ಹೋಟೆಲ್‌ ಸಿಬ್ಬಂದಿಯಿಂದ ಮಹಿಳೆ ಮೇಲೆ ಅತ್ಯಾಚಾರ

Team Udayavani, Aug 14, 2018, 4:05 PM IST

ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ತಂಗಿದ್ದ ಮಹಿಳೆ ಮೇಲೆ ಅಲ್ಲಿನ ಸಿಬ್ಬಂದಿಯೇ ಅತ್ಯಾಚಾರ
ಎಸಗಿರುವ ಘಟನೆ ಅಶೋಕನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಈ ಸಂಬಂಧ ಬಿಹಾರ ಮೂಲದ ಮನೀಷ್‌ ಕುಮಾರ್‌ ಸಿಂಗ್‌(26)ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ
ಮನೀಷ್‌ ಅಶೋಕ್‌ನಗರದ ರಿಚ್‌ ಮಂಡ್‌ ಸರ್ಕಲ್‌ ಬಳಿ ಇರುವ ತಾರಾ ಹೋಟೆಲ್‌ನಲ್ಲಿ ಡ್ನೂಟಿ ಮ್ಯಾನೇಜರ್‌
ಆಗಿ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ 8.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಹೋಟೆಲ್‌ ತನ್ನ
ಕೊಠಡಿಗೆ ಮಲಗಲು ಹೋಗುವಾಗ, ಇದೇ ವೇಳೆ ಹೋಟೆಲ್‌ನಲ್ಲಿ ತಂಗಿದ್ದ ಮಧ್ಯ ಪ್ರದೇಶದ ಸಂತ್ರಸ್ತೆ ಎದುರಿಗೆ
ಬಂದಿದ್ದಾರೆ.

ಇಬ್ಬರು ಲಿಫ್ಟ್ನಲ್ಲಿ ಒಟ್ಟಿಗೆ ಹೋಗಿದ್ದು, ಈ ವೇಳೆ ಆರೋಪಿ ಹಿಂದಿಯಲ್ಲಿ ಮಾತನಾಡಿ ಆಕೆಯನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮಗೆ ಏನಾದರು ಬೇಕಿದ್ದರೆ ನನಗೆ ಕಾಲ್‌ ಮಾಡಿ ಎಂದು ಸಂತ್ರಸ್ತೆಗೆ ತನ್ನ ಮೊಬೈಲ್‌ ನಂಬರ್‌ ಕೊಟ್ಟಿದ್ದ. ನಂತರ ರಾತ್ರಿ 10ಗಂಟೆ ಸುಮಾರಿಗೆ ಸಂತ್ರಸ್ತೆಗೆ ಕರೆ ಮಾಡಿದ ಆರೋಪಿ, ಮಾತನಾಡುವುದಿದೆ ತನ್ನ ಕೊಠಡಿಗೆ ಬನ್ನಿ ಎಂದಿದ್ದ.

ಪರಿಚಯವಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತೆ ಆರೋಪಿ ಕೊಠಡಿಗೆ ಹೋಗಿದ್ದಾರೆ. ಈ ವೇಳೆ ಆರೋಪಿ ಆಕೆ ಮೇಲೆ ಅತ್ಯಾಚಾರ
ಎಸಗಿದ್ದಾನೆ. ನೊಂದ ಮಹಿಳೆ ಪೊಲೀಸ್‌ ಸಹಾಯವಾಣಿ ನಮ್ಮ-100ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ. ಅನಂತರ ಸ್ಥಳಕ್ಕೆ ತೆರಳಿದ ಅಶೋಕ್‌ನಗರ ಪೊಲೀಸರು ಸಂತ್ರಸ್ತೆ ಮೂಲಕ ಲಿಖೀತ ದೂರು ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ