ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ
Team Udayavani, Feb 28, 2021, 3:47 PM IST
ಬೆಂಗಳೂರು: ಜೆಡಿಎಸ್ ಗೆ ಜೋಕರ್ ಪಕ್ಷ ಎಂದಿರುವ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ಧ ಜೆಡಿಎಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಯೋಗೇಶ್ವರ್ ಒಬ್ಬ ಮರ್ಕಟ ಮನಸ್ಥಿತಿಯ ರಾಜಕೀಯ ಜೋಕರ್ ಎಂದು ಜೆಡಿಎಸ್ ನ ಎಸ್.ಎಲ್. ಭೋಜೇಗೌಡ ಟೀಕಿಸಿದ್ದಾರೆ.
ಈ ಬಗ್ಗ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಭೋಜೇಗೌಡ, ಕಾಂಗ್ರೆಸ್ ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್ ಗೆ, ಸಮಾಜವಾದಿ ಪಕ್ಷಕ್ಕೆ, ನಂತರ ಕಾಂಗ್ರೆಸ್ ಗೆ, ಬಿಜೆಪಿಗೆ… ಹೀಗೆ ವಿಭಿನ್ನ ಸಿದ್ಧಾಂತದ ಪಕ್ಷಗಳಿಗೆ ಅಧಿಕಾರಕ್ಕಾಗಿ ನೆಗೆದು ಜಿಗಿದ “ರಾಜಕೀಯದ ಜೋಕರ್” ಯೋಗೇಶ್ವರ್ ಜೆಡಿಎಸ್, ಎಚ್ಡಿಕೆ ಬಗ್ಗೆ ಮಾತಾಡಲು ಅರ್ಹರೆ? ರಾಜಕೀಯದ ಮದಗಜವೆಲ್ಲಿ ಮರ್ಕಟ ಮನಸ್ಥಿತಿಯ ಜೋಕರ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
“ಏನದು… ಜೋಕರ್…? ಇಸ್ಪೀಟ್ ಆಡಿದ ಅನುಭವ ಇದ್ದವರಿಗೇ ಅಲ್ಲವೇ ಜೋಕರ್‌ನ ಮಹತ್ವ ಗೊತ್ತು? ಹಾಗಾಗಿಯೇ ನಿಮ್ಮ ನಾಲಿಗೆ ಮೇಲೆ ಜೋಕರ್‌ಗಳು ನಲಿದಾಡುತ್ತಾರೆ. ನೀವು ಇಷ್ಟು ದಿನ ಮಾಡಿಕೊಂಡು ಬಂದಿದ್ದೂ ಜೋಕರ್ ರಾಜಕೀಯವೇ ಅಲ್ಲವೇ? ಮದಗಜ ಎಚ್ ಡಿಕೆಯನ್ನು ಹಣಿಯಲು ನೀವು ಡಿ.ಕೆ ಶಿವಕುಮಾರ್ ಪಾದ ನೆಕ್ಕಿದ್ದನ್ನು ನಾವು ನೋಡಿಲ್ಲವೇ” ಎಂದಿದ್ದಾರೆ.
ಇದನ್ನೂ ಓದಿ:ಸಿ.ಡಿಯಿಂದ, ಫೋಟೊದಿಂದಲೋ ಯೋಗೇಶ್ವರ್ ಗೆ ಬಿಜೆಪಿ ಪರಿಷತ್ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ
ನಿಮ್ಮ ಚಿಲ್ಲರೆ ರಾಜಕೀಯದಿಂದ, ಮರ್ಕಟ ಬುದ್ಧಿಯಿಂದ, ಜೋಕರ್ ಆಟದಿಂದ, ಕಳೆದು ಹೋಗಿದ್ದ ಚನ್ನಪಟ್ಟಣದ ಘನತೆ ಮರುಸ್ಥಾಪಿಸಿದ್ದು ಎಚ್ ಡಿಕೆ. ಚನ್ನಪಟ್ಟಣದವರೆಂದು ಹೇಳಿಕೊಳ್ಳಲು ಮುಜುಗರಪಡುತ್ತಿದ್ದ ಜನ ಇಂದು ಚನ್ನಪಟ್ಟಣದವರೆಂದು ಎದೆ ತಟ್ಟಿಕೊಂಡು ಹೇಳುತ್ತಿದ್ದಾರೆ. ಯಾಕೆಂದರೆ ಈಗ ಚನ್ನಪಟ್ಟಣದ ನಾಯಕ ಜೋಕರ್ ಆಲ್ಲ… ಕಿಂಗ್ ಎಚ್ ಡಿಕೆ ಎಂದು ಭೋಜೇಗೌಡ ಹೇಳಿದ್ದಾರೆ.
ಬಿಜೆಪಿಯಲ್ಲಿ ಸಂಘಟನೆಯಿಂದ ನಾಯಕರಾಗುತ್ತಿದ್ದಾರೆ ಎಂದು ಹೇಳುತ್ತಿದ್ದರು. ಆದರೆ, ಜೇಬಿನಲ್ಲಿ ಸಿಡಿ ಇದ್ದರೂ ಸಚಿವ, ನಾಯಕರಾಗಬಹುದು ಎಂಬುದನ್ನು ನೀವು ಸಾಬೀತು ಮಾಡಿದ್ದೀರಿ. ಸಿಡಿಗಳು, ಫೋಟೊಗಳ ಸಂತ್ರಸ್ಥರು ಬಿಜೆಪಿಯಲ್ಲಿ ಇರಬಹುದು. ಆದರೆ, ಜೆಡಿಎಸ್‌ನಲ್ಲಿ ನಿಮ್ಮ ಕ್ಯಾಮೆರಾಗಳಿಗೆ ಬೀಳುವವರು ಇಲ್ಲ. ನಿಮ್ಮ ಫೋಟೊಗಳಿಗೆ ಬೆದರುವುದೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ನನ್ನ ಸೋಲಿಗೆ ಬಹುಜನ ವಿದ್ಯಾರ್ಥಿ ಸಂಘದ ಅಪಪ್ರಚಾರವೂ ಕಾರಣ : ಆರ್. ಧ್ರುವನಾರಾಯಣ
ಸಿಡಿ, ಫೋಟೊಗಳ ವಿಷಯದಲ್ಲಿ ಹುಷಾರಾಗಿರಿ ‘ಸೀಡಿ ಯೋಗೇಶ್ವರ’. ಕಡೆಗೆ ನಿಮ್ಮ ಮಾತು ನಿಮ್ಮ ಮನೆಯವರನ್ನೇ ಬೀದಿಗೆ ತಂದುಬಿಟ್ಟೀತು. ಡ್ರಗ್ಸ್ ದಂಧೆಯಲ್ಲಿ ಜೈಲು ಸೇರಿದವರ ಪಲ್ಲಂಗದಲ್ಲಿ ಪಂದ್ಯವಾಡಿದ ನಿಮ್ಮವರ ಫೋಟೋಗಳು, ವೀಡಿಯೊಗಳು ನಿಮ್ಮನ್ನು ಬಟಾ ಬಯಲು ಮಾಡಲಿವೆ. ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆಯಬೇಡಿ. ಬಾಯಿ ಚಪಲಕ್ಕೆ ಮಾತಾಡಬೇಡಿ ಎಂದು ಯೋಗೀಶ್ವರ್ ಗೆ ಎಚ್ಚರಿಸಿದ್ದಾರೆ.
ಸಮುದಾಯವೊಂದರ ನಾಯಕನನ್ನು ಅದೇ ಸಮುದಾಯದವರ ಮೂಲಕವೇ ಹಣಿಯುವುದು ಬಿಜೆಪಿ ತಂತ್ರಗಾರಿಕೆ. ಎಚ್‌ಡಿಕೆ ಎಂಬ ರಾಜಕೀಯ ಮದಗಜವನ್ನು ನಿಂದಿಸಿ ನಾಯಕನಾಗಿ ಬೆಳೆಯುತ್ತೇನೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನ. ಕುಮಾರಸ್ವಾಮಿ ಅವರನ್ನು ಏಕವಚನದಲ್ಲಿ ಮಾತನಾಡಿದವರು, ಅಪ್ಪನಾಣೆ ಇಟ್ಟವರು ವನವಾಸ ಪಡುತ್ತಿದ್ದಾರೆ. ನೀವ್ಯಾವ ಲೆಕ್ಕ ಎಂದು ಜೆಡಿಎಸ್ ನಾಯಕ ಭೋಜೇಗೌಡ ಟಾಂಗ್ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಾಕ್ ಡೌನ್ ಬೇಡ್ವೇ ಬೇಡ, 144 ಸೆಕ್ಷನ್ ಜಾರಿ ಮಾಡಿ : ವಿಪಕ್ಷ ನಾಯಕರ ಆಗ್ರಹ
ವಿಧಾನಸೌಧದಲ್ಲಿ ಸಿಎಂ ಸಭೆ: ಕೋವಿಡ್ ಹೆಚ್ಚಳಕ್ಕೆ ಸರ್ಕಾರವೇ ಕಾರಣ ಎಂದ ವಿಪಕ್ಷ ನಾಯಕರು
ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೋವಿಡ್ಗೆ ಬಲಿ
ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಮೋದಿ ಟ್ವೀಟ್
ಆರೋಗ್ಯ ಕ್ಷೇತ್ರಕ್ಕೆ ₹30 ಸಾವಿರ ಕೋಟಿ ಮೀಸಲಿಡಬೇಕು : ಡಿ.ಕೆ. ಶಿವಕುಮಾರ್