‘ಸಲಾರ್’ ರಿಲೀಸ್‍ಗೆ ಮುಹೂರ್ತ ಫಿಕ್ಸ್…!
Team Udayavani, Feb 28, 2021, 3:28 PM IST
ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಕಾಂಬಿನೇಶನ್ ನಲ್ಲಿ ರೆಡಿಯಾಗುತ್ತಿರುವ ಸಲಾರ್ ಚಿತ್ರದ ಬಿಡುಗಡೆಯ ದಿನಾಂಕ ಇಂದು (ಫೆ.28) ಘೋಷಣೆಯಾಗಿದೆ.
ನಿರ್ದೇಶಕ ಪ್ರಶಾಂತ್, ವಿಶ್ವದಾದ್ಯಂತ ಸಲಾರ್ ಬಿಡುಗಡೆಯ ದಿನಾಂಕ ಪ್ರಕಟಿಸಿದ್ದು, 2022 ಏಪ್ರಿಲ್ 14 ರಂದು ಇಡೀ ವಿಶ್ವದಾದ್ಯಂತ ಸಲಾರ್ ಅಬ್ಬರ ಶುರುವಾಗಲಿದೆ.
ಈಗಾಗಲೇ ಸಲಾರ್ ಚಿತ್ರದ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರ ಮಾಸ್ ಲುಕ್ ಸಿನಿ ರಸಿಕರಲ್ಲಿ ಹೊಸ ಕ್ರೇಜ್ ಮೂಡಿಸಿದೆ. ಕನ್ನಡ, ತೆಲುಗು,ತಮಿಳು ಸೇರಿದಂತೆ ಬಹುಭಾಷೆಯಲ್ಲಿ ಸಲಾರ್ ತೆರೆ ಕಾಣಲಿದೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ ಕೆಜಿಎಫ್ 2 ಸಿನಿಮಾ ಜುಲೈ 16 ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲು ರೆಡಿಯಾಗಿದೆ. ಕೆಜಿಎಫ್ ಯಶಸ್ಸಿನ ಉತ್ತುಂಗದಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್, ತೆಲುಗಿನ ಸೂಪರ್ ಸ್ಟಾರ್ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಸಲಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಜಿಎಫ್ ಸರಣಿ ಸಿನಿಮಾ ನಿರ್ಮಾಪಕ ವಿಜಯ ಕಿರಗಂದೂರ ಅವರೇ ಸಲಾರ್ ಚಿತ್ರಕ್ಕೂ ಹಣ ಹೂಡುತ್ತಿದ್ದಾರೆ. ಶೃತಿ ಹಾಸನ್ ಈ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಲಿದ್ದಾರೆ.
𝐑𝐞𝐛𝐞𝐥𝐥𝐢𝐧𝐠 Worldwide #Salaar On 𝐀𝐩𝐫𝐢𝐥 𝟏𝟒, 𝟐𝟎𝟐𝟐 💥
We can’t wait to celebrate with you all 🔥#Salaar14Apr22#Prabhas @prashanth_neel @VKiragandur @hombalefilms @shrutihaasan @BasrurRavi @bhuvangowda84 pic.twitter.com/BmWzzbOy1s
— Prashanth Neel (@prashanth_neel) February 28, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋವಿಡ್ ಕಂಟಕ : ಪ್ರಿಯಕರನ ಜೊತೆ ಮುಂಬೈ ತೊರೆದ ನಟಿ ಆಲಿಯಾ ಭಟ್
ರಾಖಿ ಸಾವಂತ್ ತಾಯಿಯ ಜೀವ ಉಳಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್
ರಾಷ್ಟ್ರಪ್ರಶಸ್ತಿ ವಿಜೇತೆ, ಮರಾಠಿ ಚಿತ್ರರಂಗದ ಖ್ಯಾತ ನಿರ್ದೇಶಕಿ ಸುಮಿತ್ರಾ ಭಾವೆ ಇನ್ನಿಲ್ಲ
ರಂಜಾನ್ಗೆ ಜನ ಸೇರುವುದನ್ನು ನಿಷೇಧಿಸಿ ಎಂದು ಪ್ರಧಾನಿಗೆ ನಟಿ ಕಂಗನಾ ಒತ್ತಾಯ
ಬಾಲಿವುಡ್ ನಟಿ ಅನುಷಾ ದಾಂಡೇಕರ್ – ಕರಣ್ ಕುಂದ್ರಾ ಬಾಂಧವ್ಯದಲ್ಲಿ ಬಿರುಕು