Udayavni Special

ಬೆಳ್ಳಿತೆರೆಯಿಂದ ಕಿರುತೆರೆಗೆ ಹರಡಿದ ಮಾದಕ ಜಾಲ

ಲೂಸ್‌ ಮಾದ, ಪ್ರೇಮಾ ಸಹೋದರ ಅಯ್ಯಪ್ಪ ವಿಚಾರಣೆ

Team Udayavani, Sep 22, 2020, 5:45 AM IST

ಬೆಳ್ಳಿತೆರೆಯಿಂದ ಕಿರುತೆರೆಗೆ ಹರಡಿದ ಮಾದಕ ಜಾಲ

ಸಾಂದರ್ಭಿಕ ಚಿತ್ರ

ಬೆಂಗಳೂರು: ನಟ ಲೂಸ್‌ ಮಾದ ಖ್ಯಾತಿಯ ಯೋಗೀಶ್‌ ಮತ್ತು ಕ್ರಿಕೆಟಿಗ, ನಟಿ ಪ್ರೇಮಾ ಅವರ ಸಹೋದರ ಅಯ್ಯಪ್ಪ ಸೇರಿ ನಾಲ್ವರನ್ನು ಆಂತರಿಕ ಭದ್ರತಾ ದಳದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಇದರೊಂದಿಗೆ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ ಭೇದಿಸಲು ರಾಜ್ಯ ಆಂತರಿಕ ಭದ್ರತಾ ದಳ (ಐಎಸ್‌ಡಿ) ಕೂಡ ಅಖಾಡಕ್ಕಿಳಿದಂತಾಗಿದೆ. ಈಗ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಹಗರಣದ ಜಾಲ ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯನ್ನೂ ಆವರಿ ಸಿರುವುದು ಖಚಿತವಾಗಿದ್ದು, ಹಲವು ಕಿರುತೆರೆ ನಟಿಯರಿಗೆ ವಿಚಾರಣೆಗೆ ನೋಟಿಸ್‌ ನೀಡಲಾಗಿದೆ.

ಡ್ರಗ್ಸ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾವೂ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಈ ಪ್ರಕರಣದಲ್ಲಿ ಹಲವು ನಟರು ಮತ್ತಿತರರನ್ನು ವಿಚಾರಣೆಗೆ ಒಳಪಡಿಸುತ್ತಿದ್ದೇವೆ ಎಂದು ಐಎಸ್‌ಡಿ ಮುಖ್ಯಸ್ಥ ಭಾಸ್ಕರ ರಾವ್‌ ತಿಳಿಸಿದ್ದಾರೆ.

ನಟ ಯೋಗೀಶ್‌ ವಿಚಾರಣೆ
ನಟ ಯೋಗೀಶ್‌ ಮತ್ತು ಖಾಸಗಿ ವಾಹಿನಿಯ ಸಿಬಂದಿ ಯೊಬ್ಬರನ್ನು ಸೋಮವಾರ ವಿಚಾರಣೆ ನಡೆಸ ಲಾಗಿದೆ ಎಂದು ತಿಳಿದು ಬಂದಿದೆ. ಕೆಲವು ವರ್ಷ ಗಳ ಹಿಂದೆ ಸಿನೆಮಾಗಳಲ್ಲಿ ಅವಕಾಶ ಕಡಿಮೆ ಯಾಗಿದ್ದಾಗ ಕೆಲವು ದುಶ್ಚಟಗಳ ದಾಸನಾಗಿದ್ದೆ. ಆದರೆ ಡ್ರಗ್ಸ್‌ ಮಾರಾಟ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿಲ್ಲ. ಮುಖ್ಯವಾಗಿ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ನಟ ಯೋಗೀಶ್‌ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೂಂದೆಡೆ ನಟ ಯೋಗೀಶ್‌ ಮತ್ತು ಸ್ಯಾಂಡಲ್‌ವುಡ್‌ ಪ್ರಕರಣದ ಎರಡನೇ ಆರೋಪಿ ರಾಗಿಣಿ ಸ್ನೇಹಿತರಾಗಿದ್ದು, ಇಬ್ಬರು ಜತೆಯಾಗಿ ಕೆಲವು ಪಾರ್ಟಿಗಳಿಗೆ ಹೋಗಿದ್ದಾರೆ ಎಂದು ಹೇಳಲಾಗಿತ್ತು.

ಕಿರುತೆರೆ ಕಲಾವಿದರಾದ ಅಭಿಷೇಕ್‌ ಮತ್ತು ಗೀತಾ ಎಂಬವ ರಿಗೂ ನೋಟಿಸ್‌ ಜಾರಿ ಮಾಡಲಾಗಿದ್ದು, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಸೆ. 19ರಂದು ನಟಿ ಪ್ರೇಮಾ ಅವರ ಸಹೋದರ, ಕ್ರಿಕೆಟಿಗ ಅಯ್ಯಪ್ಪ ಮತ್ತು ಕೊಡಗು ಮೂಲದ ಕಿರುತೆರೆ ನಟಿಯೊಬ್ಬರನ್ನು ಐಎಸ್‌ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರನ್ನೂ ಶನಿವಾರ ಬೆಳಗ್ಗಿನಿಂದ ಸಂಜೆವರೆಗೂ ವಿಚಾರಣೆಗೆ ಒಳಪಡಿಸಲಾಗಿತ್ತು.
ಇದುವರೆಗೆ 9 ಕೇಸು
ಐಎಸ್‌ಡಿ ಅಧಿಕಾರಿಗಳು ಇದುವರೆಗೆ ಮಾದಕವಸ್ತು ಮಾರಾಟ ಜಾಲಕ್ಕೆ ಸಂಬಂಧಿಸಿ 9 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್‌ ಪೆಡ್ಲರ್‌ಗಳ ಜತೆ ಸಂಪರ್ಕದಲ್ಲಿದ್ದ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈತನ ಮಾಹಿತಿ ಮತ್ತು ಆರೋಪಿಯ ಕರೆ ವಿವರ ಪರಿಶೀಲಿಸಿದಾಗ ಕೆಲವು ನಟ, ನಟಿಯರು ಮತ್ತು ಕಿರುತೆರೆ ಕಲಾವಿದರು ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು. ಈ ಸಾಕ್ಷ್ಯ ಆಧರಿಸಿ ಮೂರು ದಿನಗಳಲ್ಲಿ ನಾಲ್ವರ ವಿಚಾರಣೆ ನಡೆಸಲಾಗಿದೆ ಎಂದು ಐಎಸ್‌ಡಿ ಮೂಲಗಳು ತಿಳಿಸಿವೆ.

ಹೊಟೇಲ್‌ಗ‌ಳಲ್ಲಿ ಶೋಧ
ಡ್ರಗ್ಸ್‌ ಪ್ರಕರಣದಲ್ಲಿ ಆರೋಪಿ “ತಾರೆ’ಯರನ್ನು ಬೇಟೆಯಾಡಿದ್ದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಈಗ ಸ್ಟಾರ್‌ ನಟ-ನಟಿಯರು ಹೋಗಿದ್ದ ತಾರಾ ಹೊಟೇಲ್‌ಗ‌ಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ನಗರದ 3 ಪ್ರತಿಷ್ಠಿತ ಹೊಟೇಲ್‌ಗ‌ಳಿಗೆ ನೋಟಿಸ್‌ ಜಾರಿ ಮಾಡಿದ್ದು, ಲಾಕ್‌ಡೌನ್‌ ಮತ್ತು ಅದಕ್ಕೂ ಹಿಂದೆ ನಡೆದ ಕೆಲವು ಪಾರ್ಟಿಗಳ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.
ಪ್ರಕರಣದ ಕಿಂಗ್‌ಪಿನ್‌ ವೀರೇನ್‌ ಖನ್ನಾ ವಿಚಾರಣೆ ಸಂದರ್ಭ ಕೆಲವು ಮಾಹಿತಿ ನೀಡಿದ್ದಾನೆ. ಮೂರು ಹೊಟೇಲ್‌ಗ‌ಳಿಗೆ ಮಾತ್ರ ನೋಟಿಸ್‌ ನೀಡಲಾಗಿದೆ. ಹೊಟೇಲ್‌ ಮಾಲಕರು ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಿದರೆ ಪ್ರಕರಣಕ್ಕೆ ಪುಷ್ಟಿ ಸಿಕ್ಕಂತಾಗಲಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ

ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ

ಬಾಕ್ಸಿಂಗ್‌’ ಸ್ಪರ್ಧೆ ‌: ಭಾರತಕ್ಕೆ 3 ಚಿನ್ನದ ಪದಕ

ಬಾಕ್ಸಿಂಗ್‌’ ಸ್ಪರ್ಧೆ ‌: ಭಾರತಕ್ಕೆ 3 ಚಿನ್ನದ ಪದಕ

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ

ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ

ಅದಾನಿ ಸಮೂಹಕ್ಕೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

ಅದಾನಿ ಸಮೂಹ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

000

77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ : ಬೆಂಗಳೂರು ತರಕಾರಿ ವ್ಯಾಪಾರಿಗೆ 42,000 ಸಾವಿರ ದಂಡ.!

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cinema-tdy-3

ಕ್ರೈಮ್‌ ಥ್ರಿಲ್ಲರ್‌ನಲ್ಲಿ ವಿಜಯ ರಾಘವೇಂದ್ರ

ಎಲ್ಲಾ ಸರಿ ಹೋದ ಮೇಲಷ್ಟೇ ರಾಬರ್ಟ್‌ ರಿಲೀಸ್‌- ದರ್ಶನ್‌

ಎಲ್ಲಾ ಸರಿ ಹೋದ ಮೇಲಷ್ಟೇ ರಾಬರ್ಟ್‌ ರಿಲೀಸ್‌- ದರ್ಶನ್‌

CINEMA-TDY1

ಸಿನಿಮಾ ಬಿಡುಗಡೆ ಕುರಿತು ರವಿಚಂದ್ರನ್‌ ಹೊಸ ಪ್ಲ್ಯಾನ್‌

Drugs

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

cinema-tdy-1

ಆನ ಆದ ಅದಿತಿ : ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

MUST WATCH

udayavani youtube

ಈ ಮತ್ಸ್ಯಪ್ರೇಮಿಗೆ ಮನೆಯ ಬಾವಿಯೇ ಅಕ್ವೇರಿಯಂ

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

ಹೊಸ ಸೇರ್ಪಡೆ

ಹೊಟೇಲ್‌ನಲ್ಲಿ “ಗುಂಡು ಹಾರಾಟ’: ಮೂವರಿಗಾಗಿ ಶೋಧ

ಹೊಟೇಲ್‌ನಲ್ಲಿ “ಗುಂಡು ಹಾರಾಟ’: ಮೂವರಿಗಾಗಿ ಶೋಧ

ಅಡ್ಕ: ಮಾರಕಾಯುಧದಿಂದ ದಾಳಿ: ಗುಂಡು ಹಾರಾಟ; ಕಾರುಗಳಿಗೆ ಹಾನಿ

ಅಡ್ಕ: ಮಾರಕಾಯುಧದಿಂದ ದಾಳಿ: ಗುಂಡು ಹಾರಾಟ; ಕಾರುಗಳಿಗೆ ಹಾನಿ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತ ಎಣಿಕೆ ನ.10ಕ್ಕೆ ಮುಂದೂಡಿಕೆ

ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ

ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ

ಬಾಕ್ಸಿಂಗ್‌’ ಸ್ಪರ್ಧೆ ‌: ಭಾರತಕ್ಕೆ 3 ಚಿನ್ನದ ಪದಕ

ಬಾಕ್ಸಿಂಗ್‌’ ಸ್ಪರ್ಧೆ ‌: ಭಾರತಕ್ಕೆ 3 ಚಿನ್ನದ ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.