ಬಟ್ಟೆ ವ್ಯಾಪಾರಿಗೆ ಇರಿದು, ಬೆಂಕಿ ಹಚ್ಚಿ ಕೊಲೆ

Team Udayavani, Aug 19, 2019, 3:05 AM IST

ಬೆಂಗಳೂರು: ಬಟ್ಟೆ ವ್ಯಾಪಾರಿಯೊಬ್ಬರನ್ನು ಅವರ ಮನೆಯ ಸ್ನಾನದ ಕೊಣೆಯಲ್ಲಿ ಚಾಕುವಿನಿಂದ ಇರಿದು ಕೊಂದು, ಬೆಂಕಿ ಹಚ್ಚಿ ಸುಟ್ಟ ಘಟನೆ ರಾಜಾಜಿನಗರದ ಬಾಷ್ಯಂ ವೃತ್ತದ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ರಾಜಾಜಿನಗರ ನಿವಾಸಿ ಜೈಕುಮಾರ್‌ (43) ಕೊಲೆಯಾದವರು. ಈ ಸಂಬಂಧ ಜೈಕುಮಾರ್‌ ಅವರ ಅಪ್ರಾಪ್ತ ಪುತ್ರಿ ಮತ್ತು ಆಕೆಯ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪಾಂಡಿಚೇರಿ ಮೂಲದ ಜೈಕುಮಾರ್‌ ಬಹಳ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು, ರಾಜಾಜಿನಗರದ ಬಾಷ್ಯಂ ವೃತ್ತದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ರಾಜಾಜಿನಗರದಲ್ಲಿಯೇ ಬಟ್ಟೆ ಅಂಗಡಿ ನಡೆಸುತ್ತಿದ್ದು, ಹತ್ತಾರು ಮಂದಿ ಅವರ ಬಳಿ ಕೆಲಸ ಮಾಡುತ್ತಿದ್ದಾರೆ. ಜೈಕುಮಾರ್‌ ದಂಪತಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ. ಕಾರ್ಯಕ್ರಮ ನಿಮಿತ್ತ ಜೈಕುಮಾರ್‌ ಪತ್ನಿ ಮತ್ತು ಪುತ್ರ ಹಾಗೂ ಕೆಲ ಸಂಬಂಧಿಕರು ಶನಿವಾರ ಮುಂಜಾನೆಯೇ ಪಾಂಡಿಚೇರಿಗೆ ಹೋಗಿದ್ದರು. ಮನೆಯಲ್ಲಿ ಜೈಕುಮಾರ್‌ ಮತ್ತು ಅವರ ಪುತ್ರಿ ಮಾತ್ರ ಇದ್ದರು ಎಂದು ಪೊಲೀಸರು ಹೇಳಿದರು.

ಭಾನುವಾರ ಬೆಳಗ್ಗೆ ಜೈಕುಮಾರ್‌ ಪುತ್ರಿ ತಿಂಡಿ ತಿನ್ನಲು ಮನೆ ಸಮೀಪದ ಸಂಬಂಧಿಕರ ಮನೆಗೆ ಹೋಗಿ, ವಾಪಸ್‌ ಮನೆಗೆ ಬಂದಿದ್ದಾರೆ. ನಂತರ ಬೆಡ್‌ರೂಂ ಕಡೆ ಹೋದಾಗ ತಂದೆ ಜೈಕುಮಾರ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಜೋರಾಗಿ ಕೂಗಿಕೊಂಡಿದ್ದಾರೆ. ಆಕೆಯ ಕೂಗಾಟ ಕೇಳಿದ ಸ್ಥಳೀಯರು ಕೂಡಲೇ ಮನೆಗೆ ಬಂದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಿಂದಿಸಿದ್ದಾರೆ. ಅಷ್ಟರಲ್ಲಿ ಜೈಕುಮಾರ್‌ ಮೃತಪಟ್ಟಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ರಾಜಾಜಿನಗರ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪುತ್ರಿ, ಸ್ನೇಹಿತನಿಂದಲೇ ಕೊಲೆ?: ಪೊಲೀಸ್‌ ಮೂಲಗಳ ಪ್ರಕಾರ ಜೈಕುಮಾರ್‌ ಅವರ ಪುತ್ರಿ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಆಕೆಗೆ ಪವನ್‌ ಎಂಬಾತನ ಜತೆ ಸ್ನೇಹ ಇತ್ತು. ಹೀಗಾಗಿ ಶನಿವಾರ ರಾತ್ರಿ ಆಕೆ ಮತ್ತು ಆಕೆಯ ಸ್ನೇಹಿತ ಹಾಗೂ ಇತರರ ಜತೆ ಮನೆಯಲ್ಲಿ ಪಾರ್ಟಿ ಮಾಡಿದ್ದಾರೆ. ಅದನ್ನು ಕಂಡ ಜೈಕುಮಾರ್‌ ಪುತ್ರಿಯನ್ನು ಥಳಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಅದೇ ವಿಚಾರಕ್ಕೆ ಆಕೆ, ತನ್ನ ಸ್ನೇಹಿತನ ಜತೆ ಸೇರಿ ತಂದೆಯ ಕುತ್ತಿಗೆ ಮತ್ತು ಕೈಗೆ ಚಾಕುವಿನಿಂದ ಇರಿದು ಕೊಲೆಗೈದು, ಬಳಿಕ ಭಾನುವಾರ ಬೆಳಗ್ಗೆ ಬೆಂಕಿ ಹಚ್ಚಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹೀಗಾಗಿ ಬಲಕಿ ಮತ್ತು ಆಕೆಯ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸ್ನಾನದ ಕೊಣೆಗೆ ಹೊಂದಿಕೊಂಡಂತೆ ಇರುವ ಬೆಡ್‌ರೂಂನಲ್ಲಿ ಮೂರು ಬಾಟಲಿಗಳು ಸಿಕ್ಕಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಜೈಕುಮಾರ್‌ ಅವರ ಪತ್ನಿ ಸಂಬಂಧಿಕರ ಜತೆ ಪಾಂಡಿಚೇರಿಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಜೈಕುಮಾರ್‌ ಮತ್ತು ಅವರ ಪುತ್ರಿ ಮಾತ್ರ ಇದ್ದರು. ಜೈಕುಮಾರ್‌ ಅವರ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯದ ಗುರುತುಗಳು ಪತ್ತೆಯಾಗಿದ್ದು, ಮನೆಯ ಬೆಡ್‌ರೂಂ ಮತ್ತು ಕೆಳ ಮನೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಜತೆಗೆ ಇತರೆ ಮಹತ್ವದ ಸಾಕ್ಷ್ಯಗಳು ಪತ್ತೆಯಾಗಿವೆ. ಹೀಗಾಗಿ ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಗಮನಿಸಿದರೆ ಪರಿಚಿತರೇ ಕೊಲೆಗೈದಿರುವ ಸಾಧ್ಯತೆಯಿದೆ. ಈ ಸಂಬಂಧ ಜೈಕುಮಾರ್‌ ಅವರ ಪುತ್ರಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
-ಎನ್‌.ಶಶಿಕುಮಾರ್‌, ಉತ್ತರ ವಿಭಾಗದ ಡಿಸಿಪಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಅತ್ತ ಸರ್ಕಾರ ಮಾರ್ಚ್‌ 5ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ಗೆ ಸಜ್ಜಾಗುತ್ತಿದ್ದರೆ, ಇತ್ತ ಸ್ಥಳೀಯ ಸಂಸ್ಥೆಗಳು ಬೆಂಗಳೂರಿಗೆ ಏನೇನು ಅವಶ್ಯಕತೆ ಇದೆ ಎಂಬುದರ...

  • ಬೆಂಗಳೂರು: ನಗರದ ಪಾರಂಪರಿಕ ಕಟ್ಟಡಗಳು ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ತಜ್ಞರ ಸಮಿತಿ ರಚನೆ ಮಾಡಲು ಪಾಲಿಕೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಕೃಷ್ಣರಾಜೇಂದ್ರ...

  • ಬೆಂಗಳೂರು: ಮಹಿಳೆಯೊಬ್ಬರ ಮನೆಗೆ ನುಗ್ಗಿ ದಾಂಧಲೆಗೆ ಮುಂದಾಗಿ, ಅವರ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂ ಮಾಡಿದ್ದ ಆರೋಪಿ ಶ್ರೀನಿವಾಸ ಅಲಿಯಾಸ್‌ ಸೀಗಡಿ...

  • ಬೆಂಗಳೂರು: ಜನಪ್ರತಿನಿಧಿಗಳು ಮತ್ತು ಅಧಿ ಕಾರಿಗಳಿಗೆ ನೈತಿಕತೆ, ಶಿಸ್ತು ಅಗತ್ಯ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ಚುಂಚಶ್ರೀ ಬಳಗ ಭಾನುವಾರ ಜ್ಞಾನ ಜ್ಯೋತಿ...

  • ಯಲಹಂಕ: ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಮಾದಾದರ, ಸಿದ್ದನಹೊಸಹಳ್ಳಿ ಮತ್ತು ಮಾದನಾಯಕನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ "ಮಾದನಾಯಕನಹಳ್ಳಿ...

ಹೊಸ ಸೇರ್ಪಡೆ

  • ನಾಯಿ ನಿಯತ್ತಿನ ಪ್ರಾಣಿ. ಈ ಚಿತ್ರದಲ್ಲಿ ಕಾಣುತ್ತಿರುವುದು ರೋಬೋಟ್‌ ನಾಯಿ. ಮನುಷ್ಯ ಹೇಳಿದಷ್ಟನ್ನು ಮಾತ್ರವೇ ಮಾಡುವುದರಿಂದ ಇದು ಜೀವಂತ ನಾಯಿಗಿಂತಲೂ ಹೆಚ್ಚು...

  • ಬೆಂಗಳೂರು: "ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ...' ಎಂಬುದು ಸಮಾಜದ ಪ್ರಸ್ತುತ ಮೂಲಮಂತ್ರ ಆಗಬೇಕು. ಆ ಮೂಲಕ ಲೋಕ ಕಲ್ಯಾಣಕ್ಕೆ ಕಂಕಣ ತೊಡಬೇಕು... ನಗರದ...

  • ಅತ್ತ ಸರ್ಕಾರ ಮಾರ್ಚ್‌ 5ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ಗೆ ಸಜ್ಜಾಗುತ್ತಿದ್ದರೆ, ಇತ್ತ ಸ್ಥಳೀಯ ಸಂಸ್ಥೆಗಳು ಬೆಂಗಳೂರಿಗೆ ಏನೇನು ಅವಶ್ಯಕತೆ ಇದೆ ಎಂಬುದರ...

  • ಬೆಂಗಳೂರು: ಹೊಸ ವರ್ಷದ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಸದನ ಉದ್ದೇಶಿಸಿ...

  • ಬೆಂಗಳೂರು: ನಗರದ ಪಾರಂಪರಿಕ ಕಟ್ಟಡಗಳು ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ತಜ್ಞರ ಸಮಿತಿ ರಚನೆ ಮಾಡಲು ಪಾಲಿಕೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಕೃಷ್ಣರಾಜೇಂದ್ರ...