ವಿಚ್ಛೇದನದಿಂದ ಹಿಂದೆ ಸರಿದ ಪತ್ನಿ…ಮತ್ತೆ ಒಂದಾದ ನಟ ನವಾಜುದ್ದೀನ್ ದಂಪತಿ
Team Udayavani, Mar 7, 2021, 4:29 PM IST
ಮುಂಬೈ : ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ದಾಂಪತ್ಯದಲ್ಲಿ ಕಾಣಿಸಿಕೊಂಡಿದ್ದ ಬಿರುಕು ಶಮನವಾಗಿದೆ. ಪತ್ನಿ ಆಲಿಯಾ ಸಿದ್ಧಿಕಿ ನೀಡಿದ್ದ ಡಿವೋರ್ಸ್ ವಾಪಸ್ ಪಡೆಯಲು ಮುಂದಾಗಿದ್ದಾರೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಪತಿ ನವಾಜುದ್ದೀನ್ ಅವರಿಂದ ವಿಚ್ಛೇದನ ಕೋರಿ ಪತ್ನಿ ಆಲಿಯಾ ನ್ಯಾಯಾಲಯದ ಕದ ತಟ್ಟಿದ್ದರು. ಈ ಮೂಲಕ 10 ವರ್ಷಗಳ ತಮ್ಮ ದಾಂಪತ್ಯ ಜೀವನ ಕಡಿದುಕೊಳ್ಳಲು ಮುಂದಾಗಿದ್ದರು. ತಮ್ಮ ಡಿವೋರ್ಸ್‍ಗೆ ಕೌಟುಂಬಿಕ ಕಾರಣ ಎಂದಿದ್ದ ಆಲಿಯಾ ನೇರವಾಗಿ ನವಾಜುದ್ದೀನ್ ಹಾಗೂ ಆತನ ಮನೆಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನವಾಜುದ್ದೀನ್ ಕೂಡ ಆಲಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇದೀಗ ತಮ್ಮ ವಿಚ್ಛೇದನ ನಿರ್ಧಾರ ಕೈ ಬಿಟ್ಟಿರುವ ಆಲಿಯಾ, ಡಿವೋರ್ಸ್ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾತಾಡಿರುವ ಅವರು, ಅವರಿಂದ ಬೇರೆಯಾದಮೇಲೂ ನನ್ನ ಮೇಲಿನ ಅವರ ಪ್ರೀತಿ ಕಡಿಮೆಯಾಗಿರಲಿಲ್ಲ. ಕೆಲವೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ನವಾಜುದ್ದೀನ್ ನನಗೆ ಸಹಾಯ ಮಾಡಿದರು. ಕೋವಿಡ್-19 ನಂತರ ಮಹಾಮಾರಿ ನನ್ನ ಕಣ್ಣು ತೆರೆಸಿತು, ನನ್ನ ಮನಸ್ಸು ಬದಲಿಸಿತು. ಇದರಿಂದ ವಿಚ್ಛೇದನದಂತಹ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದೇನೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನವಾಜುದ್ದೀನ್, ನನ್ನ ವೈಯಕ್ತಿಕ ಜೀವನದ ಬಗ್ಗೆ ಎಲ್ಲರೆದು ಮಾತನಾಡಲು ನಾನು ಇಷ್ಟಪಡುವುದಿಲ್ಲ. ಆದರೆ, ಅವಳು ( ಆಲಿಯಾ) ಈಗಲೂ ನನ್ನ ಮಕ್ಕಳಿಗೆ ತಾಯಿ. ನಾವಿಬ್ಬರು ಜತೆಯಾಗಿ ದಶಕಗಳನ್ನು ಕಳೆದಿದ್ದೇವೆ. ಯಾವುದೇ ವಿಚಾರವಿರಲಿ ನಾನು ಅವಳನ್ನು ಬೆಂಬಲಿಸುತ್ತೇನೆ. ಕೆಲವೊಂದು ವಿಚಾರಗಳನ್ನು ನಾವಿಬ್ಬರು ವಿಭಿನ್ನವಾಗಿರಬಹುದು. ಆದರೆ, ನಮ್ಮ ಮಕ್ಕಳೇ ನಮಗೆ ಮೊದಲ ಆದ್ಯತೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೋನುಗೆ ಕೋವಿಡ್ ಪಾಸಿಟಿವ್:ಅನಾರೋಗ್ಯದಲ್ಲಿದ್ದರೂ ಸಹಾಯ ಹಸ್ತದ ಭರವಸೆ ನೀಡಿದ ನಟ
ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ
ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು: ಅಭಿಮಾನಿಗಳಲ್ಲಿ ಆತಂಕ
ಮುಂಬೈ : ಇಂದಿನಿಂದ ಮತ್ತೆ ಮರುಪ್ರಸಾರವಾಗುತ್ತಿದೆ ‘ರಾಮಾಯಣ’ ಧಾರಾವಾಹಿ
ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್