ಪ್ರೀತಿ ಮಾಸುವಲ್ಲಿ ನಿಮ್ಮದೆಷ್ಟಿದೆ ಪಾಲು?


Team Udayavani, Dec 15, 2018, 7:57 AM IST

73.jpg

ಅಷ್ಟರಲ್ಲೇ, ಅವನಿಗೆ ಹೆಂಡತಿಯಿಂದ ಫೋನ್‌ ಬಂದಿತು. ಕೂಡಲೇ ಆಕೆಯ ಫೋನ್‌ ಕಟ್‌ ಮಾಡಿ ಅಂದ: “ರೊಮ್ಯಾನ್ಸ್‌ ಸತ್ತು ಹೋಗಿದೆ. ಹೇಳಿ, ಆ ಪ್ರೀತಿಯನ್ನು ಮತ್ತೆ ಪಡೆಯಲು ಏನು ಮಾಡಬೇಕು?’. “ಆ ಪ್ರೀತಿಯನ್ನು ಪಡೆಯಲು ಈ ರೀತಿ ಫೋನ್‌ 
ಕಟ್‌ ಮಾಡುವುದನ್ನು ಬಿಡಬೇಕು’ ಅಂದೆ!

ಲವ್‌! 
ಪ್ರತಿ ವರ್ಷವೂ ಜಗತ್ತಿನಾದ್ಯಂತ ಬಿಡುಗಡೆಯಾಗುವ ಲಕ್ಷಾಂತರ ಸಿನೆಮಾಗಳ ಫೇವರೇಟ್‌ ಕಥಾವಸ್ತುವಿದು. ನಾಯಕ ನಾಯಕಿ ತಮ್ಮ ಪ್ರೀತಿಗಾಗಿ ಹೇಗೆ ಹೋರಾಟ ನಡೆಸುತ್ತಾರೆ, ಕೊನೆಗೆ ಸಿನೆಮಾದ ಎಂಡಿಂಗ್‌ ಹೇಗಾಗುತ್ತದೆ ಎನ್ನುವುದನ್ನು ಅತ್ಯಂತ ಕುತೂಹಲದಿಂದ ನೋಡಿ, ಥಿಯೇಟರ್‌ನಿಂದ ಮುಗುಳ್ನಗೆ ಹೊತ್ತು ಹೊರಬರುತ್ತೇವೆ. ಆದರೆ, ಸಿನೆಮಾದಲ್ಲಿ ಯಾವುದನ್ನು ನಾವು ಎಂಡಿಂಗ್‌ ಎನ್ನುತ್ತೀವೋ, ನಿಜ ಬದುಕಿನಲ್ಲಿ ಅದು ಕೇವಲ ಆರಂಭವಷ್ಟೆ. ನಿಜವಾದ ಕಥೆ ಅಥವಾ ಸವಾಲು ಇರುವುದೇ ನಾಯಕ-ನಾಯಕಿ ಮದುವೆಯಾದ ಮೇಲೆ ಅವರ ಜೀವನ ಹೇಗಿರುತ್ತದೆ ಎನ್ನುವುದರಲ್ಲಿ. ಅಂದರೆ, ಆ ಪ್ರೀತಿಯಲ್ಲಿ ಗೆಲ್ಲಲು ಅವರು ಎಷ್ಟು ಶ್ರಮಪಟ್ಟರೋ, ಅಷ್ಟೇ ಶ್ರಮವನ್ನು ಈ ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಮೀಸಲಿಡುತ್ತಾರೋ ಇಲ್ಲವೋ ಎನ್ನುವುದರಲ್ಲಿ. ಆದರೆ ಬಹುತೇಕ ಸಂಸಾರಗಳಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ಶ್ರಮವನ್ನು ಪತಿ ಪತ್ನಿ ಇಬ್ಬರೂ ನಿಲ್ಲಿಸಿಬಿಡುತ್ತಾರಾದ್ದರಿಂದ ಪ್ರೀತಿ ಎನ್ನುವುದು ಮಾಸಿಹೋಗಿ, ಆ ಪದ ಭೂತಕಾಲಕ್ಕೆ ಸೀಮಿತವಾಗುತ್ತದೆ. ಹೀಗಾಗಿ ಬಹುತೇಕ ಸಂಸಾರಗಳಲ್ಲಿ ಗಂಡ-ಹೆಂಡತಿ ಕೇವಲ ರೂಂಮೇಟ್‌ಗಳಂತೆ ಬದುಕುತ್ತಿರುತ್ತಾರಷ್ಟೆ. 

ಕೆಲ ದಿನಗಳ ಹಿಂದೆ ನನ್ನ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದ್ದ ಸುಮಾರು 35 ವಯೋಮಾನದ ವ್ಯಕ್ತಿಯೊಬ್ಬರು ನನ್ನೊಡನೆ ಖಾಸಗಿಯಾಗಿ ಮಾತನಾಡಬೇಕೆಂದು ಬಂದರು. ಆ ವ್ಯಕ್ತಿಗೆ ಮದುವೆಯಾಗಿ ಈಗ 3 ವರ್ಷದ ಮೇಲಾಯಿತಂತೆ. “ಮದುವೆಗೂ ಮುನ್ನ 5 ವರ್ಷ ಇಬ್ಬರೂ ಬಹಳ ಪ್ರೀತಿಸುತ್ತಿದ್ದೆವು, ಮದುವೆಯಾದ ನಂತರ ಪ್ರೀತಿ ಇಲ್ಲ’ ಎಂದ ಆ ವ್ಯಕ್ತಿ. “ಆ ಪ್ರೀತಿ ಇಲ್ಲದ್ದಕ್ಕೆ ಏನು ಕಾರಣವಿರಬಹುದು?’ ಎಂದು ಆತನನ್ನೇ ಪ್ರಶ್ನಿಸಿದೆ. “ಗೊತ್ತಿಲ್ಲ’ ಎಂದ. “ಮೊದಲಿನಂತೆಯೇ ಪ್ರೀತಿಯನ್ನು ಸದೃಢವಾಗಿಡಲು ಏನು ಪ್ರಯತ್ನ ನಡೆಸಿದ್ದೀಯಾ?’ ಎಂದು ಮತ್ತೂಂದು ಪ್ರಶ್ನೆ ಎದುರಿಟ್ಟೆ. “ಪ್ರಯತ್ನ ನಡೆಸುವುದಕ್ಕೆ ಏನಿದೆ? ವರ್ಷಗಟ್ಟಲೇ ಅವಳನ್ನು ಪ್ರೀತಿಸಿಯೇ ಮದುವೆಯಾದವನಲ್ಲವೇ? ನಾನು ಎಷ್ಟು ಒಳ್ಳೆಯವನು ಅಂತ ಅವಳಿಗೆ ಚೆನ್ನಾಗಿ ಗೊತ್ತಿದೆ. ತಿಂಗಳ ಹಿಂದೆ ಅವಳ ಬರ್ತಡೇಗೆ ನೂರಾರು ಡಾಲರ್‌ ವೆಚ್ಚದ ಗುಚ್ಚಿ ಬ್ಯಾಗ್‌ ತಂದುಕೊಟ್ಟೆ. ಆದರೂ ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲ’ ಅಂದ. 
“ಅದು ಸರಿ, ಆ ಪ್ರೀತಿಯನ್ನು ಉಳಿಸಿಕೊಳ್ಳಲು ಎಷ್ಟು “ಶ್ರಮ’ ಹಾಕುತ್ತಿದ್ದೀ? ಇವತ್ತೇನು ಮಾಡಿದೆ?’ ಎಂದೆ.  “ಇವತ್ತೂ ಅಂದರೆ? ಅದೇನು ಕೆಲಸವೇ ದಿನಾ ಶ್ರಮಪಡಲು? ಹೇಳಿದೆನಲ್ಲ, ಅವಳ ಬರ್ತಡೇಗೆ ಗುಚ್ಚಿ ಬ್ಯಾಗ್‌ ತಂದುಕೊಟ್ಟೆ ಅಂತ. ನಾನು ಹಗಲು ರಾತ್ರಿ ದುಡಿಯುವುದು ಇನ್ಯಾರಿಗೆ? ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದಕ್ಕೇ ಸರ್‌’ ಅಂದ. ಅಷ್ಟರಲ್ಲೇ, ಅವನಿಗೆ ಹೆಂಡತಿಯಿಂದ ಫೋನ್‌ ಬಂದಿತು. ಕೂಡಲೇ ಆಕೆಯ ಫೋನ್‌ ಕಟ್‌ ಮಾಡಿ ನನ್ನತ್ತ ತಿರುಗಿ ಅಂದ: “ರೊಮ್ಯಾನ್ಸ್‌ ಸತ್ತು ಹೋಗಿದೆ. ಇದೆಲ್ಲ ಹೇಳಬಾರದು…ಆದರೂ…ಅವಳೊಂದಿಗೆ ಸುಖೀಸಿ ನಾಲ್ಕು ತಿಂಗಳಿಗೂ ಮೇಲಾಯಿತು. ಹೇಳಿ, ಆ ಪ್ರೀತಿಯನ್ನು ಮತ್ತೆ ಪಡೆಯಲು ಏನು ಮಾಡಬೇಕು?’  

“ಆ ಪ್ರೀತಿಯನ್ನು ಪಡೆಯಲು ಈ ರೀತಿ ಫೋನ್‌ ಕಟ್‌ ಮಾಡುವುದನ್ನು ಬಿಡಬೇಕು’ ಅಂದೆ. ಅವನಿಗೆ ತಿಳಿಯಲಿಲ್ಲ. ನಾನು ವಿವರಿಸಿದೆ: “ಪ್ರೀತಿಯನ್ನು ಉಳಿಸಿಕೊಳ್ಳಲು ಶ್ರಮಪಡುತ್ತಿದ್ದೇನೆ ಅನ್ನುತ್ತೀ. ಆದರೆ ನಿನ್ನ ಮಡದಿ ಫೋನ್‌ ಮಾಡಿದಾಗ, ಆಕೆಯೊಂದಿಗೆ ಮಾತನಾಡುವುದನ್ನು ಬಿಟ್ಟು ನನ್ನೊಂದಿಗೆ ಮಾತನಾಡುತ್ತಿದ್ದೀಯ. ಪ್ರೀತಿ ಇರುವುದು ನೀನು ತಂದುಕೊಡುವ ಗುಚ್ಚಿ ಬ್ಯಾಗ್‌ನಲ್ಲಿ ಅಷ್ಟೇ ಅಲ್ಲ, ನೀನು ಆಕೆಗೆ ಎಷ್ಟು ಗಮನ ಕೊಡುತ್ತಿದ್ದೀಯ. ಆಕೆಯ ಬೇಕು-ಬೇಡಗಳನ್ನು ಕೇಳಿಸಿಕೊಳ್ಳಲು ನಿನ್ನಲ್ಲಿ ಎಷ್ಟು ಸಂಯಮವಿದೆ ಎನ್ನುವುದರಲ್ಲಿ. ಅರ್ಥಾತ್‌, ದಿನನಿತ್ಯದ ಚಿಕ್ಕಪುಟ್ಟ ಸಂಗತಿಗಳಲ್ಲಿ. ಬೆಳಗ್ಗೆ ಎದ್ದಾಗ ನೀನು ಹೇಳುವ ಗುಡ್‌ಮಾರ್ನಿಂಗ್‌ಗಳಲ್ಲಿ, ಸಾಯಂಕಾಲ ಆಫೀಸಿಂದ ಬಂದಾಗ ಆಕೆಯ ದಿನ ಹೇಗಿತ್ತು ಎಂದು ಕಿವಿಗೊಟ್ಟು ಆಲಿಸುವ ಸಂವೇದನೆಯಲ್ಲಿ, ನಿನ್ನ ಸ್ನೇಹಿತರು ಮನೆಗೆ ಬಂದಾಗ ಅವರೆದುರು ನೀನು ಆಕೆಗೆ ಕೊಡುವ ಮಹತ್ವದಲ್ಲಿ’ ಅಂದೆ. 

 ಬಹುತೇಕ ಸಂಸಾರಗಳ ಕಥೆಯಿದು. ಮದುವೆಗೂ ಮುನ್ನ ಪ್ರೇಮಿ ಪ್ರಿಯತಮೆಯ ದಿನವನ್ನು ಉತ್ತಮಗೊಳಿಸಲು ಆಕೆಯನ್ನು ಯಾವೆಲ್ಲ ಜಾಗಗಳಿಗೆ ಕರೆದುಕೊಂಡು ಹೋಗುತ್ತಾನೆ, ಆಕೆಯ ನೋವಿಗೆ ಎಷ್ಟು ಬೇಗನೇ ಸ್ಪಂದಿಸುತ್ತಾನೆ, ಅವಳ ಮಾತುಗಳಿಗೆ ಎಷ್ಟು ಕಿವಿಯಾಗುತ್ತಾನೆ ಎಂದರೆ “ಜೀವನ ಪರ್ಯಂತ ನೀನು ನನ್ನ ಇಷ್ಟೇ ಪ್ರೀತಿಸುತ್ತೀಯಾ?’ ಅಂತ ಆಕೆ ಕೇಳುತ್ತಾಳೆ. “ಸಂಶಯವೇ ಬೇಡ’ ಎಂದು ಇವನು ಅಷ್ಟೇ ಕಾನ್ಫಿಡೆನ್ಸ್‌ನಿಂದ ಹೇಳುತ್ತಾನೆ. 

ಆದರೆ ಆಗುವುದೇ ಬೇರೆ. ಹೆಂಡತಿಗೆ ಅನೇಕ ಜವಾಬ್ದಾರಿಗಳು ಬರುತ್ತವೆ, ಗಂಡನಾದವನ ತಲೆಯ ಮೇಲೂ ಹತ್ತಾರು ಜವಾಬ್ದಾರಿಗಳು ಸೇರಿಕೊಳ್ಳುತ್ತವೆ. ಮೊದಲಿನಂತೆ ಆಕೆಗಾಗಿ ಗಾರ್ಡನ್‌ನಿಂದ ಕತ್ತರಿಸಿದ ರೋಸ್‌ ತರಲು, ಬೈಕ್‌ ಮೇಲೆ ವೇಗವಾಗಿ ರೈಡ್‌ ಮಾಡಿಸಲು ಅವನಿಗೆ ಸಾಧ್ಯವಾಗುವುದಿಲ್ಲ. “ನೀನು ಮೊದಲಿನಂತೆ ಇಲ್ಲ’ ಎಂದು ಅವಳಂದಾಗ “ನನಗೆ ನೂರಾರು ಕೆಲಸ ಇವೆ ‘ ಎಂದು ಗೊಣಗುಟ್ಟುತ್ತಾನೆ ಪತಿ. ನಂತರ “ನೀನೂ ಮೊದಲಿನಂತೆ ಇಲ್ಲ’ ಎಂದು ಅವನು ಆರೋಪಿಸಿದಾಗ ಇವಳು “ಮನೆ ಕೆಲಸ ಏನು ಕಡಿಮೆ ಇರುತ್ತದಾ, ನನಗೂ ಸಾಕಾಗಿದೆ’ ಎನ್ನುತ್ತಾಳೆ. ಇಬ್ಬರಲ್ಲಿ ಯಾರು ಹೆಚ್ಚು ದಣಿಯುತ್ತಾರೆ, ಈ ಸಂಸಾರವನ್ನು ಸಮಸ್ಥಿತಿಯಲ್ಲಿಡಲು ಯಾರು ಹೆಚ್ಚು ಒದ್ದಾಡುತ್ತಿದ್ದಾರೆ ಎನ್ನುವುದನ್ನು ರುಜುವಾತು ಮಾಡುವ ವಾಗ್ಯುದ್ಧವಾಗಿ ಆ ಸಂಭಾಷಣೆ ಬದಲಾಗಿಬಿಡುತ್ತದೆ. ಆದರೆ ಇಬ್ಬರೂ ದಣಿದಿರುತ್ತಾರೆ ಎನ್ನುವುದನ್ನೂ ಇಬ್ಬರೂ ಒಪ್ಪಿಕೊಂಡರೆ ಹೇಗಿರುತ್ತದೆ?

ಎಷ್ಟೇ ಸುಸ್ತಾದರೂ ಮೇಲೆ ಹೇಳಲಾದ ಆ ಚಿಕ್ಕಪುಟ್ಟ ಸಂಗತಿಗಳನ್ನು ಅನುಸರಿಸಲು ಸಾಧ್ಯವಿದೆಯಲ್ಲವೇ? ಪ್ರೀತಿ ಎನ್ನುವುದು ಒಂದು ದಿನ ಹುಟ್ಟಿ ಜೀವನ ಪರ್ಯಂತ ಇರುವಂಥದ್ದಲ್ಲ, ಅದಕ್ಕಾಗಿ ನಿರಂತರ ಶ್ರಮ ಅತ್ಯಗತ್ಯ. ಭಾನುವಾರದಂದು ನೀವು ಹೆಂಡತಿಯನ್ನು ಕರೆದುಕೊಂಡು ಹೋಗಿ ವಸ್ತುಗಳನ್ನು ಗಿಫ್ಟ್ ಕೊಡಿಸಿದರೆ ಆಯಿತೇ? ಪ್ರತಿ ನಿತ್ಯವೂ ಆಕೆಗೆ ಭಾವನೆಗಳ-ಸ್ಪಂದನೆಯ ಗಿಫ್ಟ್ ಕೊಡಿ. ಆಗಲೇ ಹೇಳಿದಂತೆ, ಪ್ರೀತಿಯನ್ನು ಕಾಯ್ದುಕೊಳ್ಳಲು  ನಿರಂತರತೆ ಮುಖ್ಯ. ನಿರಂತರತೆಯೇ, ಸದೃಢತೆಯ ರಹಸ್ಯ. 

ಮಧ್ಯವಯಸ್ಸು ದಾಟಿದ ಬಹುತೇಕ ದಂಪತಿಗಳಲ್ಲಿ ಮತ್ತು ಯುವ ಜೋಡಿಯಲ್ಲಿ ನಾನು ಒಂದು ಗುಣವನ್ನು ಗಮನಿಸಿದ್ದೇನೆ. ಮಧ್ಯವಯಸ್ಕ ಗಂಡ-ಹೆಂಡತಿ ಪರಸ್ಪರ 5-10 ಅಡಿ ಅಂತರ ಕಾಯ್ದುಕೊಂಡು ನಡೆದುಹೊರಟಿರುತ್ತಾರೆ. ಅದೇ ಯುವ ಜೋಡಿ, ಮೈಗೆ ಗೋಂದು ಹಚ್ಚಿಕೊಂಡಂತೆ ಅಂಟಿಕೊಂಡಿರುತ್ತಾರೆ. ಆ ಯುವ ಜೋಡಿಯನ್ನು ನೋಡಿ ಮಧ್ಯವಯಸ್ಕ ಗಂಡ-ಹೆಂಡತಿ “ಮುಂದೆ ಇವರೂ ನಮ್ಮಂತೆ ಆಗುತ್ತಾರೆ’ ಎಂದು ವ್ಯಂಗ್ಯವಾಡುತ್ತಾರೆ/ನಿಟ್ಟುಸಿರುಬಿಡುತ್ತಾರೆ. ದುರಂತವೆಂದರೆ, “ನಾವೂ ಮತ್ತೆ ಇವರಂತೆ ಆಗಬಲ್ಲೆವು’ ಎನ್ನುವುದನ್ನು ಮಾತ್ರ ಮರೆತುಬಿಟ್ಟಿರುತ್ತಾರೆ, ತಮ್ಮ ನಡುವಿನ ಅಂತರವನ್ನು ಕಡಿಮೆ ಮಾಡಿ ಹತ್ತಿರವಾಗಲು ಹೆಚ್ಚು ಶ್ರಮ ಪಡಬೇಕಿಲ್ಲ ಎನ್ನುವುದು ಅವರ ಅರಿವಿಗೆ ಬರುವುದೇ ಇಲ್ಲ. ಅಂತರ ಹೆಚ್ಚುತ್ತಾ ಹೋಗುತ್ತದೆ. ದೈಹಿಕವಾಗಿಯೂ, ಮಾನಸಿಕವಾಗಿಯೂ… ನಿಮ್ಮ ಸಂಸಾರದಲ್ಲಿ ಇಂಥದ್ದೊಂದು ಅಂತರ ಸೃಷ್ಟಿಯಾಗಿದೆಯೇ? ಅದನ್ನು ತಗ್ಗಿಸಲು ಏನು ಮಾಡುತ್ತೀರಿ? ನೀವು ನಿಮ್ಮ ಮಡದಿ ಪ್ರೇಮಿಗಳ್ಳೋ ಅಥವಾ ಬರೀ ರೂಮ್‌ಮೇಟ್‌ಗಳ್ಳೋ?

ಸೈಮನ್‌ ಸಿನೆಕ್‌
ಬ್ರಿಟಿಷ್‌-ಅಮೆರಿಕನ್‌ ಲೇಖಕ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.