ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಸಾಮಾನ್ಯವಾಗಿ 40 ವರ್ಷದ ಅನಂತರ ಅಥವಾ 45-50 ವರ್ಷ ವಯಸ್ಸಿನ ಮಹಿಳೆಯರು ಋತುಬಂಧಕ್ಕೊಳಗಾಗುತ್ತಾರೆ.

Team Udayavani, Jan 24, 2022, 2:44 PM IST

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಯಿಲೆಗಳು ಆರಂಭವಾಗುವುದೇ 40 ವರ್ಷದ ಅನಂತರ. ಅದರಲ್ಲಿಯೂ ಋತುಬಂಧದ ಬಳಿಕ ಹಲವಾರು ರೀತಿಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಅದರಲ್ಲಿ ಮುಖ್ಯವಾಗಿ ಬ್ರೈನ್‌ ಫಾಗ್‌ ಕೂಡ ಒಂದು. ಇದು ಆಲೋಚನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ರೋಗ ಲಕ್ಷಣಗಳನ್ನು ಹೊಂದಿರುತ್ತದೆ. ಕೆಲವೊಮ್ಮೆ ನಿಮ್ಮ ಅರಿವಿಗೆ ಬಾರದಂತೆ ಮೆದುಳಿನ ನಿಷ್ಕ್ರಿಯತೆ ಉಂಟಾಗುತ್ತದೆ. ಅಂದರೆ ಯಾವುದೇ ಕೆಲಸವನ್ನು ಏಕಾಗ್ರತೆಯಿಂದ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಹಿಂದಿನವರು ಇದನ್ನು “ಮಂಕು ಕವಿಯುವುದು’ ಎನ್ನುತ್ತಿದ್ದರು. ಮಧ್ಯ ವಯಸ್ಕರನ್ನು ಈ ರೀತಿಯ ಸಮಸ್ಯೆ ಕಾಡುವುದು ಸರ್ವೇ ಸಾಮಾನ್ಯವಾದರೂ ಅದಕ್ಕೆ ಸೂಕ್ತವಾದ ಚಿಕಿತ್ಸೆ ಮತ್ತು ಔಷಧ ತೆಗೆದುಕೊಳ್ಳುವುದು ಅತ್ಯಗತ್ಯ.

ಏನಿದು ಬ್ರೈನ್‌ ಫಾಗ್‌?
ದೈನಂದಿನ ಜೀವನದಲ್ಲಿ ನಾವು ಅಂದುಕೊಂಡ ಕೆಲಸಗಳು ಅಥವಾ ಇನ್ನಾವುದೋ ಆಲೋಚನೆಗಳನ್ನು ಮರೆತು ಬೇರಾವುದೋ ಅನಗತ್ಯ ವಿಷಯಗಳ ಬಗ್ಗೆ ಚಿಂತಿಸಲು ಶುರು ಮಾಡಿದರೆ ಮತ್ತು ನಮ್ಮ ಈ ವಿಚಿತ್ರ ನಡವಳಿಕೆ ಇತರರಿಗೆ ಒಂದಿಷ್ಟು ಅಚ್ಚರಿ ಎನಿಸಿದರೆ ಅದನ್ನೇ “ಮಂಕು ಕವಿಯುವುದು’ ಅಥವಾ ವೈದ್ಯಕೀಯ ಭಾಷೆಯಲ್ಲಿ “ಬ್ರೈನ್‌ ಫಾಗ್‌’ ಎಂದು ಕರೆಯುತ್ತಾರೆ. ಆಸ್ಟ್ರೇಲಿಯಾದ ಮೊನಾಶ್‌ ವಿವಿಯ ಸಂಶೋಧಕರು ಈ ಬಗ್ಗೆ ಕೆಲವು ಸಂಶೋಧನೆಗಳನ್ನು ನಡೆಸಿದ್ದು ಅವರ ಪ್ರಕಾರ ಋತುಬಂಧದ ಸಮಯದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಋತುಬಂಧ ಎಂದರೆ ಮೆನೋಪಾಸ್‌ ಅಥವಾ ಪಿರಿಯಡ್ಸ್‌ ನಿಲ್ಲುವುದು. ಸಾಮಾನ್ಯವಾಗಿ 40 ವರ್ಷದ ಅನಂತರ ಅಥವಾ 45-50 ವರ್ಷ ವಯಸ್ಸಿನ ಮಹಿಳೆಯರು ಋತುಬಂಧಕ್ಕೊಳಗಾಗುತ್ತಾರೆ. ಋತುಬಂಧದ ಅನಂತರ ಸಂತಾನೋತ್ಪತ್ತಿ ಪ್ರಕ್ರಿಯೆ ನಿಲ್ಲುತ್ತದೆ. ಅನಂತರ ಕ್ರಮೇಣ ಸ್ತ್ರೀಯರಲ್ಲಿರುವ ಹಾರ್ಮೋನ್‌ಗಳು ಕಡಿಮೆಯಾಗುತ್ತದೆ. ಇದರಿಂದಾಗಿ ಅವರಲ್ಲಿ ಮಾನಸಿಕ ಬದಲಾವಣೆ ಸಾಧ್ಯತೆ ಅಧಿಕ ಎನ್ನುತ್ತಾರೆ ತಜ್ಞರು.

ಜ್ಞಾಪಕ ಶಕ್ತಿಯ ಕೊರತೆ
ಸಂಶೋಧನೆಯ ಪ್ರಕಾರ ಶೇ. 60ರಷ್ಟು ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಜ್ಞಾಪಕ ಶಕ್ತಿಯ ಕೊರತೆ ಉಂಟಾದರೆ ಇನ್ನು ಕೆಲವರಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಳ್ಳಬಹುದು. ಅವರ ಕಾರ್ಯ ಸಾಮರ್ಥ್ಯವನ್ನು ಕುಗ್ಗಿಸಲೂಬಹುದು. ಇದು ಬಹುದೊಡ್ಡ ಸಮಸ್ಯೆ ಅಲ್ಲದಿದ್ದರೂ ನಿರ್ಲಕ್ಷ್ಯ ಮಾಡಬಾರದು. ಈ ಎಲ್ಲ ಮಾನಸಿಕ ಬದಲಾವಣೆಗಳು ಬ್ರೈನ್‌ ಫಾಗ್‌ನ ಪಾರ್ಶ್ವ ಪರಿಣಾಮಗಳಾಗಿವೆ. ಆದರೆ ಋತುಬಂಧ ನೇರವಾಗಿ ಮೆದುಳಿನ ಮೇಲೆ ಪ್ರಭಾವ ಬೀರುವುದಿಲ್ಲ ಬದಲಾಗಿ ನಿದ್ರಾಹೀನತೆ, ಆತಂಕ, ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಇವೆಲ್ಲವೂ ನಿಮ್ಮ ಮೆದುಳನ್ನು ಮಂಕಾಗಿಸುತ್ತದೆ. ಇಂತಹ ಅನುಭವ ಪದೇ ಪದೆ ನಿಮ್ಮಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದರೆ ನೀವು ಅಗತ್ಯವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ. ನಿಮಗೆ ಮೊದಲೇ ಖನ್ನತೆಯ ಸಮಸ್ಯೆ ಇದ್ದರೆ ಹೆಚ್ಚು ಪ್ರಭಾವ ಬೀರುವ ಸಂಭವವಿರುತ್ತದೆ.

ಇದನ್ನೂ ಓದಿ:ಆಲಪ್ಪುಳ ಅವಳಿ ಕೊಲೆ ಪ್ರಕರಣ : ಪೊಲೀಸರಿಂದ ಇಬ್ಬರ ಬಂಧನ

 ನಿದ್ರೆ ಆವಶ್ಯಕ
ನೀವು ತುಂಬಾ ದಿನಗಳಿಂದ ನಿದ್ರೆಗೆಡುತ್ತಿದ್ದೀರಿ ಅಥವಾ ಸರಿಯಾಗಿ ನಿದ್ದೆ ಬರುತ್ತಿಲ್ಲ, ಮಧ್ಯೆ-ಮಧ್ಯೆ ನಿದ್ರೆ ಭಂಗವಾಗುತ್ತಿದ್ದಲ್ಲಿ ಸುಖನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮೆದುಳು ಮಂಕಾಗುತ್ತದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಿದ್ರೆ ಅತ್ಯವಶ್ಯಕ. ಮೆದುಳಿಗೆ ವಿಶ್ರಾಂತಿ ಅತ್ಯಗತ್ಯವಾಗಿದ್ದು ನಿದ್ರಾ ಸಮಯದಲ್ಲಿ ಮೆದುಳು ಸಹಜ ಸ್ಥಿತಿಗೆ ಮರಳುತ್ತದೆ ಮತ್ತು ಸಕ್ರಿಯಗೊಳ್ಳುತ್ತದೆ. ಹೀಗಾಗಲು ಅಗತ್ಯವಿರುವ ನ್ಯೂರಾನ್‌ಗಳು ತಯಾರಾಗಬೇಕಿದ್ದು ಇದಕ್ಕೆ ನಿದ್ರೆ ಆವಶ್ಯಕ. ಹಾಗಾಗಿ ನಿಮ್ಮ ಅಭ್ಯಾಸಗಳು ಅಥವಾ ಯಾವುದೇ ರೀತಿಯ ಚಟುವಟಿಕೆ ನಿಮ್ಮ ನಿದ್ರೆಗೆ ಭಂಗವಾಗುವ ರೀತಿಯಲ್ಲಿರಬಾರದು.

ಯುವಜನರ ಮೇಲೂ ಪರಿಣಾಮ
ಇತ್ತೀಚಿನ ದಿನಗಳಲ್ಲಿ ಇದು ವಿವಿಧ ವಯೋಮಾನದವರಲ್ಲಿಯೂ ಕಂಡು ಬರುತ್ತಿದೆ. ಅದಕ್ಕಿಂತ ಮಿಗಿಲಾಗಿ ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಈ ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಮನೋಶಾಸ್ತ್ರಜ್ಞರ ಪ್ರಕಾರ ಕೋವಿಡ್‌ನಿಂದಾಗಿ ಇದು ಚಿಕ್ಕ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಯುವಜನರ ಮೇಲೆ ಇದರ ಪರಿಣಾಮ ಗಂಭೀರವಾಗಿರಬಹುದು ಎಂಬುದು ಸಂಶೋ ಧನೆಗಳ ವೇಳೆ ಸಾಬೀತಾಗಿದೆ. ಇನ್ನು ಈ ರೀತಿಯ ಸಮಸ್ಯೆ ಮಹಿಳೆಯರಲ್ಲಿ ಹಲವು ಬಾರಿ ಕಂಡು ಬರುತ್ತದೆ. ಕೆಲವೊಮ್ಮೆ ಗರ್ಭಾವಸ್ಥೆಯ ಸಮಯದಲ್ಲಿ ಇಂತಹ ಸಮಸ್ಯೆ ಎದುರಾಗಬಹುದು.

ಕಾಳಜಿ ಹೇಗೆ?
-ಮಹಿಳೆಯರು ಯಾವುದೇ ಔಷಧಗಳನ್ನು ಅತಿಯಾಗಿ ಬಳಸಬಾರದು.
-ಡ್ರಗ್ಸ್‌, ಮದ್ಯ ಸೇವಿಸಬಾರದು.
– ಸೇವಿಸುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಹಣ್ಣು- ತರಕಾರಿಗಳಿರಬೇಕು.
-ಸಕಾರಾತ್ಮಕ ಚಿಂತನೆ ಮತ್ತು ಒಳ್ಳೆಯ ಸಂದೇಶ ನೀಡುವ ಪುಸ್ತಕ ಓದುವುದು.
-ಕೆಲವು ಔಷಧ ತೆಗೆದುಕೊಂಡ ಬಳಿಕ ಸ್ವಲ್ಪ ಸಮಯ ನಿದ್ರಿಸಬೇಕು. ನಿದ್ದೆಯನ್ನು ಬಲವಂತವಾಗಿ ತಡೆ ಹಿಡಿದ ಸಂದರ್ಭದಲ್ಲಿ ಖನ್ನತೆ ಉಂಟಾಗಬಹುದು.

- ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.