ವೀಕ್ಷಕರ ಮನಗೆದ್ದಿದ್ದು ಕೃಷಿಕ-ಹೇಗಿತ್ತು ಕಳೆದ ಬಿಗ್ ಬಾಸ್ ಸೀಸನ್?

Team Udayavani, Oct 10, 2019, 12:33 PM IST

ಬಿಗ್ ಬಾಸ್ ಕನ್ನಡದ 7 ನೇ ಆವೃತಿಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಪ್ರತಿಬಾರಿಯ ಕುತೂಹಲದ ಕಾವು ಈ ಬಾರಿಯೂ ಯಾರೆಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ ಅನ್ನುವುದು ಗೌಪ್ಯವಾಗಿಯೇ ಉಳಿದಿದೆ.

ಬಿಗ್ ಬಾಸ್ ಕಳೆದ ಸೀಸನ್ ಪ್ರೇಕ್ಷಕರಲ್ಲಿ ಇದ್ದ  ಉತ್ಸಾಹವನ್ನು ಕೊಂಚ ಕಡಿಮೆ ಮಾಡಿದ್ದು ನಿಜ. 20 ಸ್ಪರ್ಧಿಗಳು ಭಾಗವಹಿಸಿದ ಕಾರ್ಯಕ್ರಮದಲ್ಲಿ ವೀಕ್ಷಕರ ಮನಗೆದ್ದಿದ್ದು ಕೃಷಿಕ ಹಾಗೂ ನಟ ಶಶಿ ಕುಮಾರ್. ಗಾಯಕ ನವೀನ್ ಸಜ್ಜು ದ್ವಿತೀಯ ಸ್ಥಾನಿ ಆಗಿ ನಟಿ ಕವಿತಾ ಗೌಡ ಮೂರನೇ ಸ್ಥಾನಿ ಆಗಿ , ಆ್ಯಡ್ರೋ ಜಯ್ ಪೌಲ್ ನಾಲ್ಕನೇ ಸ್ಥಾನಿ ಆಗಿ  ಉಳಿದಂತೆ ಆರ್.ಜೆ ರಶ್ಮಿ ವೀಕ್ಷಕರ ಆಯ್ಕೆಯಂತೆ ಐದನೇ ಸ್ಥಾನಿಯ ವಿಜೇತೆ ಆಗಿ ಹೊರಹೊಮ್ಮಿದ್ದರು.

ಆ್ಯಡಂ ಪಾಷಾ ಹಾಗೂ ಆ್ಯಡ್ರೋ  ಹೆಚ್ಚು ಸುದ್ದಿ ಆಗಿದ್ದರು. ಕಾರ್ಯಕ್ರಮದಲ್ಲಿ ಬಿಗ್ ಮನೆಯ ಅತಿಥಿಯಾಗಿ ಆಗಮಿಸಿದ 5 ನೇ ಆವೃತಿಯ ನಿವೇದಿತಾ ಗೌಡ ,ಕಿರಿಕ್ ಕೀರ್ತಿ, ಕೃಶಿ ಥಪಂಡ. 4 ನೇ ಆವೃತಿ ವಿಜೇತರಾಗಿದ್ದ ಪ್ರಥಮ್ ಹಾಗೂ ಸಮೀರ್ ಆಚಾರ್ಯ ಬಿಗ್ ಬಾಸ್ ಮನೆಗೆ ಅತಿಥಿ ಆಗಿ ಬಂದು ಕಾರ್ಯಕ್ರಮಕ್ಕೆ ಮೆರಗನ್ನು ಹೆಚ್ಚಿಸುವುದರ ಜೊತೆಗೆ ಕೆಲವೊಂದು ಪ್ರಮುಖ ಜವಾಬ್ದಾರಿಯ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದರು. ಸ್ಪರ್ಧಿಗಳ ವಾದ ವಿವಾದ ಹಾಗೂ ಪ್ರತಿವಾದಗಳ ನಡುವೆ ಬಿಗ್ ಬಾಸ್ ಕಾರ್ಯಕ್ರಮದ 6 ನೇ ಆವೃತಿ ಮುಕ್ತಾಯಗೊಂಡಿತ್ತು.

ಪ್ರತಿ ಬಾರಿಯ ಹಾಗೆ ಈ ಬಾರಿಯೂ ಬಿಗ್ ಬಾಸ್ ಮನೆಯ ಕಳೆ ಹೆಚ್ಚಿದೆ. ಯಾರೆಲ್ಲಾ ಭಾಗವಹಿಸುತ್ತಾರೆ ಅನ್ನುವ ಊಹಪೋಹಗಳಿಗೆ ಅಕ್ಟೋಬರ್ 13ರ ಸಂಜೆ ತೆರೆ ಬೀಳಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ