Udayavni Special

ಬಾರ್‌ ಸಿಬ್ಬಂದಿಗೆ ಇರಿದ ಮೂವರ ಸೆರೆ


Team Udayavani, Aug 14, 2018, 3:53 PM IST

blore-2.jpg

ಬೆಂಗಳೂರು: ಟೇಬಲ್‌ ಮೇಲೆ ಕಾಲು ಇಟ್ಟಿದ್ದನ್ನು ಪ್ರಶ್ನಿಸಿದ ಬಾರ್‌ ಸಿಬ್ಬಂದಿ ಮೇಲೆ ಐವರು ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಮೆಜೆಸ್ಟಿಕ್‌ ಬಳಿಯ ಬ್ಲೂಹೆವೆನ್‌ ಹೋಟೆಲ್‌ ಬಳಿ ಭಾನುವಾರ ತಡರಾತ್ರಿ ನಡೆದಿದೆ.

ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಶಂಶುದ್ದೀನ್‌(28), ಚಿಕ್ಕಮಗಳೂರಿನ ಸಲ್ಮಾನ್‌ (28) ಮತ್ತು ಇರ್ಷಾದ್‌(23) ಎಂಬುವವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ರಿಯಾಜ್‌ ಮತ್ತು ಮೊಹಮ್ಮದ್‌ ಎಂಬುವವರಿಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. 

ಆರೋಪಿಗಳ ಕೃತ್ಯದಿಂದ ಹೋಟೆಲ್‌ ಮಾಲೀಕ ಮೋಹನ್‌ ಶೆಟ್ಟಿ, ಸಿಬ್ಬಂದಿ ವಿಜಯ್‌ ಕುಮಾರ್‌, ಮಹೇಶ್‌, ಪ್ರೇಮೇಶ್‌, ದೀಲೀಪ್‌ ಮತ್ತು ಉಮೇಶ್‌ ಹಾಗೂ ಇತರರು ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಇರ್ಷಾದ್‌ ಬಿಎಂಟಿಸಿ ಬಸ್‌ ನಿಲ್ದಾಣದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮುಂಬೈನ ಹೋಟೆಲ್‌
ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸಲ್ಮಾನ್‌, ಕೆಲ ದಿನಗಳ ಹಿಂದಷ್ಟೇ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಶಂಶುದ್ದೀನ್‌ ಕೋರಮಂಗಲದ ಹೋಟೆಲ್‌ ಉದ್ಯೋಗಿ.
 
ಕಾರ್ಯಕ್ರಮವೊಂದರಲ್ಲಿ ಐವರು ಆರೋಪಿಗಳು ಪರಸ್ಪರ ಪರಿಚಯವಾಗಿದ್ದು, ಭಾನುವಾರ ರಜೆಯಿದ್ದ ಕಾರಣ ಎಲ್ಲರೂ
ಒಟ್ಟಿಗೆ ಸೇರಿದ್ದರು. ಹೀಗಾಗಿ ಆರೋಪಿ ಸಲ್ಮಾನ್‌ ನಾಲ್ಕು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದ ಬ್ಲೂಹೆವೆನ್‌ ಹೋಟೆಲ್‌ಗೆ ತನ್ನ ನಾಲ್ವರು ಸ್ನೇಹಿತರನ್ನು ಮದ್ಯ ಸೇವಿಸಲು ಕರೆದೊಯ್ದಿದ್ದ.

ತಡರಾತ್ರಿ 11.30ರ ವರೆಗೆ ಮದ್ಯ ಸೇವಿಸಿದ ಆರೋಪಿಗಳು ಟೇಬಲ್‌ ಮೇಲೆ ಕಾಲು ಇಟ್ಟು ಏರುಧ್ವನಿಯಲ್ಲಿ ಮಾತನಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಸಿಬ್ಬಂದಿಯೊಬ್ಬರು ಟೇಬಲ್‌ ಮೇಲಿಂದ ಕಾಲು ತೆಗೆಯುವಂತೆ ಕೇಳಿಕೊಂಡಿದ್ದಾರೆ. ಆಗ ಆರೋಪಿಗಳು ಹಾಗೂ ಹೋಟೆಲ್‌ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಎಲ್ಲರನ್ನೂ ಸಮಾಧಾನ ಪಡಿಸಿ ಐವರನ್ನು ಹೊರಗೆ ಕಳುಹಿಸಲಾಗಿತ್ತು.

ಇದರಿಂದ ಆಕ್ರೋಶಗೊಂಡ ಆರೋಪಿಗಳು ತಮ್ಮ ಬಳಿಯಿದ್ದ ಅಡುಗೆ ಕೆಲಸಕ್ಕೆ ಬಳಸುವ ಚಾಕುವಿನಿಂದ ಹೋಟೆಲ್‌ ಒಳಗೆ ನುಗ್ಗಿ ಮಾಲೀಕ ಮೋಹನ್‌ ಶೆಟ್ಟಿ ಸೇರಿ 6 ಮಂದಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಉಪ್ಪಾರಪೇಟೆ ಠಾಣೆಯಲ್ಲಿ ದಾಖಲಾಗಿದೆ.

ಟಾಪ್ ನ್ಯೂಸ್

ಬನಹಟ್ಟಿ ಪೋಲೀಸರ ಕಾರ್ಯಾಚರಣೆ : ಅಂತರ್‌ಜಿಲ್ಲಾ ಬೈಕ್ ಕಳ್ಳರ ಬಂಧನ, 5 ಬೈಕ್ ವಶಕ್ಕೆ

ಬನಹಟ್ಟಿ ಪೋಲೀಸರ ಕಾರ್ಯಾಚರಣೆ : ಅಂತರ್‌ ಜಿಲ್ಲಾ ಬೈಕ್ ಕಳ್ಳರ ಬಂಧನ, 5 ಬೈಕ್ ವಶಕ್ಕೆ

ನಿರ್ಬಂಧವಿಲ್ಲದೆ ಪ್ರವಾಸೋದ್ಯಮ ಆರಂಭಿಸಿದ್ದರಿಂದ ಸೋಂಕು ಹೆಚ್ಚಳವಾಗಿದೆ: ವಿಶ್ವಜಿತ್ ರಾಣೆ

ನಿರ್ಬಂಧವಿಲ್ಲದೆ ಪ್ರವಾಸೋದ್ಯಮ ಆರಂಭಿಸಿದ್ದರಿಂದ ಸೋಂಕು ಹೆಚ್ಚಳವಾಗಿದೆ: ವಿಶ್ವಜಿತ್ ರಾಣೆ

ಕಲಬುರಗಿ ಜಿಲ್ಲೆಗೆ ಬೋಯಿಂಗ್ ಇಂಡಿಯಾ ಸಂಸ್ಥೆಯ 250 ಆಕ್ಸಿಜನ್ ಬೆಡ್ ಆಸ್ಪತ್ರೆ ಮಂಜೂರು

ಬೋಯಿಂಗ್ ಇಂಡಿಯಾ ಸಂಸ್ಥೆಯಿಂದ ಕಲಬುರಗಿಯಲ್ಲಿ 250 ಆಕ್ಸಿಜನ್ ಬೆಡ್ ಗಳ ಆಸ್ಪತ್ರೆ ನಿರ್ಮಾಣ

ಕೋವಿಡ್ ವಾರ್ಡ್ ನಲ್ಲಿ ಗಂಟೆಗಟ್ಟಲೇ ಬಾಕಿಯಾದ ಶವ : ಸೋಂಕಿತರಲ್ಲಿ ಆತಂಕ

ಕೋವಿಡ್ ವಾರ್ಡ್ ನಲ್ಲಿ ಗಂಟೆಗಟ್ಟಲೇ ಇರಿಸಿದ ಶವ : ಸೋಂಕಿತರಲ್ಲಿ ಆತಂಕ

ಒಂದು ವಾರದೊಳಗೆ ಇಬ್ಬರು ಶಿಕ್ಷಣ ತಜ್ಞರು ಕೋವಿಡ್ ಗೆ ಬಲಿ

ಒಂದು ವಾರದೊಳಗೆ ಇಬ್ಬರು ಶಿಕ್ಷಣ ತಜ್ಞರು ಕೋವಿಡ್ ಗೆ ಬಲಿ

ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್ .! ಬಿಗ್ ಬಾಸ್ 8 ನೇ ಆವೃತ್ತಿ ರದ್ದು

ಬಿಗ್ ಬಾಸ್ – ಬಿಗ್ ಶಾಕ್..! ಅರ್ಧದಲ್ಲಿ ನಿಂತ 8ನೇ ಸೀಸನ್

ಬನಹಟ್ಟಿ : ಕಾರ್ಮಿಕ ಮುಖಂಡ ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

ಬನಹಟ್ಟಿ : ಕಾರ್ಮಿಕ ಮುಖಂಡ, ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid effect

ಖಾಸಗಿ ಆಸ್ಪತ್ರೆಗಳು ಬೆಡ್‌ ನೀಡದಿದ್ದರೆ ಒಪಿಡಿ ಬಂದ್‌

To the care center if the infection is not serious

ಸೋಂಕು ಗಂಭೀರವಿಲ್ಲದಿದ್ದರೆ ಕೇರ್‌ ಸೆಂಟರ್‌ಗೆ

covid issue

ಒಂದು ಕೋಮಿನ ವಿರುದ್ಧ ಟೀಕೆ ಮಾಡಿಲ್ಲ

CM has appealed to  Nirmala Sitharaman

ನಿರ್ಮಲಾ ಸೀತಾರಾಮನ್‌ಗೆ ಸಿಎಂ ಬಿಎಸ್‌ವೈ ಮನವಿ

somsekhar

ಕೋವಿಡ್ ನಿಂದ ಮೃತ ಕುಟಂಬಕ್ಕೆ ವೈಯಕ್ತಿಕ ತಲಾ 1 ಲಕ್ಷ ರೂ. ನೀಡಿದ ಸಚಿವ ಸೋಮಶೇಖರ್

MUST WATCH

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

udayavani youtube

ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾದ ಜನರನ್ನು ಊರಿಗೆ ಕಳುಹಿಸಿಕೊಡುವ ಮೂಲಕ ಮಾದರಿಯಾದ ಯುವಕರು

udayavani youtube

ಮೀನು‌ ಮಾರಾಟಕ್ಕೆ ನಗರಸಭೆ ಸಿಬ್ಬಂದಿ ಆಕ್ಷೇಪ

udayavani youtube

ಬಹು ದಿನಗಳ ಬಳಿಕ ಕಾಣಿಸಿಕೊಂಡ ಶಾಸಕ ರಮೇಶ್ ಜಾರಕಿಹೊಳಿ‌

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

ಹೊಸ ಸೇರ್ಪಡೆ

ಬನಹಟ್ಟಿ ಪೋಲೀಸರ ಕಾರ್ಯಾಚರಣೆ : ಅಂತರ್‌ಜಿಲ್ಲಾ ಬೈಕ್ ಕಳ್ಳರ ಬಂಧನ, 5 ಬೈಕ್ ವಶಕ್ಕೆ

ಬನಹಟ್ಟಿ ಪೋಲೀಸರ ಕಾರ್ಯಾಚರಣೆ : ಅಂತರ್‌ ಜಿಲ್ಲಾ ಬೈಕ್ ಕಳ್ಳರ ಬಂಧನ, 5 ಬೈಕ್ ವಶಕ್ಕೆ

ನಿರ್ಬಂಧವಿಲ್ಲದೆ ಪ್ರವಾಸೋದ್ಯಮ ಆರಂಭಿಸಿದ್ದರಿಂದ ಸೋಂಕು ಹೆಚ್ಚಳವಾಗಿದೆ: ವಿಶ್ವಜಿತ್ ರಾಣೆ

ನಿರ್ಬಂಧವಿಲ್ಲದೆ ಪ್ರವಾಸೋದ್ಯಮ ಆರಂಭಿಸಿದ್ದರಿಂದ ಸೋಂಕು ಹೆಚ್ಚಳವಾಗಿದೆ: ವಿಶ್ವಜಿತ್ ರಾಣೆ

ghjytryryhr

ಸುಪ್ರೀಂ ಆದೇಶ ಪಾಲಿಸದೆ ನ್ಯಾಯಾಂಗ ನಿಂದನೆ: ನಾಯ್ಕ

Government failure to handle 2nd wave

2ನೇ ಅಲೆ ನಿಭಾಯಿಸುವಲ್ಲಿ ಸರ್ಕಾರ ವಿಫ‌ಲ: ತಮ್ಮಣ್ಣ

MTB is not in charge

ಎಂಟಿಬಿಗೆ ಬೇಡವಾದ ಉಸ್ತುವಾರಿ ಲಿಂಬಾವಳಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.