ಹೊಸ ಗೆಟಪ್ನಲ್ಲಿ “ಶಿವರಾಜ್ಕುಮಾರ್’
Team Udayavani, Mar 2, 2020, 7:03 AM IST
ಶಿವರಾಜಕುಮಾರ್ ಸೋಶಿಯಲ್ ಮೀಡಿಯಾಗೆ ಎಂಟ್ರಿಕೊಟ್ಟಿರೋದು ನಿಮಗೆ ಗೊತ್ತೇ ಇದೆ. ತಮ್ಮ ಸಿನಿಮಾಗಳ ಕುರಿತಾದ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಶಿವಣ್ಣ ತಮ್ಮ ಹೊಸ ಸಿನಿಮಾದ ಗೆಟಪ್ವೊಂದರ ಫೋಟೋವನ್ನು ಟ್ವೀಟ್ಟರ್ನಲ್ಲಿ ಹಾಕಿ, ಇದು ಯಾವ ಸಿನಿಮಾದೆಂದು ಊಹಿಸಿ ಎಂದಿದ್ದಾರೆ.
ಟೋಪಿ ಹಾಕಿಕೊಂಡಿರುವ ಫೋಟೋ ನೋಡಿದ ಅನೇಕರು “ಆರ್ಡಿಎಕ್ಸ್’ ಚಿತ್ರಕ್ಕೆ ಸಂಬಂಧಿಸಿದ್ದು ಎಂದಿದ್ದಾರೆ. ಇನ್ನು, ಅನೇಕರು ನೇವಿ ಆಫೀಸರ್ ಗೆಟಪ್ ಎಂದಿದ್ದಾರೆ. ಸದ್ಯ ಶಿವರಾಜ ಕುಮಾರ್ ಅವರ “ಭಜರಂಗಿ-2′ ಚಿತ್ರ ಅಂತಿಮ ಹಂತ ತಲುಪಿದ್ದು, “ಆರ್ಡಿಎಕ್ಸ್’ ಚಿತ್ರಕ್ಕೆ ಮುಹೂರ್ತ ನಡೆದಿದೆ. ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಶಿವರಾಜ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ.
Clue for the next movie ? …. well Happy Sunday ಹಾಯಾಗಿರಿ ಖುಷಿಯಾಗಿರಿ pic.twitter.com/rUIX3RPFBz
— DrShivaRajkumar (@NimmaShivanna) March 1, 2020
ಈ ಚಿತ್ರದಲ್ಲಿ ಸಖತ್ ರಫ್ ಅಂಡ್ ಟಫ್ ಪಾತ್ರ ಮಾಡುತ್ತಿರುವುದಾಗಿ ಮುಹೂರ್ತ ದಿನ ಹೇಳಿಕೊಂಡಿದ್ದರು ಶಿವಣ್ಣ. ಈಗ ಅಭಿಮಾನಿಗಳು ಕೂಡಾ “ಆರ್ಡಿಎಕ್ಸ್’ ಚಿತ್ರವನ್ನೇ ಊಹಿಸಿಕೊಳ್ಳುತ್ತಿದ್ದಾರೆ. ಇನ್ನು, ಶಿವರಾಜಕುಮಾರ್ ಅವರ “ದ್ರೋಣ’ ಚಿತ್ರ ಮಾರ್ಚ್ 6 ರಂದು ಬಿಡುಗಡೆಯಾಗುತ್ತಿದ್ದು, ಶಿಕ್ಷಣದ ಕುರಿತಾದ ಈ ಚಿತ್ರದಲ್ಲಿ ಶಿವಣ್ಣ ಶಿಕ್ಷಕರಾಗಿ ಕಾಣಿಸಿಕೊಂಡಿದ್ದಾರೆನ್ನಲಾಗಿದೆ.