ತತ್ತರಿಸಿದ ಅಮೆರಿಕ ಯುದ್ಧ ವಿಮಾನ ವಾಹಕ ನೌಕೆ


Team Udayavani, Apr 2, 2020, 1:15 PM IST

ತತ್ತರಿಸಿದ ಅಮೆರಿಕ ಯುದ್ಧ ವಿಮಾನ ವಾಹಕ ನೌಕೆ

ನ್ಯೂಯಾರ್ಕ್‌ : ಅಮೆರಿಕದಲ್ಲಿ ಕೋವಿಡ್ 19 ತನ್ನ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸುತ್ತಿರುವಂತೆಯೇ, ಅದೀಗ ಯುದ್ಧ ವಿಮಾನ ವಾಹಕ ನೌಕೆ ಯುಎಸ್‌ಎಸ್‌ ಥಿಯೋಡರ್‌ ರೂಸ್‌ವೆಲ್ಟ್ನೊಳಕ್ಕೂ ನುಗ್ಗಿದೆ. ಅದರಲ್ಲಿರುವ ನೌಕಾಪಡೆ ಯೋಧರು, ಸಿಬಂದಿ, ಪೈಲಟ್‌ಗಳು, ಅಧಿಕಾರಿಗಳನ್ನು ಕಾಡುತ್ತಿದ್ದು, ಇದರಿಂದ ಆಘಾತಕ್ಕೊಳಗಾಗಿರುವ ಹಡಗಿನ ಕ್ಯಾಪ್ಟನ್‌ ಕೂಡಲೇ ಕ್ರಮ ಕೈಗೊಳ್ಳುವಂತೆ ಅಮೆರಿಕ ನೌಕಾಪಡೆಗೆ ಮೊರೆ ಇಟ್ಟಿದ್ದಾರೆ.

ಕ್ಯಾಪ್ಟನ್‌ ಬ್ರೆಟ್‌ ಕ್ರೋಝಿಯರ್‌ ಅವರು ಈ ಕುರಿತಾಗಿ ಪತ್ರವೊಂದನ್ನು ಬರೆದಿದ್ದು ಅದು ಮಾಧ್ಯಮಗಳ ಕೈಗೆ ಸಿಕ್ಕಿದೆ. ಸುಮಾರು 4 ಸಾವಿರ ಸಿಬಂದಿಯನ್ನು ಕೂಡಲೇ ಸ್ಥಳಾಂತರಿಸುವಂತೆ ಅವರು ಹೇಳಿದ್ದಾರೆ. ಅಲ್ಲದೇ ಅವರನ್ನು ಕ್ವಾರಂಟೈನ್‌ನಲ್ಲಿ ಇಡಬೇಕು. ಅಲ್ಲಿವರೆಗೆ ಬೇರೆ ಸಿಬಂದಿ ನಿಯೋಜಿಸಲು ಕೇಳಿಕೊಂಡಿದ್ದಾರೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.

ಇದರೊಂದಿಗೆ ಸುಮಾರು ಶೇ. 10ರಷ್ಟು ಸಿಬಂದಿ ಹಡಗಿನಲ್ಲೇ ಇರಬೇಕಿದ್ದು ಅವರು ಶುಚಿಗೊಳಿಸಬೇಕಿದೆ. ಜತೆಗೆ ವಿಮಾನ ವಾಹಕ ನೌಕೆಯಲ್ಲಿರುವ ಪರಮಾಣು ರಿಯಾಕ್ಟರ್‌ ಅನ್ನು ಚಾಲನೆ ಯಲ್ಲಿಡಬೇಕಾದರೆ ಸಿಬಂದಿ ಅಗತ್ಯವಿದೆ. ಸದ್ಯ ಶಾಂತಿಯ ಸಮಯವಾದ್ದರಿಂದ ಸಿಬಂದಿಯನ್ನು ಹೊರಗೆ ತೆಗೆದುಕೊಂಡು ಹೋಗಲು ಮತ್ತು ಬೇರೆಯ ಸಿಬಂದಿ ನಿಯೋಜಿಸಲು ಸಮಸ್ಯೆ ಇರದು ಎಂದು ಹೇಳಿದ್ದಾರೆ.

ಆದರೆ ಕ್ಯಾಪ್ಟನ್‌ ಪತ್ರಕ್ಕೆ ನೌಕಾಪಡೆ ಸ್ಪಂದಿಸುವಂತೆ ಕಾಣುತ್ತಿಲ್ಲ. ನೌಕಾಪಡೆಯ ಪ್ರಮುಖ ಹಡಗು ಇದಾಗಿದ್ದು, ಅಮೆರಿಕದ ಪರಮಾಣು ರಿಯಾಕ್ಟರ್‌ಗಳು ಗಡಿ ಮತ್ತು ಸಂಚಾರಗಳನ್ನು ಇದು ವೀಕ್ಷಿಸುತ್ತಿದೆ. ಪ್ರತಿ ಕ್ಷಣವೂ ಹೈ ಅಲರ್ಟ್‌ ಆಗಿ ಇರಬೇಕಾದ್ದರಿಂದ ಸಿಬಂದಿಯನ್ನು ಅಲ್ಲಿಂದ ವರ್ಗಾಯಿಸುವುದು ಸಾಧ್ಯವೇ ಇಲ್ಲ ಎಂದು ಫೆಸಿಫಿಕ್‌ ಸಾಗರ ನಿರ್ವಹಣೆ ನೋಡಿಕೊಳ್ಳುತ್ತಿರುವ ನೌಕಾಪಡೆ ಕಮಾಂಡರ್‌ ಅಡ್ಮಿರಲ್‌ ಜಾನ್‌ ಅಕ್ವಿಲಿನೋ ಹೇಳಿದ್ದಾರೆ.

ಸದ್ಯ ಹಡಗಿನಲ್ಲಿ ಪೂರ್ಣ ಪ್ರಮಾಣದ ಯುದ್ಧ ವಿಮಾನಗಳು, ವ್ಯಾಪಕ ಶಸ್ತ್ರಾಸ್ತ್ರಗಳು, ಭಾರೀ ಪ್ರಮಾಣದ ತೈಲ ಇವೆ. ನಿರ್ವಹಣೆಗೆ ಬೇರೆ ಸಿಬಂದಿ ನಿಯೋಜಿಸುವುದು ಕಷ್ಟ. ಆದ್ದರಿಂದ ನೌಕೆಯನ್ನು ಅಮಾನತಿನಲ್ಲಿಡಬೇಕಾದ ಸಂದರ್ಭದಲ್ಲಿ ಇವುಗಳೆಲ್ಲವನ್ನೂ ಖಾಲಿ ಮಾಡುವುದು ಕಷ್ಟದ ಕೆಲಸ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಸುಮಾರು 70 ಮಂದಿ ನೌಕಾಪಡೆ ಸೈನಿಕರಿಗೆ ಕೋವಿಡ್ 19  ತಗಲಿದ್ದು, ಇನ್ನಷ್ಟು ಮಂದಿಗೆ ತಗಲುವ ಭೀತಿ ಇದೆ. ಆದರೆ ಸದ್ಯ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಎಲ್ಲರೂ ನೌಕಾಪಡೆ ಹಡಗಿನಲ್ಲೇ ಇದ್ದಾರೆ. ಇದು ವೈರಸ್‌ ಹರಡುವ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಟಾಪ್ ನ್ಯೂಸ್

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

pinarayi

ಅಗ್ನಿ ದುರಂತ; ಕುವೈಟ್‌ಗೆ ತೆರಳಲು ಸಚಿವೆಗೆ ಕೇಂದ್ರ ಅಡ್ಡಿ: ಕೇರಳ ಸಿಎಂ

1-rt

ಗಲಾಟೆ ವಿವಾದ: ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ ರವೀನಾ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.