ಬಡವರಿಗೆ ಆಹಾರ ನೀಡಲು ಸಂಘಟನೆಗಳು ಮುಂದು


Team Udayavani, Mar 24, 2020, 11:01 AM IST

ಬಡವರಿಗೆ ಆಹಾರ ನೀಡಲು ಸಂಘಟನೆಗಳು ಮುಂದು

ಬೆಂಗಳೂರು: ರಾಜ್ಯವೇ ಲಾಕ್‌ಡೌನ್‌ ಆಗಿರುವುದು ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ನೀಡುತ್ತಿರುವುದು ಪಕ್ಷಾತೀತವಾಗಿ ಮೆಚ್ಚುಗೆ ಗಳಿಸಿದೆ. ಈ ಸಂದರ್ಭದಲ್ಲಿ ಸರ್ಕಾರದೊಂದಿಗೆ ಹಲವು ಸಂಘಟನೆಗಳು ಪೌರಕಾರ್ಮಿಕರು, ಚಿಂದಿ ಆಯುವವರು ಹಾಗೂ ಬಡ ಮತ್ತು ಮಧ್ಯ ವರ್ಗದವರಿಗೆ ಸಹಾಯ ಮಾಡಲು ಮುಂದೆಬಂದಿದ್ದಾರೆ.

ಈ ನಿಟ್ಟಿನಲ್ಲಿ ಹಸಿರು ದಳ ಸಂಸ್ಥೆಯು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಬೆಂಗಳೂರು ಹಾಗೂ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಹಾಗೂ ಚಿಕ್ಕಬಳ್ಳಾಪುರದಲ್ಲಿನ ಚಿಂದಿ ಆಯುವ ಸಾವಿರ ಕುಟುಂಬಗಳಿಗೆ ಸಹಾಯ ಮಾಡಲು ನಿರ್ಧರಿಸಿದೆ. ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಹಸಿರು ದಳ ಸಹ ಸಂಸ್ಥಾಪಕಿ ನಳಿನಿ ಶೇಖರ್‌, ಚಿಂದಿ ಆಯುವವರ ಬಳಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಸೂಕ್ತ ದಾಖಲೆ ಮತ್ತು ವಾಸಿಸಲು ಮನೆ ಸಹ ಇಲ್ಲ (ಜೋಪಡಿ ನಿವಾಸಿಗಳು) ಹೀಗಾಗಿ, ನೆರವಾಗಲು ಮುಂದಾಗಿದ್ದೇವೆ ಎಂದರು.

ಅಕ್ಕಿ 5 ಕೆಜಿ, ಬೇಳೆ 2 ಕೆಜಿ, ಸಾಬೂನು 2 ಒಳಗೊಂಡ ಕಿಟ್‌ ನೀಡಲಿದ್ದೇವೆ. ಅದೇ ರೀತಿ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಸ ವಿಲೇವಾರಿ ವೇಳೆ ಮಾಸ್ಕ್ ಹಾಗೂ ಗ್ಲೌಸ್‌ಗಳನ್ನು ಎಚ್ಚರಿಕೆಯಿಂದ ವಿಲೇವಾರಿ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮೊದಲ ಹಂತದಲ್ಲಿ 550 ರೂ. ಮೌಲ್ಯದ ಕಿಟ್‌ ನೀಡಲಾಗುತ್ತಿದೆ. ಮುಂದೆ ದಾನಿಗಳು ಹೆಚ್ಚಾದರೆ ಹೆಚ್ಚು ಜನರಿಗೆ ನೆರವಾಗಲಿದ್ದೇವೆ ಎಂದರು.

ಸಹಾಯ ಮಾಡಲು ಇಚ್ಛಿಸುವವರು: www. hasirudala.in/ 9986808866 ಸಂಪರ್ಕಿಸಬಹುದು.

ನಿರ್ಗತಿಕರ ಮೇಲೂ ನಿಗಾ :  ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 4 ಸಾವಿರ ಜನ ನಿರಾಶ್ರಿತರಿದ್ದಾರೆ ಎಂದು ಇತ್ತೀಚಿನ ಸಮೀಕ್ಷಾ ವರದಿಯೊಂದು ಬಹಿರಂಗಪಡಿಸಿತ್ತು. ಅಲ್ಲದೆ, ನಗರದಲ್ಲಿ ನೂರಾರು ಜನ ಭಿಕ್ಷುಕರು ಇರುವುದು ಈಗ ಕೋವಿಡ್ 19 ಸೋಂಕು ಭೀತಿ ಹಿನ್ನೆಲೆಯಲ್ಲಿ ಆತಂಕ ಶುರುವಾಗಿದೆ. ಈ ಬಗ್ಗೆ ಮಾತನಾಡಿದ ಪಾಲಿಕೆ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ಪಾಲಿಕೆ ವ್ಯಾಪ್ತಿಯಲ್ಲಿ 9 ನಿರಾಶ್ರಿತ ಕೇಂದ್ರಗಳಿದ್ದು, ಇಲ್ಲೂ ಕೋವಿಡ್ 19 ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ನಿರಾಶ್ರಿತರು ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಇನ್ನು ಬಿಕ್ಷುಕರು ಹಾಗೂ ನಿರಾಶ್ರಿತರ ಮೇಲೂ ನಿಗಾ ಇಡಲಾಗಿದೆ. ಸಾರ್ವಜನಿಕರಿಗೆ ಯಾರಾದರು ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದರೆ ಕೂಡಲೇ ಪಾಲಿಕೆಯ ಗಮನಕ್ಕೆ ತಂದು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಟಾಪ್ ನ್ಯೂಸ್

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

1-ffff

ಸಿ.ಎಂ. ಇಬ್ರಾಹಿಂ ಭೇಟಿಯಾದ ಹೆಚ್ ಡಿಕೆ: ಮಹತ್ವದ ಚರ್ಚೆ

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

1-dsds

ಮೊಮ್ಮಗಳ ಆತ್ಮಹತ್ಯೆ : ಮೌನಕ್ಕೆ ಶರಣಾದ ಬಿಎಸ್ ವೈ; ಪ್ರಧಾನಿ, ಗಣ್ಯರಿಂದ ಸಾಂತ್ವನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ರಮ ದಾಖಲೆ ಸೃಷ್ಟಿಸಿದ ಆರೋಪ:  ಬಾಂಗ್ಲಾ ಮೂಲದ ಮಹಿಳೆ ಬಂಧನ

ಅಕ್ರಮ ದಾಖಲೆ ಸೃಷ್ಟಿಸಿದ ಆರೋಪ: ಬಾಂಗ್ಲಾ ಮೂಲದ ಮಹಿಳೆ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಪರೀಕ್ಷಾ ಪೇ ಚರ್ಚಾ ನೋಂದಣಿ ಗಡುವು ವಿಸ್ತರಣೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

chikkamagalore news

ಹುಲಿ ಗಣತಿಯಲ್ಲಿ ಕಾಫಿ ನಾಡಿಗೆ ಪ್ರಥಮ ಸ್ಥಾನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.