ಶಿವಣ್ಣ ಕೈಯಲ್ಲಿ “ಲೆಕ್ಕಾಚಾರ’ ಪೋಸ್ಟರ್
Team Udayavani, Jul 4, 2019, 3:00 AM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಲೆಕ್ಕಾಚಾರ’ ಚಿತ್ರದ ಪೋಸ್ಟರ್ ಅನ್ನು ನಟ ಶಿವರಾಜಕುಮಾರ್ ಇತ್ತೀಚೆಗೆ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದರು. “ಎಸ್. ಸೀಮಾ ಪಿಕ್ಚರ್’ ಬ್ಯಾನರ್ನಲ್ಲಿ ಎಂ. ಎಸ್ ಕುಮಾರ್ ಮತ್ತು ಆರ್. ಚಂದ್ರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಹಿಂದೆ “ಸಖತ್ ರಿಸ್ಕ್’ ಎಂಬ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದ ಎಂ.ಜಿ ರಾಜ್ “ಲೆಕ್ಕಾಚಾರ’ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. “ಲೆಕ್ಕಾಚಾರ’ ಪಕ್ಕಾ ಲವ್ ಸಬ್ಜೆಕ್ಟ್ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.
“ಲೆಕ್ಕಾಚಾರ’ ಚಿತ್ರದಲ್ಲಿ ಹರ್ಷ್ ಯಶಸ್ವಿ, ಪ್ರೀತಂ, ಚನ್ನಪ್ಪ, ನರಸಿಂಹ, ನಟರಾಜ್, ಮಂಜುನಾಥ್, ಅಮಿತ್, ರಾಮಚಂದ್ರ ಕೆ, ಸುರೇಶ್, ಬಲರಾಂ, ಮುತ್ತುಂ, ಪೂಜಾ, ಮೀನಾ, ಪ್ರಿಯಾಂಕಾ, ರೇಖಾ, ವಿಜಯ್, ತೆಲಂಗಾಣ ರವಿ, ಶಿವು ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ, ರಾಜು ಶಿರಾ ಮತ್ತು ರಾಜೇಶ್ ಛಾಯಾಗ್ರಹಣ, ದುರ್ಗಾ ಪಿ.ಎಸ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರತಂಡದ ಪ್ಲಾನ್ ಪ್ರಕಾರ ಚಿತ್ರ ಇದೇ ಸೆಪ್ಟೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್