ವಿಜ್ಞಾನದಲ್ಲಿ ಮಿಂಚುತ್ತಿರುವ ಸ್ತ್ರೀ ಶಕ್ತಿ


Team Udayavani, Feb 11, 2022, 6:35 AM IST

ವಿಜ್ಞಾನದಲ್ಲಿ ಮಿಂಚುತ್ತಿರುವ ಸ್ತ್ರೀ ಶಕ್ತಿ

ಅಂತಾರಾಷ್ಟ್ರೀಯ ಮಟ್ಟದ ಸುಸ್ಥಿರ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ಲಿಂಗ ಸಮಾನತೆ ನಿರ್ಣಾಯಕ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ವಿಶ್ವ ಸಮುದಾಯವು ವಿಶ್ವಾದ್ಯಂತ ಮಹಿಳೆಯರನ್ನು ವಿಜ್ಞಾನ ಕ್ಷೇತ್ರದತ್ತ ಆಕರ್ಷಿಸುವ ಪ್ರಯತ್ನವಾಗಿ ಪ್ರತೀ ವರ್ಷದ ಫೆ. 11ರಂದು ವಿಜ್ಞಾನದಲ್ಲಿನ ಮಹಿಳಾ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರ ದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೊಸ ದೇನಲ್ಲ. ಶತಮಾನಗಳ ಹಿಂದಿನಿಂದಲೇ ಭಾರತ ಸಹಿತ ಹಲವಾರು ದೇಶಗಳ ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ಮೆರಿಟ್‌-ಪಾrಹ್‌ (ಕ್ರಿ.ಪೂ. 2700), ಎಂಬ ಪ್ರಾಚೀನ ಈಜಿಪ್ಟಿನ ವೈದ್ಯೆ ಪ್ರಪ್ರಥಮ ಮಹಿಳಾ ವಿಜ್ಞಾನಿ ಎಂದು ಶಾಸನಗಳಲ್ಲಿ ಉಲ್ಲೇಖೀಸಲ್ಪಟ್ಟಿವೆ.

2005ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಫೆಬ್ರವರಿ 11 ಅನ್ನು ವಿಜ್ಞಾನದಲ್ಲಿನ ಮಹಿಳಾ ಮತ್ತು ಬಾಲಕಿ ಯರ ಅಂತಾರಾಷ್ಟ್ರೀಯ ದಿನವನ್ನಾಗಿ ಘೋಷಿಸಲಾಯಿತು.

ಮಹಿಳಾ ವಿಜ್ಞಾನಿಗಳೆಂದಾಕ್ಷಣ ನಮ್ಮ ನೆನಪಿಗೆ ಬರುವ ಮೊದಲ ಹೆಸರು ಮೇರಿ ಕ್ಯೂರಿ ಅವರದು. ಫ್ರೆಂಚ್‌ ವಿಜ್ಞಾನಿಯಾಗಿದ್ದ ಇವರು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಎರಡರಲ್ಲೂ ನೊಬೆಲ್‌ ಪ್ರಶಸ್ತಿಯನ್ನು ಪಡೆದಿದ್ದರು. ಇವರ ಪುತ್ರಿ ಐರಿನ್‌ ಜೋಲಿಯಟ್‌ ಕ್ಯೂರಿ ಕೃತಕ ವಿಕಿರಣಶೀಲತೆಯನ್ನು ಸಂಶೋಧಿಸಿದ್ದಕ್ಕಾಗಿ 1935ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್‌ ಪ್ರಶಸ್ತಿಯನ್ನು ಪಡೆದರು.

ಗೆರ್ಟಿ ಥೆರೆಸಾ ಕೋರಿ ನೊಬೆಲ್‌ ಪ್ರಶಸ್ತಿ ಪಡೆದ ಮೊದಲ ಅಮೆರಿಕನ್‌ ಮಹಿಳಾ ವಿಜ್ಞಾನಿಯಾಗಿದ್ದು ಶರೀರಶಾಸ್ತ್ರ/ವೈದ್ಯಕೀಯಶಾಸ್ತ್ರದಲ್ಲಿ ಈ ಗೌರವ ಲಭಿಸಿತ್ತು. ಮಾರಿಯಾ ಗೋಪರ್ಟ್‌ ಮೇಯರ್‌, ಡೊರೊಥಿ ಹಾಡ್ಗಿ, ಅಮೆರಿಕನ್‌ ವಿಜ್ಞಾನಿ ಮತ್ತು ಸೈಟೊಜೆನೆಟಿಸ್ಟ್‌ ಆಗಿದ್ದ ಬಾರ್ಬರಾ ಮೆಕ್‌ಕ್ಲಿಂಟಾಕ್‌, ರೀಟಾ ಲೆವಿ-ಮೊಂಟಲ್ಸಿನಿ, ಅಮೆರಿಕನ್‌ ಜೀವರ ಸಾಯನಶಾಸ್ತ್ರಜ್ಞ ಮತ್ತು ಔಷಧಶಾಸ್ತ್ರಜ್ಞೆಯಾಗಿದ್ದ ಗೆಟ್ರೂìಡ್‌ ಬಿ. ಎಲಿಯನ್‌, ಕ್ರಿಸ್ಟಿಯಾನೆ ನೈಸ್ಲಿàನ್‌- ವೋಲ್ಹಾರ್ಡ್‌ ಲಿಂಡಾ ಬಿ. ಬಕ್‌ ನೊಬೆಲ್‌ ಪ್ರಶಸ್ತಿಗೆ ಪಾತ್ರರಾಗಿ ದ್ದಾರೆ.ಇನ್ನು ಹಲವಾರು ಮಹಿಳಾ ವಿಜ್ಞಾನಿಗಳು ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

ಭಾರತೀಯ ಸಾಧಕಮಣಿಗಳು
ಆನಂದಿಬಾಯಿ ಗೋಪಾಲರಾವ್‌ ಜೋಶಿ ಭಾರತದ ಮೊದಲ ಮಹಿಳಾ ವೈದ್ಯರು. ಜಾನಕಿ ಅಮ್ಮಾಳ್‌ ಸಸ್ಯಶಾಸ್ತ್ರದಲ್ಲಿ ಸಾಧನೆಗೈದ ಮೊದಲ ಭಾರತೀಯ ಮಹಿಳೆ. ಬಿ. ವಿಜಯಲಕ್ಷ್ಮೀ ಅವರು ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದರೂ ಗಣಿತ ವಿಜ್ಞಾನದಲ್ಲಿ 11 ಸಂಶೋಧನ ಪತ್ರಿಕೆಗಳನ್ನು ಬರೆದಿದ್ದರು. ವಿಜ್ಞಾನ ಕ್ಷೇತ್ರದಲ್ಲಿ ಡಾಕ್ಟರೆಟ್‌ ಪದವಿ ಪಡೆದ ಮೊದಲ ಮಹಿಳೆ ಕಮಲ ಸೊಹೊನಿ. ಭಾರತದ ಮೊದಲ ಮಹಿಳಾ ರಾಸಾಯನಶಾಸ್ತ್ರಜ್ಞೆ ಅಸಿಮಾ ಚಟರ್ಜಿ ಇವರು ರಸಾಯನಶಾಸ್ತ್ರದಲ್ಲಿ ಪದವಿ ಪಡೆದು ಕ್ಯಾನ್ಸರ್‌, ಮಲೇರಿಯಾ ಹಾಗೂ ಎಪಿಲಿಪ್ಟಿಕ್‌ ವಿರೋಧಿ ಔಷಧಗಳನ್ನು ಸಂಶೋಧಿಸಿದ್ದರು. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸಾಧನೆಗೈದ ಮೊದಲ ಭಾರತೀಯ ಮಹಿಳೆ ನಮ್ಮ ಕರ್ನಾಟಕದವರೇ ಆದ ರಾಜೇಶ್ವರಿ ಚಟರ್ಜಿ.

ಕಮಲ್‌ ರಣಾದಿವೆ ಭಾರತದ ಮೊದಲ ಅಂಗಾಂಶ ಸಂಸ್ಕೃತಿ ಪ್ರಯೋಗಾಲಯದ ಸ್ಥಾಪಕಿ. ಪ್ರಖ್ಯಾತ ಸ್ತ್ರೀರೋಗ ತಜ್ಞೆ ಇಂದಿರಾ ಹಿಂದುಜಾ ಭಾರತದ ಮೊದಲ ಪ್ರನಾಳ ಶಿಶುವಿನ ಹೆರಿಗೆ ಮಾಡಿಸಿದ್ದಲ್ಲದೇ ಮೊದಲ ಗ್ಯಾಮೇಟ್‌ ಇಂಟ್ರಾಫಾಲೋಪಿಯನ್‌ ವರ್ಗಾವಣೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಬಂಜೆತನವನ್ನು ನಿವಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದಿತಿ ಪಂತ್‌ ಅವರು 1983ರಲ್ಲಿ ಭಾರತವು ಅಂಟಾರ್ಟಿಕಾಗೆ ಕೈಗೊಂಡ ಮೊದಲ ಭೂವಿಜ್ಞಾನ ಹಾಗೂ ಸಮುದ್ರಶಾಸ್ತ್ರ ವಿಜ್ಞಾನದ ಸಂಶೋಧನ ಯಾತ್ರೆಯಲ್ಲಿ ಪಾಲ್ಗೊಂಡ ಮೊದಲ ಮಹಿಳಾ ವಿಜ್ಞಾನಿಯಾಗಿದ್ದಾರೆ. ಮಂಜು ಬನ್ಸಾಲ್‌ ಭಾರತದ ಮೊದಲ ಅನ್ವಯಿಕ ಜೈವಿಕ ತಂತ್ರಜ್ಞಾನ ಹಾಗೂ ಜೈವಿಕ ಮಾಹಿತಿ ಸಂಶೋಧನ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿ ಈ ಕ್ಷೇತ್ರದಲ್ಲಿ ಸಾಧನೆಗೈದ ಮೊದಲಿಗರಾಗಿದ್ದಾರೆ.
ಬಾಹ್ಯಾಕಾಶ ಸಂಶೋಧನೆಯಲ್ಲಿ ಮಿನುಗುತಾರೆಯಾಗಿ ಅಮರರಾದ ಕಲ್ಪನಾ ಚಾವ್ಲಾ ಅಂತರಿಕ್ಷದಲ್ಲಿ ನಡೆದ ಮೊದಲ ಭಾರತೀಯ ಮಹಿಳೆ. ದುರ್ದೈವವಶಾತ್‌ ತಮ್ಮ ಮೊದಲ ಗಗನಯಾನವಾದ ಕೊಲಂಬಿಯಾ ಗಗನ ನೌಕೆಯ ದುರಂತದಲ್ಲಿ ಮೃತರಾದರೂ ಇಂದಿಗೂ ಅಸಂಖ್ಯಾತ ಯುವತಿಯರಿಗೆ ಸ್ಪೂರ್ತಿ, ಮಾದರಿಯಾಗಿ ನಿಂತಿದ್ದಾರೆ. ಸುನೀತಾ ವಿಲಿಯಮ್ಸ್‌ ಬಾಹ್ಯಾಕಾಶದಲ್ಲಿ ನಡೆದಾಡಿದ ಎರಡನೇ ಭಾರತೀಯ ಸಂಜಾತ ಮಹಿಳೆಯಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) 2014ರಲ್ಲಿ ಕೈಗೊಂಡ ಮಂಗಳಯಾನವು ಭಾರತೀಯ ವಿಜ್ಞಾನ ಕ್ಷೇತ್ರದಲ್ಲಿ ಮಹಿಳಾ ಸಶಕ್ತೀಕರಣಕ್ಕೆ ಹಿಡಿದ ಕೈಗನ್ನಡಿಯೆಂದರೆ ಅತಿಶಯೋಕ್ತಿಯಾಗಲಾರದು. ವಿಶ್ವದಲ್ಲೇ ಅತೀ ಕಡಿಮೆ ವೆಚ್ಚದಲ್ಲಿ ಮಂಗಳನ ಯಾತ್ರೆ ನಡೆಸಿದ ಈ ತಂಡದಲ್ಲಿ ಮೌಮಿತಾ ದತ್ತಾ, ನಂದಿನಿ ಹರಿನಾಥ್‌, ರಿತು ಕರಿಧಾಲ್‌, ಮಿನಾಲ್‌ ಸಂಪತ್‌, ಅನುರಾಧ ಟಿ. ಕೆ. ಮುಂತಾದ ಮಹಿಳಾ ವಿಜ್ಞಾನಿಗಳು ಪ್ರಮುಖ ಪಾತ್ರ ನಿರ್ವಹಿಸಿದ್ದರು.

-ಡಾ| ಸ್ಮಿತಾ ಹೆಗಡೆ,
ಅನೂಪ್‌ ಕೃಷ್ಣ ರೈ, ಪೃಥ್ವಿ ಸಾಗರ್‌

ಟಾಪ್ ನ್ಯೂಸ್

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.