ಅರೆಸ್ಟ್ ಅಂದ್ರೆ ಅಲರ್ಜಿ ಎನ್ಕೌಂಟರ್ ಅಂದ್ರೆ ಎನರ್ಜಿ
ಪವರ್ಫುಲ್ ರುಸ್ತುಂ
Team Udayavani, Apr 15, 2019, 3:00 AM IST
ಶಿವರಾಜಕುಮಾರ್ ಅಭಿನಯದ “ರುಸ್ತುಂ’ ಟ್ರೇಲರ್ ಬಿಡುಗಡೆಯಾಗಿದೆ. ಮಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಆ್ಯಕ್ಷನ್. ಹೌದು, ಸಿನಿಮಾದ ಟ್ರೇಲರ್ ಹೈವೋಲ್ಟೆಜ್ ಆ್ಯಕ್ಷನ್ನಿಂದ ಕೂಡಿದ್ದು, ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಎಂಬುದು ಬಿಂಬಿತವಾಗಿದೆ.
ಚಿತ್ರದಲ್ಲಿ ಖಡಕ್ ಡೈಲಾಗ್ಗಳು ಚಿತ್ರದ ಬಗೆಗಿನ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿರುವುದಂತೂ ಸುಳ್ಳಲ್ಲ. ಅದರಲ್ಲೂ “ಅರೆಸ್ಟ್ ಅಂದ್ರೆ ನನಗೆ ಅಲರ್ಜಿ, ಎನೌಕೌಂಟರ್ ಅಂದ್ರೆ ಎನರ್ಜಿ’ ಸೇರಿದಂತೆ ಚಿತ್ರದಲ್ಲಿ ಬರುವ ಡೈಲಾಗ್ಗಳು ಮಾಸ್ ಪ್ರಿಯರ ಶಿಳ್ಳೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ.
ಇದರ ಜೊತೆಗೆ ಚಿತ್ರದ ಟ್ರೇಲರ್ನಲ್ಲಿ ಭಾವನಾತ್ಮಕ ಅಂಶವನ್ನು ನೀಡಲಾಗಿದೆ. ಈ ಮೂಲಕ ಸಿನಿಮಾದಲ್ಲಿ ಗಂಭೀರವಾದ ವಿಷಯವೊಂದನ್ನು ನಿರ್ದೇಶಕರು ಹೇಳಿದಂತಿದೆ. ಚಿತ್ರದಲ್ಲಿ ಶಿವರಾಜಕುಮಾರ್ ಹಿಂದಿ ಸಂಭಾಷಣೆಗಳೂ ಕೂಡಾ ಇದ್ದು, ಈ ಮೂಲಕ ಕಥೆ ಕರ್ನಾಟಕ ದಾಟಿ ಸಾಗಿರುವುದು ಸ್ಪಷ್ಟವಾಗಿದೆ.
ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡಾ ಚಿತ್ರದಲ್ಲಿ ನಟಿಸಿದ್ದು, ಅವರ ಆ್ಯಕ್ಷನ್ ದೃಶ್ಯಗಳೊಂದಿಗೆ “ರುಸ್ತುಂ’ ಖದರ್ ಹೆಚ್ಚಿದೆ. ಈ ಚಿತ್ರವನ್ನು ರವಿವರ್ಮ ನಿರ್ದೇಶಿಸಿದ್ದಾರೆ. ಸಾಹಸ ನಿರ್ದೇಶಕರಾಗಿ ಬೇಡಿಕೆಯಲ್ಲಿರುವ ರವಿವರ್ಮ ನಿರ್ದೇಶನದ ಚೊಚ್ಚಲ ಸಿನಿಮಾ “ರುಸ್ತುಂ’. ಈ ಚಿತ್ರವನ್ನ ಜಯಣ್ಣ-ಭೋಗೇಂದ್ರ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರದ್ಧಾ, ಮಯೂರಿ ಕೂಡಾ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ