ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Team Udayavani, Jun 12, 2019, 3:03 AM IST

ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗ್‌ನ್ನು ಆಟೋ ಚಾಲಕರೊಬ್ಬರು ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಮೈಸೂರು ರಸ್ತೆಯ ಕಸ್ತೂರಿಬಾನಗರ ನಿವಾಸಿ, ಆಟೋ ಚಾಲಕ ಬಸವರಾಜು ಅವರ ಸಮಯ ಪ್ರಜ್ಞೆ ಮೆಚ್ಚಿ ಉತ್ತರ ವಿಭಾಗದ ಡಿಸಿಪಿ ಎನ್‌.ಶಶಿಕುಮಾರ್‌ ಹೂಗುಚ್ಚ ನೀಡಿ ಗೌರವಿಸಿದರು. ಅಲ್ಲದೆ, ಆರ್‌ಎಂಸಿ ಯಾರ್ಡ್‌ ಠಾಣಾಧಿಕಾರಿ ಕೆ.ಎಚ್‌.ಮಹೇಂದ್ರ ಕುಮಾರ್‌ ಐದು ಸಾವಿರ ರೂ. ನಗದು ಬಹುಮಾನ ವಿತರಿಸಿದರು.

ಸೋಮವಾರ ಮಧ್ಯಾಹ್ನ ಯಶವಂತಪುರದಲ್ಲಿ ರೂಪಾ ಎಂಬ ಮಹಿಳೆ ಬಸವರಾಜು ಅವರ ಆಟೋ ಹತ್ತಿದ್ದಾರೆ. ಗೊರಗುಂಟೆಪಾಳ್ಯದಲ್ಲಿ ಇಳಿದುಕೊಂಡ ಮಹಿಳೆ, ತಮ್ಮ ಬ್ಯಾಗ್‌ನ್ನು ಮರೆತು ಅಲ್ಲೇ ಬಿಟ್ಟು ಹೋಗಿದ್ದರು. ನಂತರ ಬಸವರಾಜು ಶಿವಾಜಿನಗರದಲ್ಲಿ ಮತ್ತೂಬ್ಬ ಪ್ರಯಾಣಿಕರನ್ನು ಹತ್ತಿಸಿಕೊಂಡಾಗ ಮಹಿಳೆ ಬ್ಯಾಗ್‌ ಬಿಟ್ಟು ಹೋಗಿರುವುದು ಗೊತ್ತಾಗಿದೆ.

ಕೂಡಲೇ ಬ್ಯಾಗ್‌ನ್ನು ಪರಿಶೀಲಿಸಿದಾಗ ಅದರಲ್ಲಿ 35 ಗ್ರಾಂ ಚಿನ್ನಾಭರಣ, 35 ಸಾವಿರ ರೂ. ನಗದು ಹಾಗೂ ಮೌಲ್ಯಯುತ ದಾಖಲೆಗಳು ಇದ್ದವು. ಅಲ್ಲದೆ, ರೂಪಾ ಅವರ ಮೊಬೈಲ್‌ ನಂಬರ್‌ ಕೂಡ ಇತ್ತು. ರೂಪಾ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಚಾಲಕ ಬಸವರಾಜು ಆ ಬ್ಯಾಗ್‌ನ್ನು ಆರ್‌ಎಂಸಿ ಯಾರ್ಡ್‌ ಪೊಲೀಸರಿಗೆ ಒಪ್ಪಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ