ಸಮಂತಾ ಬಳಿಕ ಮತ್ತೋರ್ವ ನಟಿಗೆ ಗಂಭೀರ ಆರೋಗ್ಯ ಸಮಸ್ಯೆ: ಅಪರೂಪದ ಕಾಯಿಲೆಗೆ ತುತ್ತಾದ ನಟಿ
Team Udayavani, Dec 3, 2022, 4:38 PM IST
ಹೈದರಾಬಾದ್: ಇತ್ತೀಚೆಗೆ ಸಮಂತಾ ತಮ್ಮ ಕಾಯಿಲೆಯ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡಿದ್ದರು. ಈಗ ಈ ಸಾಲಿಗೆ ಮತ್ತೋರ್ವ ಖ್ಯಾತ ನಟಿ ಸೇರಿದ್ದಾರೆ.
ಟಾಲಿವುಡ್ ನಲ್ಲಿ 2006 ರಲ್ಲಿ ʼ ಮಾಯಾಜಲಂʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪೂನಂ ಕೌರ್ ತಾವು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
“ಕಳೆದ ಎರಡು ವರ್ಷಗಳಿಂದ “ಫೈಬ್ರೊಮ್ಯಾಲ್ಗಿಯ”( ನಿದ್ರಾಹೀನತೆ, ನೆನಪಿನ ಶಕ್ತಿ, ಮಾನಸಿಕ ಸಮಸ್ಯೆಗಳು ಮತ್ತು ತೀವ್ರವಾದ ಸ್ನಾಯು ನೋವುಗಳು) ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ಸದ್ಯ ನಾನು ಈ ಸಂಬಂಧ ಕೇರಳದಲ್ಲಿ ಆರ್ಯವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ” ಎಂದು ಅಭಿಮಾನಿಗಳೊಂದಿಗೆ ವಿಚಾರವನ್ನು ಹೇಳಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸ್ವಲ್ಪ ವಿಶ್ರಾಂತಿ ಪಡೆಯೋಣ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿ ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಶುಭ ಹಾರೈಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪೂನಂ ಕೌರ್ ವಿವಾದಿತ ಪೋಸ್ಟ್ ಗಳಿಂದ ಸುದ್ದಿಯಾಗಿದ್ದರು. ʼಶೌರ್ಯಂʼ, ‘ವಿನಾಯಕುಡು’, ‘ಈನಾಡು’, ‘ಗಣೇಶ್ & ಗಗನಂ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಠಾಣ್ ನಿಜವಾದ ಕಲೆಕ್ಷನ್ ಎಷ್ಟು?; ನೆಟಿಜನ್ ಗಳಿಗೆ ತಿರುಗೇಟು ಕೊಟ್ಟ ಶಾರುಖ್
ಪ್ರಭುದೇವ ಅಭಿನಯದ “wolf” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವರಾಜಕುಮಾರ್
ಪೂಜಾ ಹೆಗ್ದೆ ಸಹೋದರನ ಮದುವೆಯಲ್ಲಿ ಸಲ್ಮಾನ್ ಖಾನ್: ಮತ್ತೆ ‘ಪ್ರೀತಿ ವದಂತಿ’ ಶುರು
ಟಾಲಿವುಡ್ ರಂಗದ ʼಕಲಾ ತಪಸ್ವಿʼ, ದಿಗ್ಗಜ ನಿರ್ದೇಶಕ ಕೆ.ವಿಶ್ವನಾಥ್ ನಿಧನ
ಬಾಲಿವುಡ್ ಸ್ಟಾರ್ಸ್ ಅಕ್ಷಯ್ ಕುಮಾರ್,ಟೈಗರ್ ಶ್ರಾಫ್ ಡಾನ್ಸ್ ವೈರಲ್
MUST WATCH
ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ
ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್ ಜೋಷಿ ಸಂವಾ
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಹೊಸ ಸೇರ್ಪಡೆ
ಫೆ.11, 12: ನಮ್ಮ ಸಂತೆಯಲ್ಲಿ ನಿಮ್ಮ ಮಳಿಗೆಯೂ ಇರಲಿ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
ಚೀನಾದ ಗೂಢಚಾರಿಕೆ ಬಲೂನ್ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ
“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು
ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್!