
‘ಸ್ನೇಹವೆ ಶ್ರೇಷ್ಠ’ : ಮುನಿಸು ಮರೆತು ಮತ್ತೆ ಒಂದಾದ ರಕ್ಷಿತಾ-ದರ್ಶನ್
Team Udayavani, Jul 29, 2021, 1:44 PM IST

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟಿ ರಕ್ಷಿತಾ ನಡುವಿನ ಸ್ನೇಹದಲ್ಲಿ ಮೂಡಿದ್ದ ಬಿರುಕು ಇದೀಗ ಶಮನ ವಾಗಿದೆ. ಈ ಸ್ನೇಹಿತರು ಈಗ ಮತ್ತೆ ಒಂದಾಗಿದ್ದು, ನಮ್ಮ ಗೆಳೆತನ ಗಟ್ಟಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಕೆಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿರುವ ದರ್ಶನ್ ಹಾಗೂ ರಕ್ಷಿತಾ ಅವರು ಒಳ್ಳೆಯ ಸ್ನೇಹಿತರು. ದಚ್ಚು ಜೊತೆಗಿನ ತಮ್ಮ ಗೆಳೆತನದ ಬಗ್ಗೆ ರಕ್ಷಿತಾ ಅವರು ಸಾಕಷ್ವು ಬಾರಿ ಹೇಳಿಕೊಂಡಿದ್ದಾರೆ. ತಾನು ಕಂಡಂತೆ ಡಿ ಬಾಸ್ ಹೇಗೆ ಎಂದು ರಕ್ಷಿತಾ ಹಲವು ಬಾರಿ ಪುನರುಚ್ಚರಿಸಿದ್ದಾರೆ. ಹೀಗೆ ಚಂದನವನದ ಗಟ್ಟಿ ಸ್ನೇಹಿತರಾಗಿದ್ದ ಇವರು ಮೊನ್ನೆ ನಡೆದ ಸಣ್ಣ ಘಟನೆಯಿಂದಾಗಿ ಮುನಿಸಿಕೊಂಡಿದ್ದರು.
ಪತ್ರಕರ್ತ ಇಂದ್ರಜಿತ್ ಲಂಕೇಶ್ ಹಾಗೂ ದರ್ಶನ್ ನಡುವೆ ನಡೆದ ಕೆಲವು ವಾಕ್ಸಮರದ ನಡುವೆ ಪ್ರೇಮ್ ಹೆಸರು ಪ್ರಸ್ತಾಪವಾಗಿತ್ತು. ಮಾಧ್ಯಮಗಳ ಎದುರು ಆಕ್ರೋಶದಿಂದ ಮಾತನಾಡುತ್ತಿದ್ದ ದಚ್ಚು, ಮಾತಿನ ನಡುವೆ ‘ಪ್ರೇಮ್ ಏನು ಪುಡುಂಗಾ’ ಎಂದು ಕಟುವಾಗಿಯೇ ಪ್ರಶ್ನೆ ಮಾಡಿದ್ದರು.
ದರ್ಶನ್‌ರ ಈ ಮಾತಿಗೆ ನಟ ಪ್ರೇಮ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ನಟಿ ರಕ್ಷಿತಾ ಸಹ ದರ್ಶನ್ ಮಾತಿನಿಂದ ಮನನೊಂದು ಕೆಲವು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಘಟನೆಯಿಂದ ರಕ್ಷಿತಾ ಹಾಗೂ ದರ್ಶನ್ ಅವರ ಸ್ನೇಹ ಮುರಿದು ಬಿತ್ತು ಎನ್ನಲಾಗಿತ್ತು. ಆದರೆ, ನಿನ್ನೆ ರಕ್ಷಿತಾ ಮಾಡಿರುವ ಫೇಸ್ ಬುಕ್ ಪೋಸ್ಟ್ ವೊಂದು ಇದೀಗ ದಚ್ಚು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ರಕ್ಷಿತಾ, ದರ್ಶನ್ ಜೊತೆಗಿರುವ ಚಿತ್ರವೊಂದನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ”ಕೆಲವು ಸಂಬಂಧಗಳು ಜೀವನ ಪರ್ಯಂತ ಇರುತ್ತವೆ. ನನಗೆ ಗೊತ್ತಿದೆ ನೀನು (ದರ್ಶನ್) ನನ್ನ ಜೊತೆ ಇರುತ್ತೀಯೆಂದು. ನನ್ನ ಜೀವನದಲ್ಲಿರುವುದಕ್ಕೆ ಧನ್ಯವಾದ” ಎಂದು ಒಕ್ಕಣೆಯನ್ನೂ ಬರೆದಿದ್ದಾರೆ ರಕ್ಷಿತಾ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
