ರಾತ್ರಿ ಹೊತ್ತಲ್ಲಿ ಆತ್ಮ ಹೇಳಿದ ಕಥೆ!

ಚಿತ್ರ ವಿಮರ್ಶೆ

Team Udayavani, Apr 13, 2019, 3:00 AM IST

Night-Out

“ಜೀವನ ಸತ್ಯ ಅಲ್ಲ, ಅದು ಪ್ರತಿಬಿಂಬ ಅಷ್ಟೇ…’ ನಾಯಕ ಈ ಡೈಲಾಗ್‌ ಹೇಳುವುದಕ್ಕೂ ಮುನ್ನ ಒಂದಷ್ಟು ಕಥೆ ಸಾಗಿರುತ್ತದೆ. ಹಗಲು-ರಾತ್ರಿಯ ಫ್ಲ್ಯಾಶ್‌ಬ್ಯಾಕ್‌ ಸ್ಟೋರಿಗಳೂ ಬಂದು ಹೋಗಿರುತ್ತವೆ. ಆ ಫ್ಲ್ಯಾಶ್‌ಬ್ಯಾಕ್‌ ಸ್ಟೋರಿ ತೋರಿಸುವ ಮೂಲಕವೇ ನೋಡುಗರನ್ನೂ ಕೂಡ ರಾತ್ರಿ “ಗಸ್ತು’ ತಿರುಗಿದ ಅನುಭವಕ್ಕೆ ದೂಡಲಾಗಿದೆ.

ಇಲ್ಲಿ ಮಾಮೂಲಿ ಕಥೆಗಿಂತ ಕೊಂಚ ಭಿನ್ನವಾಗಿ ಹೇಳುವ ಪ್ರಯತ್ನ ಮಾಡಿರುವುದೇ ಹೆಚ್ಚುಗಾರಿಕೆ. ಶೀರ್ಷಿಕೆ ಹೇಳುವಂತೆ ಇದೊಂದು ರಾತ್ರಿ ವೇಳೆ ನಡೆಯುವ ಕಥೆ. ಕೇವಲ ಆರು ಗಂಟೆಯಲ್ಲಿ ಏನೆಲ್ಲಾ ನಡೆದು ಹೋಗುತ್ತದೆ ಎಂಬುದು ಕಥೆಯ ಸಾರಾಂಶ. ಅದನ್ನು ಸರಳವಾಗಿ ಹೇಳಬಹುದಿತ್ತಾದರೂ, ನಿರ್ದೇಶಕರು ಕೊಂಚ ರಿಸ್ಕ್ ತಗೊಂಡಿದ್ದಾರೆ.

ಮೊದಲ ನಿರ್ದೇಶನವಾದ್ದರಿಂದ ಕೆಲ ತಪ್ಪುಗಳನ್ನು ಬದಿಗೊತ್ತಿ, ಒಂದು ರಾತ್ರಿಯ ಸುತ್ತಾಟದಲ್ಲಿ ಏನೆಲ್ಲಾ ನಡೆಯುತ್ತೆ ಎಂಬುದನ್ನು ತಿಳಿಯಲು ಅಡ್ಡಿಯಿಲ್ಲ. ಕನ್ನಡದಲ್ಲಿ ಈ ರೀತಿಯ ಕಥೆಗಳು ಬಂದಿಲ್ಲ ಅಂತ ಹೇಳುವುದು ಕಷ್ಟ. ಆದರೆ, ಕೊನೆಯ ಹದಿನೈದು ನಿಮಿಷ ಬರುವ ಕ್ಲೈಮ್ಯಾಕ್ಸ್‌ನಲ್ಲಿ ದೊಡ್ಡ ತಿರುವು ಇದೆ. ಅದೇ ಚಿತ್ರದ ಜೀವಾಳ.

ಇನ್ನುಳಿದಂತೆ ಚಿತ್ರದುದ್ದಕ್ಕೂ ಮಾಮೂಲಿ ಮಾತುಕತೆ ಮತ್ತು ಒಂಚೂರು ವ್ಯಥೆ ಇದೆ. ಚಿತ್ರ ನೋಡುಗರಿಗೆ ಬಹುಬೇಗ ಮುಗಿದ ಅನುಭವವಾದರೂ, ಮೊದಲರ್ಧ ಮಾತ್ರ ತಾಳ್ಮೆ ಕೆಡಿಸುವುದು ಸುಳ್ಳಲ್ಲ. ಮೊದಲರ್ಧಕ್ಕೆ ಇನ್ನಷ್ಟು ಕತ್ತರಿ ಪ್ರಯೋಗದ ಅವಶ್ಯಕತೆ ಇತ್ತು. ಆದರೆ, ಮಧ್ಯಂತರಕ್ಕೊಂದು ಟ್ವಿಸ್ಟ್‌ ಕೊಡುವ ಸಲುವಾಗಿ ನೋಡುಗರನ್ನು ಟೆಸ್ಟ್‌ ಮಾಡಲಾಗಿದೆ.

ನಿರ್ದೇಶಕರಿಗೆ ಏನು ಹೇಳಬೇಕು, ಎಷ್ಟು ತೋರಿಸಬೇಕು ಎಂಬ ಸ್ಪಷ್ಟತೆ ಇದೆ. ಹಾಗಾಗಿ, ಇಲ್ಲಿ ಬೆರಳೆಣಿಕೆಯಷ್ಟು ಪಾತ್ರಗಳ ಜೊತೆಗೆ ಕಥೆ ಸಾಗುವಂತೆ ಮಾಡಿದ್ದಾರೆ. ವಿನಾಕಾರಣ, ಇಲ್ಲಿ ಹಾಸ್ಯ ಪ್ರಸಂಗಗಳಿಲ್ಲ. ಭರ್ಜರಿ ಫೈಟ್‌ ಕೂಡ ಇಲ್ಲ. ಈಗಿನ ಟ್ರೆಂಡ್‌ಗೆ ತಕ್ಕ ಕಥೆಗೆ ಎಷ್ಟೆಲ್ಲಾ “ಮಸಾಲ’ ಇರಬೇಕೋ ಅಷ್ಟನ್ನು ಚೆನ್ನಾಗಿ ಅರೆದಿದ್ದಾರೆ.

ಅದೊಂದೇ ಸಮಾಧಾನದ ವಿಷಯ. ಉಳಿದಂತೆ ಸಿನಿಮಾದುದ್ದಕ್ಕೂ ಕಿರಿಕಿರಿ ಅಂದರೆ ಅದು ಹಿನ್ನೆಲೆ ಸಂಗೀತ. ಕೆಲವು ಕಡೆ ಮಾತುಗಳನ್ನೇ ನುಂಗಿ ಹಾಕಿದೆ. ಅಷ್ಟೇ ಅಲ್ಲ, ಫೈಟ್‌ನಲ್ಲೂ ಹಿನ್ನೆಲೆ ಸಂಗೀತದ ಅಬ್ಬರ ಹೆಚ್ಚಾಗಿ, ಚೆಂದದ ಫೈಟ್‌ಗೆ ಎಫೆಕ್ಟೇ ಇಲ್ಲವಂತೆ ಮಾಡಿದೆ. ಅದನ್ನು ಬಿಟ್ಟರೆ, “ನೈಟ್‌ ಔಟ್‌’ ಸುಮ್ಮನೆ ನೋಡಿಸಿಕೊಂಡು ಹೋಗುತ್ತಾದರೂ, ಕೊನೆಯ ಟ್ವಿಸ್ಟ್‌ಗಾಗಿ ಅಷ್ಟು ಹೊತ್ತು ಕಾದು ಕುಳಿತುಕೊಳ್ಳಲೇಬೇಕು.

ಆ ಟ್ವಿಸ್ಟ್‌ನ ಕುತೂಹಲವಿದ್ದರೆ, “ನೈಟ್‌ ಔಟ್‌’ ಹೋಗಿಬರಬಹುದು. ಇದೊಂದು ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಚಿತ್ರವಾಗಿದ್ದರೂ, ನಿರೀಕ್ಷಿಸಿದಷ್ಟು ಥ್ರಿಲ್‌ ಸಿಗಲ್ಲ. ಆರು ಗಂಟೆ ನಡೆಯುವ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಒಂದಕ್ಕೊಂದು ಲಿಂಕ್‌ ಕೊಡುವ ಮೂಲಕ ಗೊಂದಲ ಇಲ್ಲದಂತೆ ನಿರೂಪಿಸಿರುವುದು ನಿರ್ದೇಶಕರ ಜಾಣತನ.

ಚಿತ್ರದಲ್ಲಿ ಆಟೋ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೇ ಒಂದು ತಿರುವು ಕೂಡ ಇದೆ. ಗೆಳೆಯನೊಬ್ಬನ ಕಥೆ ಮತ್ತು ವ್ಯಥೆ ಮೂಲಕ ಚಿತ್ರ ಸಾಗುತ್ತದೆ. ನಾಯಕ ಗೋಪಿ ಒಬ್ಬ ಆಟೋ ಡ್ರೈವರ್‌. ಅವನ ಗೆಳೆಯ ಅಕ್ಷಯ್‌ ಕಾಲೇಜು ವಿದ್ಯಾರ್ಥಿ. ಇವರೊಂದಿಗೆ ಮೂರ್‍ನಾಲ್ಕು ಜನ ಗೆಳೆಯರ ಕಾರುಬಾರು.

ಮಧ್ಯಮ ವರ್ಗದ ಹುಡುಗರ ಬದುಕು, ಬವಣೆ ಜೊತೆಗೆ ಪ್ರೀತಿ ಗೀತಿ ಇತ್ಯಾದಿ ವಿಷಯಗಳೂ ಇಲ್ಲಿ ಇಣುಕುತ್ತವೆ. ಒಂದು ಸುಂದರ ಹುಡುಗಿಯ ಪ್ರೀತಿ ಪಡೆಯಲು ಹರಸಾಹಸ ಪಡುವ ಗೋಪಿ, ಆ ಪ್ರೀತಿಯನ್ನು ಪಡೆದ ಬಳಿಕ ಲೈಫ‌ಲ್ಲಿ ಏನೆಲ್ಲಾ ಅನುಭವಿಸುತ್ತಾನೆ. ತನ್ನ ಗೆಳೆಯನೊಂದಿಗೆ ಹಂಚಿಕೊಳ್ಳುವ ಫ್ಲ್ಯಾಶ್‌ಬ್ಯಾಕ್‌ ಸ್ಟೋರಿ ಏನು ಎಂಬುದು ಸಸ್ಪೆನ್ಸ್‌.

ಸಿಂಪಲ್‌ ಕಥೆಯಲ್ಲೊಂದು ನಿರೀಕ್ಷಿಸದ ಟ್ವಿಸ್ಟ್‌ ಇದೆ. ಕೊನೆಯ ಟ್ವಿಸ್ಟ್‌ ತಿಳಿಯಲು ಇಡೀ ಚಿತ್ರವನ್ನು ತಾಳ್ಮೆಗೆಡಿಸಿಕೊಳ್ಳದೆ ನೋಡಬೇಕಷ್ಟೇ. ಭರತ್‌ ಇಲ್ಲಿ ಒಬ್ಬ ಗೆಳೆಯನಾಗಿ, ಭಗ್ನಪ್ರೇಮಿಯಾಗಿ ಗಮನಸೆಳೆಯುತ್ತಾರೆ. ಚೇಸಿಂಗ್‌ ದೃಶ್ಯದಲ್ಲಿ ಇನ್ನಷ್ಟು ಫೋರ್ಸ್‌ ಆಗಿ ಓಡುವುದನ್ನು ಕಲಿಯಬೇಕಿತ್ತು. ಉಳಿದಂತೆ ಫೈಟ್‌ನಲ್ಲಿ ಸೈ ಎನಿಸಿಕೊಳ್ಳುತ್ತಾರೆ. ಅಕ್ಷಯ್‌ ಇಲ್ಲಿ ಸಿಕ್ಕ ಪಾತ್ರವನ್ನು ಸರಿದೂಗಿಸಿಕೊಂಡು ಹೋಗಿದ್ದಾರೆ.

ಶ್ರುತಿ ಗೊರಾಡಿಯ ಪಾತ್ರಕ್ಕೆ ಇನ್ನಷ್ಟು ಜೀವ ತುಂಬಬಹುದಾಗಿತ್ತು. ಉಳಿದಂತೆ ಕಡ್ಡಿಪುಡಿ ಚಂದ್ರು, ಆಶಾರಾಣಿ ಒಂದೆರೆಡು ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ಸಣ್ಣ ನಗುವಿಗೆ ಮೋಸವಿಲ್ಲ. ಸಮೀರ್‌ ಕುಲಕರ್ಣಿ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಹೆಚ್ಚು ಒತ್ತು ಕೊಡಬಹುದಾಗಿತ್ತು. ಅರುಣ್‌ ಕೆ. ಅಲೆಕ್ಸಾಂಡರ್‌ ಅವರ ಕ್ಯಾಮೆರಾ ಕೈಚಳಕದಲ್ಲಿ ಬೆಂಗಳೂರಿನ ಕಲರ್‌ಫ‌ುಲ್‌ ರಾತ್ರಿ ಕಂಗೊಳಿಸಿದೆ.

ಚಿತ್ರ: ನೈಟ್‌ ಔಟ್‌
ನಿರ್ಮಾಣ: ಲಕ್ಷ್ಮೀ ನವೀನ್‌, ನವೀನ್‌ ಕೃಷ್ಣ
ನಿರ್ದೇಶನ: ರಾಕೇಶ್‌ ಅಡಿಗ
ತಾರಾಗಣ: ಭರತ್‌, ಅಕ್ಷಯ್‌ ಪವಾರ್‌, ಶ್ರುತಿ ಗೊರಾಡಿಯ, ಕಡ್ಡಿಪುಡಿ ಚಂದ್ರು, ಆಶಾರಾಣಿ, ಉಮಾ, ಚಂದನ್‌ ವಿಜಯ್‌, ಸಾರಿಕಾ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.