ಇಂದು ಮಧ್ಯರಾತ್ರಿ “ಸಲಗ’ ಟೀಸರ್‌ ರಿಲೀಸ್‌

Team Udayavani, Jan 19, 2020, 7:03 AM IST

ನಟ ದುನಿಯಾ ವಿಜಯ್‌ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ “ಸಲಗ’ ಇದೇ ಜನವರಿ 19ರಂದು (ಇಂದು) ಟೀಸರ್‌ ಮೂಲಕ ಪ್ರೇಕ್ಷಕರಿಗೆ ದರ್ಶನ ಕೊಡುತ್ತಿದೆ. ಜನವರಿ 20ರಂದು ನಟ ದುನಿಯಾ ವಿಜಯ್‌ ಹುಟ್ಟುಹಬ್ಬವಿದ್ದು, ಈ ವೇಳೆ “ಸಲಗ’ ಚಿತ್ರದ ಮೊದಲ ಟೀಸರ್‌ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ಜ. 19ರ ಮಧ್ಯರಾತ್ರಿ 12 ಗಂಟೆಗೆ ನಟ ರಿಯಲ್‌ಸ್ಟಾರ್‌ ಉಪೇಂದ್ರ “ಸಲಗ’ ಚಿತ್ರದ ಟೀಸರ್‌ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಚಿತ್ರತಂಡ ಅಧಿಕೃತವಾಗಿ “ಸಲಗ’ದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಲಿದೆ. ಇತ್ತೀಚೆಗಷ್ಟೇ “ಸಲಗ’ ಚಿತ್ರದ “ಸೂರಿಯಣ್ಣ ….’ ಹಾಡನ್ನು ಬಿಡುಗಡೆಗೊಳಿಸಿದ್ದ ಚಿತ್ರತಂಡ, ಹಾಡಿಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ.

ಈಗಾಗಲೇ ಸೋಶಿಯಲ್‌ ಮೀಡಿಯಾಗಳಲ್ಲಿ ಸುಮಾರು 1 ಮಿಲಿಯನ್ಸ್‌ ವೀಕ್ಷಣೆ ಪಡೆದುಕೊಂಡಿರುವ ಈ ಹಾಡು ಮಾಸ್‌ ಆಡಿಯನ್ಸ್‌ ಬಾಯಲ್ಲಿ ಗುನುಗುಡುತ್ತಿದೆ. “ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್‌ಗೆ ನಾಯಕಿಯಾಗಿ ಸಂಜನಾ ಆನಂದ್‌ ಜೋಡಿಯಾಗಿದ್ದು, ನಟ ಧನಂಜಯ್‌ ಪೊಲೀಸ್‌ ಅಧಿಕಾರಿಯ ಗೆಪಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

“ವೀನಸ್‌ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ಕೆ.ಪಿ ಶ್ರೀಕಾಂತ್‌ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಚಿತ್ರ ಏಪ್ರಿಲ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಟ್ಟಾರೆ ಸದ್ಯ ತನ್ನ ಫ‌ಸ್ಟ್‌ಲುಕ್‌ ಮತ್ತು ಹಾಡುಗಳ ಮೂಲಕ ಗಾಂಧಿನಗರದಲ್ಲಿ ಒಂದಷ್ಟು ಸೌಂಡ್‌ ಮಾಡುತ್ತಿರುವ “ಸಲಗ’ದ ಅಬ್ಬರ ಟೀಸರ್‌ನಲ್ಲಿ ಹೇಗಿರಲಿದೆ ಅನ್ನೋದು ದುನಿಯಾ ವಿಜಯ್‌ ಬರ್ತ್‌ಡೇ ಯಂದು ಗೊತ್ತಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ