ಆ್ಯಕ್ಷನ್‌ ಥ್ರಿಲ್ಲರ್‌ ಚಿತ್ರದಲ್ಲಿ ಸಂತೋಷ

ಕರಿಯ 2 ನಂತರ ಬಂದ ಸಂತು

Team Udayavani, Dec 11, 2019, 7:01 AM IST

ಕನ್ನಡದಲ್ಲಿ “ಗಣಪ’ ಹಾಗು “ಕರಿಯ 2′ ಸಿನಿಮಾಗಳ ನಂತರ ಸಂತೋಷ್‌ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆಯೇ ಶೇ.40 ರಷ್ಟು ಮುಗಿದಿದೆ. ಕನ್ನಡ ಹಾಗು ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಅಶೋಕ್‌ ಕಡಬ ನಿರ್ದೇಶನ ಮಾಡುತ್ತಿದ್ದಾರೆ. ಇವರಿಗೆ ಇದು ಮೂರನೇ ನಿರ್ದೇಶನದ ಚಿತ್ರ.

ನಿರ್ದೇಶಕರು ಬರೆದ ಕಥೆಗೆ ಕೆ.ವಿ.ರಾಜು ಅವರ ಚಿತ್ರಕಥೆ ಮತ್ತು ಸಂಭಾಷಣೆ ಇರಲಿದೆ. ಇನ್ನು, ಚಿತ್ರ ಶ್ರೀ ಮಾತಾ ಕ್ರಿಯೇಷನ್ಸ್‌ ಬ್ಯಾನರ್‌ನಡಿ ಮಹಾಂತೇಶ್‌ ನಿರ್ಮಾಣ ಮಾಡುತ್ತಿದ್ದು, ಈ ಹಿಂದೆ “ಮಹಾ ಮಹಿಮ ಲಡ್ಡು ಮುತ್ಯಾ’ ಎಂಬ ಸಿನಿಮಾ ನಿರ್ಮಿಸಿದ್ದರು. ಈಗ ಸಂತೋಷ್‌ ನಾಯಕರಾಗಿರುವ ಚಿತ್ರ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಹೇಳಿಕೊಳ್ಳುವ ನಿರ್ದೇಶಕ ಅಶೋಕ್‌ ಕಡಬ, “ಇದೊಂದು ಆ್ಯಕ್ಷನ್‌ ಥ್ರಿಲ್ಲರ್‌ ಕಥೆ ಹೊಂದಿದ್ದು, ಚಿತ್ರದಲ್ಲಿ ಸಾಕಷ್ಟು ಕುತೂಹಲ ಕೆರಳಿ ಸುವ ಅಂಶಗಳಿವೆ.

ಈಗಿನ ಟ್ರೆಂಡ್‌ಗೆ ಬೇಕಾದಂತಹ ಥ್ರಿಲ್‌ ಎಲಿಮೆಂಟ್ಸ್‌ ಚಿತ್ರದ ಹೈಲೈಟ್‌ ಆಗಿದ್ದು, ಇಲ್ಲಿ ಪ್ರೀತಿ ಮತ್ತು ಸೆಂಟಿಮೆಂಟ್‌ ಕೂಡ ಇದೆ. ಭರ್ಜರಿ ಆ್ಯಕ್ಷನ್‌ಗೂ ಒತ್ತು ನೀಡಲಾಗಿದೆ. ಈಗಾಗಲೇ ಹೈದರಾಬಾದ್‌ ಸುತ್ತಮುತ್ತ ಶೇ.40 ರಷ್ಟು ಚಿತ್ರೀಕರಣ ಮಾಡಲಾಗಿದೆ. ಇನ್ನು ಕೆಲವು ದಿನಗಳಲ್ಲೇ ಶಿರಸಿ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಯಾರಿ ನಡೆಸಲಾಗಿದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.

ಚಿತ್ರದಲ್ಲಿ ಸಂತೋಷ್‌ಗೆ ನಾಯಕಿಯಾಗಿ ರಂಜನಿ ರಾಘವನ್‌ ಕಾಣಿಸಿಕೊಂಡರೆ, ಉಳಿದಂತೆ ಶಯ್ನಾಜಿ ಶಿಂಧೆ, ಸುಮನ್‌, ಪವಿತ್ರಾ ಲೋಕೇಶ್‌, ವಿನಯಾ ಪ್ರಸಾದ್‌ ಸೇರಿದಂತೆ ಹಲವು ನಟರು ನಟಿಸು ತ್ತಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತವಿದ್ದು, ಚಿತ್ರದಲ್ಲಿ ಮೂರು ಹಾಡುಗಳು ಇರಲಿವೆ. ಸಿನಿಟೆಕ್‌ ಸೂರಿ ಅವರ ಛಾಯಗ್ರಹಣವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ