ಫೋಟೋ ಹಾಕಿಲ್ಲವೆಂದು ಜಗಳ ಮಾಡೋದರಲ್ಲಿ ಅರ್ಥವಿಲ್ಲ: ಸೋನು

Team Udayavani, Mar 11, 2019, 5:45 AM IST

ವೇದಿಕೆಯ ಎರಡೂ ಬದಿಗಳಲ್ಲಿ ಎರಡು ಪೋಸ್ಟರ್‌ ಹಾಕಲಾಗಿತ್ತು. ಆ ಎರಡರಲ್ಲೂ ಉಪೇಂದ್ರ ಮತ್ತು ರಚಿತಾ ರಾಮ್‌ ಫೋಟೋ ಅಷ್ಟೇ ಇತ್ತು. ಪ್ರತಿ ಬಾರಿ “ಐ ಲವ್‌ ಯು’ ಸಿನಿಮಾದ ಪ್ರಮೋಶನ್‌ನಲ್ಲಿ ಭಾಗಿಯಾಗುವ ಹಾಗೂ ಆ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಸೋನು ಗೌಡ ಅವರ ಫೋಟೋ ಇರಲಿಲ್ಲ. ಸಾಮಾನ್ಯವಾಗಿ ಸಿನಿಮಾ ಪ್ರಮೋಶನ್‌ ಸಮಯದಲ್ಲಿ ಪೋಸ್ಟರ್‌ಗಳಲ್ಲಿ ತಮ್ಮ ಫೋಟೋ ಹಾಕಿಲ್ಲ,

ತನಗಿಂತ ಹೆಚ್ಚು ಇನ್ನೊಬ್ಬ ನಾಯಕಿಗೆ ಆದ್ಯತೆ ಕೊಡಲಾಗಿದೆ ಎಂದು ನಿರ್ದೇಶಕರ ಬಳಿ ಜಗಳವಾಡುವ, ಪ್ರಮೋಶನ್‌ನಿಂದ ದೂರವಿರುವ ಅದೆಷ್ಟೋ ನಾಯಕಿಯರಿದ್ದಾರೆ. ಆದರೆ, ಸೋನು ಮಾತ್ರ ತುಂಬಾ ಕೂಲ್‌ ಆಗಿದ್ದರು. ಜೊತೆಗೆ ತನ್ನ ಫೋಟೋ ಹಾಕದಿರಲು ಏನು ಕಾರಣವಿರಬಹುದೆಂಬುದನ್ನು ಅವರೇ ಅರ್ಥಮಾಡಿಕೊಂಡಿದ್ದರು. ಇತ್ತೀಚೆಗೆ ನಡೆದ  “ಐ ಲವ್‌ ಯು’ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸೋನು, “ಆರಂಭದಲ್ಲಿ ನನಗೂ ಅನಿಸಿತ್ತು, ಪೋಸ್ಟರ್‌ನಲ್ಲಿ ನನ್ನ ಫೋಟೋ ಇಲ್ಲ.

ಟ್ರೇಲರ್‌, ಹಾಡಿನಲ್ಲೂ ನನ್ನನ್ನು ತೋರಿಸಿಲ್ಲ. ಹೀಗಿರುವಾಗ ನನ್ನನ್ನು ಪ್ರಮೋಶನ್‌ಗೆ ಯಾಕೆ ಕರೀತಾರೆ, ನಾನ್ಯಾಕೆ ಹೋಗಬೇಕೆಂದು. ಆ ನಂತರ ನಾನೇ ಅರ್ಥ ಮಾಡಿಕೊಂಡೆ. ಕೋಟಿಗಟ್ಟಲೇ ಖರ್ಚು ಮಾಡುವ ಚಿತ್ರತಂಡ ಪೋಸ್ಟರ್‌ನಲ್ಲಿ ನನ್ನನ್ನು ಬಳಸದಿರಲು ಏನಾದರೊಂದು ಕಾರಣವಿರಬಹುದು, ನನ್ನ ಪಾತ್ರದ ಗುಟ್ಟುಬಿಟ್ಟು ಕೊಡಬಾರದೆಂಬ ಲೆಕ್ಕಾಚಾರವಿರಬಹುದೆಂದು. ಹಾಗಾಗಿ, ನಾನು ಪ್ರಮೋಶನ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಕೇವಲ ಪೋಟೋ ಹಾಕಿಲ್ಲ ಎಂದ ಗಲಾಟೆ ಮಾಡುವುದರಲ್ಲಿ ಅರ್ಥವಿಲ್ಲ.

“ಐ ಲವ್‌ ಯು’ ಸಿನಿಮಾದಲ್ಲಿನ ನನ್ನ ಪಾತ್ರದ ತೀವ್ರತೆಯ ಅರಿವು ನನಗಿದೆ. ಆ ಪಾತ್ರ ಖಂಡಿತಾ  ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸವೂ ಇದೆ. ಉಪೇಂದ್ರ ಅಭಿಮಾನಿಗಳಿಗೂ ನನ್ನ  ಪಾತ್ರ ಇಷ್ಟವಾಗುತ್ತದೆ’ ಎನ್ನುವ ಮೂಲಕ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಡುವ ನಾಯಕಿಯರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಸೋನು. ಎಲ್ಲಾ ನಟಿಯರು ಈ ತರಹ ಯೋಚಿಸಿದರೆ ಚಿತ್ರತಂಡದ ಮಧ್ಯೆ ವೈಮನಸ್ಸು ಬರುವುದು ತಪ್ಪಬಹುದು. ಅಂದಹಾಗೆ, ಸದ್ಯ “ಶಾಲಿನಿ ಐಪಿಎಸ್‌’ ಮುಗಿಸಿರುವ ಸೋನು ಗೌಡಗೆ, ತಮಿಳು ವೆಬ್‌ ಸೀರಿಸ್‌ನಿಂದಲೂ ಅವಕಾಶ ಬಂದಿದೆ. ಆದರೆ, ಸೋನು ಇನ್ನಷ್ಟೇ ಒಪ್ಪಿಕೊಳ್ಳಬೇಕಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ