ತಮಿಳಿನತ್ತ “ಅಂದವಾದ’

25ನೇ ದಿನದತ್ತ ಚಿತ್ರ

Team Udayavani, Nov 18, 2019, 6:00 AM IST

“ಅಂದವಾದ’ ಚಿತ್ರ ಅಕ್ಟೋಬರ್‌ ಕೊನೆಯ ವಾರದಲ್ಲಿ ಬಿಡುಗಡೆಯಾಗಿದ್ದು, ನಿಮಗೆ ಗೊತ್ತಿರಬಹುದು. ಹೊಸಬರ ಚಿತ್ರವಾಗಿದ್ದರೂ ತನ್ನ ಕಥೆ ಹಾಗೂ ನಿರೂಪಣೆಯಿಂದ ಗಮನ ಸೆಳೆದಿತ್ತು. ಈಗ ಚಿತ್ರತಂಡ ಖುಷಿಯಾಗಿದೆ.

ಅದಕ್ಕೆ ಎರಡು ಕಾರಣ, ಮೊದಲನೇಯದಾಗಿ ಚಿತ್ರ 25 ದಿನ ಪೂರೈಸಿದರೆ, ಎರಡನೇಯದಾಗಿ ಚಿತ್ರ ತಮಿಳಿಗೆ ರೀಮೇಕ್‌ ಆಗುತ್ತಿದೆ. ಹೌದು, ತಮಿಳಿನ ನಿರ್ಮಾಪಕರೊಬ್ಬರು ಈ ಚಿತ್ರದ ರೀಮೇಕ್‌ ಹಕ್ಕನ್ನು ಪಡೆದಿದ್ದಾರೆ. ಮೂಲಕ ಚಿತ್ರತಂಡದ ಶ್ರಮಕ್ಕೆ ಫ‌ಲ ಸಿಕ್ಕಿದೆ. ಜೊತೆಗೆ ಈ ಹಿಂದೆ ಎಲ್ಲೆಲ್ಲಿ ಚಿತ್ರ ಬಿಡುಗಡೆಯಾಗಿರಲಿಲ್ಲವೋ ಅಲ್ಲೆಲ್ಲಾ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ಜೈ ಹಾಗೂ ಅನುಷಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಚಲಪತಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಧುಶ್ರೀ ಗೋಲ್ಡನ್‌ ಫ್ರೇಮ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಡಿ.ಆರ್‌. ಮಧು ಜಿ. ರಾಜ್‌ ಹಾಗೂ ಹೆಚ್‌.ಸಿ. ಜಯಕುಮಾರ್‌ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ