ಮನೆಯ ಬಾಲ್ಕನಿಯಲ್ಲಿಯೇ ಬೆಳೆಯಬಹುದು ಸೀಮೆ ಬದನೆ

ಬೇಕಾಗುವ ಜಾಗವೂ ಅತ್ಯಲ್ಪ. ಹೀಗಾಗಿ ಲಂಬವಾಗಿ ಬೆಳೆಯುವ ಬಳ್ಳಿ ತರಕಾರಿಗಳನ್ನು ಬೆಳೆಸಬಹುದು.

Team Udayavani, Jan 29, 2021, 11:20 AM IST

ಮನೆಯ ಬಾಲ್ಕನಿಯಲ್ಲಿಯೇ ಬೆಳೆಯಬಹುದು ಸೀಮೆ ಬದನೆ

ನಿಮಗೆ ಅಗತ್ಯವಿರುವ ತರಕಾರಿಗಳನ್ನು ನೀವೇ ಬೆಳೆದುಕೊಳ್ಳುವುದರಿಂದ ತಾಜಾ ಮತ್ತು ರುಚಿಕರ ತರಕಾರಿಗಳನ್ನು ತಿನ್ನುವ ಅವಕಾಶವಷ್ಟೇ ಅಲ್ಲ, ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೂ ಒಳ್ಳೆಯದು. ಆದರೆ ಮಹಾ ನಗರಗಳಲ್ಲಿ ಸಮುಚ್ಛಯಗಳು ಶರವೇಗದಲ್ಲಿ ವಿಸ್ತರಿಸುತ್ತಿರುವಾಗ ತರಕಾರಿ ಬೆಳೆಯಲು ಜಾಗವೆಲ್ಲಿ ಎಂಬ ಪ್ರಶ್ನೆ ಏಳಬಹುದು. ಫ್ಲಾಟ್‌ ಹೊಂದಿರುವವರಿಗೆ ಟೆರೇಸ್‌ ಕೂಡ ದುರ್ಲಭವೇ. ಆದರೆ ಇರುವ ಬಾಲ್ಕನಿಯಲ್ಲೇ ಕುಂಡದಲ್ಲಿ ತರಕಾರಿ ಬೆಳೆಸಬಹುದು.

ಇದಕ್ಕೆ ಬೇಕಾಗುವ ಜಾಗವೂ ಅತ್ಯಲ್ಪ. ಹೀಗಾಗಿ ಲಂಬವಾಗಿ ಬೆಳೆಯುವ ಬಳ್ಳಿ ತರಕಾರಿಗಳನ್ನು ಬೆಳೆಸಬಹುದು. ಬಾಲ್ಕನಿ ಗ್ರಿಲ್ಸ್‌ಗೆ ಈ ಬಳ್ಳಿಯನ್ನು ಹಬ್ಬಿಸಬಹುದು. ಬಾಲ್ಕನಿಯಲ್ಲಿ ಹಬ್ಬಿಸಬಹುದಾದ ಬಳ್ಳಿ ತರಕಾರಿಗಳಲ್ಲಿ ಸೀಮೆ ಬದನೆ ತರಕಾರಿಯೂ ಒಂದು. ಸ್ವಲ್ಪ ದೊಡ್ಡದಾದ ಕುಂಡದಲ್ಲಿ ಮೊಳಕೆ ಬಂದ ಸೀಮೆ ಬದನೆಕಾಯಿಯನ್ನು ಮಣ್ಣು ಮತ್ತು ಗೊಬ್ಬರ ಹಾಕಿ ಊರಬೇಕು. ಆಗಾಗ ಸ್ವಲ್ಪ ಸ್ವಲ್ಪ ನೀರುಣಿಸಿ. ಇದು ಹಂದರಕ್ಕೆ ಹಬ್ಬಿಸಬಹುದಾದ ಬಳ್ಳಿ. ಒಂದೇ ಒಂದು ಬಳ್ಳಿಯಲ್ಲಿ 60-70 ಕಾಯಿಯನ್ನು ಕೊಯ್ಯಬಹುದು. ರುಚಿಕರ ಸಾಂರ್ಬಾ, ಪಲ್ಯಕ್ಕೆ ಹೇಳಿ ಮಾಡಿಸಿದ ಈ ತರಕಾರಿ ನೀರಿನ ಅಂಶವನ್ನು ಜಾಸ್ತಿ
ಹೊಂದಿರುತ್ತದೆ.

ಸಿದ್ಧ ಹೇಗೆ?
ಮಣ್ಣಿಗೆ ನೀವು ನಿಮ್ಮದೇ ಆದ ಸಾವಯವ ಗೊಬ್ಬರ ಮಾಡಿ ಸೇರಿಸಬಹುದು. ತರಕಾರಿ ಸಿಪ್ಪೆ, ಒಣಗಿದ ಎಲೆ, ಅದೃಷ್ಟವಿದ್ದರೆ ಬೀದಿಯಲ್ಲಿ ಹಸು ಹಾಕಿದ ಸೆಗಣಿ ಸಿಕ್ಕಿದರೆ ಸೇರಿಸಬಹುದು. ಹಾಗೆಯೇ ಒಳ್ಳೆಯ ಕುಂಡದಲ್ಲಿ ಹಾಕಿದರೆ ಮಣ್ಣು ತೇವಾಂಶ ಹಿಡಿದುಕೊಂಡು ಗಾಳಿ ಸಂಚಾರಕ್ಕೂ ಎಡೆ ಮಾಡಿಕೊಡಬಹುದು.

ಬಳ್ಳಿಗೆ 2x2x1 ಅಡಿಯ ಕುಂಡವಿರಲಿ. ಮಳೆ ನೀರು ಕೊಯ್ಲು ಮಾಡಿಕೊಂಡರೆ ನೀರಿಗೇನೂ ಬರವಿರದು. ನೀರುಣಿಸುವಾಗ ಎಚ್ಚರಿಕೆ ವಹಿಸಿ. ಮಗ್‌ ಮೂಲಕ ಸ್ವಲ್ಪ ಸ್ವಲ್ಪ ಹಾಕಿ. ಜಾಸ್ತಿ ಹಾಕಿದರೆ ಅದು ಕುಂಡಕ್ಕಿರುವ ತೂತಿನ ಮೂಲಕ ಹೊರ ಹೋಗುವಂತಿರಬೇಕು. ಪಾತ್ರೆ, ಬಟ್ಟೆ ತೊಳೆದ ನೀರನ್ನೂ ಬಳಸಬಹುದು. ಬಾಲ್ಕನಿಯಲ್ಲಿ ಸಾಕಷ್ಟು ಸೂರ್ಯನ ಬೆಳಕು ಬರುವಂತಿರಬೇಕು. ಹಾಗೆಯೇ ನೆರಳು ಬೇಕಾದರೆ ಬಲೆ ಬಳಸಬಹುದು. ಬಾಲ್ಕನಿಯನ್ನು ಸ್ವತ್ಛವಾಗಿಟ್ಟುಕೊಳ್ಳಿ. ಹಾಗೆಯೇ ವಾಟರ್‌ ಪೂ›ಫ್ ಮಾಡಿಸಿ. ಈಗಂತೂ ಸಾವಯವ ಕೀಟನಾಶಕ ಲಭ್ಯ. ಹೀಗಾಗಿ ಅದನ್ನೇ ಬಳಸಬಹುದು.

ಟಾಪ್ ನ್ಯೂಸ್

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.