ಸ್ತನ ಕ್ಯಾನ್ಸರ್‌ ಮುಂಜಾಗರೂಕತೆ ಇರಲಿ


Team Udayavani, Oct 30, 2020, 5:45 AM IST

ಸ್ತನ ಕ್ಯಾನ್ಸರ್‌ ಮುಂಜಾಗರೂಕತೆ ಇರಲಿ

ಸಾಂದರ್ಭಿಕ ಚಿತ್ರ

ಸ್ತನ ಕ್ಯಾನ್ಸರ್‌ ಸಾಮಾನ್ಯ ಕಾಯಿಲೆ ಎಂಬಂತಾಗಿಬಿಟ್ಟಿದೆ. ಪ್ರತೀ 28ರಲ್ಲಿ ಓರ್ವ ಮಹಿಳೆ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಾಳೆ ಎನ್ನುತ್ತದೆ ಅಂಕಿ -ಅಂಶ. ಭಾರತೀಯ ಕ್ಯಾನ್ಸರ್‌ ಪೀಡಿತ ಮಹಿಳೆಯರಲ್ಲಿ ಶೇ.27ರಷ್ಟು ಮಂದಿಗೆ ಸ್ತನ ಕ್ಯಾನ್ಸರ್‌ ಇದೆ. ನಗರ ಪ್ರದೇಶದ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಮಾಡಿದರೆ ಸಂಭಾವ್ಯ ಅಪಾಯದಿಂದ ಪಾರಾಗಬಹುದು. ಆಗಾಗ ಸ್ಕ್ರೀನಿಂಗ್‌ ಟೆಸ್ಟ್ ಮಾಡಿಸುತ್ತಿರಬೇಕು.

ಸ್ತನ ಕ್ಯಾನ್ಸರ್‌ ಜಾಗೃತಿ
ಪ್ರತೀ ಅಕ್ಟೋಬರ್‌ನ 1ರಿಂದ 30ರ ವರೆಗೆ ವಿಶ್ವದ್ಯಾಂತ ಸ್ತನ ಕ್ಯಾನ್ಸರ್‌ ಜಾಗೃತಿ ತಿಂಗಳಾಗಿ ಆಚರಿಸುತ್ತಾ ಬಂದಿದ್ದು, ಈ ರೋಗದ ಕುರಿತು ಅರಿವು, ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಹಾಗೂ ಕಾಯಿಲೆ ಯಿಂದ ಹೊರಬರುವುದು ಹೇಗೆ ಎಂಬುದರ ಮಾಹಿತಿ ನೀಡಲಾಗುತ್ತದೆ.

ಸ್ತನ ಕ್ಯಾನ್ಸರ್‌ ಎಂದರೇನು?
ಸ್ತನ ಕೋಶಗಳ ಅಸಹಜ ಅಥವಾ ಅಸ್ವಾಭಾವಿಕ ಬೆಳವಣಿ ಗೆಯೇ ಸ್ತನ ಕ್ಯಾನ್ಸರ್‌. ಸ್ತನದಲ್ಲಿ ನೋವು ರಹಿತ ಗಡ್ಡೆ, ತೊಟ್ಟುಗಳಲ್ಲಿ ನೋವು, ತೊಟ್ಟುಗಳ ಗಾತ್ರ ಹಾಗೂ ಬಣ್ಣದಲ್ಲಿ ವ್ಯತ್ಯಾಸ, ಸ್ತನದಲ್ಲಿ ತುರಿಕೆ ಅಥವಾ ನವೆ ಇತ್ಯಾದಿ ಲಕ್ಷಣಗಳನ್ನು ಗುರುತಿಸಬಹುದು. ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿ ಇರುತ್ತವೆ.

ಕಾರಣ ಏನು?
ಇಂಥದ್ದೇ ಕಾರಣ ಎಂದು ನಿರ್ದಿಷ್ಟವಾಗಿ ಹೇಳಲಾಗದು. ಆದರೂ ಕುಟುಂಬದ ಹಿನ್ನೆಲೆಯಲ್ಲಿ ಈ ಕಾಯಿಲೆಯ ಬೇರಿದೆ ಎಂದು ಹೇಳಬಹುದು. ಅಲ್ಲದೆ, ಧೂಮಪಾನ, ಮದ್ಯಪಾನ, ಸ್ಥೂಲಕಾಯ, ದೇಹದ ಗ್ರಂಥಿಗಳ ಸ್ರವಿಸುವಿಕೆಯಲ್ಲಿ ಅಸಾಧಾರಣ ವ್ಯತ್ಯಾಸ, ಚಿಕ್ಕ ವಯಸ್ಸಿನಲ್ಲಿ ಋತುಮತಿಯಾಗುವುದು, ತಡವಾಗಿ ಮುಟ್ಟು ನಿಲ್ಲುವುದು ಮುಂತಾದ ಕಾರಣಗಳನ್ನು ಹೆಸರಿಸಬಹುದು.

ಪುನರಾವರ್ತನೆ ಹೇಗೆ?
ಒಂದು ಬಾರಿ ಈ ಕಾಯಿಲೆಗೆ ಒಳಗಾಗಿ ಗುಣವಾದ ಅನಂತರವೂ ಹೊಸ ಜಾಗದಲ್ಲಿ ಅಥವಾ ಅದೇ ಜಾಗದಲ್ಲಿ ಕ್ಯಾನ್ಸರ್‌ ಮರುಕಳಿಸ ಬಹುದಾದ ಸಾಧ್ಯತೆ ಇರುತ್ತದೆ. ಆದರೆ ವ್ಯಾಯಾಮ, ಜೀವನ ಶೈಲಿಯಲ್ಲಿ ಬದಲಾವಣೆ, ಆರೋಗ್ಯಕರ ಆಹಾರ ಪದ್ಧತಿ, ತೂಕ ಇಳಿಸುವಿಕೆ, ಸೂಕ್ತ ಸಮಯದಲ್ಲಿ ಸೂಕ್ತ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಮುಂತಾದ ಕ್ರಮಗಳಿಂದ ಈ ರೋಗ ಮತ್ತೆ ಕಾಣಿಸಿಕೊಳ್ಳುವುದನ್ನು ತಡೆಯಬಹುದು.

ಪುರುಷರಲ್ಲಿಯೂ ಬರುತ್ತದಲ್ಲವೇ?
ಪುರುಷರಲ್ಲಿ ಅತ್ಯಂತ ವಿರಳ ಕಾಯಿಲೆಯಾದರೂ ಅದರಿಂದ ಅವರು ಮುಕ್ತರು ಎನ್ನುವಂತಿಲ್ಲ. ಆದರೆ ಒಟ್ಟು ಸ್ತನ ಕ್ಯಾನ್ಸರ್‌ ಪ್ರಕರಣಗಳಲ್ಲಿ ಪುರುಷರ ಸಂಖ್ಯೆ ಕೇವಲ ಶೇ. 2ರಷ್ಟು. ಅಂದರೆ ಭಾರತದಲ್ಲಿ ಪ್ರತಿ ವರ್ಷ ಸುಮಾರು ಎರಡು ಸಾವಿರ ಪುರುಷರು ಸ್ತನ ಕ್ಯಾನ್ಸರ್‌ಗೆ ಗುರಿಯಾಗುತ್ತಿದ್ದಾರೆ. ಪುರುಷರ ಸ್ತನ ಕೋಶಗಳಲ್ಲಿ ಹಾರ್ಮೋನುಗಳ ಬೆಳವ ಣಿಗೆ ಅಷ್ಟು ವೇಗವಾಗಿ ಬೆಳೆಯುವುದಿಲ್ಲ. ಆದ್ದರಿಂದ ಅವರಿಗೆ ಚಿಕಿತ್ಸೆ ಸುಲಭ.

ಸ್ಥೂಲಕಾಯ ಮಹಿಳೆಯರಲ್ಲಿ ಹೆಚ್ಚು
ಸ್ಥೂಲಕಾಯ ಹೊಂದಿರುವವರು ಸ್ತನ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯ ಹೆಚ್ಚು ಎಂಬುದು ಅಧ್ಯಯನಗಳಿಂದಲೂ ತಿಳಿದು ಬಂದಿದೆ. ಅಲ್ಲದೆ, ಒಂದು ಬಾರಿ ಸ್ತನ ಕ್ಯಾನ್ಸರ್‌ಗೆ ತುತ್ತಾದ ಮಹಿಳೆಯರು ಸ್ಥೂಲಕಾಯರಾಗಿದ್ದಲ್ಲಿ ಅಂತವರಿಗೆ ಕ್ಯಾನ್ಸರ್‌ ಮರುಕಳಿಸುವ ಅಪಾಯವೂ ಹೆಚ್ಚು.

ಮಾನಸಿಕ ಆಘಾತ ಸಾಧ್ಯತೆ ಹೆಚ್ಚು
ಸ್ತನ ಕ್ಯಾನ್ಸರ್‌ ಮತ್ತು ಮನೋವ್ಯಾಧಿಗೆ ಎರಡಕ್ಕೂ ಹತ್ತಿರದ ಸಂಬಂಧವಿದ್ದು, ಹುಬ್ಬು, ಕಣ್ಣಿನ ರೆಪ್ಪೆಯ ಸಮೇತ ತಲೆ ಕೂದಲೂ ಉದುರುವುದರಿಂದ ರೋಗಿಗಳು ವಿಲಕ್ಷಣವಾಗಿ ಕಾಣಬಹುದು. ಸ್ತನವು ಸ್ತ್ರೀಯ ದೈಹಿಕ ಸೌಂದರ್ಯದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಕಳೆದುಕೊಳ್ಳುವುದರಿಂದ ಮಾನಸಿಕ ಒತ್ತಡಕ್ಕೂ ತುತ್ತಾಗುತ್ತಾರೆ. ಈ ವೇಳೆ ಕುಟುಂಬದವರು, ಸಹೋದ್ಯೋಗಿಗಳು, ಸ್ನೇಹಿತರು ಅವರನ್ನು ಪ್ರೀತಿ ವಿಶ್ವಾಸದಿಂದ ಕಂಡರೆ ಮನೋವೇದನೆ ಅರ್ಧದಷ್ಟು ಕಡಿಮೆ ಯಾಗುತ್ತದೆ.

21 ಲಕ್ಷ ಮಹಿಳೆಯರ ಮೇಲೆ ಪರಿಣಾಮ
ಭಾರತದಲ್ಲಿ ಪ್ರತೀ ವರ್ಷ 1.6 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಸುಮಾರು 21 ಲಕ್ಷ ಮಹಿಳೆಯರ ಮೇಲೆ ಈ ಮಹಾಮರಿ ರೋಗ ಪರಿಣಾಮ ಬೀರುತ್ತಿದೆ. ಮೂವತ್ತು ವಯಸ್ಸಿನ ಬಳಿಕ ಅಥವಾ 50-64 ವಯಸ್ಸಿನ ಸಮಯಲ್ಲಿ ಯಾವಾಗ ಬೇಕಾದರೂ ಈ ಕಾಯಿಲೆ ಕಾಣಿಸಿಕೊಳ್ಳಲಿದ್ದು, ಶೇ.15ರಷ್ಟು ಮಹಿಳೆಯರು ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ.

ಎಚ್ಚರವಹಿಸಿದಿದ್ದರೆಅಪಾಯ
ರಾಷ್ಟ್ರೀಯ ಆರೋಗ್ಯ ಪೋರ್ಟಲ್‌ನ ಪ್ರಕಾರ 2018 ರಲ್ಲಿ ಭಾರತದ 87,090 ಮಹಿಳೆ ಯರು ಸ್ತನ ಕ್ಯಾನ್ಸರ್‌ ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದ್ದರೆ 2030 ರ ಹೊತ್ತಿಗೆ ಮಹಿಳೆ ಸಾವಿಗೆ ಸ್ತನ ಕ್ಯಾನ್ಸರ್‌ ಅತ್ಯಂತ ಪ್ರಮುಖ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಕಾಲಕಾಲಕ್ಕೆ ತಪಾಸಣೆ
ರೋಗವನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚುವುದು ಅತ್ಯಂತ ಪರಿಣಾಮಕಾರಿ ಮಾರ್ಗ. ಸ್ತನ ಕ್ಯಾನ್ಸರ್‌ ಆಕ್ರಮಣವನ್ನು ಎಷ್ಟು ಬೇಗ ಕಂಡುಹಿಡಿಯಲಾಗುತ್ತ ದೆಯೋ ಅಷ್ಟೇ ಬೇಗ ಗುಣ ಹೊಂದುವ ಸಾಧ್ಯತೆ ಇರುತ್ತದೆ. 50 ವರ್ಷ ವಯಸಿನ ಬಳಿಕ ಪ್ರತೀ ಮೂರು ವರ್ಷಕ್ಕೆ ಒಂದು ಬಾರಿ ಮೆಮೊಗ್ರಫಿ ಪರೀಕ್ಷೆಗೆ ಒಳಗಾಗಬೇಕು. ಕುಟುಂಬದ ಹಿನ್ನೆಲೆ ಹೊಂದಿದವರು 40 ವರ್ಷಗಳಿಗೇ ಈ ಪರೀಕ್ಷೆ ಆರಂಭಿಸುವುದು ಉತ್ತಮ. ಅಲ್ಲದೆ ರೇಡಿಯೊ ಥೆರಪಿ, ಅಲ್ಟ್ರಾ ಸೊನೋಗ್ರಫಿ, ಸಿ.ಟಿ. ಸ್ಕ್ಯಾನ್‌ ಮುಂತಾದ ತಪಾಸಣೆಗಳನ್ನೂ ಕಾಲಕಾಲಕ್ಕೆ ಮಾಡಿಸಿಕೊಳ್ಳುವುದು ಸೂಕ್ತ.

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.