ಆ ಎರಡು ವರ್ಷಗಳ ಪ್ರೀತಿ; ಇನ್ನೊಂದು ರೀತಿ


Team Udayavani, Jul 29, 2017, 10:54 AM IST

Aa-Eradu-Varshagalu.jpg

“ಅವಳದು ಅಳತೆ ಮೀರಿದ ಆಸೆ. ಅವನಿಗೆ ಅವಳ ಆಸೆ ಈಡೇರಿಸೋ ಛಲ. ಇಬ್ಬರದೂ ಒಪ್ಪಿದ ಪ್ರೀತಿ. ಆದರೆ,”ಆ ಎರಡು ವರ್ಷ’ಗಳಲ್ಲಿ ಆಗೋದೇ ಇನ್ನೊಂದು ರೀತಿ! -ಇಷ್ಟು ಹೇಳಿದ ಮೇಲೆ ಪ್ರೇಮಿಗಳಿಬ್ಬರ “ನಾಕಾಣೆ, ಎಂಟಾಣೆ ಲೈಫ‌ಲ್ಲಿ ಇದೆಲ್ಲವೂ ಮಾಮೂಲಿ’ ಅಂತೆನಿಸದೇ ಇರದು. ಒಬ್ಬ ಬೋಲ್ಡ್‌ ಹುಡುಗಿ, ಒಬ್ಬ ತುಂಟ ಹುಡುಗನ ಪ್ರೇಮ ಸಲ್ಲಾಪದಲ್ಲಿ ಸಾಕಷ್ಟು ತಿರುವುಗಳು ಬಂದು, ಅದು ವಿಕೋಪಕ್ಕೆ ಹೋದಾಗ ಅವರಿಬ್ಬರ ಲೈಫ್ ಹೇಗೆಲ್ಲಾ ಟರ್ನ್ ತೆಗೆದುಕೊಳ್ಳುತ್ತೆ ಅನ್ನೋದನ್ನು ಸ್ವಲ್ಪ ಸೂಕ್ಷ್ಮವಾಗಿ, ಒಂದಷ್ಟು ಗೊಂದಲವಾಗಿ ಹೇಳುತ್ತಾ ಹೋಗಿದ್ದಾರೆ ನಿರ್ದೇಶಕ ಮಧುಸೂದನ್‌.

ಕಥೆಯಲ್ಲಿ ಹೇಳಿಕೊಳ್ಳುವಂತಹ ವಿಶೇಷತೆಗಳೇನಿಲ್ಲ. ಟೀನೇಜ್‌ನಲ್ಲಿ ಹುಡುಗ, ಹುಡುಗಿ ನಡುವೆ ನಡೆಯೋ ಸಿಂಪಲ್‌ ಲವ್‌ಸ್ಟೋರಿ ಇಲ್ಲೂ ಇದೆಯಾದರೂ ಅಲ್ಲಲ್ಲಿ ಹೊಸ ವಿಷಯ ಬೆರೆಸಿ, ಕೊಂಚ ಹದಗೊಳಿಸಿ ಸುಮ್ಮನೆ ನೋಡಿಸಿಕೊಂಡು ಹೋಗುವಂತೆ ಮಾಡಿರುವ ಪ್ರಯತ್ನ ಮೆಚ್ಚಬೇಕು. ಹೊಸದಾಗಿ ಹುಟ್ಟಿಕೊಂಡ ಪ್ರೀತಿಯನ್ನು ಪ್ರೇಮಿಗಳು ಹೇಗೆ ಆರಾಧಿಸುತ್ತಾರೆ ಅನ್ನೋದು ಎಷ್ಟು ಸೊಗಸಾಗಿರುತ್ತೋ, ಅಷ್ಟೇ ಮಜವಾಗಿ ಮೊದಲರ್ಧ ಸಾಗುತ್ತದೆ.

ಆ ಪ್ರೀತಿಯ ದಾರಿಯಲ್ಲಿ ಏಳು-ಬೀಳಿನ ಪಾಠ ಕಲಿತು, ಇನ್ನೇನು ಪ್ರೀತಿ ಬಲು ಕಷ್ಟ ಅಂತ ಹೇಗೆ ರೋಧಿಸುತ್ತಾರೋ, ಹಾಗೆಯೇ ದ್ವಿತಿಯಾರ್ಧ ಕೂಡ ಅಂತಹ ಯಾತನಮಯದಲ್ಲೇ ಸಾಗುತ್ತದೆ. ಹಾಗಂತ, ಇಡೀ ಚಿತ್ರದಲ್ಲಿ ಹೇಳಿಕೊಳ್ಳುವಂತಹ ವಿಷಯಗಳೇ ಇಲ್ಲವೆಂದಲ್ಲ, ಚಿತ್ರದ ಕ್ಲೈಮ್ಯಾಕ್ಸ್‌ನಲ್ಲೊಂದು ಸಂದೇಶವಿದೆ. ಅದೇ ಸಿನಿಮಾದ ಪ್ಲಸ್‌. ಚಿತ್ರದಲ್ಲಿ ಕಚಗುಳಿ ಇಡುವಂತಹ ಮಾತುಗಳಿವೆ.

ಈಗಿನ ಯೂತ್ಸ್ಗಾಗಿಯೇ ಬರೆದಿಟ್ಟ ಮಾತುಗಳಾದರೂ, ಆಗಾಗ ಅವು “ಅತಿ’ ಎನಿಸಿ, ಬೇಕಿತ್ತಾ ಅನಿಸೋದು ಉಂಟು. ಒಮ್ಮೊಮ್ಮೆ ಸಿನಿಮಾನಾ, ಧಾರಾವಾಹಿ ಎಪಿಸೋಡುಗಳಾ ಎಂಬ ಪ್ರಶ್ನೆ ಕಾಡಿದರೂ ಅಚ್ಚರಿ ಇಲ್ಲ. ಯಾಕೆಂದರೆ, ಲವ್‌ ಎಪಿಸೋಡುಗಳ ಸರಮಾಲೆಯ ಫೀಲ್‌ ಇಲ್ಲುಂಟು. ನಿರೂಪಣೆಯಲ್ಲಿ ಇನ್ನಷ್ಟು ಹಿಡಿತ ಇಟ್ಟುಕೊಂಡಿದ್ದರೆ, “ವರ್ಷ’ದ ನೆನಪು ಹರ್ಷವಾಗುತ್ತಿತ್ತು. ಅಂತಹ ಅವಕಾಶ ಕೈ ತಪ್ಪಿದೆ.

ಮೊದಲರ್ಧದಲ್ಲಿರುವ ವೇಗ ದ್ವಿತಿಯಾರ್ಧದಲ್ಲೂ ಕಾಯ್ದಿರಿಸಿಕೊಂಡಿದ್ದರೆ, ಹೊಸಬರ ಪ್ರಯತ್ನಕ್ಕೆ ಒಳ್ಳೆಯ ಮಾರ್ಕ್ಸ್ ಕೊಡಬಹುದಿತ್ತು. ಆ ಅವಕಾಶ ತಪ್ಪಿದೆ. ಇದೊಂದು ಜರ್ನಿ ಲವ್‌ಸ್ಟೋರಿ. ಈಗಾಗಲೇ ಇಂತಹ ಅನೇಕ ಜರ್ನಿ ಲವ್‌ಸ್ಟೋರಿಗಳು ಬಂದು ಹೋಗಿವೆಯಾದರೂ, ಕೊನೆಯಲ್ಲಿ ಸಿಗುವ ತಿರುವುಗಳು ಮಾತ್ರ ಎರಡು ವರ್ಷಗಳ ನೆನಪನ್ನು ಮೆಲುಕು ಹಾಕುವಂತೆ ಮಾಡದೇ ಇರದು. ಇಡೀ ಕಥೆಯ ಸಾರ ಇರೋದೇ, ಕ್ಲೈಮ್ಯಾಕ್ಸ್‌ನಲ್ಲಿ ಆ ಕುತೂಹಲವಿದ್ದರೆ, ಒಮ್ಮೆ ಸಿನಿಮಾ ನೋಡಲಡ್ಡಿಯಿಲ್ಲ.

ಒಂದು ಮನೆ. ಆ ಮನೆಯ ಮಹಡಿ ಮೇಲೆ ವರ್ಷ ಕುಟುಂಬ ವಾಸವಿದ್ದರೆ, ಕೆಳಗೆ ವರುಣ್‌ ಫ್ಯಾಮಿಲಿ ವಾಸ. ಮೊದಲ ನೋಟದಲ್ಲೇ ವರುಣ್‌, ವರ್ಷಳ ಅಂದಕ್ಕೆ ಫಿದಾ ಆಗಿರುತ್ತಾನೆ. ಮೆಲ್ಲನೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗುತ್ತೆ. ಇಬ್ಬರ ಪ್ರೀತಿ ವಿಷಯ ವರ್ಷ ಮನೆಯವರಿಗೆ ಗೊತ್ತಾಗಿ, ಅದು ಬ್ರೇಕ್‌ ಅಪ್‌ ಆಗುವ ಹಂತಕ್ಕೂ ಹೋಗುತ್ತೆ.

ಅದು ಹೇಗೆ ಎಂಬುದನ್ನೇ ನಿರ್ದೇಶಕರು ಜಾಣತನದಿಂದ ಆಗಾಗ ಫ್ಲ್ಯಾಶ್‌ಬ್ಯಾಕ್‌ ಸ್ಟೋರಿಗಳನ್ನು ತೋರಿಸುತ್ತ, ಇಬ್ಬರ ಪ್ರೀತಿಯೊಳಗಿನ ಕಥೆ, ವ್ಯಥೆಯನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಪ್ರೇಮಿಯ ಕನಸು ಈಡೇರಿಸುವ ಸಲುವಾಗಿ ಅವನು ಮನೆಯವರನ್ನು ಬಿಟ್ಟು, ಇರುವ ಕೆಲಸವನ್ನೂ ಲೆಕ್ಕಿಸದೆ ಅವಳೊಂದಿಗೆ ಜರ್ನಿ ಶುರು ಮಾಡುತ್ತಾನೆ. ಆರಂಭದಲ್ಲಿ ಚೆನ್ನಾಗಿಯೇ ಇರುವ ಪ್ರೀತಿ, ಅಲ್ಲಲ್ಲಿ ಬಿರುಕು ಬಿಟ್ಟುಕೊಳ್ಳುತ್ತೆ. ಹತಾಶೆ, ಬೇಸರ, ಕೋಪ, ತಾಪಗಳ ನಡುವೆ ಪ್ರೀತಿ ಬಹಳ ದಿನ ಉಳಿಯೋದಿಲ್ಲ.

ಆಮೇಲೆ ಏನಾಗುತ್ತೆ ಅನ್ನೋದೇ ಚಿತ್ರದ ಹೈಲೈಟ್‌. ನಾಯಕ ರೇಣು ಮಠದ ಅವರ ನಟನೆಯಲ್ಲಿ ಲವಲವಿಕೆ ಇದೆ. ಅಮಿತಾ ಕುಲಾಲ್‌, ಬೋಲ್ಡ್‌ ಹುಡುಗಿಯಾಗಿ ಗಮನಸೆಳೆದರೂ ನಟನೆಯಲ್ಲಿನ್ನೂ ದೂರ ಸಾಗಬೇಕಿದೆ. ರಾಮಕೃಷ್ಣ, ತ್ರಿವೇಣಿ ಸಿಕ್ಕ ಪಾತ್ರಗಳಲ್ಲಿ ಜೀವಿಸಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ರವಿ ಕಿಶೋರ್‌ ಛಾಯಾಗ್ರಹಣದಲ್ಲಿ ಹರ್ಷ ತುಂಬಿದೆ.

ಚಿತ್ರ: ಆ ಎರಡು ವರ್ಷಗಳು
ನಿರ್ಮಾಣ: ರಿಷಿಕಾ ಮಧುಸೂದನ್‌
ನಿರ್ದೇಶನ: ಮಧುಸೂದನ್‌
ತಾರಾಗಣ: ರೇಣು ಮಠದ, ಅಮಿತಾ ಕುಲಾಳ್‌, ರಾಮಕೃಷ್ಣ, ತ್ರಿವೇಣಿ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.