ಬರ್ತ್‌ಡೇಗೆ ದವಸ-ಧಾನ್ಯ ನೀಡಿ… ಅಭಿಮಾನಿಗಳಲ್ಲಿ ದರ್ಶನ್‌ ಮನವಿ

ಈ ವರ್ಷವೂ ಚಾಲೆಂಜಿಂಗ್‌ ಸ್ಟಾರ್‌ ಸರಳ ಹುಟ್ಟುಹಬ್ಬ - ದಾಸನ ಬರ್ತ್‌ಡೆಗೆ ಫ್ಯಾನ್ಸ್‌ ಸಿದ್ಧತೆ

Team Udayavani, Jan 20, 2020, 7:04 AM IST

ಕಳೆದ ವರ್ಷ ದರ್ಶನ್‌ ತಮ್ಮ ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದರು. ಅದೇನೆಂದರೆ ಹುಟ್ಟುಹಬ್ಬದಂದು ಅಭಿಮಾನಿಗಳು ಹಾರ-ತುರಾಯಿ, ಕೇಕ್‌ ಬದಲು ದವಸ-ಧಾನ್ಯ ತಂದರೆ ಅದನ್ನು ಅಗತ್ಯ ಇರುವ ಜಾಗಗಳಿಗೆ ತಲುಪಿಸುತ್ತೇನೆ ಎಂದು. ದರ್ಶನ್‌ ಮನವಿಗೆ ಸ್ಪಂದಿಸಿದ ಅಭಿಮಾನಿಗಳು ಕ್ವಿಂಟಾಲ್‌ಗ‌ಟ್ಟಲೇ ದವಸ-ಧಾನ್ಯಗಳನ್ನು ತಂದಿದ್ದರು.

ದರ್ಶನ್‌ ಕೂಡಾ ಹೇಳಿದ ಮಾತಿನಂತೆ ಅದನ್ನು ಅಗತ್ಯವಿರುವ ಅನಾಥಶ್ರಮ, ವೃದ್ಧಾಶ್ರಮ ಸೇರಿದಂತೆ ನಾನಾ ಕಡೆಗಳಿಗೆ ತಲುಪಿಸಿದ್ದರು. ಈ ಬಾರಿಯೂ ದರ್ಶನ್‌ ತಮ್ಮ ಹುಟ್ಟುಹಬ್ಬವನ್ನು (ಫೆ.16) ಕಳೆದ ವರ್ಷದಂತೆ ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಈ ಕುರಿತು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. “ಹುಟ್ಟುಹಬ್ಬಕ್ಕೆ ಬ್ಯಾನರ್‌ ಕೇಕ್‌, ಹಾರಗಳನ್ನು ದಯವಿಟ್ಟು ತರಬೇಡಿ.

ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು’ ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸುತ್ತಿರುವ ಅವರ ಅಭಿಮಾನಿಗಳು ಈಗಾಗಲೇ ತಮ್ಮ ಕೈಲಾದ ಮಟ್ಟಿಗೆ ದವಸ-ಧಾನ್ಯಗಳನ್ನು ತಂದುಕೊಡುತ್ತಿದ್ದಾರೆ. ಈ ಮೂಲಕ ಈ ವರ್ಷವೂ ದರ್ಶನ್‌ ಹುಟ್ಟುಹಬ್ಬ ಅರ್ಥಪೂರ್ಣವಾಗಿರಲಿದೆ.

ಗೋಶಾಲೆಗೆ ಮೇವು: ಇನ್ನು ದರ್ಶನ್‌ ಗೋಶಾಲೆಗಳಿಗೆ ಮೇವು ಒದಗಿಸಿದ್ದಾರೆ. ಸ್ನೇಹಿತರೊಂದಿಗೆ ಅನೇಕ ಟ್ರಾಕ್ಟರ್‌ಗಳಲ್ಲಿ ಗೋಶಾಲೆಗಳಿಗೆ ಮೇವು ಒದಗಿಸಿದ್ದು, ಈ ವಿಡಿಯೋ ಈಗ ವೈರಲ್‌ ಆಗಿದೆ. ತಮ್ಮ ಹುಟ್ಟುಹಬ್ಬ ಆಚರಣೆಯ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ದರ್ಶನ್‌, “ಈ ವರ್ಷವೂ ಸರಳವಾಗಿ ಆಚರಿಸುತ್ತಿದ್ದೇನೆ. ಕಳೆದ ವರ್ಷದಂತೆ ದವಸ-ಧಾನ್ಯಗಳನ್ನು ತಂದುಕೊಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನೆ. ನಮ್ಮ ಕೈಲಾದ ಮಟ್ಟಿಗೆ ಗೋಶಾಲೆಗಳಿಗೂ ಮೇವು ಒದಗಿಸಿದ್ದೇವೆ’ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬಿಸಿಲಿನಿಂದ ರಕ್ಷಣೆ ಪಡೆಯಲಷ್ಟೇ ಸನ್‌ಗ್ಲಾಸಸ್‌ ಧರಿಸುವ ಕಾಲ ಇದಲ್ಲ. ನೀವು ಧರಿಸುವ ಕೂಲಿಂಗ್‌ ಗ್ಲಾಸ್‌ ಕಣ್ಣನ್ನಷ್ಟೇ ಅಲ್ಲ, ನಿಮ್ಮ ಸ್ಟೈಲ್‌ ಅನ್ನೂ "ಕೂಲ್‌'...

  • ಮಹಾನಗರ: ರಾಜ್ಯ ಸರಕಾರವು ನೂತನವಾಗಿ ಜಾರಿಗೆ ತಂದ ನಂಬರ್‌ ಪ್ಲೇಟ್‌ ಮಾದರಿ ನಗರದಲ್ಲಿ ಇನ್ನೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ವಾಹನಗಳ ನಂಬರ್‌ ಪ್ಲೇಟ್‌ನಲ್ಲಿ...

  • ತಾವು ಯಾವುದರಲ್ಲಿ ಡಿಗ್ರಿ ಮಾಡಿದ್ದೇವೋ ಅದಕ್ಕೆ ತಕ್ಕಂತೆ ಕೆಲಸ ಸಿಗಬೇಕೆಂದು ಕಾದು ಕುಳಿತುಕೊಳ್ಳುವ ಕಾಲ ಅಲ್ಲ ಇದು. ಇವತ್ತು ಪದವಿ, ಸ್ನಾತಕೋತ್ತರ ಪದವಿಗಳು...

  • ಆಗೆಲ್ಲಾ ಈಗಿನಂತೆ ನಿಶ್ಚಿತಾರ್ಥಕ್ಕೆ ನೂರಾರು ಜನರು ಬರುತ್ತಿರಲಿಲ್ಲ. ಮುಖ್ಯವಾದ ಏಳೆಂಟು ಜನರು ಬಂದು, ಹುಡುಗಿಗೆ ಉಂಗುರ ತೊಡಿಸಿ, ಹರಿವಾಣ ವಿನಿಮಯ ಮಾಡುತ್ತಿದ್ದರು....

  • ಮಂಗಳೂರು: ರಾಜ್ಯದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು 2020 ಜ. 31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮೇಲಿನ...