ಅಮೆರಿಕ ಮತ್ತದರ ಯುದ್ಧ ಸಂಬಂಧ


Team Udayavani, Sep 1, 2021, 6:30 AM IST

ಅಮೆರಿಕ ಮತ್ತದರ ಯುದ್ಧ ಸಂಬಂಧ

ಸತತ 20 ವರ್ಷಗಳ ಕಾಲ ಅಫ್ಘಾನಿಸ್ಥಾನದಲ್ಲಿ ಯುದ್ಧ ನಡೆಸಿ, ಮಂಗಳವಾರವಷ್ಟೇ ಸಂಪೂರ್ಣವಾಗಿ ದೇಶ ಖಾಲಿ ಮಾಡಿರುವ ಅಮೆರಿಕ, ದೊಡ್ಡಣ್ಣನಾಗಿ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಇದೇ ರೀತಿಯ ಸಮರ ನಡೆಸಿದೆ. ಇದು ಇಲ್ಲಿಗಷ್ಟೇ ನಿಲ್ಲಲ್ಲ, ಎರಡನೇ ಮಹಾಯುದ್ಧದಲ್ಲೂ ಅಮೆರಿಕದ ಪಾತ್ರ ಕಂಡು ಬಂದು, ಅದು ಜಪಾನ್‌ನ ಹಿರೋಶಿಮಾ, ನಾಗಾಸಾಕಿ ಮೇಲೆ ಅಣು ಬಾಂಬ್‌ ಹಾಕುವಲ್ಲಿಗೆ ಯುದ್ಧ ನಿಂತಿತ್ತು. ಹೀಗಾಗಿ ಇತಿಹಾಸದಲ್ಲಿ ಅಮೆರಿಕ ಯುದ್ಧ ಮತ್ತು ಅಲ್ಲಿನ ಆಂತರಿಕ ಸಂಘರ್ಷ ನಿವಾರಿಸುವ ಸಂಬಂಧ ಕಾಲಿಟ್ಟ ದೇಶಗಳ್ಯಾವುವು? ಅಲ್ಲಿ ಈಗ ಪರಿಸ್ಥಿತಿ ಹೇಗಿದೆ ಎಂಬುದರ ಒಂದು ನೋಟ ಇಲ್ಲಿದೆ…

ಅಫ್ಘಾನಿಸ್ಥಾನ :

ಅಫ್ಘಾನಿಸ್ಥಾನದ ಮೇಲೆ ಅಮೆರಿಕ ಕಾಲಿಟ್ಟಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. 2001ರ ಸೆಪ್ಟಂಬರ್‌ 11ರಂದು ಅಮೆರಿಕದ ವರ್ಲ್ಡ್ ಟ್ರೇಡ್‌ ಸೆಂಟರ್‌ ಮೇಲೆ ಅಲ್‌ಕಾಯಿದಾ ಉಗ್ರರು ದಾಳಿ ಮಾಡಿದ ಬಳಿಕ, ಈ ಉಗ್ರರು ಅಫ್ಘಾನಿಸ್ಥಾನದಲ್ಲಿ ಬೀಡುಬಿಟ್ಟಿರುವ ಸುದ್ದಿ ತಿಳಿದ ಅಮೆರಿಕ ಸೇಡು ತೀರಿಸಿಕೊಳ್ಳುವ ಸಲುವಾಗಿ ದಾಳಿ ಮಾಡುತ್ತದೆ. ವಿಚಿತ್ರವೆಂದರೆ, 2001ರಲ್ಲಿ ಆರಂಭಗೊಂಡ ಈ ಸೇಡು ತೀರಿಸಿಕೊಳ್ಳುವ ಪ್ರಯತ್ನ 2021ರ ವರೆಗೂ ಮುಂದುವರಿದಿದೆ. ಈ 20 ವರ್ಷಗಳಲ್ಲಿ ಅಫ್ಘಾನಿಸ್ಥಾನದಲ್ಲಿ ಅಮೆರಿಕ ಮಾಡಿದ್ದೇನು ಎಂಬ ಬಗ್ಗೆ ಇನ್ನೂ ಪ್ರಶ್ನೆಗಳಿವೆ. ಇತ್ತೀಚೆಗಷ್ಟೇ ಅಫ್ಘಾನ್‌ನಿಂದ ಸೇನೆ ವಾಪಸ್‌ ಕರೆಸಿಕೊಳ್ಳುವ ಸಂದರ್ಭದಲ್ಲಿ ಅಮೆ ರಿಕ ಅಧ್ಯಕ್ಷ ಜೋ ಬೈಡೆನ್‌ ಅವರು, ನಾವು ಅಲ್ಲಿಗೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಕಾಲಿಟ್ಟಿದ್ದು, ದೇಶ ಕಟ್ಟಲು ಅಲ್ಲ ಎಂಬ ಮಾತುಗಳನ್ನಾಡಿದ್ದಾರೆ. ಅಲ್ಲದೆ, ಈ 20 ವರ್ಷದಲ್ಲಿ ಅಫ್ಘಾನಿಸ್ಥಾನ ಯಾವುದೇ ರೀತಿಯಲ್ಲೂ ಅಭಿವೃದ್ಧಿ ಕಾಣಲಿಲ್ಲ. ಅಮೆರಿಕ ಸರಕಾರದ ಕೈಗೊಂಬೆಯಾಯಿತೇ ವಿನಾ ಬೇರೆ ರೀತಿಯಲ್ಲೂ ಜನ ಅಭಿವೃದ್ಧಿ ಕಾಣಲಿಲ್ಲ. ಕಡೆಗೆ ಗೆಲುವನ್ನೂ ಕಾಣದೇ ಸೋಲನ್ನೂ ಕಾಣದೇ ಅಮೆರಿಕ ಅಫ್ಘಾನ್‌ ನೆಲ ಬಿಟ್ಟು ಹೊರಟಿದೆ.

ಪಾಕಿಸ್ಥಾನ :

ಪಾಕಿಸ್ಥಾನದಲ್ಲಿ ಅಮೆರಿಕ ಸೇನೆ ನೇರವಾಗಿ ಕಾರ್ಯಾಚರಣೆ ಮಾಡದಿದ್ದರೂ, ವಿಶೇಷ ಕಾರ್ಯಾಚರಣೆ ಮೂಲಕ ಅಲ್‌ಕಾಯಿದಾ ನಾಯಕ ಒಸಾಮ ಬಿನ್‌ ಲಾಡೆನ್‌ನನ್ನು ಹತ್ಯೆಗೈಯಲಾಗಿತ್ತು. ಇಂದಿಗೂ ಅಫ್ಘಾನಿಸ್ಥಾನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕ, ಒಂದಿಲ್ಲೊಂದು ರೀತಿಯಲ್ಲಿ ಪಾಕಿಸ್ಥಾನವನ್ನು ಬಳಸಿಕೊಳ್ಳುತ್ತಲೇ ಇದೆ. ಜತೆಗೆ ಪಾಕಿಸ್ಥಾನವೂ ಉಗ್ರರಿಗೆ ಸಹಕಾರ ನೀಡುತ್ತ, ಅತ್ತ ಅಮೆರಿಕದಿಂದ ರಕ್ಷಣೆಗಾಗಿ ಹಣ ಪಡೆಯುತ್ತಾ ಡಬಲ್‌ ಗೇಮ್‌ ಮಾಡುತ್ತಲೇ ಬಂದಿದೆ.

ಇರಾಕ್‌ :

2003, ಆಗ ಇರಾಕ್‌ನಲ್ಲಿ ಸದ್ದಾಂ ಹುಸೇನ್‌ ಆಡಳಿತ. ಸರ್ವಾಧಿಕಾರಿಯಾಗಿದ್ದ ಈತ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾನೆ ಎಂಬ ಆರೋಪಗಳೂ ಇದ್ದವು. ಇದರ ಮಧ್ಯೆ ವರ್ಲ್x ಟ್ರೇಡ್‌ ಸೆಂಟರ್‌ ಮೇಲಿನ ದಾಳಿಯಿಂದಾಗಿ ಗಾಯಗೊಂಡ ಹುಲಿಯಂತಾಗಿದ್ದ ಅಮೆರಿಕ, ಉಗ್ರರಿಗೆ ಇರಾಕ್‌ ಕೂಡ ನೆರವು ನೀಡಿದೆ ಎಂಬ ಅನುಮಾನದ ಮೇಲೆ 2003ರ ಮಾರ್ಚ್‌ನಲ್ಲಿ ಯುದ್ಧ ಆರಂಭಿಸಿತು. ಅದೇ ವರ್ಷದ ಡಿಸೆಂಬರ್‌ನಲ್ಲಿ ಸದ್ದಾಂ ಹುಸೇನ್‌ನನ್ನು ಸೆರೆಹಿಡಿದ ಅಮೆರಿಕ ಮೂರು ವರ್ಷಗಳ ಬಳಿಕ ಆತನನ್ನು ಗಲ್ಲಿಗೇರಿಸಿತು. ವಿಚಿತ್ರವೆಂದರೆ, ಸದ್ದಾಂ ಹುಸೇನ್‌ ಆಡಳಿತದ ಬಗ್ಗೆ ಜಾಗತಿಕವಾಗಿ ಎಷ್ಟೇ ಪ್ರಶ್ನೆಗಳಿದ್ದರೂ ಆಂತರಿಕವಾಗಿ ಯಾವುದೇ ಘರ್ಷಣೆಗಳಿರಲಿಲ್ಲ. ಒಮ್ಮೆ ಸದ್ದಾಂ ಹುಸೇನ್‌ ಪತನವಾದ ಬಳಿಕ ದೇಶದಲ್ಲಿ ಭಾರೀ ಮಟ್ಟದ ಆಂತರಿಕ ಸಂಘರ್ಷ ಏರ್ಪಟ್ಟಿತು. ಶಿಯಾ ಮತ್ತು ಸುನ್ನಿ ಪಂಗಡದವರ ನಡುವೆ ದೊಡ್ಡ ಮಟ್ಟದ ಗದ್ದಲವಾಗಿ ಭಾರೀ ಸಾವು ನೋವುಗಳುಂಟಾದವು. ಬಳಿಕ ಐಸಿಸ್‌ ಉಗ್ರರು ಪ್ರವೇಶಿಸಿ, ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದರು. 2003ರಿಂದ ಆರಂಭವಾದ ಅಮೆರಿಕ ಸಂಘರ್ಷ, 2011ರ ವರೆಗೂ ಮುಂದುವರಿಯಿತು. ಕಡೆಗೆ 2011ರಲ್ಲಿ ಅಮೆರಿಕ ಇರಾಕ್‌ ಬಿಟ್ಟು ಹೊರನಡೆಯಿತು. ಆದರೆ ಇದುವರೆಗೂ ಇರಾಕ್‌ನಲ್ಲಿ ಸರಿಯಾದ ಸರಕಾರವಿಲ್ಲ, ಜನಜೀವನವೂ ಉತ್ತಮವಾಗಿಲ್ಲ.

ಲಿಬಿಯಾ :

ಮಹಮ್ಮರ್‌ ಗಡಾಫಿಯ ಹುಚ್ಚುತನದ ಆಳ್ವಿಕೆ, ದೇಶದಲ್ಲಿ ಹೆಚ್ಚಿನ ಆಂತರಿಕ ಸಂಘರ್ಷದ ಕಾರಣದಿಂದಾಗಿ 2011ರಲ್ಲಿ ಲಿಬಿಯಾದಲ್ಲಿ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ದಾಳಿ ಮಾಡಿದವು. ಈ ಬಗ್ಗೆ ವಿಶ್ವಸಂಸ್ಥೆಯಲ್ಲೇ ನಿರ್ಧಾರವಾಗಿತ್ತು. ಇಲ್ಲಿನ ಯುದ್ಧವೂ ಅದೇ ವರ್ಷದ ಮಾರ್ಚ್‌ನಲ್ಲಿ ಆರಂಭವಾಗಿ ಅಕ್ಟೋಬರ್‌ನಲ್ಲಿ ಗಡಾಫಿಯ ಅವಸಾನದೊಂದಿಗೆ ಮುಕ್ತಾಯವಾಯಿತು. ಈ ಯುದ್ಧದಲ್ಲಿ ನಾಗರಿಕರ ಅಪಾರ ಸಾವು ನೋವುಗಳಾದವು. ಇದಾದ ಬಳಿಕ ಲಿಬಿಯಾದಲ್ಲಿ ಮತ್ತಷ್ಟು ಆಂತರಿಕ ಸಂಘರ್ಷಗಳು ಉಂಟಾದವು. ಇಡೀ ದೇಶ ಅಜಾಗರಕತೆಗೆ ತುತ್ತಾಯಿತು. ಜಾಗತಿಕವಾಗಿ ಮತ್ತೆ ಅಮೆರಿಕ ಮತ್ತು ನ್ಯಾಟೋ ಪಡೆಗಳ ದಾಳಿ ಬಗ್ಗೆ ತೀವ್ರ ಆಕ್ಷೇಪ ಕೇಳಿಬಂದವು. ಲಿಬಿಯಾದಿಂದ ಲಕ್ಷಾಂತರ ಜನ ಬೇರೆ ದೇಶಗಳಿಗೆ ವಲಸೆ ಹೊರಟರು. ಜಾಗತಿಕವಾಗಿ ದೊಡ್ಡ ವಲಸೆ ಸಮಸ್ಯೆಯೇ ಉಂಟಾಯಿತು. ವಿಚಿತ್ರವೆಂದರೆ ಇಂದಿಗೂ ಲಿಬಿಯಾದ ಪರಿಸ್ಥಿತಿ ಸರಿಹೋಗಿಲ್ಲ.

ನಿಗರ್‌-ಮಾಲಿ :

ಎರಡೂ ದೇಶಗಳಲ್ಲಿ ಉಗ್ರ ನಿಗ್ರಹಕ್ಕೆಂದೇ ಅಮೆರಿಕ ತನ್ನ ಸೇನೆಯನ್ನು ಕಳುಹಿಸಿಕೊಟ್ಟಿದೆ. ಮೊದಲಿಗೆ ಮಾಲಿಯಲ್ಲಿ ಐಸಿಸ್‌ನ ಉಪಟಳ ಹೆಚ್ಚಾಗಿತ್ತು. ಇದರ ನಿಯಂತ್ರಣಕ್ಕೆ ಅಮೆರಿಕ ನೇತೃತ್ವದಲ್ಲಿ ವಿಶ್ವದ ಬೇರೆ ಬೇರೆ ದೇಶಗಳು ಸೇನೆಯೊಂದಿಗೆ ಬಂದಿದ್ದವು. ವಿಚಿತ್ರವೆಂದರೆ ಇಲ್ಲಿಗೆ ಉಗ್ರರು ನುಗ್ಗಿದ್ದೇ ಲಿಬಿಯಾದಿಂದ. ಇವರನ್ನು ಅಡಗಿಸುವ ಸಲುವಾಗಿ ಮಾಲಿ ದೇಶದ ಜತೆಗೆ ನಿಗರ್‌ ಕೂಡ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತು. ಈಗಲೂ ಇಲ್ಲಿ ಅಮೆರಿಕ ಸೇನೆ ಕಾರ್ಯಾಚರಣೆ ಮಾಡುತ್ತಿದೆ.

ಆಫ್ರಿಕಾ ದೇಶಗಳು  :

ಆಫ್ರಿಕಾ ದೇಶಗಳಲ್ಲಿ ಅಮೆರಿಕದ ಬಹಳಷ್ಟು ಯೋಧರು ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಂದರೆ, ಸೋಮಾಲಿಯಾ, ಸೆಂಟ್ರಲ್‌ ಆಫ್ರಿಕನ್‌ ದೇಶಗಳಲ್ಲಿ ಈ ಕಾರ್ಯಾಚರಣೆ ನಡೆಯುತ್ತಲೇ ಇದೆ. ಇವರ ಪ್ರಮುಖ ಉದ್ದೇಶವೇ ಐಸಿಸ್‌ ಉಗ್ರರನ್ನು ಹೊಡೆದು ಹಾಕುವುದು. ಆದರೆ ಇಂದಿಗೂ ಸಂಪೂರ್ಣವಾಗಿ ಭಯೋತ್ಪಾದಕರ ಅಟಾಟೋಪಕ್ಕೆ ಅಂತ್ಯ ಹಾಡಲು ಸಾಧ್ಯವಾಗಿಲ್ಲ.

ಸಿರಿಯಾ :

ಸಿರಿಯಾದಲ್ಲೂ ಆಂತರಿಕ ಸಂಘರ್ಷದೊಂದಿಗೇ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಪ್ರವೇಶ ಮಾಡಿದವು. ಸಿರಿಯಾ ಸರಕಾರ ಮತ್ತು ಸರಕಾರದ ವಿರುದ್ಧದ ದಂಗೆಕೋರರ ನಡುವೆ ಸಂಘರ್ಷ ಶುರುವಾಗಿತ್ತು. ಇದನ್ನೇ ಬಳಸಿಕೊಂಡ ಅಮೆರಿಕ 2011ರಲ್ಲಿ ದಂಗೆ ಕೋರರಿಗೆ ಶಸ್ತ್ರಾಸ್ತ್ರ, ತರಬೇತಿ ನೀಡಲು ಶುರು ಮಾಡಿತು. 2014ರಲ್ಲಿ 15 ಸಾವಿರ ದಂಗೆಕೋರರನ್ನು ಸಿದ್ಧ ಮಾಡುವ ಗುರಿ ಇರಿಸಿಕೊಂಡಿದ್ದ ಅಮೆರಿಕಕ್ಕೆ ಇದು ಸಾಧ್ಯವಾಗಲೇ ಇಲ್ಲ. ಅತ್ತ ಸಿರಿಯಾ ಅಧ್ಯಕ್ಷ ಬಷರ್‌ ಅಲ್‌ ಅಸ್ಸಾದ್‌ಗೆ ಐಸಿಸ್‌ನ ಬೆಂಬಲವೂ ಸಿಕ್ಕಿತು. ಇದರ ಮಧ್ಯೆ 2014ರಲ್ಲಿ ಒಬಾಮಾ ಆಡಳಿತವು ಬಹ್ರೈನ್‌, ಜೋರ್ಡಾನ್‌, ಕತಾರ್‌, ಸೌದಿ ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೈಟ್ಸ್‌ನ ಬೆಂಬಲದೊಂದಿಗೆ ಐಸಿಸ್‌ ಇದ್ದ ಸ್ಥಳಗಳ ಮೇಲೆ ದಾಳಿ ಶುರು ಮಾಡಿತು. ಅಷ್ಟೇ ಅಲ್ಲ, 2017ರಲ್ಲಿ ಸಿರಿಯಾದ ಪಡೆಗಳನ್ನೂ ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿತು. ಈಗಲೂ ಸಿರಿಯಾದಲ್ಲಿ ಅಮೆರಿಕದ ಸೇನೆ ಇದ್ದು, ಆಗಾಗ ಸಂಘರ್ಷಗಳು ನಡೆಯುತ್ತಲೇ ಇವೆ. ಸಿರಿಯಾ ಸರಕಾರಕ್ಕೆ ರಷ್ಯಾ ನೇರವಾಗಿಯೇ ಬೆಂಬಲ ನೀಡುತ್ತಿದೆ. ವಿಚಿತ್ರವೆಂದರೆ ಸಿರಿಯಾದ ಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಒಂದು ಕಡೆ ಐಸಿಸ್‌ ಉಗ್ರರು, ಮತ್ತೂಂದು ಕಡೆ ಆಂತರಿಕ ಸಂಘರ್ಷಗಳು ದೇಶವನ್ನು ಬಾಧಿಸುತ್ತಿವೆ.

ಟಾಪ್ ನ್ಯೂಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.