ಕಾಟ್ರೆಲ್ ನ ಸೆಲ್ಯೂಟ್, ಬಾಂಗ್ಲಾದ ನಾಗಿನ್ ಡಾನ್ಸ್ ; ಕ್ರಿಕೆಟ್ ನ ಅಪರೂಪದ ಸಂಭ್ರಮಾಚರಣೆಗಳು

Team Udayavani, Dec 9, 2019, 6:12 PM IST

ನೀವು ಕ್ರಿಕೆಟ್ ಪ್ರೇಮಿಯಾಗಿದ್ದರೆ ನಿಮಗೆ ಕ್ರಿಕೆಟ್ ನಲ್ಲಿ ನ ಸಂಭ್ರಮಾಚರಣೆಗಳು ಹೇಗಿರುತ್ತವೆ ಎನ್ನುವ ಪರಿಚಯ ನಿಮಗಿರಬಹುದು. ಅದರಲ್ಲೂ ಕೆಲ ಆಟಗಾರರು ತಮ್ಮ ಆಟಕ್ಕಿಂತ ಹೆಚ್ಚಾಗಿ ವಿಭಿನ್ನ ಸಂಭ್ರಮಾಚರಣೆಗಳಿಂದ ಜಗತ್ತಿನ ಗಮನ ಸೆಳೆಯುತ್ತಾರೆ. ಅಂತಹ ಕೆಲವು ಸ್ವಾರಸ್ಯಕರ ಸಂಭ್ರಮಾಚರಣೆಗಳ ಬಗ್ಗೆ ಇಲ್ಲಿದೆ ಕಿರು ಮಾಹಿತಿ.

ಶೆಲ್ಡನ್ ಕಾಟ್ರೆಲ್ ನ ಸೆಲ್ಯೂಟ್
ಇತ್ತೀಚಿನ ದಿನಗಳಲ್ಲಿ ವೆಸ್ಟ್ ಇಂಡೀಸ್‌ ತಂಡದಲ್ಲಿ ಮಿಂಚುತ್ತಿರುವ ವೇಗಿ. ಪ್ರತಿ ವಿಕೆಟ್ ಪಡೆದಾಗಲೂ ತನ್ನ ಹೊಸ ಬಗೆಯ ಸೆಲ್ಯೂಟ್ ಶೈಲಿಯ ಸಂಭ್ರಮಾಚರಣೆಯಿಂದ ಗಮನ ಸೆಳೆಯುತ್ತಿದ್ದಾರೆ.ಸ್ವತಃ ಯೋಧನಾಗಿರುವ ಕಾಟ್ರೆಲ್ ಅದೇ ಶೈಲಿಯಲ್ಲಿ ಸಂಭ್ರಮಿಸುತ್ತಾರೆ. ವಿಕೆಟ್ ಬಿದ್ದ ಕೂಡಲೇ ನಿಂತಿದ್ದ ಸ್ಥಳದಿಂದ ನಾಲ್ಕು ಹೆಜ್ಜೆ ಮುಂದೆ ಬಂದು ಎದೆಯುಬ್ಬಿಸಿ ಸೆಲ್ಯೂಟ್ ಮಾಡುತ್ತಾರೆ. ವಿಶ್ವ ಕಪ್ ನ ಪಂದ್ಯದಲ್ಲಿ ಭಾರತದ ಶಮಿ ಕಾಟ್ರೆಲ್ ವಿಕೆಟ್ ಪಡೆದಾಗ ಸೆಲ್ಯೂಟ್ ಶೈಲಿಯಲ್ಲಿ ಅಣಕವಾಡಿದಾಗ ವಿಂಡೀಸ್ ವೇಗಿ ಸೆಲ್ಯೂಟ್ ಹಿಂದಿನ ಕಥೆ ಜಗಜ್ಜಾಹೀರು ಮಾಡಿದ್ದರು.ಬಾಂಗ್ಲಾದೇಶದ ಬೌಲರ್ ಇಬಾದತ್ ಹುಸೈನ್ ಕೂಡಾ ವಾಯುಪಡೆಯ ಯೋಧನಾದ ಕಾರಣ ಸೆಲ್ಯೂಟ್ ಸೆಲೆಬ್ರೇಶನ್ ಮಾಡುತ್ತಾರೆ.

ಬಾಂಗ್ಲಾದೇಶದ ನಾಗಿನ್ ಡಾನ್ಸ್ 
ಬಹುಶಃ ಅತೀ ಹೆಚ್ಚು ಟೀಕೆಗೆ ಒಳಗಾದ ಒಂದು ತಂಡದ  ಸಂಭ್ರಮಾಚರಣೆಯಿದು. ನಿದಹಾಸ್ ತ್ರಿಕೋನ ಸರಣಿಯಲ್ಲಿ ಬಾಂಗ್ಲಾ ಆಟಗಾರರು ಆರಂಭಿಸಿದ ಈ ನಾಗಿನ್ ನೃತ್ಯ ನಂತರ ಅವರನ್ನೇ ಮುಜುಗರಕ್ಕೆ ದೂಡಿತು. ಲಂಕಾ ವಿರುದ್ಧದ  ನಿರ್ಣಾಯಕ ಪಂದ್ಯದಲ್ಲಿ ಗೆದ್ದ ಬಾಂಗ್ಲಾದೇಶದ ಆಟಗಾರರು ಎರಡೂ ಕೈ ಮೇಲಿತ್ತು ನಾಗಿನ್ ಡಾನ್ಸ್ ಮಾಡಿದ್ದರು. ಆದರೆ ಅವರ ಸಂಭ್ರಮಾಚರಣೆಯಿಂದ ಹೆಚ್ಚಾಗಿ ಎದುರಾಳಿಯನ್ನು ಅಣಕಿಸುವಂತಿತ್ತು.

ಇದರಿಂದಾಗಿ ಕೆರಳಿದ್ದ ಲಂಕಾ ಆಟಗಾರರು ಭಾರತ- ಬಾಂಗ್ಲಾ ನಡುವಿನ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಬೆಂಬಲಿಸಿದ್ದರು. ಅಂತಿಮ ಓವರ್ ನಲ್ಲಿ ಬಾಂಗ್ಲಾ ಸೋತಾಗ ಲಂಕಾ ಬೆಂಬಲಿಗರು ಅದೇ  ನಾಗಿನ್ ಡ್ಯಾನ್ಸ್ ಮಾಡಿದ್ದರು.

ಕೆಸ್ರಿಕ್ ವಿಲಿಯಮ್ಸ್ ನ ನೋಟ್ ಬುಕ್ ಸಂಭ್ರಮ
ಇತ್ತೀಚೆಗೆ ವಿರಾಟ್ ಕೊಹ್ಲಿ ನೋಟ್ ಬುಕ್ ಶೈಲಿಯ ಸಂಭ್ರಮಾಚರಣೆ ಮಾಡಿದ್ದು ನಿಮಗೆ ಗೊತ್ತಿರಬಹುದು. ಆದರೆ ಈ ಶೈಲಿಯನ್ನು ಮೊದಲು ಮಾಡಿದ್ದು ಕೆಸ್ರಿಕ್ ವಿಲಿಯಮ್ಸ್.

ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆಡ್ರಿಕ್ ವಾಲ್ಟನ್ ವಿಕೆಟ್ ಪಡೆದಾಗ ಕೆಸ್ರಿಕ್ ವಿಲಿಯಮ್ಸ್ ಅವರ ಎದುರಿಗೆ ಹೋಗಿ ಸಹಿ ಮಾಡುವಂತೆ ನಟಿಸಿದ್ದರು. ಮುಂದಿನ ಪಂದ್ಯದಲ್ಲಿ ಇದಕ್ಕೆ ಸರಿಯಾಗಿ ತಿರುಗೇಟು ನೀಡಿದ ವಾಲ್ಟನ್, ವಿಲಿಯಮ್ಸ್ ಅವರ ಒಂದೇ ಓವರ್ ನಲ್ಲಿ ಎರಡು ಬೌಂಡರಿ ಎರಡು ಸಿಕ್ಸರ್ ಬಾರಿಸಿದ್ದರು ಮತ್ತು ಪ್ರತೀ ಹೊಡೆತದ ನಂತರ ನೋಟ್ ಬುಕ್ ಶೈಲಿಯನ್ನು ಮಾಡಿ ಕಿಚಾಯಿಸಿದ್ದರು.

ಚಾಂಪಿಯನ್ ಡ್ಯಾನ್ಸ್
ಒಂದು ಕಾಲದಲ್ಲಿ ಭಾರಿ ಸದ್ದು ಮಾಡಿದ್ದ ಡ್ಯಾನ್ಸ್ ಇದು. ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಡ್ವೇನ್ ಬ್ರಾವೋ ಅವರ ಆಲ್ಬಮ್ ಸಾಂಗ್ ‘ಚಾಂಪಿಯನ್ ‘ ಭಾರಿ ಜನಪ್ರೀಯತೆ ಪಡೆಯಿತು.

2016ರಲ್ಲಿ ಬಿಡುಗಡೆಯಾದ ಈ ಹಾಡಿನ ನೃತ್ಯವನ್ನು ಬ್ರಾವೋ ವಿಕೆಟ್ ಪಡೆದ ಪ್ರತಿ ಸಂದರ್ಭದಲ್ಲೂ ಮೈದಾನದಲ್ಲಿ ಮಾಡುತ್ತಿದ್ದರು. ಇದರಿಂದಾಗಿ ಚಾಂಪಿಯನ್ ಹಾಡು ಮತ್ತು ನೃತ್ಯ ಬೇಗನೆ ಜನಪ್ರಿಯವಾಯಿತು.

2016ರ ಟಿ ಟ್ವೆಂಟಿ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್  ಗೆದ್ದಾಗಿ ಇಡೀ ತಂಡ ಮೈದಾನದಲ್ಲಿ ಇದೇ ಹಾಡಿಗೆ ಕುಣಿದಿತ್ತು.

ಇಮ್ರಾನ್ ತಾಹೀರ್ ಒಟ

ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಸ್ಪೆಷಲಿಸ್ಟ್ ಇಮ್ರಾನ್ ತಾಹೀರ್ ರದ್ದು ಇನ್ನೊಂದು ಬಗೆಯ ಸಂಭ್ರಮಾಚರಣೆ. ಪ್ರತೀ ವಿಕೆಟ್ ಪಡೆದಾಗ ತಾಹೀರ್ ತನ್ನ ಎರಡೂ ಕೈ ಮೇಲೆತ್ತಿ ಮೈದಾನದ ತುಂಬೆಲ್ಲಾ ಓಡುತ್ತಾರೆ. ತಾಹೀರ್ ಓಟ ನೋಡಿ ಸಹ ಆಟಗಾರರು ಅವರನ್ನು ಬೆನ್ನತ್ತಿ ಹೋಗುತ್ತಾರೆ. ಮೈದಾನಕ್ಕೆ ಆಟ ನೋಡಲು ಬಂದ ಅಭಿಮಾನಿಗಳಿಗೆ ಈ ಓಟದ ಬಿಟ್ಟಿ ಮಜಾ.

ಕೀರ್ತನ್ ಶೆಟ್ಟಿ ಬೋಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...

  • ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ...