ಇಂದು ತುಳಸೀ ಪೂಜೆ: ಸರ್ವದೇವತೆಗಳ ಸನ್ನಿಧಾನ ತುಳಸೀ

Team Udayavani, Nov 5, 2022, 6:20 AM IST

ಇಂದು ತುಳಸೀ ಪೂಜೆ: ಸರ್ವದೇವತೆಗಳ ಸನ್ನಿಧಾನ ತುಳಸೀ

ಕಾರ್ತಿಕ ಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ಇದು ತುಳಸೀ ಪೂಜೆ ಎಂದೇ ಪ್ರಸಿದ್ಧ. ಈ ದಿನದಂದು ತುಳಸೀ ವೃಂದಾವನದ ಹತ್ತಿರ ಧಾತ್ರೀ(ನೆಲ್ಲಿಕಾಯಿ) ವೃಕ್ಷದ ಕೊಂಬೆಯನ್ನಿಟ್ಟು ಅದರ ಮುಂದೆ ಶ್ರೀಕೃಷ್ಣನ ಪ್ರತಿಮೆ ಅಥವಾ ಸಾಲಿಗ್ರಾಮಗಳನ್ನಿಟ್ಟು ಪೂಜೆ ಮಾಡುತ್ತಾರೆ. ಚಾತುರ್ಮಾಸವು ಮುಗಿದು, ವ್ರತಗಳ ಸಮಾಪನವಾಗುವುದು ಈ ಸಮಯದಲ್ಲೇ. ಶ್ರೀಹರಿಯು ನಾಲ್ಕು ತಿಂಗಳ ಯೋಗನಿದ್ರೆಯ ಬಳಿಕ ಎಚ್ಚರಗೊಳ್ಳುವ ಪರ್ವಕಾಲ. ಕ್ಷೀರಾಬ್ಧಿ ವ್ರತವೆಂದು ಆಚರಿಸಲಾಗುತ್ತದೆ. ಇಂದು ಶ್ರೀಕೃಷ್ಣನ ದಿವಸ, ತುಲಸೀ ಮತ್ತು ಶ್ರೀಮನ್ನಾ ರಾಯಣನ ವಿವಾಹದ ದಿನವೂ ಹೌದು.

ಬಹುಪಯೋಗೀ ತುಳಸಿಯು ಮನುಷ್ಯನ ಪಾರಮಾರ್ಥಿಕ ಹಾಗೂ ಲೌಕಿಕ ಬದುಕಿನಲ್ಲಿ ಅತೀ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪವಿತ್ರ ತುಳಸಿ ಎಂದೇ ಅದಕ್ಕೆ ವಿಶೇಷಣ. ಇಂಗ್ಲಿಷ್‌ನಲ್ಲಿ ಅದು ಹೋಲಿ ಬೇಸಿಲ್‌, ಸಂಸ್ಕೃತದಲ್ಲಿ ತುಳಸಿ. ತುಳಸಿಗೆ ಇತರ ಹೆಸರುಗಳು ಮಂಜರಿ, ಕೃಷ್ಣತುಳಸಿ, ತ್ರಿತ್ತವು ಇತ್ಯಾದಿ. ವೃಂದ, ವೃಂದಾವನೀ, ವಿಶ್ವಪಾವನಿ, ವಿಶ್ವಪೂಜಿತ, ತುಳಸಿ, ಪುಷ್ಪಸಾರ, ನಂದಿನಿ, ಕೃಷ್ಣಜೀವನಿ ಎಂಬ ಅಷ್ಟ ನಾಮಗಳೊಂದಿಗೆ ತುಳಸೀ ಸಂಕೀರ್ತನೆ ಅತೀ ಪ್ರಸಿದ್ಧ. ರಾಮತುಳಸಿ, ಕೃಷ್ಣ ತುಳಸಿ ಅಥವಾ ಶ್ಯಾಮ ತುಳಸಿ, ವನ ತುಳಸಿ, ಕಾಳಿ ತುಳಸಿ ಇತರ ಪ್ರಭೇದಗಳು.

ಆಧ್ಯಾತ್ಮಿಕ ಮಹತ್ವ: ಕಾರ್ತಿಕ ಮಾಸ ತುಳಸಿ ಪ್ರತಿಷ್ಠಾಪನೆಗೆ ಪರ್ವ ಕಾಲ. ಎಷ್ಟು ತುಳಸೀ ಗಿಡಗಳನ್ನು ಬೆಳೆಸುತ್ತಿಯೋ ಅಷ್ಟು ಜನ್ಮಗಳಲ್ಲಿ ಎಸಗಿದ ಪಾಪಗಳೆಲ್ಲವೂ ನಾಶವಾಗುತ್ತವೆ ಎಂದು ಸ್ಕಂದಪುರಾಣದ ಉಲ್ಲೇಖ. ಎಲ್ಲಿ ತುಳಸೀವನವಿರುವುದೋ ಅದುವೇ ಒಂದು ತೀರ್ಥಕ್ಷೇತ್ರ ಎಂದು ಪದ್ಮಪುರಾಣದ ವರ್ಣನೆ. ಯಮಭಟರು ಆ ಮನೆಗೆ ಪ್ರವೇಶಿಸುವುದಿಲ್ಲ. ತುಳಸೀ ಬೆಳೆದ ಮಣ್ಣಿನಿಂದ ಸಾರಿಸಲ್ಪಟ್ಟ ಮನೆಗೆ ಕಾಯಿಲೆ ಬರದು. ತುಳಸೀ ಗಂಧವಿರುವ ಗಾಳಿ ಆರೋಗ್ಯಕ್ಕೆ ಉತ್ತಮ. ತುಳಸಿಯಲ್ಲಿ ತ್ರಿಮೂರ್ತಿಗಳ ಸನ್ನಿಧಾನವಿದೆ. ಪುಷ್ಕರ ಮತ್ತು ಗಂಗಾಸ್ನಾನದ ಪುಣ್ಯವು ಲಭಿಸುತ್ತದೆ.

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ ಯದಾಗ್ರೇ ಸರ್ವವೇದಾಶ್ಚ ತುಲಸೀ ತ್ವಾಂ ನಮಾಮ್ಯಹಂ || – ಎಲ್ಲ ತೀರ್ಥಗಳೂ ತುಳಸೀ ಗಿಡದ ಮೂಲದಲ್ಲಿ, ಎಲ್ಲ ದೇವತೆಗಳು ಅದರ ಕಾಂಡದಲ್ಲಿ, ಎಲ್ಲ ವೇದಗಳು ತುದಿ ಭಾಗದಲ್ಲಿ ಸನ್ನಿಹಿತವಾಗಿದೆ.

ತುಳಸೀ ದರ್ಶನದಿಂದ ಎಲ್ಲ ಪಾಪಗಳೂ ನಿವಾರಣೆಯಾಗುತ್ತವೆ. ದೇಹ ಶುದ್ಧಿಗೆ ಅದರ ಸ್ಪರ್ಶ, ನಮಸ್ಕಾರದಿಂದ ಕಾಯಿಲೆ ದೂರ, ತುಳಸಿಗೆ ನೀರು ಹಾಕುವುದರಿಂದ ಯಮನ ಪಾಶದಿಂದ ಮುಕ್ತಿ, ತುಳಸಿ ಬೆಳೆಸುವುದರಿಂದ ಹರಿಭಕ್ತಿಯ ಸಂಪಾದನೆ, ಶ್ರೀಹರಿಗೆ ತುಳಸಿಯನ್ನು ನೀಡುವುದರಿಂದ ಮೋಕ್ಷ ಪ್ರಾಪ್ತಿ. ಸರ್ವದೇವತೆಗಳ ಸನ್ನಿಧಾನವಿರುವುದರಿಂದ ಮತ್ತದರ ದಿವೌಷಧೀ ಗುಣಗಳಿಂದ ಮನೆಯನ್ನೂ ಮನೆಮಂದಿಯನ್ನೂ ತುಳಸಿ ಕಾಪಾಡುತ್ತದೆ.

ಪ್ರಸೀದ ತುಳಸೀ ದೇವೀ ಪ್ರಸೀದ ಹರಿವಲ್ಲಭೇ.. .. ತುಳಸೀ ತ್ವಾಂ ನಮಾಮ್ಯಹಮ್‌ || ತುಳಸಿಯ ಔಷಧೀಯ ಲಾಭಗಳು: ತುಳಸಿ ಒಂದು ವಿಶಿಷ್ಟ ಗಿಡಮೂಲಿಕೆ. ವಿಶೇಷವಾಗಿ ಶ್ವಾಸೋಚ್ಛಾಸ, ಜೀರ್ಣಕ್ರಿಯೆ ಮತ್ತು ಚರ್ಮದ ವ್ಯಾಧಿಗಳಿಗೆ ಉಪ ಶಮನಕಾರೀ ಔಷಧ. ಅದು ಟ್ಯೂಮರ್‌ ನಿವಾರಕ ಔಷಧವೆಂದು ಆಯುರ್ವೇದವು ಗುರುತಿಸಿದೆ. ತುಳಸಿಯು ಇಮ್ಯುನೋ ಮೋಡ್ಯುಲೇಟರ್‌, ಸೈಟೋ ಪ್ರೊಟೆಕ್ಟಿವ್‌ ಮತ್ತು ಕ್ಯಾನ್ಸರ್‌ ನಿವಾರಕ ಪದಾರ್ಥವೆಂದು ಪ್ರಯೋಗಗಳು ದೃಢಪಡಿಸಿವೆ. ತುಳಸಿ ಯಲ್ಲಿ ವಿಟಮಿನ್‌ ಸಿ ಇರುವುದರಿಂದ ಹೃದಯ ಸಂಬಂಧೀ ವ್ಯಾಧಿಗಳು ದೂರ ವಾಗುತ್ತವೆ. ರಕ್ತದಲ್ಲಿ ಕೊಬ್ಬಿನಂಶವನ್ನು ಹತೋಟಿಯಲ್ಲಿಡುತ್ತದೆ.

ತುಳಸಿಯಲ್ಲಿ ಅಸೆಟಿಕ್‌ ಆಮ್ಲವಿರುವುದರಿಂದ ಶರೀರ ದಲ್ಲಿನ ಯೂರಿಕ್‌ ಆಮ್ಲ ಮಟ್ಟವನ್ನು ಕಡಿಮೆಗೊಳಿಸಿ ಕಿಡ್ನಿ ಸ್ಟೋನ್‌ಗೆ ಉತ್ತಮ ಔಷಧ. ತಲೆನೋವು, ಜ್ವರ, ಕಣ್ಣಿನ ಆರೋಗ್ಯ, ಮೌಖೀಕ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸುತ್ತದೆ. ತುಳಸಿ ಯಲ್ಲಿರುವ ವಿಟಮಿನ್‌ ಕೆ ಯಿಂದ ಎಲುಬಿನ ಮತ್ತು ಹೃದಯದ ಆರೋಗ್ಯವು ಕಾಪಾಡಲ್ಪಡುತ್ತವೆ. ತುಳಸಿ ಬಳಕೆಯಿಂದ ಅಸ್ತಮಾ, ಬ್ರೋಂಕೈಟಿಸ್‌, ಶೀತ, ಕೆಮ್ಮು,  ಸೈನಸೈಟಿಸ್‌, ರಕ್ತದೊತ್ತಡ, ಕೊಬ್ಬು, ಅಜೀರ್ಣ, ಅಲ್ಸರ್‌, ಸಕ್ಕರೆ ಕಾಯಿಲೆ, ಸಂಧಿನೋವು, ಅರ್ಥರೈಟಿಸ್‌, ಮಲೇರಿಯಾ ಮುಂತಾದ ಕಾಯಿಲೆಗಳನ್ನು ಗುಣಪಡಿಸಬಹುದು. ಮಾನಸಿಕ ಒತ್ತಡ ಮತ್ತು ನರಮಂಡಲ ಸಂಬಂಧೀ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಚೀನದ ಸಂಶೋಧನೆ ತಿಳಿಸುತ್ತದೆ. ಅಲ್ಲದೆ ಅನೇಕ ಮನೆಮದ್ದುಗಳಲ್ಲಿ ತುಳಸಿಯನ್ನು ಬಳಸುತ್ತಾರೆ.

-  ಜಲಂಚಾರು ರಘುಪತಿ ತಂತ್ರಿ, ಉಡುಪಿ

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.