ಮದ್ವೆ ಬಳಿಕ ಹೆಣ್ಮಕ್ಕಳ ಲೈಫ್ ಯಾಕೆ ಬದಲಾಗಬೇಕು?

ರಾಧಿಕಾ ಪಂಡಿತ್‌ ಸ್ಪಷ್ಟ ಮಾತು

Team Udayavani, Jun 29, 2019, 3:00 AM IST

“ಮದುವೆ ನಂತರ ಹೆಣ್ಮಕ್ಕಳ ಲೈಫ್ ಬದಲಾಗುತ್ತಾ? ಆ ಕಾಲ ಯಾವತ್ತೋ ಹೋಯ್ತು. ಮದುವೆ ಬಳಿಕವೂ ಅವರವರ ಕೆಲಸ ಮುಂದುವರೆಸುವುದು, ಬಿಡೋದು ಅವರವರ ನಿರ್ಧಾರಕ್ಕೆ ಬಿಟ್ಟದ್ದು…’ ಇದು ನಟಿ ರಾಧಿಕಾ ಪಂಡಿತ್‌ ಹೇಳಿದ ಮಾತು. ರಾಧಿಕಾ ಪಂಡಿತ್‌ ಮದುವೆ ಬಳಿಕ ಎಲ್ಲೂ ಮಾತಿಗೆ ಸಿಕ್ಕಿರಲಿಲ್ಲ. “ಆದಿ ಲಕ್ಷ್ಮಿ ಪುರಾಣ’ ಅವರು ಮದುವೆ ನಂತರ ನಟಿಸಿದ ಚಿತ್ರ.

ಜುಲೈನಲ್ಲಿ ಬಿಡುಗಡೆಯಾಗುತ್ತಿದೆ. ಈ ನೆಪದಲ್ಲಿ ಮಾತಿಗೆ ಸಿಕ್ಕ ರಾಧಿಕಾ ಪಂಡಿತ್‌, ತಮ್ಮ ಸಿನಿಮಾ ಜರ್ನಿ, ಯಶೋಮಾರ್ಗ ಇತ್ಯಾದಿ ವಿಷಯಗಳ ಕುರಿತು ಒಂದಷ್ಟು ಮಾತಾಡಿದ್ದಾರೆ. ಮದುವೆ ಆಯ್ತು, ಮಗಳೂ ಹುಟ್ಟಿದ್ದಾಳೆ, ಈಗ ಮತ್ತೂಂದು ಮಗುವಿನ ನಿರೀಕ್ಷೆಯಲ್ಲೂ ಇದ್ದೀರಿ. ಮುಂದೆ ಸಿನಿಮಾಗಳಲ್ಲಿ ನಟಿಸುತ್ತೀರಾ?

ಈ ಪ್ರಶ್ನೆಗೆ ಉತ್ತರವಾದ ರಾಧಿಕಾ ಪಂಡಿತ್‌, “ನನಗಂತು ಯಾವತ್ತೂ ಹಾಗೆ ಅನಿಸಿಲ್ಲ. “ಮದ್ವೆ ನಂತರ ನೀವು ನಟನೆ ಮುಂದುವರೆಸುತ್ತೀರಾ’ ಅಂತ ಸುಮಾರು ಜನ ಕೇಳಿದ್ದರು. ನನಗೆ ಆಗ ಅನಿಸಿದ್ದು, ಮದುವೆ ಬಳಿಕ ಹೆಣ್ಮಕ್ಕಳ ಲೈಫ್ ಬದಲಾಗುತ್ತಾ ಎಂಬುದು. ಆ ಕಾಲ ಹೋಯ್ತು. ನಾನು ಮದ್ವೆ ಬಳಿಕ ಸಿನಿಮಾ ಜರ್ನಿ ಮುಂದುವರೆಸುವುದು ಬಿಡುವುದು ನನಗೆ ಬಿಟ್ಟದ್ದು.

ಸದ್ಯಕ್ಕೆ ಈ ಎರಡು ವರ್ಷ ಫ್ಯಾಮಿಲಿಗೆ ಸಮಯ ಕೊಡುತ್ತಿದ್ದೇನೆ. ನಾನು ಮದುವೆ ನಂತರ ನಟಿಸಿದ “ಆದಿ ಲಕ್ಷ್ಮಿ ಪುರಾಣ’ ಚಿತ್ರ ಸ್ವಲ್ಪ ತಡ ಆಗಿದೆ. ಈಗ ಬಿಡುಗಡೆಗೆ ರೆಡಿಯಾಗುತ್ತಿದೆ. ಅಷ್ಟಕ್ಕೂ ನಾನು ಸಿನಿಮಾದವಳು. ಹಾಗಾಗಿ ಸಿನಿಮಾ ಕನೆಕ್ಷನ್‌ ಇದ್ದೇ ಇರುತ್ತೆ.ನನಗೆ ಸೂಟ್‌ ಆಗುವಂತಹ ಕಥೆ, ಪಾತ್ರ ಬಂದರೆ ಖಂಡಿತವಾಗಿಯೂ ನಟಿಸುತ್ತೇನೆ.

ಬರೀ ಸಿನಿಮಾ ಅಂತಾನೇ ಅಲ್ಲ, ಅದು ಪ್ರೊಡಕ್ಷನ್‌ ವಿಭಾಗವಾಗಲಿ, ಇನ್ಯಾವುದೋ ವಿಭಾಗದಲ್ಲಾಗಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ’ ಎಂಬುದು ರಾಧಿಕಾ ಪಂಡಿತ್‌ ಮಾತು. ಎಲ್ಲಾ ಸರಿ, ನಿಮ್ಮ ಯಶೋಮಾರ್ಗದಲ್ಲಿ ಏನೆಲ್ಲಾ ಕೆಲಸಗಳಾಗುತ್ತಿವೆ, ಮುಂದಿನ ಆಲೋಚನೆಗಳೇನು ಎಂಬ ಮಾತಿಗೆ, “ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು.

ಯಶೋಮಾರ್ಗ ಮೂಲಕ ಅಲ್ಲಿ ಕೈಲಾದ ಕೆಲಸ ಮಾಡಿದ್ದೇವೆ. ಅಜೆಂಡಾ ಪ್ಲಾನಿಂಗ್‌ ಇದೆ. ಅದನ್ನು ಹೇಳಬಾರದು. ನಾವು ಮಾಡಿದ ಕೆಲಸ ಮಾತಾಡಬೇಕು ವಿನಃ, ನಾವು ಆ ಬಗ್ಗೆ ಹೇಳಿಕೊಳ್ಳಬಾರದು. ಸದ್ಯಕ್ಕೆ ಎರಡು ಯೋಜನೆ ಕುರಿತು ಪ್ಲಾನಿಂಗ್‌ ಆಗುತ್ತಿದೆ. ಇನ್ನು, ನಿರ್ಮಾಣದ ವಿಷಯಕ್ಕೆ ಬಂದರೆ, ಈಗಂತೂ ಹೊಸಬಗೆಯ ಚಿತ್ರಗಳು ಬರುತ್ತಿರುವುದು ಒಳ್ಳೆಯ ಬೆಳವಣಿಗೆ.

ಸದ್ಯಕ್ಕೆ ಪ್ರೊಡಕ್ಷನ್ಸ್‌ ಯೋಚನೆ ಇಲ್ಲ. ಹಾಗೇನಾದರೂ ಪ್ರೊಡಕ್ಷನ್ಸ್‌ ಮಾಡಲು ನಿರ್ಧರಿಸಿದರೆ, ನನಗೆ ಇಂಟ್ರೆಸ್ಟ್‌ ಎನಿಸುವ, ವಿಭಿನ್ನವಾಗಿರುವ ಕಥೆ ಆಯ್ಕೆ ಮಾಡಿಕೊಂಡೇ ಚಿತ್ರ ನಿರ್ಮಾಣ ಮಾಡ್ತೀವಿ’ ಎಂಬುದು ಅವರ ಮಾತು. ಇವೆಲ್ಲದರ ನಡುವೆ, ಹಾಸನದಲ್ಲಿ ಜಮೀನು ಖರೀದಿಸಿರುವ ಕುರಿತು ಹೇಳುವ ಅವರು, “ನಾನು ಹುಟ್ಟಿದ್ದು, ಬೆಳೆದದ್ದು ಸಿಟಿಯಲ್ಲಿ.

ಆದರೆ, ಮದುವೆ ಆಗಿದ್ದು ರೈತರ ಫ್ಯಾಮಿಲಿಯಲ್ಲಿ. ಹಾಗಾಗಿ ನನಗೊಂದು ಬ್ಯೂಟಿಫ‌ುಲ್‌ ಬ್ಯಾಲೆನ್ಸ್‌ ಸಿಕ್ಕಿದೆ. ಆ ಫ್ಯಾಮಿಲಿಯಿಂದ ನನಗೆ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿದೆ. ಜಮೀನು ಖರೀದಿ ಕೂಡ ಕೃಷಿ ಚಟುವಟಿಕೆಗೆ ಮೀಸಲಾಗಿರುತ್ತದೆ. “ಕೆಜಿಎಫ್ ಚಾಪ್ಟರ್‌ 2′ ಬಗ್ಗೆ ನನಗೂ ಕುತೂಹಲವಿದೆ. “ಕೆಜಿಎಫ್’ ಬರೀ ಒಂದು ಚಿತ್ರವಲ್ಲ, ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಿದ ಚಿತ್ರ.

ಭಾರತದಲ್ಲಿ ಕನ್ನಡ ಸಿನಿಮಾ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ. ಕನ್ನಡ್‌ ಸಿನಿಮಾ ಅಂತ ಹೇಳುವ ಜನ ಸ್ಪಷ್ಟವಾಗಿ ಕನ್ನಡ ಸಿನಿಮಾ ಎನ್ನುತ್ತಿದ್ದಾರೆ. ಅದು ಸಿಕ್ಕ ಮೊದಲ ಗೆಲುವು. ಒಳ್ಳೆಯ ಟೀಮ್‌ ಇದ್ದರೆ, ಒಳ್ಳೆಯ ಪ್ರಾಡಕ್ಟ್ ಗ್ಯಾರಂಟಿ’ ಎನ್ನುತ್ತಾರೆ ರಾಧಿಕಾ ಪಂಡಿತ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ವಾರದಿಂದ ವಾರಕ್ಕೆ ಸಾಕಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೂ ಇವೆ. ಆದರೆ, ಸ್ಟಾರ್‌ಗಳ ಸಿನಿಮಾಗಳು ಯಾವಾಗ ಬರುತ್ತದೆ...

  • ಭೂಗತ ಲೋಕದ ಜಯರಾಜ್‌ ಬಗ್ಗೆ ಅನೇಕರಿಗೆ ಗೊತ್ತಿದೆ. ಜಯರಾಜ್‌ ಕುರಿತು ಅನೇಕ ಅನೇಕ ವರದಿಗಳು, ಲೇಖನಗಳು ಆಗಾಗ್ಗೆ ಪ್ರಕಟವಾಗುತ್ತಲೇ ಇರುತ್ತವೆ. ಇನ್ನು ಕನ್ನಡ...

  • ಕನ್ನಡ ಚಿತ್ರ ಮಾಡಿದ ಪ್ರತಿಯೊಬ್ಬರದ್ದೂ ಒಂದೇ ದೂರು. ಬುಕ್‌ ಮೈ ಶೋ ಕನ್ನಡ ಚಿತ್ರಗಳನ್ನು ಕೊಲ್ಲುತ್ತಿದೆ ಎಂಬುದೇ ಆ ದೂರು. ಹೌದು, ಬಹುತೇಕ ಕನ್ನಡ ಸಿನಿಮಾಗಳ...

  • ಎ.ಪಿ ಅರ್ಜುನ್‌ ನಿರ್ದೇಶನದ "ಕಿಸ್‌' ಚಿತ್ರ ಶತಕ ಬಾರಿಸಿದ ಖುಷಿಯಲ್ಲಿದೆ. ಹೌದು, ನವ ನಟ ವಿರಾಟ್‌, ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ರೊಮ್ಯಾಂಟಿಕ್‌...

  • ನಟ ಶರಣ್‌ ಹಾಗೂ ಆಶಿಕಾ ರಂಗನಾಥ್‌ ಜೋಡಿಯಾಗಿ ಹೆಜ್ಜೆ ಹಾಕಿದ್ದ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಹಾಡನ್ನು ಬಹುತೇಕರು ನೋಡಿರುತ್ತೀರಿ. 2018ರ ಮಾರ್ಚ್‌...

ಹೊಸ ಸೇರ್ಪಡೆ