Crazy Star Ravichandran: ನಾನು ಸಿನಿಮಾ ನಿರ್ದೇಶಿಸೋದು ದಾಖಲೆಗೆ, ಹೊಸತನಕ್ಕೆ..
Team Udayavani, Sep 13, 2023, 12:39 PM IST
“ಮುಂದಿನ ವರ್ಷ ನನ್ನ ರುದ್ರ ತಾಂಡವ ಶುರು…’ – ಹೀಗೆ ಹೇಳಿ ನಕ್ಕರು ರವಿಚಂದ್ರನ್. ಸಾಲು ಸಾಲು ಸಿನಿಮಾಗಳ ನಟನೆಯಲ್ಲಿ ಬಿಝಿಯಾಗಿರುವ ರವಿಚಂದ್ರನ್ ಮುಂದಿನ ವರ್ಷ ಅವರದ್ದೇ ನಿರ್ದೇಶನದ ಸಿನಿಮಾ ಮಾಡಲಿದ್ದಾರೆ. ಕನ್ನಡ ಚಿತ್ರರಂಗದ ಕನಸುಗಾರನಾಗಿರುವ ರವಿಚಂದ್ರನ್ ಮುಂದಿನ ವರ್ಷ ಮಾಡುವ ಸಿನಿಮಾ ಎಲ್ಲರ ಗಮನ ಸೆಳೆಯಲಿದೆಯಂತೆ. ಅದೇ ಕಾರಣದಿಂದ ಅವರು ಹೇಳಿದ್ದು ಮುಂದಿನ ವರ್ಷ ರುದ್ರ ತಾಂಡವ…
ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡುವ ರವಿಚಂದ್ರನ್, “ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸೋದು ನನ್ನ ಜೀವನಕ್ಕೆ, ಸಮಸ್ಯೆಗಳಿಗೆ, ಬದುಕಿಗೆ, ಪಾಕೆಟ್ ಮನಿಗೆ…ಆ ಚಿತ್ರಗಳ ಒಳ್ಳೆಯದು, ಕೆಟ್ಟದ್ದು ಆ ಸಿನಿಮಾಗಳಿಗೆ ಸಂಬಂಧಪಟ್ಟವರು ನೋಡಿಕೊಳ್ಳಬೇಕು. ನಾನು ನನ್ನ ಕೆಲಸವನ್ನು ಮಾಡಿಕೊಡುತ್ತೇನೆ.. ಆದರೆ, ನಾನು ಸಿನಿಮಾ ನಿರ್ದೇಶಿಸೋದು ದಾಖಲೆಗೆ, ಹೊಸತನಕ್ಕೆ…’ ಹೀಗೆ ಹೇಳುವ ಮೂಲಕ ಮುಂದಿನ ವರ್ಷ ಹೊಸದನ್ನು ನೀಡುವ ಸುಳಿವು ಕೊಡುತ್ತಾರೆ ಕ್ರೇಜಿಸ್ಟಾರ್.
ಸದ್ಯ ರವಿಚಂದ್ರನ್ “ದಿ ಜಡ್ಜ್ಮೆಂಟ್’, “ಕೆಡಿ’, “ಗೌರಿ ಶಂಕರ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.