‘ತುರ್ತು ನಿರ್ಗಮನ’ ಮೂಲಕ ಸುನೀಲ್‌ ಆಗಮನ


Team Udayavani, Jun 20, 2022, 12:45 PM IST

Actor Sunil rao making come back trough Turtu nirgamana movie

“ಇಷ್ಟು ವರ್ಷ ಸಿನಿಮಾ ಮಾಡಲಿಲ್ಲ, ಸಿನಿಮಾದಿಂದ ದೂರವಿದ್ದೆ ಎನ್ನುವ ಭಾವನೆ ಚಿತ್ರರಂಗದಲ್ಲಿ ಮತ್ತು ನನ್ನಲ್ಲಿ ಇದ್ದರೂ, ಈ ಸಿನಿಮಾ ಆ ಎಲ್ಲ ಭಾವನೆಯನ್ನೂ ದೂರ ಮಾಡಲಿದೆ. ನನ್ನ ಮಟ್ಟಿಗೆ “ತುರ್ತು ನಿರ್ಗಮನ’ ಸಿನಿಮಾಕ್ಕಿಂತ ಒಳ್ಳೆಯ ಕಂ ಬ್ಯಾಕ್‌ ಸಿನಿಮಾ ಇನ್ನೊಂದು ಸಿಗೋದಕ್ಕೆ ಸಾಧ್ಯವೇ ಇಲ್ಲ! ಅಷ್ಟರ ಮಟ್ಟಿಗೆ ಈ ಸಿನಿಮಾದ ಮೇಲೆ ನನಗೆ ವಿಶ್ವಾಸವಿದೆ’ – ಇದು ನಾಯಕ ನಟ ಸುನೀಲ್‌ ರಾವ್‌ ಮಾತು.

ಹೌದು, “ಎಕ್ಸ್‌ಕ್ಯೂಸ್‌ ಮಿ’ ಖ್ಯಾತಿಯ ಸುನೀಲ್‌ ರಾವ್‌ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ಬಳಿಕ ಬಣ್ಣದ ಲೋಕದಿಂದ ಕೊಂಚ ಗ್ಯಾಪ್‌ ತೆಗೆದುಕೊಂಡಿದ್ದರು. ಸುಮಾರು ಒಂದು ದಶಕದ ಬಳಿಕ ಸುನೀಲ್‌ ರಾವ್‌ ಇದೀಗ “ತುರ್ತು ನಿರ್ಗಮನ’ ಸಿನಿಮಾದ ಮೂಲಕ ಭರ್ಜರಿಯಾಗಿ ಕಂ ಬ್ಯಾಕ್‌ ಮಾಡಲು ರೆಡಿ ಆಗಿದ್ದಾರೆ.

ಅಂದಹಾಗೆ, ಸುನೀಲ್‌ ರಾವ್‌ ನಾಯಕನಾಗಿ ಅಭಿನಯಿಸಿರುವ “ತುರ್ತು ನಿರ್ಗಮನ’ ಇದೇ ಜೂ. 24ರಂದು ತೆರೆ ಕಾಣುತ್ತಿದೆ. ಇದೇ ವೇಳೆ ಮಾತಿಗೆ ಸಿಕ್ಕ ಸುನೀಲ್‌ ರಾವ್‌ ತಮ್ಮ ಸಿನಿಮಾದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

“”ಎಕ್ಸ್‌ಕ್ಯೂಸ್‌ ಮಿ’ ಸಿನಿಮಾದಲ್ಲಿ ತುಂಬ ಜೋಶ್‌ ಆಗಿರುವ, ಎನರ್ಜಿಟಿಕ್‌ ಆಗಿರುವಂಥ ಪಾತ್ರವಿತ್ತು. ಆದ್ರೆ ಈ ಸಿನಿಮಾದಲ್ಲಿ ಅದಕ್ಕೆ ಸಂಪೂರ್ಣ ತದ್ವಿರುದ್ದ ಇರುವಂಥ ಪಾತ್ರ. ಸದಾ ಸೋಂಬೇರಿಯಾಗಿರುವ, ಆಲಸ್ಯವನ್ನೇ ಹೊದ್ದು ಮಲಗಿರುವಂಥ, ತುಂಬ ಉಡಾಫೆಯಾಗಿರುವಂಥ, ಜೀವನದಲ್ಲಿ ಗೊತ್ತು -ಗುರಿಯಿಲ್ಲದ, ಆದ್ರೆ ತನ್ನನ್ನು ತಾನು ತುಂಬ ಶ್ರೇಷ್ಟ ಎಂಬ ಭ್ರಮೆಯಲ್ಲಿರುವಂಥ ವಿಕ್ರಂ ಎಂಬ ಹುಡುಗನ ಪಾತ್ರ ನನ್ನದು. ಇಂಥ ಹುಡುಗನೊಬ್ಬನಿಗೆ ಇದ್ದಕ್ಕಿದ್ದಂತೆ ಲೈಫ್ನ ಎಂಡ್‌ ಸ್ಟೇಜ್‌ ಬಂದಾಗ ಹೇಗೆ ರಿಯಾಕ್ಟ್ ಮಾಡುತ್ತಾನೆ ಅನ್ನೋದು ಸಿನಿಮಾ. ಅದು ಹೇಗೆ ಅನ್ನೋ ಸಸ್ಪೆನ್ಸ್‌ನ ಸ್ಕ್ರೀನ್‌ ಮೇಲೆ ನೋಡಬೇಕು’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಡುತ್ತಾರೆ ಸುನೀಲ್‌.

“ಇಷ್ಟು ವರ್ಷಗಳಿಂದ ನಾನು ಕಂ ಬ್ಯಾಕ್‌ ಮಾಡೋದಕ್ಕೆ ಯಾವ ಥರದ ಸಬೆjಕ್ಟ್ ಹುಡುಕುತ್ತಿದ್ದೆನೋ, ಆ ಸಬ್ಜೆಕ್ಟ್ “ತುರ್ತು ನಿರ್ಗಮನ’ ಸಿನಿಮಾದಲ್ಲಿ ನನ್ನನ್ನು ಹುಡುಕಿಕೊಂಡು ಬಂದಿತು. ತಡ ಮಾಡದೆ ಸಿನಿಮಾ ಒಪ್ಪಿಕೊಂಡೆ. ನನಗಂತೂ ಈ ಸಿನಿಮಾದ ಸಬ್ಜೆಕ್ಟ್ ಮೇಲೆ ಸಂಪೂರ್ಣ ಭರವಸೆಯಿದೆ. ಈಗಾಗಲೇ ಟ್ರೇಲರ್‌ ಗೆ ಬಿಗ್‌ ರೆಸ್ಪಾನ್ಸ್‌ ಸಿಗುತ್ತಿದೆ. ಆಡಿಯನ್ಸ್‌ಗೂ ಖಂಡಿತವಾಗಿಯೂ ಸಿನಿಮಾ ಇಷ್ಟವಾಗುತ್ತದೆ’ ಎಂಬ ಭರವಸೆಯ ಮಾತನಾಡುತ್ತಾರೆ ಸುನೀಲ್‌ ರಾವ್‌.

ಇದನ್ನೂ ಓದಿ:ದಿನನಿತ್ಯ ಜೀವನದಲ್ಲಿ ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳಿ: ತಾರಾ

“ತುರ್ತು ನಿರ್ಗಮನ’ ಚಿತ್ರತಂಡದ ಬಗ್ಗೆ ಮಾತನಾಡುವ ಸುನೀಲ್‌ ರಾವ್‌, “ಇಡೀ ಚಿತ್ರತಂಡ ಅತ್ಯಂತ ವೃತ್ತಿಪರವಾಗಿ ಈ ಸಿನಿಮಾವನ್ನು ಮಾಡಿದೆ. ಕಲಾವಿದರು, ತಂತ್ರಜ್ಞರ ಪರಿಶ್ರಮ ಸಿನಿಮಾದ ಪ್ರತಿ ಫ್ರೇಮ್‌ನಲ್ಲೂ ಕಾಣುತ್ತದೆ. ಒಂದೊಳ್ಳೆ ಸಿನಿಮಾ, ಒಂದೊಳ್ಳೆ ಟೀಮ್‌ ಜೊತೆಗೆ ಮತ್ತೆ ಬಿಗ್‌ ಸ್ಕ್ರೀನ್‌ಗೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರೇ ಮಾತನಾಡುತ್ತಾರೆ’ ಎನ್ನುತ್ತಾರೆ ಸುನೀಲ್‌ ರಾವ್‌.

ಹೇಮಂತ್‌ ಕುಮಾರ್‌ ನಿರ್ದೇಶನದ “ತುರ್ತು ನಿರ್ಗಮನ’ ಚಿತ್ರದಲ್ಲಿ ಸುನೀಲ್‌ ರಾವ್‌ ಅವರೊಂದಿಗೆ ಸುಧಾರಾಣಿ, ರಾಜ್‌ ಬಿ. ಶೆಟ್ಟಿ, ಅಚ್ಯುತ ಕುಮಾರ್‌, ಅರುಣಾ ಬಾಲರಾಜ್‌, ಹಿತಾ ಚಂದ್ರಶೇಖರ್‌, ಸಂಯುಕ್ತಾ ಹೆಗ್ಡೆ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.