Udayavni Special

ಹಾಡು ಕೇಳಬೇಕು ಎಂದವರು ಹೊರಟೇಬಿಟ್ಟರು..


Team Udayavani, Jun 6, 2021, 1:12 PM IST

anivasi kannadiga

ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಸಮಯ. ಓದಿಗಿಂತ ಸಾಂಸ್ಕೃತಿಕ ಕಾರ್ಯಕ್ರಮ, ಯುವತಿ ಮಂಡಲ, ಸಂಗೀತ, ಕಸೂತಿ, ಪೇಂಟಿಂಗ್‌ ಅಂದುಕೊಂಡೆ ಓಡಾಡುತ್ತಿದ್ದೆ. ಅಪ್ಪ ಯಾವತ್ತೂ ಈ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಲಿಲ್ಲ. ಆದರೂ ಅಮ್ಮ ಮಾತ್ರ ಸದಾ ಓದು ಓದು ಎಂಬ ಮಂತ್ರವನ್ನು ನನ್ನ ಮುಂದೆ ಜಪಿಸುತ್ತಿದ್ದಳು.

ಮನೆಗೆ ಬಂದ ಅತಿಥಿ ಬಂಧುಬಳಗದವರು ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರೆ, ಅಮ್ಮ ಅವರ ಮುಂದೆಯೇ ಓದೋದು ಒಂದು ಬಿಟ್ಟು ಮತ್ತೆಲ್ಲ ಮಾಡ್ತಾಳೆ. ಪಠ್ಯ ಪುಸ್ತಕ ಧೂಳು ತಿಂತಿವೆ, ಪರೀಕ್ಷೆಯಲ್ಲಿ ಏನು ಬರೀತಾಳ್ಳೋ ದೇವರಿಗೆ ಗೊತ್ತು ! ಎಂದು ದೂರುತ್ತಿದ್ದಳು.

ಅಷ್ಟೊತ್ತು ನನ್ನ ಕೊಂಡಾಡಿದ ಅದೇ ಬಂಧು ಬಳಗ, ಸ್ನೇಹಿತರು, “ಅಯ್ಯೋ ಓದಬೇಕು ಅಲ್ವಾ? ಇದೆಲ್ಲ ಸ್ವಲ್ಪ ದಿನ ಚಂದ. ಮುಂದೆ ನೌಕರಿ ಮಾಡಬೇಕೆಂದರೆ ಮಾಕÕ…ì ಕಾರ್ಡ್‌ ಮೇಲೆ ನಾಲ್ಕು ಮಾಕÕ…ì ಇರಬೇಕಲ್ವಾ’ ಎಂದು ಹೇಳಿ ತಮ್ಮ ಮಾತಿನ ಧಾಟಿ ಬದಲಿಸುತ್ತಿದ್ದರು. ನಾನು ಅದ್ಯಾವ ಮಾತನ್ನು ಕೇಳುತ್ತಿರಲಿಲ್ಲ. ಅಮ್ಮ ಹೇಳ್ಳೋದು ನಿಲ್ಲಿಸುತ್ತಿರಲಿಲ್ಲ.

ಇಂತಹ ಸಂದರ್ಭದÇÉೇ ನಾನು ಸುನೀತಾ ಜಾಧವ್‌ ಅವರನ್ನ  ಭೇಟಿಯಾಗಿದ್ದು. ಯುವ ಸಂಘಟನೆಯೊಂದರ ಪ್ರಚಾರಕಿಯಾಗಿದ್ದ ಅವರು ಕೆಲವು ಭೇಟಿಗಳ ಅನಂತರ ನಮ್ಮ ಮನೆಗೆ ಬಂದಿದ್ದರು. ಅಮ್ಮನ ಎದುರು ನಿಮ್ಮ ಮಗಳ ನೋಡಿದ್ರ ನಂಗ ಭಾಳ ಖುಷಿ ಆಗ್ತದ ರೀ, ಎಷ್ಟು ಚಲೋ ಬೆಳಸೀರಿ ನೀವು ! ಅಂದು ಇನ್ನೇನೋ ಹೇಳ್ಳೋಕೆ ಮುಂಚೆಯೇ ಅಮ್ಮ ಅವಳ ಎಂದಿನ ಅಸಮಾಧಾನ ಹೊರಗೆ ಹಾಕಿದಳು.

ಅಭ್ಯಾಸ ಮಾಡಲ್ಲ, ಕಾಲೇಜ್‌ ಪುಸ್ತಕ ಮುಟ್ಟಲ್ಲ. ಬರೀ ಮರದಂಗಿ ಉಲನ್‌ ಸೂಜಿ ದಾರ ಅಂದು ದಿನ ಎಲ್ಲ ಕಳೀತಾಳೆ, ಅಂತೆಲ್ಲ ಒಂದೇ ಸಮನೆ ಹೇಳ್ಳೋಕೆ ಶುರು ಮಾಡಿದಳು.

ಅಮ್ಮನ ಮಾತನ್ನು ಸಮಾಧಾನವಾಗಿ ಕೇಳಿದ ಅವರು, ನನಗ್‌ ನಿಮ್ಮ ಮಾತು ಅರ್ಥ ಆಗ್ತದ. ರೀ ನಾನು ಕಾಲೇಜು ಪ್ರೊಫೆಸರ್‌ ಇದ್ದೀನಿ. ಓದಬೇಕು, ಬರೀಬೇಕು ಅದನ್ನು ಎÇÉಾರು ಮಾಡ್ತಾರ. ಆದರೆ ಇಂಥ ವಿದ್ಯೆ ಎÇÉಾರಿಗೂ ಒಲಿಯಾಂಗಿಲ್ಲ ರೀ. ಅಕಿ ಹಿಂಗ ಹಾಡ ಹೇಳ್ಕೊàತ, ಮದರಂಗಿ ಹಾಕೋತ, ರಂಗೋಲಿ, ಕಸೂತಿ ಮಾಡ್ಕೊಂಡ್‌ ಇರ್ಲಿ ಬಿಡ್ರಿ. ಮುಂದ ಯಾವತ್ತೂ ಅಕಿಗೇ ಬೇಜಾರು ಅನ್ನೋದು ಬರುದಿಲ್ಲ. ಯಾಕಂದರ ಯಾರ್‌ ಇಲ್ಲ ಅಂದ್ರೂ ಇವ ಆಕಿ ಜೋಡಿ ಇರ್ತಾವು ನೋಡ್ರಿ.. ಅಂದು ಅಮ್ಮನಿಗೆ ಸಮಾಧಾನ ಮಾಡಿದ್ದರು.

ಇದು ಅಮ್ಮನಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ ನನಗೆ ಮಾತ್ರ ಮನಸಲ್ಲಿ ಉಳಿದು ಹೋಯಿತು. ಆಮೇಲೆ ಒಂದೆರಡು ಬಾರಿ ನಾವು ಭೇಟಿ ಆಗಿದ್ದು. ಆದರೂ  ಅವರು ಹೇಳಿದ ಆ ಮಾತುಗಳನ್ನು ಅದೆಷ್ಟು ಸಲ ಮನನ ಮಾಡಿಕೊಂಡಿದ್ದೇನೋ ಏನೋ. ಈ ಹವ್ಯಾಸಗಳಿಂದಾಗಿ ನನ್ನ ಬದುಕು ಎಷ್ಟು ಸುಂದರ ಅನಿಸಿದಾಗೆಲ್ಲ ಸುನೀತಕ್ಕನ ಆ ಮಾತುಗಳು ಮನಃಪಟಲದ ಮೇಲೆ ಮೂಡಿ ಮಿಂಚುತ್ತಿತ್ತು.

2020ರ ವರ್ಷ ಪೂರ್ತಿ ಮನೆಯಲ್ಲಿರಬೇಕಾದ ಅನಿವಾರ್ಯತೆ ತಂದಿಟ್ಟ ಈ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ನನಗೆ ಈ ಹವ್ಯಾಸಗಳಿಂದಾಗಿಯೇ ಒಮ್ಮೆಯೂ “ಛೇ ಬೇಜಾರು, ಸಮಯ ಹೇಗೆ ಕಳೆಯಲಿ’ ಎಂದು ಅನಿಸಿದಾಗ ಅಂದು ಸುನೀತಕ್ಕ ಹೇಳಿದ ಮಾತುಗಳು ಮತ್ತೆ ಮತ್ತೆ ನೆನಪಾದವು.

ಹಲವು ವರ್ಷಗಳ ಅನಂತರ ನನಗೆ ಬೆಲ್ಫಾÓr…ನಲ್ಲಿ ನೆಲೆಸಿದ  ಹೊರದೇಶದ ಕಲಾವಿದರ ಸೆಮಿನಾರ್‌ ಒಂದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ಇದ್ದ ಆ ಕಾರ್ಯಕ್ರಮಕ್ಕೆ ನೂರಾರು ಕಲಾವಿದರು ಆಗಮಿಸಿದ್ದರು. ಭಾಷಣಗಳ ಮೇಲೆ ಭಾಷಣಗಳು ನಡೆಯುತ್ತಿದ್ದವು. ನಾನು ಸುಮ್ಮನೆ ಒಂದು ಹಸುರು ಬಣ್ಣದ ಹಾಳೆಯಲ್ಲಿ ಕಪ್ಪು ಶಾಯಿ ಪೆನ್‌ನಿಂದ ವರ್ಲಿ ಚಿತ್ತಾರಗಳನ್ನು ಬಿಡಿಸುತ್ತ ಅವರ ಮಾತುಗಳನ್ನ ಕೇಳುತ್ತಿದೆ. ಊಟದ ವಿರಾಮ ಇದ್ದಾಗ ಭಾರತೀಯರಂತೆ ಕಾಣುತ್ತಿದ್ದ ಒಬ್ಬ ಮಹಿಳೆ ಬಂದು ನನ್ನನ್ನು ಮಾತನಾಡಿಸಿದರು. “ನೀನು ಮಹಾರಾಷ್ಟ್ರದವಳ ?’ ಎಂದರು. ನಾನು ಅಲ್ಲ ಕನ್ನಡತಿ ಎಂದೆ. ನೀ ಬಿಡಿಸುತ್ತಿರುವ ಆ ಚಿತ್ರ ಮಹಾರಾಷ್ಟ್ರ ಮೂಲದ್ದು, ನಾ ಇಲ್ಲಿಗೆ ಬಂದು 18 ವರ್ಷ ಆದರೂ ಒಮ್ಮೆಯೂ ಯಾರು ಇದನ್ನು ಇಲ್ಲಿ ಪ್ರದರ್ಶಿಸಿದ್ದು ನೋಡಿಲ್ಲ, ನನಗೆ ತುಂಬಾ ಖುಷಿ ಆಯಿತು ಅಂದರು.

ಒಂದು ಸರಳ ಚಿತ್ರಕಲೆ ನೋಡಿ ಅಷ್ಟು ಭಾವುಕರಾಗುವ ಅಗತ್ಯವಿದೆಯೇ ಎಂದು ಹಲವರಿಗೆ ಅನಿಸಬಹುದು. ಇದೊಂಥರಾ ವಿದೇಶದ ನೆಲದಲ್ಲಿ ನಮ್ಮ ಇಷ್ಟದ ಹಾಡು ಸ್ಪೀಕರ್‌ನಲ್ಲಿ ಜೋರಾಗಿ ಕೇಳಿಸುತ್ತಿದ್ದರೆ  ಪಿಜ್ಜಾ, ಫ್ರೈ ಮೆನುವಿನಲ್ಲಿ ಬರಗೆಟ್ಟ ಕಂಗಳಿಗೆ ಬೆಣ್ಣೆ ದೋಸೆ, ಇಡ್ಲಿ ವಡೆ ಕಾಣಿಸಿದರೆ, ಕೆಂಪು ಇಟ್ಟಿಗೆಯ ಒಂದೇ ನಮೂನೆಯ ವಿಕ್ಟೋರಿಯನ್‌ ಶೈಲಿ ಮನೆಗಳ ಸಾಲಿನಲ್ಲಿ ಒಂದು ಮನೆಯ ಮುಂದೆ ತೋರಣವೋ, ರಂಗೋಲಿಯೂ ಕಂಡರೆ ಆಗುವ ಖುಷಿ , ಹಿತವೇ ಅವರಿಗೂ ವರ್ಲಿ ಕಲೆಯನ್ನು ನೋಡಿ ಆಗಿತ್ತು.

ಅವರ ಹೆಸರು ವಸುಂಧರಾ ಕಾಂಬ್ಳೆ. ಮುಂಬಯಿ ಮೂಲದವರು. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಹಲವಾರು ವರ್ಷಗಳ ಕಾಲ ಇತಿಹಾಸ ಪಾಠ ಮಾಡುತ್ತಿದ್ದರು. ಕಾರಣಾಂತರಗಳಿಂದ 1995ರಲ್ಲಿ ಬೆಲ್ಫಾ… ಗೆ ಬಂದು ನೆಲೆಸಿದರು.

ಸ್ಥಳೀಯ ರಾಜಕೀಯದಲ್ಲಿ  ತೊಡಗಿಸಿಕೊಂಡಿದ್ದ ಅವರು 6 ವರ್ಷಗಳ ಕಾಲ ಸ್ಥಳೀಯ ಪಕ್ಷವೊಂದರ ಕೌನ್ಸಿಲರ್‌ ಕೂಡ ಆಗಿದ್ದರು. ರೇಸಿಸಂ ಅನ್ನು ತೀವ್ರವಾಗಿ ಖಂಡಿಸುತ್ತಾ ತಮಗೆ ಸಾಧ್ಯವಾದಾಗಲೆಲ್ಲ ಈ ನಾಡಿಗೆ ವಲಸೆ ಬಂದ ಹಲವು ದೇಶಗಳ ಜನರಿಗೆ ಅವರು ಸಹಾಯ ಮಾಡುತ್ತಿದ್ದರು. ಇಷ್ಟಲ್ಲದೆ ಹೋಲಿಗೆ, ಕಸೂತಿ, ಸಮಾಜ ಸೇವೆ… ಸದಾ ಕಾಲ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರುವ ಅವರನ್ನು ನೋಡಿದರೆ ಬಿಡುವಿರದ ದಣಿವಾಗದ ಜೀವನ್ಮುಖೀ ಇವರು ಅನಿಸುತ್ತಿತ್ತು.

ಒಂದಷ್ಟು ಹಿರಿಯ ಜೀವಗಳನ್ನು ಸೇರಿಸಿ intercultural friendship club ಎಂದು ಶುರು ಮಾಡಿ ಹಲವಾರು ಕಲೆ, ಸಂಗೀತ, ಕರಕುಶಲ ತರಗತಿಗಳನ್ನು ನಡೆಸುತ್ತ ಅದರ ಮೂಲಕ ನನಗೆ ಹಲವಾರು ವರ್ಲಿ ಕಲೆಯ ವರ್ಕಶಾಪ್‌ ಮಾಡಲು ಅವಕಾಶ ಮಾಡಿ ಕೊಟ್ಟರು. ತರಗತಿ ಉದ್ದಕ್ಕೂ ಇದು ನನ್ನ ಊರಿನ ಕಲೆ ಅಂತ ಖುಷಿಯಿಂದ ಹೇಳುತ್ತಲೇ ಇದ್ದರು. ಮನಸು ಬಂದಾಗ ಬುದ್ಧಿ ಮಾತು ಹೇಳುತ್ತಿದ್ದರು, ಜನರನ್ನು ಒಮ್ಮೆಲೇ ನಂಬಬೇಡ, ಮನಸಿನ ನೋವುಗಳನ್ನು ಯಾರ ಮುಂದೆಯೂ ಹರವಬೇಡ..

ವಸುಂಧರಾ ಅವರು ಹೇಳುವ ಮಾತುಗಳು ನನಗೆ ಸುನೀತಕ್ಕನ  ನೆನಪಿಸುತ್ತಿತ್ತು. ಈ ಪ್ಯಾಂಡಮಿಕ್‌ ಸಮಯದಲ್ಲಿ ನಾನು ವಸುಂಧರಾ ಅವರ ಪೋÓr…ಗಳಿಗೆ ಲೈಕ್‌ ಹಾಕುವುದನ್ನು ಬಿಟ್ಟರೆ ಒಮ್ಮೆಯೂ ಮಾತನಾಡುವ ಪ್ರಯತ್ನ ಮಾಡಲೇ ಇಲ್ಲ. ಕಳೆದ ವಾರ ಯಾವುದೋ ವಾಲೆಂಟಿಯರ್‌ ಗ್ರೂಪಿನೊಂದಿಗೆ ಶ್ರಮದಾನ ಮಾಡಿದ್ದರ ಬಗ್ಗೆ ಪೋÓr… ಹಾಕಿದ್ದರು. ಅದಾದ ಎರಡೇ ದಿನಕ್ಕೆ ಇಹಲೋಕದ ಯಾತ್ರೆ ಮುಗಿಸುತ್ತಾರೆ ಎಂಬ ಸುಳಿವು ಯಾರಿಗೂ ಇರಲಿಲ್ಲವೇನೋ.

ಇತ್ತ ತಂಗಿ ಹುಬ್ಬಳ್ಳಿಯಿಂದ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಚಿತ್ರ ಕಳಿಸಿದ್ದಳು ಸುನೀತಕ್ಕ ಕೂಡ ಇದೇ ವಾರ ಹೃದಯಾಘಾತದಿಂದ ತೀರಿಕೊಂಡರು. ಮನಸಿಗೆ ಆದ ನೋವು, ಏನೋ ಕಳೆದು ಕೊಂಡ ಭಾವ.. ದುಃಖವನ್ನೆಲ್ಲಾ, ಯಾತನೆ ಅನ್ನಲಾ ಗೊತ್ತಾಗುತ್ತಿಲ್ಲ. ಅವರಿಬ್ಬರಿಗೂ ವಿದಾಯ ಹೇಳುವುದರ ಹೊರತಾಗಿ ಇನ್ನೇನೂ ಮಾಡಲಾರೆ…

ಒಂದು ಸರಳ ಚಿತ್ರಕಲೆ ನೋಡಿ ಅಷ್ಟು ಭಾವುಕರಾಗುವ ಅಗತ್ಯವಿದೆಯೇ ಎಂದು ಹಲವರಿಗೆ ಅನಿಸಬಹುದು. ಇದೊಂಥರಾ ವಿದೇಶದ ನೆಲದಲ್ಲಿ ನಮ್ಮ ಇಷ್ಟದ ಹಾಡು ಸ್ಪೀಕರ್‌ನಲ್ಲಿ ಜೋರಾಗಿ ಕೇಳಿಸುತ್ತಿದ್ದರೆ  ಪಿಜ್ಜಾ, ಫ್ರೈ ಮೆನುವಿನಲ್ಲಿ ಬರಗೆಟ್ಟ ಕಂಗಳಿಗೆ ಬೆಣ್ಣೆ ದೋಸೆ, ಇಡ್ಲಿ ವಡೆ ಕಾಣಿಸಿದರೆ, ಕೆಂಪು ಇಟ್ಟಿಗೆಯ ಒಂದೇ ನಮೂನೆಯ ವಿಕ್ಟೋರಿಯನ್‌ ಶೈಲಿ ಮನೆಗಳ ಸಾಲಿನಲ್ಲಿ ಒಂದು ಮನೆಯ ಮುಂದೆ ತೋರಣವೋ, ರಂಗೋಲಿಯೂ ಕಂಡರೆ ಆಗುವ ಖುಷಿ , ಹಿತವೇ ಅವರಿಗೂ ವರ್ಲಿ ಕಲೆಯನ್ನು ನೋಡಿ ಆಗಿತ್ತು.

ಅಮಿತಾ ರವಿಕಿರಣ,

ಬೆಲ್‌ಫಾಸ್ಟ್‌,

ನಾರ್ದರ್ನ್ ಐರೆಲಂಡ್‌

ಟಾಪ್ ನ್ಯೂಸ್

ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?

ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?

Untitled-4

ಬಿಎಸ್‌ವೈ ಅಧಿಕಾರದಿಂದ ಬೇಗ ತೊಲಗಿದಷ್ಟು ರಾಜ್ಯಕ್ಕೆ ಅನುಕೂಲ: ಸಿದ್ದರಾಮಯ್ಯ

012

ನಿಮಗೆ ಸಿದ್ದರಾಮಯ್ಯರ ಭಯ ಕಾಡುತ್ತಿದೆಯೇ ? ಡಿಕೆಶಿ ವಿರುದ್ಧ ಬಿಜೆಪಿ ವಾಗ್ದಾಳಿ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

ರಾಮಕೃಷ್ಣರ ಮಾತುಗಳೇ ಯುವಜನತೆಗೆ ದಾರಿದೀಪ…

ಸ್ವಾಸ್ಥ್ಯಕ್ಕಾಗಿ ಯೋಗ : ಮನ,ದೇಹ, ಆತ್ಮಗಳ ಶುದ್ಧೀಕರಣ ಪ್ರಯತ್ನ

ಸ್ವಾಸ್ಥ್ಯಕ್ಕಾಗಿ ಯೋಗ : ಮನ,ದೇಹ, ಆತ್ಮಗಳ ಶುದ್ಧೀಕರಣ ಪ್ರಯತ್ನ

ನಿತ್ಯ ಶಂಖನಾದದಿಂದ ಪ್ರಾಣಾಯಾಮದ ಲಾಭ

ನಿತ್ಯ ಶಂಖನಾದದಿಂದ ಪ್ರಾಣಾಯಾಮದ ಲಾಭ

ಆಸನಗಳೊಂದಿಗೆ ಯೋಗದ ಮಹತ್ವ ಅರಿಯೋಣ

ಆಸನಗಳೊಂದಿಗೆ ಯೋಗದ ಮಹತ್ವ ಅರಿಯೋಣ

ಗ್ರೀಷ್ಮದಲ್ಲಿ ಹೇಮಂತ: ಋತುಗಳೇ ಅದಲು ಬದಲು!

ಗ್ರೀಷ್ಮದಲ್ಲಿ ಹೇಮಂತ: ಋತುಗಳೇ ಅದಲು ಬದಲು!

MUST WATCH

udayavani youtube

LOCKDOWN ರಜೆಯ ಸದುಪಯೋಗ SSLC ವಿದ್ಯಾರ್ಥಿನಿಯಿಂದ ಯೋಗ ಪಾಠ

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

ಹೊಸ ಸೇರ್ಪಡೆ

Vaccination campaign

ಇಂದಿನಿಂದ ವಿಶೇಷ ಲಸಿಕಾ ಅಭಿಯಾನ

ಅದೊಂದು  ಕಿರು ಪ್ರವಾಸ

ಅದೊಂದು  ಕಿರು ಪ್ರವಾಸ

covid vaccination

ನಾಳೆಯಿಂದ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಲಸಿಕೆ: ಡಿಸಿಎಂ

yoga day

ಯೋಗ ಮಾರ್ಗದಲ್ಲಿ ಸಾಧನೆಯ ಹಾದಿ

yoga day

ಯೋಗ ಮಾರ್ಗದಲ್ಲಿ ಸಾಧನೆಯ ಹಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.