The Judgment: ನನ್ನ ಪಾತ್ರಕ್ಕೊಂದು ತೂಕವಿದೆ…

Team Udayavani, May 22, 2024, 6:01 PM IST

The Judgment: ನನ್ನ ಪಾತ್ರಕ್ಕೊಂದು ತೂಕವಿದೆ…

ನಟಿ ಮೇಘನಾ ಗಾಂವ್ಕರ್‌ ಜಡ್ಜ್ಮೆಂಟ್‌ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಈ ಬಾರಿ ಪ್ರೇಕ್ಷಕರು ತಮ್ಮ ಪರವಾಗಿ ಜಡ್ಜ್ಮೆಂಟ್‌ ನೀಡುತ್ತಾರೆ ಎಂಬ ನಂಬಿಕೆ ಅವರದು. ಹೌದು, ಮೇಘನಾ ನಟಿಸಿರುವ “ದಿ ಜಡ್ಜ್ ಮೆಂಟ್‌’ ಚಿತ್ರ ಮೇ 24ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೇಲೆ ಮೇಘನಾ ಸಾಕಷ್ಟು ನಿರೀಕ್ಷೆ ಇಟ್ಟಿದ್ದು, ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅದು ಅವರ ಮಾತಲ್ಲೇ…

ನಿಜ ಹೇಳಬೇಕೆಂದರೆ ಜಡ್ಜ್ ಮೆಂಟ್‌ ಸಿನಿಮಾಕ್ಕೆ ಕೊನೆಯದಾಗಿ ಸೇರ್ಪಡೆಯಾಗಿದ್ದೇ ನಾನು. ಇನ್ನೇನು ನಾನು ಮಾಡಬೇಕಾದ ಪಾತ್ರದ ಶೂಟಿಂಗ್‌ ಮಾಡೋದಕ್ಕೆ ಕೆಲವು ದಿನಗಳಷ್ಟೇ ಇದೆ ಎನ್ನುವಾಗ ಈ ಸಿನಿಮಾದ ಆಫ‌ರ್‌ ಬಂತು. ಆ ನಂತರ ಒಂದೇ ದಿನದಲ್ಲಿ ಆ ಆಫ‌ರ್‌ನ ನಾನೂ ಒಪ್ಪಿಕೊಂಡೆ.

ಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳದ್ದು, ಒಂದು ತೂಕವಾದರೆ,ಈ ಸಿನಿಮಾದ ಪಾತ್ರದ್ದು ಇನ್ನೊಂದು ತೂಕ. ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಈ ಸಿನಿಮಾದಲ್ಲಿದೆ.

ಸಿನಿಮಾದ ಕಥೆ, ಪಾತ್ರ, ಕಲಾವಿದರು ಮತ್ತು ತಂತ್ರಜ್ಞರ ತಂಡ ಎಲ್ಲವೂ ಇಷ್ಟವಾಯಿತು. ಹೀಗಾಗಿ ಖುಷಿಯಿಂದ ಈ ಸಿನಿಮಾ ಒಪ್ಪಿಕೊಂಡೆ. ಈ ಸಿನಿಮಾದಲ್ಲಿ ನಾನು ಪ್ರೊಫೆಸರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರವಿಚಂದ್ರನ್‌ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದೇನೆ. ಇಂದಿನ ಜನರೇಶನ್‌ ಮಹಿಳೆಯರು ಹೇಗೆ ಸ್ವತಂತ್ರವಾಗಿ ಬದುಕಲು ಬಯಸುತ್ತಾರೋ, ಅಂಥದ್ದೇ ಒಂದು ಪಾತ್ರ ಇದಾಗಿದೆ. ನನ್ನ ಪಾತ್ರ ಮತ್ತು ಸಿನಿಮಾದಲ್ಲಿ ನಾನಿರುವ ಸನ್ನಿವೇಶಗಳು ಹೆಚ್ಚಾಗಿ ಮನೆಯಲ್ಲೇ ನಡೆಯುತ್ತದೆ. ತುಂಬ ಎಮೋಶನ್‌ ಕ್ಯಾರಿ ಮಾಡುವಂಥ ಪಾತ್ರ ಇದಾಗಿದೆ.

ಮೊದಲ ಬಾರಿಗೆ ರವಿಚಂದ್ರನ್‌ ಅವರಂಥ ಲೆಜೆಂಡರಿ ಸ್ಟಾರ್‌ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬ ಖುಷಿಯಿದೆ. ನಾನು ಈ ಸಿನಿಮಾ ಒಪ್ಪಿಕೊಳ್ಳಲು ಇದೂ ಕೂಡ ಒಂದು ಕಾರಣ. ಕೆಲ ವರ್ಷಗಳ ಹಿಂದೆ ರವಿಚಂದ್ರನ್‌ ಅವರೊಂದಿಗೆ ಅಭಿನಯಿಸುವ ಅವಕಾಶ ಬಂದಿದ್ದರೂ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಜಡ್ಜ್ಮೆಂಟ್‌ ಸಿನಿಮಾದಲ್ಲಿ ಅದು ನೆರವೇರಿದೆ.

ರವಿಚಂದ್ರನ್‌ ಅವರೊಂದಿಗೆ ಕೆಲಸ ಮಾಡಿದ್ದು, ನಿಜಕ್ಕೂ ಖುಷಿಕೊಟ್ಟಿದೆ. ಇದೊಂದು ಕಂಪ್ಲೀಟ್‌ ಕೋರ್ಟ್‌ ರೂಂ ಡ್ರಾಮಾ ಇರುವ ಲೀಗಲ್‌ ಥ್ರಿಲ್ಲರ್‌ ಸಿನಿಮಾ. ನನ್ನ ಪ್ರಕಾರ ಕನ್ನಡದಲ್ಲಿ ಇಂಥ ಸಿನಿಮಾಗಳು ಬಂದಿದ್ದು ತುಂಬ ವಿರಳ. ಅಂಥ ವಿರಳ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾವಿದು. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ

ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ). ಇಂದಿನ ಕಾನೂನು, ನ್ಯಾಯ ವ್ಯವಸ್ಥೆ ಎಲ್ಲದರ ಚಿತ್ರಣ ಈ ಸಿನಿಮಾದಲ್ಲಿದೆ. ಇದೊಂದು ಲೀಗಲ್-ಥ್ರಿಲ್ಲರ್‌ ಶೈಲಿಯಸಿನಿಮಾವಾಗಿರುವುದರಿಂದ, ಇದಕ್ಕಿಂತ ಹೆಚ್ಚಾಗಿ ಸಿನಿಮಾದ ಬಗ್ಗೆ ಹೆಚ್ಚೇನೂ ಹೇಳಲಾರೆ.

ಯಾವುದೇ ಸಿನಿಮಾದ ಪಾತ್ರವಾದರೂ, ಅದಕ್ಕೆ ಅದರದ್ದೇ ಆದ ಒಂದಷ್ಟು ತಯಾರಿ ಇದ್ದೇ ಇರುತ್ತದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಗಂಭೀರವಾಗಿದೆ.

ಟಾಪ್ ನ್ಯೂಸ್

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renuka swamy Case: ದರ್ಶನ್‌, ಪವಿತ್ರಾ ಗೌಡ ಮತ್ತೆ ಪೊಲೀಸ್‌ ಕಸ್ಟಡಿಗೆ

Renuka swamy Case: ದರ್ಶನ್‌, ಪವಿತ್ರಾ ಗೌಡ ಮತ್ತೆ ಪೊಲೀಸ್‌ ಕಸ್ಟಡಿಗೆ

chef chidambara movie review

Chef Chidambara Review; ಕಿಲಾಡಿ ಜೋಡಿಯ ಥ್ರಿಲ್ಲಿಂಗ್‌ ಸ್ಟೋರಿ

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

Kannada Cinema; ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

Sandalwood: ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.