• ಅಮೆರಿಕದಲ್ಲಿ ಅ ಆ ಇ ಈ

  ನವೆಂಬರ್‌ 1 ಕಳೆದು ಎರಡು ದಿನಗಳಾದವು. ಮತ್ತೂಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ದಾಟಿ ಹೋಗಿದೆ. ಆದರೆ, ಅಮೆರಿಕದ ಕೆಲವೆಡೆ ಪ್ರತಿದಿನವೂ ಕನ್ನಡೋತ್ಸವ! ಕರ್ನಾಟಕದಿಂದ 13 ಸಾವಿರ ಕಿ. ಮೀ. ದೂರದಲ್ಲಿರುವ ಆ ದೇಶದಲ್ಲಿ ಕನ್ನಡ ಕಲಿಕೆಯ ಮೂಲಕ ಹೊಸ…

 • ಕತೆ: ನೀರು

  ಎಷ್ಟು ದಿನಗಳಿಂದ ಹೀಗೆಯೇ ಕುಳಿತ್ತಿದ್ದೆವೋ ಗೊತ್ತಿಲ್ಲ. ಮೂರ್‍ನಾಲ್ಕು ದಿನವಂತೂ ಕಳೆದಿರಬಹುದು. ಯಾವಾಗಲೂ ಕಪ್ಪಗಿನ ಮೋಡ ಆಗಸವನ್ನು ಆವರಿಸಿರುವ ಕಾರಣ ಇದು ಮುಂಜಾನೆಯೋ, ಮಧ್ಯಾಹ್ನವೋ ಒಂದೂ ಗೊತ್ತಾಗುತ್ತಿಲ್ಲ. ಸುತ್ತಲೂ ನೀರು… ನೀರು… ನೀರು… ಕಣ್ಣು ಹಾಯಿಸಿದಷ್ಟೂ ದೂರದವರೆಗೂ ಬರೀ ನೀರಷ್ಟೇ…

 • ಒಂದು ಪುಟ್ಟ ಕತೆ 

  ಒಬ್ಬ ರಾಜನಿದ್ದ. ಅವನೊಂದು ದಿನ ಬೇಟೆಗೆ ಹೋಗಿದ್ದ. ಅಲ್ಲೊಬ್ಬ ಮುನಿಯ ದರ್ಶನವಾಯಿತು. ಅರಸ ಮುನಿಗೆ ವಂದಿಸಿ ತನ್ನ ಅರಮನೆಗೆ ಬಂದು ಆತಿಥ್ಯ ಸ್ವೀಕರಿಸಬೇಕೆಂದು ಕೇಳಿಕೊಂಡ. ಯತಿಯ ಮನಸ್ಸು ಅರಸನ ಆತಿಥ್ಯವನ್ನು ಪಡೆಯಲು ನಿರಾಕರಿಸಿತು. ಆದರೂ ಅರಸ ಬಿಡಲಿಲ್ಲ. ಮುನಿ,…

 • ಜ್ಞಾನದ ಹೆಬ್ಟಾಗಿಲು ಗುರು ದ್ವಾರ

  ಧೈರ್ಯ, ಶೌರ್ಯ, ಸಾಹಸ, ಉದಾರತೆಯ ಸಿಕ್ಖ್ ಸಮುದಾಯ ಗುರು ನಾನಕರ 550ನೆಯ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಿರುವ ವರ್ಷವಿದು. ಜಾತಿ ಧರ್ಮಗಳ ಭೇದವಿಲ್ಲದ ಸರ್ವ ಸಮಾನತೆಯ ಸರಳ ಬದುಕಿನ ಹಾದಿಯಲ್ಲಿ ನಡೆದ ಗುರು ನಾನಕರು, ಜಗತ್ತಿಗೇ ಗುರುಗಳಾದವರು. ನಾನು ನನ್ನ…

 • ಚಂದನವನಕ್ಕೆ ಮತ್ತೂಬ್ಬಳು ಮೋಕ್ಷಾ

  ಈಗಂತೂ ಕನ್ನಡ ಚಿತ್ರರಂಗದಲ್ಲಿ ಎಲ್ಲಿ ನೋಡಿದ್ರೂ ಹೊಸ ಪ್ರತಿಭೆಗಳದ್ದೇ ಕಾರುಬಾರು. ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಹೀಗೆ ಎಲ್ಲಾ ಕಡೆ ಹೊಸಗಾಳಿ ಜೋರಾಗಿ ಬೀಸುತ್ತಿದೆ. ಅದರಲ್ಲೂ ಅಚ್ಚ ಕನ್ನಡದ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿ ನಾಯಕಿಯರಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವುದು ಚಂದನವನದ…

 • ಬೊಗಸೆಯಲ್ಲಿ ಮಳೆ ಕಾಯ್ಕಿಣಿ ಕಥನ : ಒಂದು ಸಾಕ್ಷ್ಯಚಿತ್ರ ನಿರ್ಮಾಣದ ಸುತ್ತ

  2013ರಲ್ಲಿ ಜಯಂತ ಕಾಯ್ಕಿಣಿಯವರ ಸಿನೆಮಾ ಹಾಡುಗಳ ಕುರಿತ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೆ. ಅಲ್ಲಿಂದ ಮರಳುವ ಹಾದಿಯಲ್ಲಿ ಗೆಳೆಯರ ಜೊತೆ ಕಾರ್ಯಕ್ರಮದ ಅವಲೋಕನದ ಮಾತುಗಳನ್ನಾಡುತ್ತಿರುವಾಗ ಜಯಂತರ ಕುರಿತು ಸಾಕ್ಷ್ಯಚಿತ್ರ ಮಾಡುವ ಯೋಚನೆಯೊಂದು ಸುಳಿದುಹೋಯಿತು. ಮತ್ತೆ ಕೆಲವೇ ದಿನಗಳಲ್ಲಿ ನನ್ನ ಸಹಪಾಠಿಗಳಾದ ನಿತಿನ್‌,…

 • ಆಡು ಕಡಿಯುವ ಮುದುಕ ಹೇಳಿದ ಚೇರಮಾನ್‌ ರಾಜನ ಕತೆ

  ಚಂಡಮಾರುತವೊಂದು ಮೂಡಿ ಮರೆಯಾಗಿ ಇನ್ನೇನು ಎಲ್ಲ ನಿಚ್ಚಳವೆಂದುಕೊಳ್ಳುವಾಗಲೇ ಇನ್ನೆಲ್ಲೋ ಕಡಲ ಕೊನೆಯಲ್ಲಿ ಮೂಡಿದ ನಿರ್ವಾತವೊಂದು ಸುಳಿಗಾಳಿಯಾಗಿ ಅದರ ಕಣ್ಣಿನ ಸುತ್ತ ಗಾಳಿಯಲೆಗಳು ಸೇರಿಕೊಂಡು ಅದೂ ಬರಬರುತ್ತ ಚಂಡಮಾರುತವಾಗಿ ಹಗಲನ್ನು ಕತ್ತಲೆಯಾಗಿಸಿ, ಇರುಳನ್ನು ಬೊಬ್ಬಿರಿವ ಕಡಲ ದನಿಯನ್ನಾಗಿಸಿ, ಇದೇನು ಯಾಕೆ…

 • “ತಾಯಿ ಕರುಳಿನ ಗೆಳೆಯ”

  ಇವತ್ತು ನನ್ನ ಗೆಳೆಯ ಸಿದ್ಧಲಿಂಗ ಪಟ್ಟಣಶೆಟ್ಟಿಯ 80ರ ಸಂಭ್ರಮ. ನನಗೀಗಾಗಲೇ ಎಂಬತ್ತಾಗಿದೆ. ಪಟ್ಟಣಶೆಟ್ಟಿ ನನಗಿಂತ ನಾಲ್ಕು ತಿಂಗಳಿನಷ್ಟು ಸಣ್ಣವನು. ಈಗ ನೆನಪಾಗಿ ಉಳಿದಿರುವ ಗಿರಡ್ಡಿ ಗೋವಿಂದರಾಜನೂ ನನಗಿಂತ ಕೊಂಚ ಕಿರಿಯನೇ. ನಾವು “ಹೋಗು, ಬಾ’ ಎನ್ನುವಂತೆ ಸಂಭಾಷಿಸುವವರು. ಬಹುವಚನದಲ್ಲಿ…

 • ಉಕ್ರೇನಿಯನ್‌ ಕತೆ: ತಂದೆಯ ಆಶೀರ್ವಾದ

  ಒಬ್ಬ ರೈತನಿದ್ದ. ಅವನಿಗೆ ಮೂರು ಮಂದಿ ಗಂಡುಮಕ್ಕಳಿದ್ದರು. ತುಂಬ ವರ್ಷಗಳಾದ ಬಳಿಕ ರೈತನ ಹೆಂಡತಿ ಇನ್ನೊಂದು ಗಂಡುಮಗುವಿಗೆ ಜನ್ಮ ನೀಡಿದಳು. ರೈತ ಮಗುವಿಗೆ ಐವಾನ್‌ ಎಂದು ಹೆಸರಿಟ್ಟು ಪ್ರೀತಿಯಿಂದ ಸಲಹತೊಡಗಿದ. ಆದರೆ ಅಣ್ಣಂದಿರಿಗೆ ಐವಾನನನ್ನು ಕಂಡರೆ ಆಗುತ್ತಿರಲಿಲ್ಲ. ಅವನನ್ನು…

 • ವಾಟ್ಸಾಪ್‌ ಕತೆ : ಕೊನೆಯ ಬೆಂಚಿನ ಹುಡುಗ

  ಯೋಗೀಶ್‌ ಕಾಂಚನ್‌ ಅವನೊಬ್ಬ ಕೊನೆಯ ಬೆಂಚಿನ ಹುಡುಗ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಂದೆ ಇಲ್ಲ. ತಾಯಿ ಮನೆಮನೆಯಲ್ಲಿ ಕಸ ಬಳಿದು, ಮುಸುರೆ ತಿಕ್ಕಿ ಜೀವನ ಸಾಗಿಸುತ್ತಿದ್ದಳು. ಈ ಹುಡುಗನೂ ಬೆಳಗ್ಗೆ ಬೇಗ ಎದ್ದು ಪೇಪರ್‌ ಹಾಕಿ, ಶಾಲೆಗೆ…

 • ಪ್ರಬಂಧ: ಪ್ರಾಯ, ಅಭಿಪ್ರಾಯ

  ಮೊನ್ನೆ ಡಾಕ್ಟರ್‌ ಹತ್ತಿರ ಮಗಳ ಜೊತೆ ಹೋಗಿದ್ದೆ. ಅಲ್ಲಿ ಹೆಸರು, ವಯಸ್ಸು ಕೇಳಿ ಬರೆದು ಕೊಳ್ಳುತ್ತಿದ್ದ ಡಾಕ್ಟರ್‌ ನಾನು ನನ್ನ ಹೆಸರು ಹೇಳಿ, ವಯಸ್ಸು ಹೇಳುವಷ್ಟರಲ್ಲಿ ಅವರೇ ನನ್ನ ವಯಸ್ಸಿಗಿಂತ ಹತ್ತು ವರ್ಷ ಕಡಿಮೆ ವಯಸ್ಸು ಬರೆದುಕೊಂಡು, “ಸರಿ…

 • ಜಗದಗಲ ಬೆಳಕೇ

  ಚಂದ್ರಮಾನದ ಆಶ್ವಯುಜ-ಕಾರ್ತಿಕ ಮಾಸಗಳ (ಅಕ್ಟೋಬರ್‌-ನವೆಂಬರ್‌) ಬಹುಳ-ಚತುರ್ದಶೀ, ಅಮಾವಾಸ್ಯೆ ಮತ್ತು ಶುದ್ಧಪ್ರತಿಪತ್‌ ತಿಥಿಗಳಂದು ಬರುವ ದೀಪಾವಳಿಯು ಶರದೃತುವಿನ ಮಧ್ಯಮಣಿ. ಮಳೆಗಾಲದ ಬಿರುಬು ತಗ್ಗಿ, ಬೇಸಿಗೆಯ ಬೇಗೆಯಿರದೆ, ಚಳಿಗಾಲವು ದೂರವಿರುವ ಈ ಕಾಲವು ನಿಜಕ್ಕೂ ವಾಲ್ಮೀಕಿ ಮಹರ್ಷಿಗಳು ಹೇಳುವಂತೆ ಅನೇಕಾಶ್ರಯಚಿತ್ರಶೋಭಾ, ಕಾಳಿದಾಸನೆನ್ನುವಂತೆ…

 • ಯಶೋದಮ್ಮ

  ಯಶೋದೆಯ ಬೆನ್ನನ್ನು ಹಿಂದಿನಿಂದ ನೆಕ್ಕುತ್ತಿತ್ತು ಆ ಪುಟ್ಟ ಕರು. ಅದರ ನಾಲಿಗೆಯಿಂದ ಬೆನ್ನು ತಣ್ಣಗಾದಂತೆ ಮೊಣಕೈಯಲ್ಲೇ ಅದರ ಮೂತಿಯನ್ನು ನೂಕಿ, ಹಾಲು ಕರೆಯುವ ಕಾಯಕವನ್ನು ಮುಂದುವರಿಸಿದ್ದಳು ಯಶೋದೆ. ಇವತ್ತೇಕೋ ಬೆಳಗಿನಿಂದ ಅವನದ್ದೇ ನೆನಪು. ಕೂತರೂ ನಿಂತರೂ ಏನು ಮಾಡಿದರೂ…

 • ಹಳ್ಳಿಯಿಂದ ದಿಲ್ಲಿಗೆ ಕನ್ನಡ

  ಕನ್ನಡದ ಬಗ್ಗೆ ನಾನು ಸಾಕಷ್ಟು ಕೇಳಿದ್ದೇನೆ. ಆದರೆ ಲಿಪಿಯನ್ನು ಕುತೂಹಲದಿಂದ ಪ್ರತೀಬಾರಿ ಗಮನಿಸಿದಾಗಲೂ ಕೊನೆಗೆ ನನ್ನಲ್ಲಿ ಉಳಿಯುವುದು ಜಿಲೇಬಿಯ ಆಕೃತಿ ಮಾತ್ರ” ಇತ್ತೀಚೆಗೆ ನನ್ನ ದೆಹಲಿಯ ಸಹೋದ್ಯೋಗಿಯೊಬ್ಬರು ಹೀಗೊಂದು ಮಾತನ್ನು ಹೇಳಿದಾಗ ನಾನು ಸಣ್ಣಗೆ ನಕ್ಕುಬಿಟ್ಟಿದ್ದೆ. ಆದರೆ, ದೆಹಲಿ…

 • ಸೈಕಲ್ಲು ಗಾಲಿಗಳಂತೆ ಚಲಿಸುತ್ತಿರುವ ನಿರಾಯಾಸ ಬದುಕು

  ಮಧ್ಯಪೂರ್ವ ಅರಬಿ ಕಡಲಿನ ನಿರ್ವಾತದಿಂದುಂಟಾದ ಸುಯಿಲುಗಾಳಿಯೊಂದು ಒಬ್ಬಳು ಪ್ರಕ್ಷುಬ್ಧ ಸುಂದರಿಯಂತೆ ಸುಳಿಯುತ್ತ ನಾನಿರುವ ಈ ದ್ವೀಪದ ಮೇಲೆ ಹಾದುಹೋಗುತ್ತಿತ್ತು. ಸುಮಾರು ಎರಡು ಸಾವಿರ ಮೈಲುಗಳುದ್ದ ನೀಲ ಸಾಗರದ ಮೇಲೆ ಅಡೆತಡೆಯಿಲ್ಲದ ಸಂಚರಿಸಿದ ಸುಯಿಲು ಸುಂದರಿಯ ಕಿರುನಗೆಯಂಥ ಗಾಳಿಯಲೆಗಳು ಈ…

 • ನವೆಂಬರ್‌ ತಿಂಗಳಿನಲ್ಲಿ ಹರಿಪ್ರಿಯಾ ಕನ್ನಡ ಪಾಠ

  ಈ ವರ್ಷದ ಆರಂಭದಿಂದಲೂ ಒಂದರ ಹಿಂದೊಂದು ಚಿತ್ರಗಳಲ್ಲಿ ಅಭಿನಯಿಸುತ್ತ, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವ ನಟಿ ಹರಿಪ್ರಿಯಾ. ಇತ್ತೀಚೆಗಷ್ಟೇ ಹರಿಪ್ರಿಯಾ ನಾಯಕಿಯಾಗಿ ಅಭಿನಯಿಸಿರುವ ಎಲ್ಲಿದ್ದೆ ಇಲ್ಲಿ ತನಕ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರ…

 • ಮಾರ್ಜಾಲ ಮತ್ಸ್ಯ!

  ಕ್ಯಾಟ್‌ಫಿಶ್‌ ಎಂದಾಕ್ಷಣ ಎಲ್ಲರೂ ಯೋಚಿಸುವುದು, ಇದೇನಿದು ಬೆಕ್ಕಿನಂತೆ ಇರುವ ಮೀನೇ? ಈ ಮೀನಿಗೆ ಬೆಕ್ಕಿನಂತಹ ವಿಶಿಷ್ಟವಾದ ಮೀಸೆ ಇರುವುದರಿಂದಲೇ ಇದಕ್ಕೆ ಕ್ಯಾಟ್‌ಫಿಶ್‌ ಎಂಬ ಹೆಸರು ಬಂದಿದೆ.ಸೈಲ್ಲೂರಿ ಫಾರ್ಮೀಸ್‌ ಪ್ರಬೇಧದ ಸೈಲ್ಯೂರಿಡೀ ಕುಟುಂಬಕ್ಕೆ ಸೇರಿದ ಈ ಮೀನುಗಳು ಸಿಹಿನೀರಿನಲ್ಲಿ ಹೆಚ್ಚಾಗಿ…

 • ಚಿತ್ರವಾದ ಅಪ್ಸರೆ ವಿಯೆಟ್ನಾಮಿನ ಕತೆ

  ವುಮಂಗ್‌ ಎಂಬ ಶ್ರೇಷ್ಠ ಚಿತ್ರಕಾರನಿದ್ದ. ಅವನು ಯಾವುದೇ ಚಿತ್ರವನ್ನು ಬರೆದರೂ ಅದು ಜೀವ ಪಡೆದು ಸಂಚರಿಸುತ್ತದೆ ಎಂದು ಜನ ಹೊಗಳುತ್ತಿದ್ದರು. ಅವನಿಗೆ ಅಪಂಗ್‌ ಎಂಬ ಮಗನಿದ್ದ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಮಗನಿಗೆ ತಾನೇ ತಾಯಿಯೂ ಆಗಿ ವುಮಂಗ್‌ ಅವನನ್ನು…

 • ಒಂದು ಮಸ್ಸಾಲೇ…!

  ನಾ ಚಿಕ್ಕವಳಿದ್ದಾಗ ನನ್ನೂರಿನಲ್ಲಿ ಇದ್ದ ಮೂರು ಹೊಟೇಲುಗಳು ಒಂದೊಂದು ತಿಂಡಿಗೆ ಫೇಮಸ್ಸಾಗಿದ್ದವು. ಮನೆಯಿಂದ ಸುಮಾರು 2 ಕಿ. ಮೀ. ದೂರದಲ್ಲಿದ್ದ ಸಾಲಿಗ್ರಾಮದ ಮಂಟಪ ಹೊಟೇಲ್‌ನ ಮಸಾಲೆ ದೋಸೆ, ಗಡ್‌ಬಡ್‌ ಐಸ್‌ಕ್ರೀಮ್‌ ಎಂದರೆ ಮಾರುತಿ-ಸುಜುಕಿಯಂತೆ ಜೋಡಿಪದವಾಗಿತ್ತು. ಬಸ್ಸಿನ ಟಿಕೀಟಿನ ಹಣ…

 • ಹಣತೆಯೊಳಗಿನ ಘನತೆ

  ದೀಪಾವಳಿ ಆಚರಣೆಯ ಶುಭಾರಂಭವಾಗುವುದು ತ್ರೇತಾಯುಗದ ಮೊದಲ ದಿನ ಅಂದರೆ ಕಾರ್ತಿಕ ಮಾಸದ ಪ್ರತಿಪತ್‌ ಎಂದು ಹೇಳಲಾಗುತ್ತದೆ ಅಥವಾ ಆ ಪುಣ್ಯಯುಗವನ್ನು ದೀಪ ಬೆಳಗಿಸುವುದರ ಮೂಲಕ ಸ್ವಾಗತಿಸಿರಬೇಕು. ಅಂದಿನಿಂದ ಇಂದಿಗೂ ಈ ದಿನದಲ್ಲಿ ವಿಶೇಷವಾಗಿ ದೀಪಬೆಳಗಿಸಿ ಸಂಭ್ರಮಿಸುವ ಸಂಸ್ಕೃತಿ ಬೆಳೆದು…

ಹೊಸ ಸೇರ್ಪಡೆ