‘LPG’ ನೀಡಿ ದೇಶದ ಆರ್ಥಿಕತೆಗೆ ಪಿವಿಎನ್‌ ಶಕ್ತಿ

ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದಂಥ ಕ್ರಾಂತಿಕಾರಿ ಕ್ರಮಕ್ಕೆ ಮುನ್ನುಡಿ ಬರೆದ ನರಸಿಂಹರಾವ್‌

Team Udayavani, Feb 10, 2024, 6:24 AM IST

1-asdsadas

ಅದು 1991ರ ಅವಧಿ. ಭಾರತದ ಆರ್ಥಿಕತೆಯ ದಿವಾಳಿಯ ಅಂಚಿಗೆ ತಲುಪಿತ್ತು. ಸಾಲವನ್ನು ತೀರಿಸಲಾಗದ ಸ್ಥಿತಿ ಎದುರಾಗಿತ್ತು. ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಭಾರತದ ಮೀಸಲು ಚಿನ್ನವನ್ನು ಅಂತಾರಾಷ್ಟ್ರೀಯ ಹಣ ಕಾಸು ಸಂಸ್ಥೆಗಳಲ್ಲಿ ಅಡಮಾನವಿಡ ಬೇಕಾದಂಥ ದುಃಸ್ಥಿತಿ ಬಂದೊದಗಿತ್ತು. ದೇಶದ ವಿದೇಶಿ ವಿನಿಮಯ ಮೀಸಲು ಕೇವಲ ಒಂದು ತಿಂಗಳ ಅವಧಿಯ ಆಮದು ಬಿಲ್‌ ಪಾವತಿಸಲು ಸಾಧ್ಯವಾಗುವಷ್ಟು ಮಾತ್ರವೇ ಇತ್ತು.ಇಂತಹ ಸಂದರ್ಭದಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು, ಜಾಗತೀಕರಣ, ಉದಾ ರೀಕರಣ ಮತ್ತು ಖಾಸಗೀಕರಣದಂಥ ಕ್ರಾಂತಿ ಕಾರಿ ಕ್ರಮಗಳ ಮೂಲಕ ದೇಶದ ಆರ್ಥಿ ಕತೆಯ ಚಿತ್ರಣವನ್ನೇ ಬದಲಾಯಿಸಿದ ಕೀರ್ತಿ ಪಿ.ವಿ. ನರಸಿಂಹ ರಾವ್‌ ಅವರಿಗೆ ಸಲ್ಲುತ್ತದೆ.

1921ರ ಜೂನ್‌ 28ರಂದು ಅವಿಭಜಿತ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ಲಕೆ°àಪಳ್ಳಿ ಗ್ರಾಮದಲ್ಲಿ ತೆಲುಗು ನಿಯೋಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಪಮುಲಾಪರ್ತಿ ವೆಂಕಟ ನರಸಿಂಹ ರಾವ್‌ ಅವರು ಆಂಧ್ರದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದರು. ಅನಂತರ ನಾಗ ಪುರ ವಿವಿಯಲ್ಲಿ ಕಾನೂನು ಸ್ನಾತಕೋತ್ತರ ಪದವಿ ಪಡೆದು, ವಕೀಲರಾಗಿ ವೃತ್ತಿ ಆರಂಭಿಸಿದರು. 1930ರಲ್ಲಿ ಹೈದರಾಬಾದ್‌ನ ವಂದೇ ಮಾತರಂ ಚಳವಳಿಯಲ್ಲೂ ಅವರು ಭಾಗವಹಿಸಿದ್ದರು.

ಸ್ವಾತಂತ್ರ್ಯಾ ನಂತರ ಅವರು ಪೂರ್ಣ ಪ್ರಮಾಣ ದಲ್ಲಿ ರಾಜಕೀಯ ಪ್ರವೇಶಿಸಿದರು. ಆಂಧ್ರ ಸರಕಾ ರ ದಲ್ಲಿ ಸಚಿವರಾಗಿಯೂ ಅಪಾರ ಅನುಭವ ಹೊಂದಿದ್ದ ಅವರು, 1971ರಲ್ಲಿ ಆಂಧ್ರ ಮುಖ್ಯ ಮಂತ್ರಿ ಯಾಗಿ ಆಯ್ಕೆಯಾದರು. ಈ ವೇಳೆ, ಕ್ರಾಂತಿ ಕಾರಿ ಭೂ ಸುಧಾರಣೆ ನೀತಿ ಜಾರಿಗೆ ತಂದರು. ಜತೆಗೆ, ಕೆಳಜಾತಿಯವರಿಗೂ ರಾಜ ಕೀಯ ಭಾಗೀದಾರಿಕೆಗೆ ಅವಕಾಶ ಮಾಡಿ ಕೊಟ್ಟರು. ಅನಂತರದಲ್ಲಿ ಸಂಸದರಾಗಿಯೂ, ಕೇಂದ್ರ ಸರಕಾರದಲ್ಲಿ ಗೃಹ, ರಕ್ಷಣೆ ಮತ್ತು ವಿದೇಶಾಂಗ ಇಲಾಖೆಯ ಸಚಿವರಾಗಿಯೂ ಹೊಣೆ ನಿರ್ವಹಿಸಿದ್ದರು. ಹಿಂದಿ, ತೆಲುಗು, ಮರಾಠಿ, ಕನ್ನಡ ಸೇರಿದಂತೆ ಒಟ್ಟು 15 ಭಾಷೆಗಳಲ್ಲಿ ಅವರಿಗಿದ್ದ ಪರಿಣತಿಯೂ ರಾಷ್ಟ್ರ ರಾಜಕೀಯದಲ್ಲಿ ಮಿಂಚಲು ಪ್ಲಸ್‌ ಪಾಯಿಂಟ್‌ ಆಯಿತು. ಇವರು ದೇಶದ ಪ್ರಧಾನಿ ಹುದ್ದೆಗೇರಿದ ಮೊದಲ ದಕ್ಷಿಣ ಭಾರತೀಯ ಹಾಗೂ ನೆಹರೂ-ಗಾಂಧಿ ಕುಟುಂಬದಿಂದ ಹೊರತಾದ ಕಾಂಗ್ರೆಸ್‌ನ ಮೊದಲ ಪ್ರಧಾನಿಯೂ ಹೌದು.

ರಾಜಕೀಯ ಪಯಣದಲ್ಲಿ ಬಿಗ್‌ ಟ್ವಿಸ್ಟ್‌
ಗಮನಾರ್ಹ ವಿಚಾರವೆಂದರೆ, ಪಿವಿಎನ್‌ ಅವರು ಪ್ರಧಾನಿಯಾಗುವ ಒಂದು ವರ್ಷ ಮುನ್ನ, ಅವರು ತಮ್ಮ ರಾಜಕೀಯ ಜೀವನವೇ ಮುಗಿಯಿತು ಎಂದು ಭಾವಿಸಿದ್ದರು. ತಮ್ಮ ಬ್ಯಾಗ್‌, ಪುಸ್ತಕಗಳನ್ನು ಪ್ಯಾಕ್‌ ಮಾಡಿಕೊಂಡು, ಕಂಪ್ಯೂಟರ್‌ ಮತ್ತು ಇತರ ವಸ್ತುಗಳನ್ನು ಹೈದರಾಬಾದ್‌ನಲ್ಲಿದ್ದ ತಮ್ಮ ಪುತ್ರನ ಮನೆಗೆ ಕಳುಹಿಸಿದ್ದರು. ಆದರೆ 1991ರ ಮೇ 21ರಂದು ರಾಜೀವ್‌ ಗಾಂಧಿ ಅವರ ಹತ್ಯೆ ನಡೆಯಿತು. ಈ ದುರಂತವು ರಾವ್‌ ಅವರ ರಾಜಕೀಯ ಪಯಣ ದಲ್ಲಿ ಹೊಸ ತಿರುವು ಪಡೆಯಲು ಕಾರಣವಾ ಯಿತು. ರಾಜೀವ್‌ ಅವರ ಅಂತಿಮ ದರ್ಶನ ಪಡೆಯಲು 10 ಜನಪಥ್‌ಗೆ ಬಂದಾಗ, ಅಲ್ಲೇ ಇದ್ದ ಕಾಂಗ್ರೆಸ್‌ ಹಿರಿಯ ನಾಯಕ ಪ್ರಣವ್‌ ಮುಖರ್ಜಿ ಅವರು, ರಾವ್‌ರನ್ನು ಪಕ್ಕಕ್ಕೆ ಕರೆದು, ನೀವೇ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರಾಗ ಬೇಕೆಂದು ಸರ್ವಾನು ಮತದ ತೀರ್ಮಾನ ಆಗಿದೆ. ಇಂದೇ ನೀವು ಹುದ್ದೆಯನ್ನು ಸ್ವೀಕರಿಸ ಬೇಕು ಎಂದಿದ್ದರು. ಇದಾದ ಅನಂತರ, ಪಿ.ವಿ. ನರ ಸಿಂಹ ರಾವ್‌ ಅವರು ದೇಶದ 9ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. 1991ರಿಂದ 1996ರ ವರೆಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದರು.

ಸುಧಾರಣೆಗಳ ಹರಿಕಾರ
ಸುಧಾರಣ ಕ್ರಮಗಳನ್ನು ಜಾರಿ ಮಾಡಲು ವಿತ್ತ ಸಚಿವರಾಗಿದ್ದ ಮನಮೋಹನ್‌ ಸಿಂಗ್‌ ಹಾಗೂ ಅವರ ತಂಡಕ್ಕೆ ಸಂಪೂರ್ಣ ಅಧಿಕಾರ ರಾವ್‌ ನೀಡಿದ್ದರು. ಆಮದು ನೀತಿಗೆ ಬದಲಾವಣೆ ತಂದ, ಖಾಸಗೀಕರಣಕ್ಕೆ ನಾಂದಿ ಹಾಡಿದ, ಜಾಗತಿಕ ಮಾರುಕಟ್ಟೆಗೆ ಭಾರತವನ್ನು ಮುಕ್ತವಾ ಗಿಸಿದ, ವಿದೇಶಿ ಹೂಡಿಕೆಗೆ ಉತ್ತೇಜನ ನೀಡಿದ, ಆರ್ಥಿಕ ಉದಾರೀಕರಣ ನೀತಿ ಜಾರಿಗೆ ತಂದ ಹಾಗೂ ಕಾರ್ಪೊರೇಟ್‌ ತೆರಿಗೆ ಹೆಚ್ಚಳ ಮಾಡಿದ ಹೆಗ್ಗಳಿಕೆಯೂ ರಾವ್‌ ಅವರಿಗೆ ಸಲ್ಲುತ್ತದೆ. ಇವಿಷ್ಟೇ ಅಲ್ಲದೆ, ಪಂಜಾಬ್‌ನಲ್ಲಿ ಭಯೋತ್ಪಾ ದನೆಗೆ ಅಂತ್ಯ ಹಾಡಿದ್ದು, ಜಮ್ಮು ಮತ್ತು ಕಾಶ್ಮೀರ ದಲ್ಲಿ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆ ಮುಗಿ ಸಿದ್ದು ಕೂಡ ರಾವ್‌ ಸಾಧನೆಗೆ ಮತ್ತಷ್ಟು ಗರಿ ಗಳನ್ನು ಮೂಡಿಸಿತ್ತು. ಬಹುಮತ ಇಲ್ಲದ ಹೊರ ತಾಗಿಯೂ ರಾವ್‌ ಅಂದು ತೋರಿದ ರಾಜಕೀಯ ಇಚ್ಛಾಶಕ್ತಿಯನ್ನು ದೇಶ ಮರೆಯದು.

ರಾವ್‌ ಸಾಧನೆಗಳು
ಜಾಗತೀಕರಣ, ಉದಾರೀಕರಣ, ಖಾಸಗೀಕರಣಕ್ಕೆ ದೇಶವನ್ನು ಮುಕ್ತಗೊಳಿಸಿದ್ದು
1991ರ ಆರ್ಥಿಕ ಸುಧಾರಣೆಗಳ ಮೂಲಕ ದೇಶದ ಆರ್ಥಿಕತೆಯನ್ನು ಹಳಿಗೆ ತಂದಿದ್ದು
ಪಂಜಾಬ್‌ನಲ್ಲಿ ಬಂಡುಕೋರ ರನ್ನು ಮಟ್ಟಹಾಕಿದ್ದು
ಜಮ್ಮು ಮತ್ತು ಕಾಶ್ಮೀರದಲ್ಲಿ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆ ನಡೆಸಿದ್ದು
ಆಂಧ್ರ ಸಿಎಂ ಆಗಿ ಭೂ ಸುಧಾರಣೆ ನೀತಿ ಜಾರಿಗೆ ತಂದಿದ್ದು

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.