಸರಿಯಾಗಿ 100 ವರ್ಷಗಳು ಪೂರೈಸುತ್ತವೆ!
ಅತ್ಯಂತ ಹಿಂದುಳಿದ ವರ್ಗದಲ್ಲಿ ಜನಿಸಿದ ಕರ್ಪೂರಿ ಸಾಮಾಜಿಕ ಸುಧಾರಣೆಗೆ ಕಂಕಣ ತೊಟ್ಟರು ಸರಕಾರಿ ಉದ್ಯೋಗದಲ್ಲಿ ಹಿಂದು ಳಿದವರಿಗೆ ಮೀಸಲಾತಿ ನೀಡಿದ ಹರಿಕಾರ ಎನಿಸಿಕೊಂಡಿದ್ದಾರೆ.

ಬಿಹಾರದಲ್ಲಿ ಎರಡು ಬಾರಿ ಕರ್ಪೂರಿ ಠಾಕೂರ್‌ ಮುಖ್ಯಮಂತ್ರಿಯಾಗಿದ್ದರು. ಅದೂ ಅತ್ಯಲ್ಪ ಅವಧಿಗೆ. ಮೊದಲ ಬಾರಿ 1970, ಡಿ.22ರಿಂದ 1971 ಜೂ.2ರವರೆಗೆ ಕೇವಲ 5 ತಿಂಗಳವರೆಗೆ ಆಡಳಿತ ನಡೆಸಿದರು. ಆ ಮೂಲಕ ಬಿಹಾರದಲ್ಲಿ ಕಾಂಗ್ರೆಸ್ಸೇತರ ಪಕ್ಷದ ಮೊದಲ ಮುಖ್ಯಮಂತ್ರಿ ಎನಿಸಿದರು. 1977, ಜೂ.24ರಿಂದ 1979, ಎ. 21ರ ವರೆಗೆ 2ನೇ ಬಾರಿ ಮುಖ್ಯಮಂತ್ರಿಯಾಗಿದ್ದರು. ಅಷ್ಟರಲ್ಲೇ ಹಲವು ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.

ಪ್ರಜಾ ಸಮಾಜವಾದಿ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿದ ಅವರು, ಭಾರತೀಯ ಕ್ರಾಂತಿದಳ, ಜನತಾ ಪಾರ್ಟಿ (ಆಗಿನ ಜನಸಂಘವೂ ಸೇರಿ ಹಲವು ಪಕ್ಷಗಳ ಸಮ್ಮಿಶ್ರಣ), ಲೋಕದಳ ಪಕ್ಷದಲ್ಲೂ ದುಡಿದಿದ್ದರು. ಅವರು 1952ರಂದು ತಾಜಪುರ ಕ್ಷೇತ್ರದಿಂದ ಮೊದಲ ಬಾರಿ ಬಿಹಾರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದರು. ಅನಂತರ ಅವರೆಂದೂ ಚುನಾವಣೆಯಲ್ಲಿ ಸೋಲನ್ನು ಕಾಣಲೇ ಇಲ್ಲ.

ಸ್ವಾತಂತ್ರ್ಯ ಚಳವಳಿಯಲ್ಲಿ: ಕರ್ಪೂರಿ ಠಾಕೂರ್‌ ಹುಟ್ಟಿದ್ದು ಬಿಹಾರದ ಸಮಸ್ತಿಪುರ ಜಿಲ್ಲೆಯ ಪಿತೌಂಝಿಯ ಎಂಬ ಹಳ್ಳಿಯಲ್ಲಿ. ಈಗ ಆ ಹಳ್ಳಿಗೆ ಕರ್ಪೂರಿ ಗ್ರಾಮವೆಂದೇ ಹೆಸರನ್ನಿಡಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ತಮ್ಮ ಹಳ್ಳಿಯಲ್ಲಿ ಶಿಕ್ಷಕರಾಗಿದ್ದ ಅವರು ನಂತರ ರಾಜಕೀಯ ಪ್ರವೇಶಿಸಿದರು. ಗಾಂಧಿವಾದಿಯಾಗಿದ್ದ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಜೈಲು ಸೇರಿದ್ದರು. ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿ 26 ತಿಂಗಳು ಬಂಧನದಲ್ಲಿದ್ದರು.

ಹಿಂದುಳಿದ ಜಾತಿಯ ಮೀಸಲು ಅವರು ಮುಖ್ಯಮಂತ್ರಿಯಾಗಿದ್ದಾಗ “ಕರ್ಪೂರಿ ಠಾಕೂರ್‌ ಸೂತ್ರ’ ಎಂದೇ ಹೆಸರಾದ ಸೂತ್ರದಡಿ ಸರ್ಕಾರಿ ಉದ್ಯೋಗದಲ್ಲಿ ಶೇ 26ರಷ್ಟು ಮೀಸಲಾತಿ ಜಾರಿಗೊಳಿಸಿದರು. ಇದು ಇಡಿ ದೇಶದಲ್ಲೇ ಅತ್ಯಂತ ಕ್ರಾಂತಿಕಾರಕ ನಿರ್ಧಾರ ಎಂದು ಕರೆಯಿಸಿಕೊಂಡಿತ್ತು. ಇದರ ಸ್ಪೂರ್ತಿಯೇ ಮುಂದೆ ಮಂಡಲ್‌ ಕಮೀಷನ್‌ ರಚನೆಗೆ ಸಹಾಯಕವಾಗುತ್ತದೆ.

ಮದ್ಯ ನಿಷೇಧ: ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿ ಮಾಡಿದ ಮೊದಲ ಮುಖ್ಯಮಂತ್ರಿ ಅವರು. ನಂತರ ಅವರ ಹೆಸರಿನಲ್ಲಿ ಬಿಹಾರದಾದ್ಯಂತ ಹಲವು ಶಾಲೆ, ಕಾಲೇಜುಗಳು ತೆರೆಯಲ್ಪಟ್ಟವು. ಅವೆಲ್ಲವೂ ಹಿಂದುಳಿದ ಪ್ರದೇಶದಲ್ಲೇ ಇದ್ದವು.

ಇಂಗ್ಲಿಷ್‌ ಭಾಷೆಯನ್ನೇ ಕಿತ್ತು ಹಾಕಿದ್ದರು: ಅವರು ಬಿಹಾರದ ಶಿಕ್ಷಣ ಸಚಿವರಾಗಿದ್ದಾಗ, 10ನೇ ತರಗತಿಯಲ್ಲಿ (ಮೆಟ್ರಿಕ್ಯುಲೇಶನ್‌) ಇಂಗ್ಲಿಷ್‌ ಭಾಷೆ ಕಡ್ಡಾಯ ಎಂಬ ನಿಯಮವನ್ನು ರದ್ದು ಮಾಡಿದ್ದರು. ಇಂಗ್ಲಿಷ್‌ ಭಾಷೆಯ ಕಾರಣಕ್ಕೆ ಬಿಹಾರದ ವಿದ್ಯಾರ್ಥಿಗಳ ಫ‌ಲಿತಾಂಶ ಕಳಪೆಯಾಗಿದೆ ಎಂಬ ದೂರುಗಳು ಕೇಳಿಬಂದಿದ್ದರಿಂದ ಈ ನಿಯಮ ಜಾರಿ ಮಾಡಿದ್ದರು. ಹಿಂದಿ ಪರವಾಗಿ ಬಲವಾದ ಧ್ವನಿಯೆತ್ತಿದ್ದರು. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸುವ ಮೂಲಕ ಬಡ ಭೂ ರಹಿತರಿಗೆ ಜಮೀನಾªರರ ಭೂಮಿಯನ್ನು ಹಂಚಿಕೆ ಮಾಡಿದರು.

ಜನನಾಯಕ
ನಿಧನರಾಗಿ 34 ವರ್ಷಗಳೇ ಸಂದರೂ ಬಿಹಾರದ ರಾಜಕೀಯ ಸಾಮಾಜಿಕ ಸ್ತರ ದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಧೀಮಂತ ನಾಯಕ ಕರ್ಪೂರಿ. ಶೋಷಿತರ ಪರವಾಗಿ ಸದಾ ದನಿ ಎತ್ತುತ್ತಿದ್ದ ಅವರನ್ನು “ಜನ ನಾಯಕ’ ಎಂದೇ ಕರೆಯಲಾಗುತ್ತಿತ್ತು. ಅವರ ಹುಟ್ಟೂರು ಪಿತೌಂಝಿಯ ಎಂಬ ಹಳ್ಳಿಯ ಹೆಸರನ್ನೇ ಕರ್ಪೂರಿ ಎಂದು ಬದಲಾಯಿಸಲಾಗುತ್ತದೆ. ಪ್ರತಿವರ್ಷ ಅವರ ಜನ್ಮದಿನದಂದು ಈ ಗ್ರಾಮದಲ್ಲಿ ಸರಕಾರ ಕಾರ್ಯಕ್ರಮ ನಡೆಸುತ್ತದೆ. ಸಮಾಜದಲ್ಲಿ ಇನ್ನೂ ಗೌರವ ಉಳಿಸಿಕೊಂಡ ನಾಯಕ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.